ಬೆಂಗಳೂರು: ಇನ್ಮುಂದೆ ಮಹಿಳೆಯರ (Woman) ಮೇಲೆ ದೌರ್ಜನ್ಯ (Violence) ಮಾಡುವ ಮುನ್ನ ಎಚ್ಚರವಾಗಿರಿ. ದೌರ್ಜನ್ಯ ಮಾಡಿ, ಎಸ್ಕೇಪ್ ಆಗಬಹುದು ಅಂದುಕೊಂಡಿದ್ದರೆ ಅದು ಕಷ್ಟ. ಇತ್ತೀಚೆಗೆ ಸೈಬರ್ ಕ್ರೈಂನ (Cyber Crime) ಪ್ರಕರಣಗಳು ಅಂದರೆ ಸೋಷಿಯಲ್ ಮೀಡಿಯಾದಲ್ಲಿ (Social Media) ಪರಿಚಯದಿಂದ ದೌರ್ಜನ್ಯಕ್ಕೆ ಒಳಗಾಗುವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮಹಿಳೆಯರಿಗಾಗಿ ಮುಕ್ತ ಸೆಂಟರ್ (Mukta Center) ಆರಂಭವಾಗಿದೆ. ಸಾಮಾನ್ಯವಾಗಿ ಮಹಿಳೆಯರು ಹಲ್ಲೆಗೊಳಗಾಗಿ ಚಿಕಿತ್ಸೆಗೆಂದು (Treatment) ಆಸ್ಪತ್ರೆಗೆ (Hospital) ಬಂದಾಗ ದೌರ್ಜನ್ಯವನ್ನು ಮುಚ್ಚಿಡುತ್ತಾರೆ. ಆದರೆ ಅದು ಹಲ್ಲೆಯೋ, ಸಾಮಾನ್ಯ ಗಾಯವೋ ಎಂದು ಪತ್ತೆ ಹಚ್ಚಲಾಗುವುದು.
ಮಹಿಳೆಯರು ಮುಕ್ತದಲ್ಲಿ ಹೇಳುವ ದೌರ್ಜನ್ಯದ ಮಾಹಿತಿ ಗೌಪ್ಯವಾಗಿ ಇಡಲಾಗುವುದು. ಬಳಿಕ ಕಾನೂನಾತ್ಮಕ ಹೋರಾಟ ನಡೆಸುವುದು ಈ ಮುಕ್ತ ಸೆಂಟರ್‌ನ ವಿಶೇಷತೆಯಾಗಿದೆ. ಬೆಂಗಳೂರಿನ ಕೆ.ಸಿ.ಜನರಲ್, ಜಯನಗರ ಸಾರ್ವಜನಿಕ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ ಹಾಗೂ ಚಿಕ್ಕಬಳ್ಳಾಪುರದಲ್ಲಿರೋ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೆಂಟರ್ ಆರಂಭವಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೆ.ಸಿ ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ ಇಂದಿರಾ ಅವರು, ನಮ್ಮ ಆಸ್ಪತ್ರೆಗೆ ಯಾವುದೇ ಮಹಿಳೆ ದಾಖಲಾದರೂ ಅಥವಾ ಒಪಿಡಿಗೆ ತಮ್ಮ ಸಮಸ್ಯೆಗಳನ್ನು ಹೇಳಲು ಬಂದರೆ ಅವರಿಗೆ ಇರುವ ಮಾನಸಿಕ, ದೈಹಿಕ, ತುರ್ತು ಸಂದರ್ಭದಲ್ಲಿ ಏನಾಯ್ತು ಅಂತ ಮಾಹಿತಿ ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Crime News: ಆಂಜನೇಯ ದೇಗುಲದಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋದ ಪಾಪಿಗಳು! ಮುಂದೇನಾಯ್ತು?
ಕಳೆದ 20 ವರ್ಷಗಳಿಂದ ಖಾಸಗಿಯಾಗಿ ನಾವು 7 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದೇವು. ಕರ್ನಾಟಕದಲ್ಲೂ ನಮ್ಮ ಸಹಕಾರ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕರ್ನಾಟಕ ಸರ್ಕಾರ ಕೂಡ ಪೂರಕವಾಗಿ ಪ್ರತಿಕ್ರಿಯೆ ನೀಡಿದೆ ಎಂದು ತಿಳಿಸಿದ್ದಾರೆ.
ಮಾತು ಕೇಳದ 8 ವರ್ಷದ ಮಗುವನ್ನ ಚಾಕುವಿನಿಂದ ಕೊಲೆಗೈದ ಪಾಪಿ ತಂದೆ
ಕೋಲಾರ: ತನ್ನ ಮಾತಿಗೆ ಒಪ್ಪದ ಮಗನನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು 8 ವರ್ಷದ ಭುವನ್ ತೇಜ್ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ತಂದೆ ಸುಬ್ರಮಣಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ತನ್ನ ಜೊತೆ ಬೆಂಗಳೂರಿಗೆ ಬಾ ಎಂದು ಆರೋಪಿ ಮಗುವನ್ನು ಪೀಡುಸುತ್ತಿದ್ದನಂತೆ. ಆದರೆ 8 ವರ್ಷದ ಬಾಲಕ ಮಾತ್ರ ತಾನು ಅಜ್ಜಿ ಜೊತೆಗೆ ಇರುತ್ತೇನೆ ನಿನ್ನೊಂದಿಗೆ ಬರೋದಿಲ್ಲ ಎಂದು ಹೇಳಿದ್ದನಂತೆ.
ಇದರಿಂದ ಕೋಪಗೊಂಡ ಆರೋಪಿ, ಮಗುವಿನ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಗಾಯಗೊಂಡ ಮಗುವನ್ನು ಕೂಡಲೇ ನಂಗಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಕೊಡಿಸಲು ಪ್ರಯತ್ನಿಸಲಾಗಿದ್ದು, ಆದರೆ ಬಾಲಕ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ. ಮೃತ ಭುವನ್ ತೇಜ್ ತನ್ನ ತಾಯಿ ಸಾವಿನ ನಂತರ ಬೆಂಗಳೂರಿಂದ ಬಂದು ಅಜ್ಜಿ ಮನೆಯಲ್ಲಿ ವಾಸವಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ನಂಗಲಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ