ಮುಂಬೈ ಅತೃಪ್ತರ ಕ್ಯಾಂಪ್ ಫುಲ್ ಖುಷ್; ಆಕ್ಸಿಜನ್ ನಿಲ್ಲಿಸಿಬಂದ್ರಿ ಎಂದು ಎಂಟಿಬಿಯನ್ನು ಕೊಂಡಾಡಿದ ಹೆಚ್. ವಿಶ್ವನಾಥ್!

ಕಾಂಗ್ರೆಸ್​ಗೆ ಮತ್ತೆ ಹಿಂದಿರುಗುವ ಸಚಿವ ಎಂಟಿಬಿ ನಾಗರಾಜ್ ಅವರ ನಿರ್ಧಾರದಿಂದ ಮುಂಬೈನಲ್ಲಿದ್ದ ಅತೃಪ್ತ ಶಾಸಕರಿಗೆ ನಿನ್ನೆ ನಿಂತ ನೆಲವೇ ಕುಸಿದಂತಾಗಿತ್ತು. ಸಿಎಂ ಕುಮಾರಸ್ವಾಮಿ ಅವರಿಗೆ ಸರ್ಕಾರ ಉಳಿಸಿಕೊಳ್ಳುವ ಭರವಸೆ ಮೂಡಿತ್ತು. ಅದರೆ, ನಿನ್ನೆ ರಾತ್ರಿ ನಡೆದ ಕೆಲವು ವಿದ್ಯಾಮಾನಗಳು ಆಡಳಿತ ಪಕ್ಷದ ಎಲ್ಲಾ ಊಹೆ ಹಾಗೂ ಸಾಧ್ಯತೆಗಳನ್ನು ತಿರುವು ಮುರುವು ಮಾಡಿದೆ. ಅತೃಪ್ತರ ಆತಂಕ ದೂರ ಮಾಡಿದೆ.

MAshok Kumar | news18
Updated:July 14, 2019, 3:12 PM IST
ಮುಂಬೈ ಅತೃಪ್ತರ ಕ್ಯಾಂಪ್ ಫುಲ್ ಖುಷ್; ಆಕ್ಸಿಜನ್ ನಿಲ್ಲಿಸಿಬಂದ್ರಿ ಎಂದು ಎಂಟಿಬಿಯನ್ನು ಕೊಂಡಾಡಿದ ಹೆಚ್. ವಿಶ್ವನಾಥ್!
ಹೆಚ್​. ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್.
  • News18
  • Last Updated: July 14, 2019, 3:12 PM IST
  • Share this:
ಬೆಂಗಳೂರು (ಜುಲೈ.14); ಸದ್ಯಕ್ಕೆ ಮುಂಬೈನಲ್ಲಿರುವ ಅತೃಪ್ತ ಶಾಸಕರ ತಂಡ ಸಂಪೂರ್ಣ ಖುಷಿಯಲ್ಲಿದ್ದು, ಸಚಿವ ಎಂಟಿಬಿ ನಾಗರಾಜ್ ತಮ್ಮ ಜೊತೆ ಕೈಜೋಡಿಸಿದ್ದು ತಮಗೆ ಆನೆಬಲ ಬಂದಂತಾಗಿದೆ ಎಂದು ಹುಣಸೂರು ಶಾಸಕ ಜೆಡಿಎಸ್​ ಮಾಜಿ ರಾಜ್ಯಾಧ್ಯಕ್ಷ ಹೆಚ್​. ವಿಶ್ವನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.

ಅಸಲಿಗೆ ರಾಜಧಾನಿಯಲ್ಲಿ ಶನಿವಾರ ನಡೆದ ಕೆಲವು ರಾಜಕೀಯ ವಿದ್ಯಮಾನಗಳು ಮುಂಬೈನಲ್ಲಿದ್ದ ಅತೃಪ್ತರ ನಿದ್ದೆಗೆಡಿಸಿದ್ದು ಸುಳ್ಳಲ್ಲ. ನಿನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಎಂಟಿಬಿ ನಾಗರಾಜ್ ಅವರನ್ನು ಭೇಟಿ ಮಾಡಿ ಮನವೊಲಿಸಿದ್ದರು. ತರುವಾಯ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದ ಎಂಟಿಬಿ,

"ನಾನು ಶಾಸಕ ಸ್ಥಾನಕ್ಕಷ್ಟೆ ರಾಜೀನಾಮೆ ನೀಡಿದ್ದೇನೆ ಹೊರತು ಕಾಂಗ್ರೆಸ್​ಗೆ ಅಲ್ಲ. ಪಕ್ಷ ಸಂಕಷ್ಟದ ಸ್ಥಿತಿಯಲ್ಲಿರುವಾಗ ನಾನು ಪಕ್ಷದ ಬೆಂಬಲಕ್ಕಿರುತ್ತೇನೆ. ಬಹುಮತ ಸಾಬೀತಿಗೆ ವಿರೋಧ ಪಕ್ಷ ಆಗ್ರಹಿಸಿದರೆ ನಾನು ಕಾಂಗ್ರೆಸ್ ಪರ ಮತಚಲಾಯಿಸುತ್ತೇನೆ" ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ಡಾ. ಸುಧಾಕರ್ ಅವರನ್ನೂ ಮನವೊಲಿಸಿ ಪಕ್ಷಕ್ಕೆ ಮತ್ತೆ ಕರೆತರುವ ಭರವಸೆ ನೀಡಿದ್ದರು.

ಇದನ್ನೂ ಓದಿ : ಇನ್ನೂ ಹೆಚ್ಚು ಅವಮಾನಕ್ಕೊಳಗಾಗುವ ಮುನ್ನ ರಾಜೀನಾಮೆ ಕೊಟ್ಟುಬಿಡಿ ಸಿಎಂ; ಸಿ.ಟಿ. ರವಿ ಕಿವಿಮಾತು!

ಸಚಿವ ಎಂಟಿಬಿ ನಾಗರಾಜ್ ಅವರ ಈ ನಿರ್ಧಾರದಿಂದ ಮುಂಬೈನಲ್ಲಿದ್ದ ಅತೃಪ್ತ ಶಾಸಕರಿಗೆ ನಿನ್ನೆ ನಿಂತ ನೆಲವೇ ಕುಸಿದಂತಾಗಿತ್ತು. ಸಿಎಂ ಕುಮಾರಸ್ವಾಮಿ ಅವರಿಗೆ ಸರ್ಕಾರ ಉಳಿಸಿಕೊಳ್ಳುವ ಭರವಸೆ ಮೂಡಿತ್ತು. ಅದರೆ, ನಿನ್ನೆ ರಾತ್ರಿ ನಡೆದ ಕೆಲವು ವಿದ್ಯಾಮಾನಗಳು ಆಡಳಿತ ಪಕ್ಷದ ಎಲ್ಲಾ ಊಹೆ ಹಾಗೂ ಸಾಧ್ಯತೆಗಳನ್ನು ತಿರುವು ಮುರುವು ಮಾಡಿದೆ. ಅತೃಪ್ತರ ಆತಂಕ ದೂರ ಮಾಡಿದೆ.

ನಿನ್ನೆ ಸಂಜೆಯ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯನವರ ಬೆನ್ನಿಗೆ ನಿಂತು ಬೆಂಬಲ ಸೂಚಿಸಿದ್ದ ಎಂಟಿಬಿ ನಾಗರಾಜ್ ರಾತ್ರಿ ವೇಳೆಗೆ ಬಿಜೆಪಿ ನಾಯಕರ ಸಂಪರ್ಕಕ್ಕೆ ಸಿಲುಕಿದ್ದರು. ಬಿ.ಎಸ್​. ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ಎಂಟಿಬಿಯನ್ನು ಖುದ್ದು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಪರಿಣಾಮ ಸಿದ್ದರಾಮಯ್ಯನವರ ಪರಮಾಪ್ತ ಸಚಿವ ಇದೀಗ ಬಿಜೆಪಿ ಪಾಲಾಗಿದ್ದಾರೆ. ಇಂದು ಬೆಳಗ್ಗೆ ಬಿಜೆಪಿ ಮಾಜಿ ಉಪಮುಖ್ಯಮಂತ್ರಿ ಆರ್​. ಅಶೋಕ್ ಹಾಗೂ ಸಂತೋಷ್​ ಖಾಸಗಿ ವಿಮಾನದಲ್ಲಿ ಬಿಟಿಎಂ ಅವರನ್ನು ಖುದ್ದು ಮುಂಬೈಗೆ ತಲುಪಿಸಿ ಬಂದಿದ್ದಾರೆ. ಅಲ್ಲಿಗೆ ನಿನ್ನೆ ಬೆಳಗ್ಗೆಯಿಂದಲೇ ಆರಂಭವಾಗಿದ್ದ ದೊಡ್ಡ ಡ್ರಾಮ ಒಂದಕ್ಕೆ ತೆರೆ ಎಳೆದಂತಾಗಿದೆ.

ಇದನ್ನೂ ಓದಿ : ಕುಮಾರಸ್ವಾಮಿ ನಾಳೆಯೇ ವಿಶ್ವಾಸಮತ ಯಾಚಿಸಲಿ, ಇಲ್ಲದಿದ್ದರೆ ರಾಜೀನಾಮೆ ನೀಡಲಿ; ಬಿ.ಎಸ್. ಯಡಿಯೂರಪ್ಪಎಂಟಿಬಿಯನ್ನು ಖುಷಿಯಿಂದ ಬರಮಾಡಿಕೊಂಡ ಅತೃಪ್ತರು, ಹಾಡಿಹೊಗಳಿದ ವಿಶ್ವನಾಥ್;

ಸಚಿವ ಎಂಟಿಬಿ ನಾಗರಾಜ್ ಮುಂಬೈಗೆ ಬರುತ್ತಿರುವ ವಿಷಯ ಕೇಳಿಯೇ ಎಲ್ಲಾ ಅತೃಪ್ತ ಶಾಸಕರು ಫುಲ್ ಖುಷಿಯಾಗಿದ್ದರು. ಅಲ್ಲದೆ ತಾವೇ ವಿಮಾನ ನಿಲ್ದಾಣಕ್ಕೆ ತೆರಳಿ ನಾಗರಾಜ್ ಅವರನ್ನು ಬರಮಾಡಿಕೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಹೆಚ್​. ವಿಶ್ವನಾಥ್, "ಎಂಟಿಬಿ ನಾಗರಾಜ್ ನಮ್ಮ ಅತೃಪ್ತರ ತಂಡ ಸೇರಿದ್ದು ನಮಗೆ ತುಂಬಾ ಖುಷಿಯಾಗಿದೆ. ನಾಗರಾಜ್ ಸೇರ್ಪಡೆಯಿಂದ ನಮಗೆ ಆನೆ ಬಲ ಬಂದಂತಾಗಿದೆ. ಆಡಳಿತ ಪಕ್ಷದ ಸಂಜೀವಿನಿಯಾಗಿದ್ದ ನಾಗರಾಜ್ ಅದರ ಆಕ್ಸಿಜನ್ ನಿಲ್ಲಿಸಿ, ಸರ್ಕಾರಕ್ಕೆ ಕೊನೆಯ ಮೊಳೆಹೊಡೆದು ಬಂದಿದ್ದಾರೆ" ಎಂದು ಸಂತಸ ವ್ಯಕ್ತಪಡಿಸಿದರು.

First published:July 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ