ಶ್ರೀಮಂತ ಪಾಟೀಲ್​ ಭೇಟಿಗೆ ರಾಜ್ಯ ಪೊಲೀಸರಿಗೆ ಅನುಮತಿ ನಿರಾಕರಿಸಿದ ಮಹಾರಾಷ್ಟ್ರ ಪೊಲೀಸರು

Karnataka Trust Vote: ಶ್ರೀಮಂತ ಪಾಟೀಲ್ ಅಪಹರಣವಾಗಿದ್ದು, ಅವರನ್ನು ಹುಡುಕಿಕೊಡುವಂತೆ ಕಾಂಗ್ರೆಸ್​ ಕಾರ್ಯದರ್ಶಿ ಪೊಲೀಸ್​ ಆಯುಕ್ತ ಅಲೋಕ್​ ಕುಮಾರ್​ಗೆ ದೂರು ನೀಡಿದ್ದರು. ಈ ಹಿನ್ನೆಲೆ ಅವರನ್ನು ಭೇಟಿಯಾಗಿ ಹೇಳಿಕೆ ಪಡೆಯಲು ರಾಜ್ಯ ಪೊಲೀಸರು ಮುಂದಾಗಿದ್ದರು. ಆದರೆ, ಈಗ ಶಾಸಕರ ಭೇಟಿಗೆ ಮಹಾರಾಷ್ಟ್ರ ಪೊಲೀಸರು ನಿರಾಕರಿಸಿದ್ದಾರೆ.

Seema.R | news18
Updated:July 19, 2019, 2:18 PM IST
ಶ್ರೀಮಂತ ಪಾಟೀಲ್​ ಭೇಟಿಗೆ ರಾಜ್ಯ ಪೊಲೀಸರಿಗೆ ಅನುಮತಿ ನಿರಾಕರಿಸಿದ ಮಹಾರಾಷ್ಟ್ರ ಪೊಲೀಸರು
ಕಾಗವಾಡ ಶಾಸಕ ಶ್ರೀಮಂತ ಪಾಟೀಲ್​
  • News18
  • Last Updated: July 19, 2019, 2:18 PM IST
  • Share this:
ಬೆಂಗಳೂರು (ಜು.19): ಕಾಗವಾಡ ಶಾಸಕ ಶ್ರೀಮಂತ ಪಾಟೀಲ್​​ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿಕೊಡಿ ಎಂಬ ಕಾಂಗ್ರೆಸ್​ ದೂರಿನ ಹಿನ್ನೆಲೆ ಶಾಸಕರಿಂದ ಹೇಳಿಕೆ ಪಡೆಯಲು ರಾಜ್ಯ ಪೊಲೀಸರು ಮುಂಬೈಗೆ ತೆರಳಿದ್ದಾರೆ. ಆದರೆ, ಅವರ ಭೇಟಿಗೆ ಮಹಾರಾಷ್ಟ್ರ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಬುಧವಾರ ಸದನಕ್ಕೆ ಹಾಜರಾಗುತ್ತೇನೆ ಎಂದಿದ್ದ ಶ್ರೀಮಂತ ಪಾಟೀಲ್​ರನ್ನು ಬಿಜೆಪಿ ಅಪಹರಿಸಿದೆ.  ಈ ಬಗ್ಗೆ ಸಾಕ್ಷಿಯನ್ನು ಕೊಡಬಲ್ಲೆ ಎಂದು ಡಿಕೆ ಶಿವಕುಮಾರ್​ ನಿನ್ನೆ ಸದನದಲ್ಲಿ ತಿಳಿಸಿದ್ದರು. ಪಾಟೀಲ ಆರೋಗ್ಯವಾಗಿದ್ದೇನೆ ಎಂದರೂ ಬಿಜೆಪಿ ಅವರಿಗೆ ಅನಾರೋಗ್ಯದ ನೆಪಹೂಡಿ ಅವರನ್ನು ಬಲವಂತವಾಗಿ ಮುಂಬೈಗೆ ಕರೆದೊಯ್ಯಲಾಗಿದ್ದು, ಸೆಂಟ್​​ ಜಾರ್ಜ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಈ ವಿಚಾರದ ಕುರಿತು ಸ್ಪೀಕರ್​  ಮಧ್ಯ ಪ್ರವೇಶಿಸಬೇಕು. ಕಾಂಗ್ರೆಸ್​​ ಶಾಸಕರಿಗೆ ರಕ್ಷಣೆ ಕೊಡಿಸಬೇಕು ಎಂದು  ಡಿ.ಕೆ ಶಿವಕುಮಾರ್​​ ಮನವಿ ಮಾಡಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಶ್ರೀಮಂತ ಪಾಟೀಲ್


ಶ್ರೀಮಂತ ಪಾಟೀಲ್ ಅಪಹರಣವಾಗಿದ್ದು, ಅವರನ್ನು ಹುಡುಕಿಕೊಡುವಂತೆ ಕಾಂಗ್ರೆಸ್​ ಕಾರ್ಯದರ್ಶಿ ಪೊಲೀಸ್​ ಆಯುಕ್ತ ಅಲೋಕ್​ ಕುಮಾರ್​ಗೆ ದೂರು ನೀಡಿದ್ದರು. ಈ ಹಿನ್ನೆಲೆ ಅವರನ್ನು ಭೇಟಿಯಾಗಿ ಹೇಳಿಕೆ ಪಡೆಯಲು ರಾಜ್ಯ ಪೊಲೀಸರು ಮುಂದಾಗಿದ್ದರು. ಆದರೆ, ಈಗ ಶಾಸಕರ ಭೇಟಿಗೆ ಮಹಾರಾಷ್ಟ್ರ ಪೊಲೀಸರು ನಿರಾಕರಿಸಿದ್ದಾರೆ.

ಇಂದು ಬೆಳಗ್ಗೆ ಡಿಸಿಪಿ ಶಶಿಕುಮಾರ್​ ನೇತೃತ್ವದ ತಂಡ ಸೆಂಟ್​ ಜಾರ್ಜ್ಸ್ ಆಸ್ಪತ್ರೆಗೆ ಭೇಟಿ ನೀಡಿದೆ. ಆದರೆ, ಈ ಮಹಾರಾಷ್ಟ್ರ ಪೊಲೀಸರು ಅನಮತಿ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಪಿ ಶಶಿಕುಮಾರ್​ ಮುಂಬೈ ಪೊಲೀಸ್​ ಆಯುಕ್ತರನ್ನು ಭೇಟಿಯಾಗಿ ಪ್ರವೇಶಕ್ಕೆ ಅನುಮತಿ ಪಡೆಯಲಿದ್ದಾರೆ.

ಮುಂಬೈ ಪೊಲೀಸರ​ ವಾದ:

ತಮ್ಮ ರಾಜ್ಯದ ಶಾಸಕರನ್ನು ಭೇಟಿಯಾಗಲು ಕರ್ನಾಟಕ ಪೊಲೀಸರಿಗೆ ಯಾವುದೇ ಅಡ್ಡಿಯಿಲ್ಲ. ಆದರೆ, ನಮ್ಮ ರಾಜ್ಯಕ್ಕೆ ಕರ್ನಾಟಕ ಪೊಲೀಸರು ಪ್ರವೇಶ ಮಾಡಿದಾಗ ಈ ಬಗ್ಗೆ ಮಹಾರಾಷ್ಟ್ರ ಪೊಲೀಸರಿಗೆ ಮಾಹಿತಿ ನೀಡಬೇಕು ಎಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ತಡೆ ನೀಡಲಾಗಿದೆ. ಮುಂಬೈ ಪೊಲೀಸ್​ ಆಯುಕ್ತರಿಗೆ ಮಾಹಿತಿ ನೀಡಿದ ಬಳಿಕ ತಮ್ಮ ಶಾಸಕರನ್ನು ಅವರು ಭೇಟಿಯಾಗಬಹುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.ಇದನ್ನು ಓದಿ: ಶಾಸಕ ಶ್ರೀಮಂತ ಪಾಟೀಲ್​ರನ್ನು ಬಿಜೆಪಿಯವರು ಅಪಹರಿಸಿದ್ದಾರೆ, ಹುಡುಕಿಕೊಡಿ ಎಂದು ಕಮಿಷನರ್​ಗೆ ದೂರು ನೀಡಿದ ಕಾಂಗ್ರೆಸ್

ಕಳೆದ ಗುರುವಾರ ಕೂಡ ಅತೃಪ್ತರು ಬೀಡುಬಿಟ್ಟಿದ್ದ ಮುಂಬೈನ ಐಷಾರಾಮಿ ಹೋಟೆಲ್​ಕ್ಕೆ ಡಿಕೆ ಶಿವಕುಮಾರ್​ ಹೋಗಲು ಮುಂದಾಗಿದ್ದರು. ಅತೃಪ್ತ ಶಾಸಕರ ದೂರಿನ ಹಿನ್ನೆಲೆ ಡಿಕೆ ಶಿವಕುಮಾರ್​ ಹೋಟೆಲ್​ ಹೋಗಲು ಸಾಧ್ಯವಾಗದೇ ರಸ್ತೆಯಲ್ಲಿಯೇ ನಿಂತಿದ್ದರು. ಡಿಕೆ ಶಿವಕುಮಾರ್​ ಹೋಟೆಲ್​ನಲ್ಲಿ ಬುಕ್​ ಮಾಡಿದ್ದರೂ ರಕ್ಷಣಾ ದೃಷ್ಟಿಯಿಂದ ಪ್ರವೇಶ ನಿರಾಕರಿಸಿದ ಪೊಲೀಸರು ಅವರನ್ನು ರಸ್ತೆಯಲ್ಲಿ ಆರು ಗಂಟೆಗಳ ಕಾಲ ನಿಲ್ಲಿಸಿ ಬಳಿಕ ಬಂಧಿಸಿ ಬಿಡುಗಡೆ ಮಾಡಿದ್ದರು.

First published:July 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading