News18 India World Cup 2019

Cabinet Expansion: ಸರ್ಕಾರಿ ಸೇವೆಯಿಂದ ರಾಜಕೀಯಕ್ಕೆ ಧುಮುಕಿದ್ದ ಹೆಚ್. ನಾಗೇಶ್; ಶಾಸಕನಾದ ಮೊದಲ ಅವಧಿಯಲ್ಲೇ ಸಚಿವ ಸ್ಥಾನ!

Karnataka Cabinet: ಸಚಿವ ಡಿ.ಕೆ. ಶಿವಕುಮಾರ್ ಆಪ್ತರಾಗಿರುವ ಹೆಚ್​. ನಾಗರಾಜ್ ಕಳೆದ ವಿಧಾನಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ಪಕ್ಷ ಸೇರುವುದು ಬಹುತೇಕ ಖಚಿತವಾಗಿತ್ತು. ಆದರೆ, ಹೈಕಮಾಂಡ್​ ಹಾಲಿ ಶಾಸಕ ಮಂಜುನಾಥ್ ಅವರಿಗೆ ಟಿಕೆಟ್ ನೀಡಿದ ಕಾರಣ ಕೊನೆಗೆ ನಾಗರಾಜ್ ಪಕ್ಷೇತರರಾಗಿ ಕಣಕ್ಕಿಳಿದಿದ್ದರು.

MAshok Kumar
Updated:June 14, 2019, 3:00 PM IST
Cabinet Expansion: ಸರ್ಕಾರಿ ಸೇವೆಯಿಂದ ರಾಜಕೀಯಕ್ಕೆ ಧುಮುಕಿದ್ದ ಹೆಚ್. ನಾಗೇಶ್; ಶಾಸಕನಾದ ಮೊದಲ ಅವಧಿಯಲ್ಲೇ ಸಚಿವ ಸ್ಥಾನ!
ಸಿದ್ದರಾಮಯ್ಯ ಅವರಿಗೆ ಪತ್ರ ನೀಡುತ್ತಿರುವ ಶಾಸಕ ಹೆಚ್ ನಾಗೇಶ್.
MAshok Kumar
Updated: June 14, 2019, 3:00 PM IST
ಬೆಂಗಳೂರು (ಜೂನ್​.14); ಇಂದಿನ ಮಟ್ಟಿಗೆ ರಾಜ್ಯದಲ್ಲಿ ಬಹು ಚರ್ಚಿತ ಹೆಸರು ಎಂದರೆ ಹೆಚ್​. ನಾಗೇಶ್​. ರಾಜ್ಯ ಮೈತ್ರಿ ಸರ್ಕಾರದಲ್ಲಿ ಸತತ ನಾಲ್ಕು, ಐದು ಬಾರಿ ಶಾಸಕರಾಗಿ ಆಯ್ಕೆಯಾದವರಿಗೇ ಸಚಿವ ಸ್ಥಾನ ಸಿಗುವುದು ಮರೀಚಿಕೆಯಾಗಿದೆ. ಅಂತದ್ದರಲ್ಲಿ ಮೊದಲ ಬಾರಿಗೆ ಮುಳಬಾಗಿಲು ಕ್ಷೇತ್ರದಿಂದ  ಆಯ್ಕೆಯಾಗಿರುವ ಇವರಿಗೆ ಸಚಿವ ಸ್ಥಾನ ತಾನೇ ಒಲಿದು ಬರುತ್ತಿದೆ ಎಂದರೆ ಸುಮ್ಮನೆ ಮಾತಲ್ಲ. ಆದರೆ, ಇನ್ನೂ ಅಧಿಕೃತವಾಗಿ ಘೋಷಣೆಯಾಗುವುದೊಂದು ಬಾಕಿ ಇದೆಯಷ್ಟೆ.

ಐಆರ್​ಎಸ್​ ಅಧಿಕಾರಿಯಾಗಿದ್ದ ಹೆಚ್​. ನಾಗೇಶ್ 34 ವರ್ಷದ ಸರ್ಕಾರಿ ಸೇವೆಯಲ್ಲಿ ಬೆಸ್ಕಾಂ ತಾಂತ್ರಿಕ ವಿಭಾಗದ ನಿರ್ದೇಶಕ, ಕೆಪಿಟಿಸಿಎಲ್​ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ಕೆಲ ವರ್ಷಗಳ ಹಿಂದೆ ದಲಿತ ಚಳುವಳಿಗೆ ಧುಮುಕುವ ಸಲುವಾಗಿ ಇವರು ಕೆಲಸಕ್ಕೆ ರಾಜೀನಾಮೆ ನೀಡಿ ಸಕ್ರೀಯ ಹೋರಾಟದಲ್ಲಿ ತೊಡಗಿದ್ದರು. ಅಲ್ಲದೆ ಕಳೆದ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಿಂದ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯೂ ಆಗಿದ್ದರು.

ಇದನ್ನೂ ಓದಿ : Cabinet Expansion; ಇಂದು ಮಹತ್ವದ ಸಚಿವ ಸಂಪುಟ ವಿಸ್ತರಣೆ; ಪಕ್ಷೇತರ ಶಾಸಕ ಹೆಚ್​. ನಾಗರಾಜ್​ಗೆ ಮಂತ್ರಿಗಿರಿ ಖಚಿತ!

ಸಚಿವ ಡಿ.ಕೆ. ಶಿವಕುಮಾರ್ ಆಪ್ತರಾಗಿರುವ ಹೆಚ್​. ನಾಗೇಶ್​ ಕಳೆದ ವಿಧಾನಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ಪಕ್ಷ ಸೇರುವುದು ಬಹುತೇಕ ಖಚಿತವಾಗಿತ್ತು. ಆದರೆ, ಹೈಕಮಾಂಡ್​ ಹಾಲಿ ಶಾಸಕ ಮಂಜುನಾಥ್ ಅವರಿಗೆ ಟಿಕೆಟ್ ನೀಡಿದ ಕಾರಣ ಕೊನೆಗೆ ನಾಗರಾಜ್ ಪಕ್ಷೇತರರಾಗಿ ಕಣಕ್ಕಿಳಿದಿದ್ದರು.

ಈ ಚುನಾವಣೆಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಆರೋಪದ ಕಾರಣ ಶಾಸಕ ಮಂಜುನಾಥ್ ಅವರ ನಾಮಪತ್ರ ಅಸಿಂಧುವಾಗಿತ್ತು. ಹೀಗಾಗಿ ಪಕ್ಷೇತರ ಅಭ್ಯರ್ಥಿ ನಾಗೇಶ್ ಸುಲಭವಾಗಿ ಜಯಗಳಿಸಿದ್ದರು. ಅಲ್ಲದೆ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. ಅಪರೇಷನ್ ಕಮಲದ ಸಂದರ್ಭದಲ್ಲಿ ಸಚಿವ ಸ್ಥಾನ ಸಿಗುವ ಭರವಸೆ ಮೇಲೆ ಅವರು ಬಿಜೆಪಿಯನ್ನು ಬೆಂಬಲಿಸಿದ್ದರು. ಆದರೆ, ಕೊನೆಗೆ ಡಿ.ಕೆ. ಶಿವಕುಮಾರ್ ಅವರ ಮಧ್ಯಸ್ಥಿಕೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿರುವ ಅವರು ಸಿದ್ದರಾಮಯ್ಯ ಸೂಚನೆಯಂತೆ ಕಾಂಗ್ರೆಸ್ ಸಹ ಸದಸ್ಯತ್ವ ಕೂಡ ಪಡೆದಿದ್ದಾರೆ.

ಇದನ್ನೂ ಓದಿ : Cabinet Expansion: ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಬಂಡಾಯದ ಸುಳಿವು; ಸಚಿವ ಸ್ಥಾನ ನೀಡದಿದ್ದರೆ ಪಕ್ಷ ಬಿಡುವ ಸಾಧ್ಯತೆ!
Loading...

ಇಂದು ನಡೆಯಲಿರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, "ಇಂದು ಮೈತ್ರಿ ಸರ್ಕಾರ ಇರುವ ಸಂದಿಗ್ಧ ಸ್ಥಿತಿಯಲ್ಲಿ ನಮ್ಮ ಬೆಂಬಲದ ಅವಶ್ಯಕತೆ ಅವರಿಗಿದೆ. ಹೀಗಾಗಿ ನಾನು ಮೈತ್ರಿ ಸರ್ಕಾರವನ್ನು ಬೆಂಬಲಿಸಿದ್ದೇನೆ. ಅಲ್ಲದೆ ಪಕ್ಷೇತರನಾಗಿಯೇ ಸರ್ಕಾರದಲ್ಲಿ ಮುಂದುವರೆಯುತ್ತೇನೆ" ಎಂದು ತಿಳಿಸಿದ್ದಾರೆ.

First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...