• Home
  • »
  • News
  • »
  • state
  • »
  • Crime News: ರುಂಡವಿಲ್ಲದ ಶವ ಪತ್ತೆ ಪ್ರಕರಣದ ಆರೋಪಿ ಅರೆಸ್ಟ್; ಮುಂಬೈನಲ್ಲಿ ಕೊಲೆಯಾಗಿದ್ದು ಬೆಳಗಾವಿಯ ಮಹಿಳೆ

Crime News: ರುಂಡವಿಲ್ಲದ ಶವ ಪತ್ತೆ ಪ್ರಕರಣದ ಆರೋಪಿ ಅರೆಸ್ಟ್; ಮುಂಬೈನಲ್ಲಿ ಕೊಲೆಯಾಗಿದ್ದು ಬೆಳಗಾವಿಯ ಮಹಿಳೆ

ಕೊಲೆಯಾದ ಮಹಿಳೆ

ಕೊಲೆಯಾದ ಮಹಿಳೆ

ಸುಮಾರು 23 ರಿಂದ 30 ವಯಸ್ಸಿನ ಮಹಿಳೆ ಕಾಣೆಯಾಗಿರುವ ಪ್ರಕರಣ ದಾಖಲಾಗಿದೆಯಾ ಎಂದು ಪೊಲೀಸರು ಜಾಲಾಡಿದ್ದರು. ಆದರೆ ಎಲ್ಲಿಯೂ ಈ ಸಂಬಂಧ ಯಾವ ಪ್ರಕರಣ ದಾಖಲಾಗಿರಲಿಲ್ಲ ಎಂದು ವಸೈ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಕಲ್ಯಾಣರಾವ್ ಕರ್ಪೆ ಹೇಳಿದ್ದಾರೆ.

  • Share this:

ಸುಮಾರು 14 ತಿಂಗಳ ಹಿಂದೆ ಮುಂಬೈನ ಬೊಯಿಗಾಂವ್ ಬೀಚ್​​ನಲ್ಲಿ (Bhuigaon Beach) ಶಿರವಿಲ್ಲದ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಮಹಿಳೆಯ ಶವವನ್ನು (Woman Dead body) ಟ್ರಾಲಿಯಲ್ಲಿ ಶವ ಇರಿಸಿ ಬೀಚ್ ಬಳಿ ಎಸೆಯಲಾಗಿತ್ತು. ಇದೀಗ ಗುರುವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು (Accused) (ಕೊಲೆಯಾದ ಮಹಿಳೆಯ ಪತಿ) ಬಂಧಿಸಿದ್ದಾರೆ. ಕೊಲೆಗೆ (Woman Murder) ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಪೊಲೀಸರು (Police) ಮಹಿಳೆಯ ಪತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಆರೋಪಿ ಮಹಿಳೆಯ ಶಿರವನ್ನು ಏನು ಮಾಡಿದ ಎಂಬುದರ ಬಗ್ಗೆಯೂ ತಿಳಿದು ಬಂದಿಲ್ಲ. ಕೊಲೆಯಾದ ಮಹಿಳೆ 25 ವರ್ಷದ ಸಾನಿಯಾ ಶೇಖ್ ಬೆಳಗಾವಿ (Belagavi) ಜಿಲ್ಲೆಯವರು ಎಂದು ತಿಳಿದು ಬಂದಿದೆ.


ಏನಿದು ಪ್ರಕರಣ?


ಜುಲೈ 26, 2021 ರಂದು ಟ್ರಾಲಿ ಬ್ಯಾಗ್ ಸಮುದ್ರದ ದಡದಲ್ಲಿ ಪತ್ತೆಯಾಗಿದೆ. ಬ್ಯಾಗ್ ತೆರೆದಾಗ ಶಿರವಿಲ್ಲದ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ವಸೈ ಪೊಲೀಸರು, ಮುಂಬೈ, ಫಾಲ್ಘರ್, ಕೊಂಕಣ ಮತ್ತು ಗುಜರಾತ್ ಗಡಿ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದರು.


ಸುಮಾರು 23 ರಿಂದ 30 ವಯಸ್ಸಿನ ಮಹಿಳೆ ಕಾಣೆಯಾಗಿರುವ ಪ್ರಕರಣ ದಾಖಲಾಗಿದೆಯಾ ಎಂದು ಪೊಲೀಸರು ಜಾಲಾಡಿದ್ದರು. ಆದರೆ ಎಲ್ಲಿಯೂ ಈ ಸಂಬಂಧ ಯಾವ ಪ್ರಕರಣ ದಾಖಲಾಗಿರಲಿಲ್ಲ ಎಂದು ವಸೈ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಕಲ್ಯಾಣರಾವ್ ಕರ್ಪೆ ಹೇಳಿದ್ದಾರೆ.


Mumbai Vasai police crack headless body case husband arrested
ಪತಿ ಆಸಿಫ್ ಜೊತೆ ಸಾನಿಯಾ


ಇನ್ನು ಶವ ಸಿಕ್ಕಿರುವ ಮಾಹಿತಿಯುಳ್ಳ 200ಕ್ಕೂ ಅಧಿಕ ಪೋಸ್ಟರ್ ಮುದ್ರಿಸಿ ಸುತ್ತಮುತ್ತಲಿನ ಭಾಗದಲ್ಲಿ ಅಂಟಿಸಲಾಗಿತ್ತು. ಆದ್ರೆ ಇದರಿಂದಲೂ ಯಾವುದೇ ಪ್ರಯೋಜನ ಆಗಿರಲಿಲ್ಲ ಎಂದು ಹೇಳುತ್ತಾರೆ ಕಲ್ಯಾಣರಾವ್ ಕರ್ಪೆ.


ಕೊಲೆಯಾಗಿದ್ದು ಬೆಳಗಾವಿಯ ಮಹಿಳೆ


ಆಗಸ್ಟ್ 30ರಂದು ವಸೈ ಪೊಲೀಸರಿಗೆ ಬೆಳಗಾವಿ ಮೂಲದ ಮಹಿಳೆಯೊಬ್ಬಳು ಮುಂಬೈನಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ. ಬೆಳಗಾವಿ ಮೂಲದ ಜನರು ನಾಲಾಸೋಪರದ ಅಚೋಲೆ ಪೊಲೀಸ್ ಠಾಣೆಯಲ್ಲಿ )(Achole police station in Nalasopara ) 25 ವರ್ಷದ ಸಾನಿಯಾ ಶೇಖ್ ಕಳೆದ ಒಂದು ವರ್ಷದಿಂದ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಈ ವಿಷಯ ತಿಳಿಯುತ್ತಲೇ ಎಚ್ಚೆತ್ತ ವಸೈ ಪೊಲೀಸರು 30 ವರ್ಷದ ಆಸಿಫ್ ಶೇಖ್ ಎಂಬಾತನನ್ನು ಬಂಧಿಸಿದ್ದಾರೆ.


ಕೊಲೆಯಾದ ಮಹಿಳೆಯ ಮಗಳ ಡಿಎನ್​ಎ ಸಂಗ್ರಹ


ಆಸಿಫ್ ಬಂಧನದ ಬಳಿಕ ಆತನ ಮಗಳಿಂದ ಡಿಎನ್​​ಎ ಮಾದರಿಯನ್ನು ಸಂಗ್ರಹಿಸಲಾಯ್ತು. ಕೊಲೆಯಾದ ಮಹಿಳೆಯ ಡಿಎನ್​​ಎ ಜೊತೆ ಆರೋಪಿ ಪುತ್ರಿ ನೀಡಿದ ಮಾದರಿ ಹೋಲಿಕೆಯಾಗಿತ್ತು. ಈ ಮೂಲಕ ಕೊಲೆಯಾಗಿದ್ದ ಸಾನಿಯಾ ಶೇಖ್ ಎಂಬುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದರು.


ಇದನ್ನೂ ಓದಿ:  Bengaluru Crime News: ಅಪಹರಿಸಿ ಬೆತ್ತಲೆಗೊಳಿಸಿ ವಿಡಿಯೋ ಮಾಡಿ ಹಣ ಕೇಳ್ತಾರೆ; ನಕಲಿ ಅಧಿಕಾರಿಗಳ ಗ್ಯಾಂಗ್ ಅರೆಸ್ಟ್


ಕೊಲೆ ಬಳಿಕ ಫ್ಲ್ಯಾಟ್ ಮಾರಾಟ


ಅಂಧೇರಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಆಸಿಫ್ ಕುಟುಂಬದ ಜೊತೆ ನಾಲಾಸೋಪಾರಾದ ರಶ್ಮಿ ರೀಜೆನ್ಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದನು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಶಿರವನ್ನು ಬೇರ್ಪಡಿಸಿ, ದೇಹವನ್ನು ನಾಲಾಸಪೋರಾದ ಹೊರ ವಲಯದಲ್ಲಿ  ಮ್ಯಾಂಗ್ರೋವ್ ಬಳಿ ಎಸೆದಿದ್ದಾನೆ. ನಂತರ ಮನೆಗೆ ಬಂದು ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದಾನೆ. ನಂತರ ಇಲ್ಲಿಯ ಫ್ಲ್ಯಾಟ್ ಮಾರಾಟ ಮಾಡಿದ ಆಸಿಫ್ ತನ್ನ ತಾಯಿ ಮತ್ತು ಮಗಳ ಜೊತೆ ಮುಂಬ್ರಾಗೆ ಶಿಫ್ಟ್​ ಆಗಿದ್ದನು.


ಸಾನಿಯಾ ಪೋಷಕರು ಇಷ್ಟು ದಿನ ಎಲ್ಲಿದ್ರು?


ಸಾನಿಯಾ ಅನಾಥೆಯಾಗಿದ್ದು, ಸಂಬಂಧಿಕರು ಐದು ವರ್ಷದ ಹಿಂದೆ ಆಸಿಫ್ ಜೊತೆ ಮದುವೆ ಮಾಡಿಕೊಟ್ಟಿದ್ದರು. ಸಾನಿಯಾ ಜೊತೆ ಮಾತನಾಡಲು ಫೋನ್ ಮಾಡಿದಾಗ ಆಸಿಫ್ ಸರಿಯಾಗಿ ಉತ್ತರ ನೀಡುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಸಂಬಂಧಿಗಳು ಮುಂಬೈನ ನಾಲಾಸೊಪೊರಾದ ಫ್ಲ್ಯಾಟ್ ಮಾರಾಟ ಮಾಡಿರುವ ವಿಷಯ ತಿಳಿದಿದೆ.


ಇದನ್ನೂ ಓದಿ:  Dog: ತನ್ನನ್ನು ನೋಡಿ ಬೊಗಳಿದ್ದ ನಾಯಿಯನ್ನ ಕೊಂದ ನೀಚ; ಏರ್​ಗನ್​​ನಿಂದ ಹೊಡೆದು ಕೊಲೆ


ತಾನೇ ಬರೆದ ಪತ್ರ ತೋರಿಸಿದ್ದ


ಮುಂಬ್ರಾ ನಿವಾಸದ ವಿಳಾಸ ಪತ್ತೆ ಮಾಡಿ ತೆರಳಿದಾಗ ಅಲ್ಲಿ ಸಾನಿಯಾ ಇರಲಿಲ್ಲ. ಸಾನಿಯಾಳ ಅತ್ತೆ, ಸೊಸೆ ಆತನ ಇನಿಯನ ಜೊತೆ ಓಡಿ ಹೋಗಿದ್ದಾಳೆ ಎಂದು ಪತ್ರವೊಂದನ್ನು ತೋರಿಸಿದ್ದಾಳೆ.


Mumbai Vasai police crack headless body case husband arrested
ಬೊಯಿಗಾಂವ್ ಬೀಚ್


ಪತ್ರದಲ್ಲಿರುವ ಬರಹ ಆಸಿಫ್ ಬರೆದಿದ್ದು ಎಂಬುದನ್ನು ತಿಳಿದ ಪೋಷಕರು ಅಚೋಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಳೆದ ವರ್ಷ ಕೊರೊನಾ ಹಿನ್ನೆಲೆ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಬರೋದು ಸುಲಭವಾಗಿರಲಿಲ್ಲ ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Published by:Mahmadrafik K
First published: