IISc Multispecialty Hospital ಗೆ ಈಗ HDFC ಬಲ, ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಆಸ್ಪತ್ರೆ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವಿಶ್ವವಿದ್ಯಾಲಯವು ಹೆಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್‌ನೊಂದಿಗೆ ತಿಳುವಳಿಕೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಅಡಿಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಕ್ಯಾಂಪಸ್‌ನಲ್ಲಿ ಮುಂಬರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂರು ವಿಭಾಗಗಳನ್ನು ತೆರೆಯಲು ಹೆಚ್‌ಡಿಎಫ್‌ಸಿ ಬ್ಯಾಂಕ್‌ 107.76 ಕೋಟಿ ರೂ. ಗಳ ಒಪ್ಪಂದಕ್ಕೆ ಸಹಿ ಹಾಕಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವಿಶ್ವವಿದ್ಯಾಲಯ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವಿಶ್ವವಿದ್ಯಾಲಯ

  • Share this:
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವಿಶ್ವವಿದ್ಯಾಲಯವು ಹೆಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಪರಿವರ್ತನ್‌ನೊಂದಿಗೆ ತಿಳುವಳಿಕೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಅಡಿಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಕ್ಯಾಂಪಸ್‌ನಲ್ಲಿ ಮುಂಬರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ (Multispecialty Hospital) ಮೂರು ವಿಭಾಗಗಳನ್ನು ತೆರೆಯಲು ಹೆಚ್‌ಡಿಎಫ್‌ಸಿ ಬ್ಯಾಂಕ್‌ 107.76 ಕೋಟಿ ರೂ. ಗಳ ಒಪ್ಪಂದಕ್ಕೆ ಸಹಿ (Sign) ಹಾಕಿದೆ. ಮಂಗಳವಾರದಂದು ನೀಡಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವಿಶ್ವವಿದ್ಯಾಲಯದ ಹೇಳಿಕೆಯು ಈ ತಿಳುವಳಿಕೆ ಒಪ್ಪಂದ ಪತ್ರಕ್ಕೆ ಜುಲೈ 29 ರಂದು ಸಹಿ ಹಾಕಲಾಗಿದೆ ಎಂದು ಹೇಳಿದೆ. ಈ ತಿಳುವಳಿಕೆ ಒಪ್ಪಂದವು ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಯ ಮೂರು ವಿಭಾಗಗಳನ್ನು ಒಳಗೊಂಡಿದೆ - ಅವುಗಳೆಂದರೆ ಕಾರ್ಡಿಯಾಲಜಿ, ರೇಡಿಯಾಲಜಿ ಮತ್ತು ಎಮರ್ಜೆನ್ಸಿ ಮೆಡಿಸಿನ್ ವಿಭಾಗಗಳು ಆಗಿವೆ.

ಸ್ನಾತಕೋತ್ತರ ವೈದ್ಯಕೀಯ ಕಾಲೇಜು ಶಿಕ್ಷಣ ಸಂಸ್ಥೆಯನ್ನು ಒಳಗೊಂಡ ಆಸ್ಪತ್ರೆ
ಈ ಆಸ್ಪತ್ರೆಯು 832 ಹಾಸಿಗೆಗಳನ್ನು ಹೊಂದಿದ್ದು, ಈ ಲಾಭರಹಿತ ಆಸ್ಪತ್ರೆಯು ಸ್ನಾತಕೋತ್ತರ ವೈದ್ಯಕೀಯ ಕಾಲೇಜು ಶಿಕ್ಷಣ ಸಂಸ್ಥೆಯನ್ನು ಕೂಡ ಒಳಗೊಂಡಿದೆ. ಇದು 2024 ರ ಅಂತ್ಯದ ವೇಳೆಗೆ ಕಾರ್ಯ ನಿರ್ವಹಣೆ ಪ್ರಾರಂಭಿಸುವ ನಿರೀಕ್ಷೆಯಿದೆ. ಮೊದಲ ಬ್ಯಾಚ್ MD/PhD ವಿದ್ಯಾರ್ಥಿಗಳು 2025 ರಲ್ಲಿ ಪ್ರವೇಶ ಪಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ITR Refund: ತೆರಿಗೆದಾರರೇ, ಮರುಪಾವತಿಗೆ ಸಂಬಂಧಿಸಿದ ಈ ವಿಷಯಗಳನ್ನ ತಿಳಿದುಕೊಳ್ಳಿ

ಈ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಬ್ಯಾಂಕ್‌ನ ಪಾಲುದಾರಿಕೆಯೊಂದಿಗೆ, ಆಸ್ಪತ್ರೆಯ ಹೃದ್ರೋಗ ವಿಭಾಗವು 2025 ಮತ್ತು 2029 ರ ನಡುವೆ ಆರಂಭವಾಗುವ ನಿರೀಕ್ಷೆಯನ್ನು ನಾವು ನೋಡಬಹುದು. ಇದು ಸುಮಾರು 1,83,000 ಹೊರ ರೋಗಿಗಳು ಮತ್ತು 18,300 ಒಳರೋಗಿಗಳನ್ನು ಒಳಗೊಂಡ ಅತ್ಯಂತ ದೊಡ್ಡ ಆಸ್ಪತ್ರೆ ಇದಾಗಿದೆ. ಈ ಅವಧಿಯಲ್ಲಿ ಕನಿಷ್ಠ 20 ಸೂಪರ್ ಸ್ಪೆಷಲಿಸ್ಟ್ ವೈದ್ಯರಿಗೆ ತರಬೇತಿ ನೀಡುವ ನಿರೀಕ್ಷೆಯಿದೆ.

ಈ ಬಗ್ಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆ ಏನು ಹೇಳಿದೆ
ರೇಡಿಯಾಲಜಿ ವಿಭಾಗವು ಕಾರ್ಯಾಚರಣೆಯ ಮೊದಲ ಐದು ವರ್ಷಗಳಲ್ಲಿ ಸುಮಾರು 4,28,326 ರೋಗಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು 20 ಸೂಪರ್ ಸ್ಪೆಷಲಿಸ್ಟ್ ವೈದ್ಯರಿಗೆ ತರಬೇತಿ ನೀಡುತ್ತದೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆ ಹೇಳಿಕೆ ನೀಡಿದೆ. ಇಲ್ಲಿ ನಿರ್ಮಾಣ ಆಗುವ ಆಸ್ಪತ್ರೆಯು 56,304 ರೋಗಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ತುರ್ತು ವೈದ್ಯಕೀಯ ವಿಭಾಗದಲ್ಲಿ 50 ಸೂಪರ್ ಸ್ಪೆಷಲಿಸ್ಟ್ ವೈದ್ಯರಿಗೆ ತರಬೇತಿ ನೀಡುವ ನೀರಿಕ್ಷೆ ಮಾಡಲಾಗಿದೆ.

ಇದನ್ನೂ ಓದಿ:  Helava ಸಮುದಾಯದ ಮಕ್ಕಳನ್ನ ಶಾಲೆಗೆ ಕರೆ ತಂದ ಶಿಕ್ಷಕ; ಯಾರು ಈ ಹೆಳವರು? ಎಲ್ಲಿರ್ತಾರೆ?

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆ ಯ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್, “ಇನ್ನು ಮುಂದೆ ನಿರ್ಮಾಣ ಆಗುವ ಆಸ್ಪತ್ರೆ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಯು ʼಚಿಕಿತ್ಸಕ ಸಂಶೋಧನೆಯ ಹೊಸ ಗಡಿʼ ಎಂದು ಹೇಳಿದ್ದಾರೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಇಎಸ್‌ಜಿ ಮತ್ತು ಸಿಎಸ್‌ಆರ್‌ನ ಗ್ರೂಪ್ ಹೆಡ್ ಅಶಿಮಾ ಭಟ್, “ಹೊಸ ಆಸ್ಪತ್ರೆ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಯು ಈ ಪ್ರದೇಶದ ಜನರ ಆರೋಗ್ಯ ಅಗತ್ಯಗಳನ್ನು ಉತ್ತಮವಾಗಿ ನಿರ್ವಹಿಸುತ್ತದೆ ಮತ್ತು ಹೊಸ ಪೀಳಿಗೆಯ ವೈದ್ಯ-ವಿಜ್ಞಾನಿಗಳನ್ನು ಈ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆ ಹುಟ್ಟು ಹಾಕುತ್ತದೆ” ಎಂದು ಹೇಳಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ:
ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಭಾರತದ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ. ಇತ್ತೀಚಿನ ಅಸ್ಕರ್ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದಲ್ಲಿ 155ನೇ ಸ್ಥಾನವನ್ನು ಪಡೆದುಕೊಂಡು ಭಾರತದ ಅಗ್ರ ಶಿಕ್ಷಣ ಸಂಸ್ಥೆಯಾಗಿದೆ. ಈ ಸಂಸ್ಥೆಯು ಕರ್ನಾಟಕದಲ್ಲಿ ಅತ್ಯಂತ ಶ್ರೇಷ್ಠ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ಕರ್ನಾಟಕದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ವಿದೇಶಿ ವಿದ್ಯಾರ್ಥಿಗಳಿಗೂ ಶಿಕ್ಷಣ ನೀಡುವಲ್ಲಿ ಪ್ರಮುಖ ಶಿಕ್ಷಣ ಸಂಸ್ಥೆ ಆಗಿದೆ.
Published by:Ashwini Prabhu
First published: