Karnataka ULB Poll Result: ಮೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ತೃಪ್ತಿದಾಯಕವಾಗಿದೆ; ಬಿಎಸ್ ಯಡಿಯೂರಪ್ಪ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್, ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್, ಕಲಬುರ್ಗಿ ಮಹಾನಗರ ಪಾಲಿಕೆಯ 55 ವಾರ್ಡ್​ಗಳಿಗೆ ಶುಕ್ರವಾರ ಸಾರ್ವತ್ರಿಕ ಚುನಾವಣೆ ನಡೆದಿತ್ತು.

ಬಿ.ಎಸ್.​ ಯಡಿಯೂರಪ್ಪ.

ಬಿ.ಎಸ್.​ ಯಡಿಯೂರಪ್ಪ.

 • Share this:
  ಬೆಂಗಳೂರು (ಸೆ.06): ರಾಜ್ಯದ ಮೂರು ಮಹಾನಗರ ಪಾಲಿಕೆಗಳ ಚುನಾವಣೆಯ ಫಲಿತಾಂಶವು (Municipal Corporation Election Result) ತೃಪ್ತಿದಾಯಕವಾಗಿದ್ದು, ಮೊದಲ ಬಾರಿಗೆ ಬೆಳಗಾವಿಯಲ್ಲಿ (Belagavi) ಸ್ಪಷ್ಟ ಬಹುಮತದಿಂದ ಬಿ.ಜೆ.ಪಿ. ಅಧಿಕಾರಕ್ಕೆ ಬಂದಿದ್ದು, ಇದೊಂದು ಐತಿಹಾಸಿಕ ಗೆಲುವಾಗಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurappa) ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಹುಬ್ಬಳ್ಳಿ- ಧಾರವಾಡ ಮತ್ತು ಕಲಬುರಗಿ ಮೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದೆ. ಫಲಿತಾಂಶದ ಬಳಿಕ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಬಿಎಸ್​ವೈ ಅವರು, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಸಂಸದರು, ಶಾಸಕರ ಹಾಗೂ ವಿಧಾನಪರಿಷತ್ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ಪುನಃ. ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.

  ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀ ಅವರ ಜನಪರ ಯೋಜನೆಗಳು, ಸಾಧನೆಗಳು ಚುನಾವಣೆ ಮೇಲೆ ಪ್ರಭಾವ ಬೀರಿದೆ ಎನ್ನುವುದಕ್ಕೆ ಈ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ನಿದರ್ಶನ. ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ಉತ್ತಮ ಫಲಿತಾಂಶ ಬಂದಿದೆ. ಸಂಸದರು, ಶಾಸಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಪರಿಶ್ರಮದಿಂದ ಫಲಿತಾಂಶವು ತೃಪ್ತಿದಾಯವಾಗಿದೆ. ಒಟ್ಟಾರೆಯಾಗಿ ಮೂರು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಅಭಿವೃದ್ಧಿಪರ ಆಡಳಿತ ನೀಡಲಿದೆ. ಈ ಐತಿಹಾಸಿಕ ಗೆಲುವಿನ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ, ಮತದಾರರಿಗೆ ಹಾಗೂ ಮುಖಂಡರಿಗೆ ತುಂಬು ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ.

  ಇದನ್ನು ಓದಿ: Karnataka ULB Polls – ಬೆಳಗಾವಿ, ಕಲಬುರ್ಗಿ, ಹು-ಧಾ ಪಾಲಿಕೆ ಸೇರಿ ವಿವಿಧ ನಗರ ಸಂಸ್ಥೆಗಳ 273 ವಾರ್ಡ್​ಗಳ ಫಲಿತಾಂಶ ಇಂದು

  ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್, ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್, ಕಲಬುರ್ಗಿ ಮಹಾನಗರ ಪಾಲಿಕೆಯ 55 ವಾರ್ಡ್​ಗಳಿಗೆ ಶುಕ್ರವಾರ ಸಾರ್ವತ್ರಿಕ ಚುನಾವಣೆ ನಡೆದಿತ್ತು.

  ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ (Belagavi Corporation) ಬಿಜೆಪಿ ಅಧಿಕಾರ ಪಡೆಯುವುದು ನಿಶ್ಚಿತವಾಗಿದೆ. 58 ಕ್ಷೇತ್ರಗಳ ಪೈಕಿ ಬಿಜೆಪಿ 36 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತಿದೆ. ಬಿಜೆಪಿ ಇಲ್ಲಿ ಬಹುಮತ ಸಾಧಿಸುವುದು  ದಟ್ಟವಾಗಿದೆ. ಎಂಇಎಸ್ ಇಲ್ಲಿ ಕೇವಲ 2 ಸ್ಥಾನವನ್ನ ಗೆದ್ದಿದೆ. ಕಾಂಗ್ರೆಸ್​ನ ಎರಡಂಕಿ ಮೊತ್ತವೂ ಸಿಕ್ಕಿಲ್ಲ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ (Hubli Dharwad Corporation) ಬಿಜೆಪಿ ಮೇಲುಗೈ ಸಾಧಿಸಿದೆಯಾದರೂ ಕಾಂಗ್ರೆಸ್ ತೀವ್ರ ಹೋರಾಟ ನೀಡುತ್ತಿದೆ. ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ (Kalburgi Corporation) ಕಾಂಗ್ರೆಸ್ ಅತ್ಯಧಿಕ ಸ್ಥಾನ ಗೆಲ್ಲುವತ್ತ ಸಾಗಿದೆ. ಬಿಜೆಪಿ ಇಲ್ಲಿ ಮೊದಲ ಬಾರಿಗೆ ಪ್ರಬಲ ಪೈಪೋಟಿ ನೀಡಿದೆ. ಸದ್ಯ ಇರುವ ಮೀಸಲಾತಿ ಅನ್ವಯ ಕಾಂಗ್ರೆಸ್ ಸದಸ್ಯನೇ ಕಲಬುರ್ಗಿ ಮೇಯರ್ ಆಗುವ ಸಾಧ್ಯತೆ ಇದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್​ಗಳಿಗೆ ಚುನಾವಣೆ ನಡೆದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಎಲ್ಲಾ ವಾರ್ಡ್​ಗಳಲ್ಲೂ ಅಭ್ಯರ್ಥಿಗಳನ್ನ ನಿಲ್ಲಿಸಿವೆ. ಜೆಡಿಎಸ್ ಪಕ್ಷ 49 ಹಾಗೂ ಆಮ್ ಆದ್ಮಿ ಪಕ್ಷ 41 ವಾರ್ಡ್​ಗಳಲ್ಲಿ ಕಣದಲ್ಲಿವೆ. ಇಲ್ಲಿ ಶೇ. 53.81ರಷ್ಟು ಮತದಾನವಾಗಿದೆ.

  ದೊಡ್ಡಬಳ್ಳಾಪುರ ನಗರಸಭೆಯ (Doddaballapura CMC) 31 ವಾರ್ಡ್, ತರೀಕೆರೆ ಪುರಸಭೆಯ 23 ವಾರ್ಡ್ ಹಾಗೂ ಭದ್ರಾವತಿ, ಬೀದರ್ ನಗರಸಭೆ ಎರಡು ಸೇರಿ 3 ವಾರ್ಡ್​ಗಳಿಗೆ ಚುನಾವಣೆಯಾಗಿತ್ತು. ಮೈಸೂರು ಮಹಾನಗರ ಪಾಲಿಕೆಯ 1 ವಾರ್ಡ್ ಹಾಗೂ ವಿವಿಧ ನಗರ ಸಂಸ್ಥೆಗಳಿಂದ ಒಟ್ಟು 21 ವಾರ್ಡ್​ಗಳಿಗೆ ಉಪಚುನಾವಣೆ ಕೂಡ ಆಗಿದೆ. ಇಂದು ಈ ಎಲ್ಲಾ ವಾರ್ಡ್​ಗಳ ಫಲಿತಾಂಶ ಹೊರಬೀಳುತ್ತಿದೆ.
  Published by:HR Ramesh
  First published: