ರೂಂ​ ಬುಕ್ಕಿಂಗ್​ ರದ್ದು ಮಾಡಲು ನಾನೇನು ಭಯೋತ್ಪಾದಕನಲ್ಲ, ಶಾಸಕರನ್ನು ಭೇಟಿ ಮಾಡದೆ ಇಲ್ಲಿಂದ ಕದಲುವುದಿಲ್ಲ; ಡಿಕೆಶಿ

ನಾನೊಬ್ಬ ಸಾಮಾನ್ಯ ನಾಗರಿಕ. ನಾನೇನು ಉಗ್ರಗಾಮಿಯಲ್ಲ. ರಾಜಕೀಯ ತಂತ್ರಗಳಿಂದ ನನ್ನ ರೂಂ ಬುಕ್ಕಿಂಗ್​ ರದ್ದಾಗಿದೆ ಅಷ್ಟೇ; ಡಿಕೆ ಶಿವಕುಮಾರ್​​

Seema.R | news18
Updated:July 10, 2019, 12:04 PM IST
ರೂಂ​ ಬುಕ್ಕಿಂಗ್​ ರದ್ದು ಮಾಡಲು ನಾನೇನು ಭಯೋತ್ಪಾದಕನಲ್ಲ, ಶಾಸಕರನ್ನು ಭೇಟಿ ಮಾಡದೆ ಇಲ್ಲಿಂದ ಕದಲುವುದಿಲ್ಲ; ಡಿಕೆಶಿ
ಮುಂಬೈನ ರಸ್ತೆಯಲ್ಲಿ ನಿಂತಿರುವ ಡಿಕೆ ಶಿವಕುಮಾರ್​
  • News18
  • Last Updated: July 10, 2019, 12:04 PM IST
  • Share this:
ಮುಂಬೈ (ಜು.10): "ನಾನು ಕಾಂಗ್ರೆಸ್​ ಪಕ್ಷದ ನಾಯಕ, ಯಾವುದೇ ಭಯೋತ್ಪಾದಕನಲ್ಲ" ಎಂದು ರೂಂ ಬುಕ್ಕಿಂಗ್​ ರದ್ದು ಮಾಡಿದ ರೆನೈಸನ್ಸ್​ ಹೋಟೆಲ್​​​ ಆಡಳಿತ ಮಂಡಳಿಗೆ   ಸಚಿವ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಅತೃಪ್ತ ಶಾಸಕರ ಮನವೊಲಿಕೆಗೆ ಮುಂದಾಗಿರುವ ಡಿಕೆಶಿ ಒಂದು ಮುಂಬೈಗೆ ತೆರಳಿ ಅತೃಪ್ತರು ಉಳಿದುಕೊಂಡಿರುವ ಹೊಟೇಲ್​ನಲ್ಲಿ ರೂ ಬುಕ್​ ಮಾಡಿದ್ದರು. ಆದರೆ, ಡಿಕೆಶಿ ಅವರ ರೂಂಅನ್ನು ಹೋಟೆಲ್​ ಆಡಳಿತ ಮಂಡಳಿ ರದ್ದು ಮಾಡಿದೆ. ಈ ಕುರಿತು ಜಲಸಂಪನ್ಮೂಲ ಸಚಿವರಿಗೆ ಇ ಮೇಲ್​ ಮೂಲಕ ಮಾಹಿತಿ ನೀಡಲಾಗಿದೆ.

ಡಿಕೆ ಶಿವಕುಮಾರ್​ ರೂಂ ರದ್ದುಗೊಂಡಿರುವ ಬಗ್ಗೆ ಹೋಟೆಲ್​ ಸಿಬ್ಬಂದಿ ಕಳುಹಿಸಿರುವ ಇಮೇಲ್​ ಸಂದೇಶ


ಸಚಿವ ಡಿಕೆ ಶಿವಕುಮಾರ್​  ಮುಂಬೈಗೆ ಬರುತ್ತಿರುವ ವಿಷಯ ತಿಳಿದು ಅವರಿಂದ ರಕ್ಷಣೆ ಕೋರಿ ರೆಬೆಲ್​ ನಾಯಕರು ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೋಟೆಲ್​ ಸುತ್ತಮುತ್ತ 2000ಕ್ಕೂ ಅಧಿಕ ಪೊಲೀಸರು ಬೀಡು ಬಿಟ್ಟಿದ್ದು, ಡಿಕೆ ಶಿವಕುಮಾರ್​ಗೆ ನಿರ್ಬಂಧ ವಿಧಿಸಿದರು. ಈ ಮುಂಚೆಯೇ ಹೊಟೇಲ್​ನಲ್ಲಿ ಬುಕ್​ ಮಾಡಿದ್ದ ಡಿಕೆ ಶಿವಕುಮಾರ್​ ಈ ಕುರಿತು ಮಾಹಿತಿಯನ್ನು ನೀಡಿದರು. ಆದರೆ, ಪೊಲೀಸರು ಅವರು ಒಳಗೆ ಹೋಗಲು ತಡೆದಿದ್ದು, ಒಂದು ರೀತಿಯ ತುರ್ತು ಪರಿಸ್ಥಿತಿ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಹೊಟೇಲ್​ ರೂಂ ಬುಕ್ಕಿಂಗ್​ ಅನ್ನು ರೆನೈಸನ್ಸ್​ ಹೋಟೆಲ್​ ರದ್ದು ಮಾಡಿದೆ.

ತಮ್ಮ ಬುಕ್ಕಿಂಗ್​ ರದ್ದುಗೊಂಡಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸಚಿವರು, ನಾನು ಮಂತ್ರಿಯಲ್ಲ ಒಬ್ಬ ಸಾಮಾನ್ಯ ನಾಗರಿಕ. ನಾನೇನು ಉಗ್ರಗಾಮಿಯಲ್ಲ. ಇವೆಲ್ಲ ರಾಜಕೀಯ ತಂತ್ರಗಳು ಅಷ್ಟೇ. ನಾನು ನಮ್ಮ ಪಕ್ಷದ ಶಾಸಕರನ್ನು ಭೇಟಿಯಾಗಲು ಬಂದಿದ್ದೇನೆ. ಅದಕ್ಕೆ ನಿರ್ಬಂಧ ವಿಧಿಸಲು ಇವರು ಯಾರು. ನಾನು ನಮ್ಮ ಶಾಸಕರನ್ನು ಭೇಟಿ ಮಾಡುವವರೆಗೂ ಇಲ್ಲಿಂದ ತೆರಳುವುದಿಲ್ಲ ಎಂದು ಖಡಕ್​ ಸೂಚನೆ ನೀಡಿದರು.

ಮುಂಬೈ ಹೊಟೇಲ್​ ಮುಂದೆ ರಸ್ತೆಯಲ್ಲಿಯೇ ನಿಂತು ತಿಂಡಿ ತಿನ್ನುತ್ತಿರುವ ಡಿಕೆ ಶಿವಕುಮಾರ್​


"ರೂಂ ಒಳಗೆ ಹೋಗಲು ನನಗೆ ಅನುಮತಿ ನೀಡುತ್ತಿಲ್ಲ. ರಕ್ಷಣೆಯ ಭೀತಿ ಹಿನ್ನೆಲೆ ಅವರು ಈ ಬದಲಾವಣೆ ಮಾಡಿರುವುದಾಗಿ ತಿಳಿಸಿದ್ದಾರೆ. ಯಾರಿಗೂ ಯಾವುದೇ ಅನಾಹುತವನ್ನು ನಾನು ಮಾಡುವುದಿಲ್ಲ. ,ಮಹಾರಾಷ್ಟ್ರ ಸರ್ಕಾರದ ಬಗ್ಗೆ ನನಗೆ ಅಪಾರ ಪ್ರೀತಿ ಮತ್ತು ಗೌರವವಿದೆ" ಎಂದರು."ನನ್ನಂತಹ ಗ್ರಾಹಕನನ್ನು ಪಡೆಯಲು ಅವರು ಹೆಮ್ಮೆ ಪಡಬೇಕು. ಮುಂಬೈ ಎಂದರೆ ನನಗೆ ಇಷ್ಟ. ಈ ಹೋಟೆಲ್​ ಅಂದರೂ ಇಷ್ಟ, ಅವರು ನನ್ನ ರೂಂ ರದ್ದು ಮಾಡಲಿ. ನನ್ನ ಬಳಿ ಇತರೆ ರೂಂಗಳು ಕೂಡ ಇವೆ" ಎಂದರು.

ರೂಂ​ ಬುಕ್​ ಮಾಡಿದ್ದ ಡಿಕೆ ಶಿವಕುಮಾರ್​ ಅವರಿಗೆ ಮೇಲ್​ ಮಾಡಿರುವ ಹೊಟೇಲ್​ ಆಡಳಿತ ಮಂಡಳಿ, "ಕೆಲವು ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ನಿಮ್ಮ ಮುಂಗಡ ಕಾಯ್ದಿರಿಸಿರುವ ಕೊಠಡಿಯನ್ನು ರದ್ದು ಮಾಡಿದ್ದೇವೆ" ಎಂದು ತಿಳಿಸಿದ್ದಾರೆ.

ಇದಕ್ಕು ಮುನ್ನ ಪೊಲೀಸರ ಮನವೊಲಿಸಲು ಮುಂದಾದ ಡಿಕೆ ಶಿವಕುಮಾರ್​, "ನನ್ನ ಸ್ನೇಹಿತರು ರೂಂನಲ್ಲಿದ್ದಾರೆ. ನಾನು ಹೋಗಿ ಕುಳಿತು ಆರಾಮಗೆ ಅವರೊಟ್ಟಿಗೆ ಕಾಫಿ ಹೀರುತ್ತಾ ಮಾತನಾಡಬೇಕು. ಒಳಹೋಗಲು ಬಿಡಿ" ಎಂದರು.

ಇದನ್ನು ಓದಿ: ‘ಹೋಟೆಲ್ ಒಳಗೆ ಹೋಗೋದು ಹೋಗೋದೆ, ಅದ್ಯಾರ್ ತಡೀತಾರೆ ನೊಡೋಣ’; ಡಿ.ಕೆ. ಶಿವಕುಮಾರ್ ಸವಾಲ್!

ಇದಕ್ಕೆ ಒಪ್ಪದ ಪೊಲೀಸರು ಇಲ್ಲಿಯೇ ಹತ್ತಿರದ ಗೆಸ್ಟ್​ಹೌಸ್​ನಲ್ಲಿ ನಾವು ನಿಮಗೆ ಈ ವ್ಯವಸ್ಥೆ ಮಾಡುತ್ತೇವೆ. ಹೋಟೆಲ್​ ಪ್ರವೇಶ ಸಾಧ್ಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು.

ರೂಂ ರದ್ದುಗೊಂಡಿದ್ದರೂ ಕೂಡ ಹೋಟೆಲ್​ ಮುಂದೆಯೇ ಬೀಡುಬಿಟ್ಟಿರುವ ಡಿಕೆ ಶಿವಕುಮಾರ್ ಅಲ್ಲಿಂದ ಕದಲದಿರಲು ನಿರ್ಧರಿಸಿದ್ದು,  ರಸ್ತೆಯಲ್ಲಿಯೇ ನಿಂತು ತಿಂಡಿ ತಿಂದಿದ್ದಾರೆ.

First published:July 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading