ಚಿಕ್ಕಮಗಳೂರು : ಚಿಕ್ಕಮಗಳೂರಿನ ದತ್ತಪೀಠ (Datta peeta, Chikmagaluru) ಇತ್ತೀಚಿನ ದಿನಮಾನಸಗಳಲ್ಲಿ ಒಂದೊಂದೇ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. 30 ವರ್ಷಗಳ ಹೋರಾಟದ ಫಲವಾಗಿ ಮೊನ್ನೆ-ಮೊನ್ನೆ ತಾನೇ ಹಿಂದೂ ಅರ್ಚಕರ (Hindu Priest) ನೇಮಕವಾಗಿದ್ದು ಹೋರಾಟಕ್ಕೆ ಸಿಕ್ಕ ಫಲವಾಗಿತ್ತು. ಬುಧವಾರ ದತ್ತಪೀಠ ಆವರಣ ಮತ್ತೊಂದು ಸುವರ್ಣ ಘಳಿಗೆಗೆ ಸಾಕ್ಷಿಯಾಗಿದೆ. ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ಚಿಕ್ಕಮಗಳೂರು ತಾಲೂಕಿನ ದತ್ತಪೀಠದ ಉಮೇದುವಾರಿಕೆಗಾಗಿ ದಶಕಗಳಿಂದಲೂ ಹಿಂದೂ-ಮುಸ್ಲಿಮರು (Hindu And Muslims) ಹೋರಾಡುತ್ತಿದ್ದಾರೆ. ಆದ್ರೆ, ಹಿಂದೂಗಳು ಮುಸ್ಲಿಮರ ದರ್ಗಾ (Dargah) ಇರೋದು ನಾಗೇನಹಳ್ಳಿಯಲ್ಲಿ ಅಲ್ಲಿಗೆ ಹೋಗಿ ಇದು ಹಿಂದೂಗಳ ಪೀಠ ಎಂದೇ ಹೇಳುತ್ತಿದ್ದಾರೆ. ಈ ಮಧ್ಯೆ ಶ್ರೀರಾಮಸೇನೆ ಕಾರ್ಯಾಧ್ಯಕ್ಷ (Srirama sena Secretary Gangadhar Kulkarani) ಕಳೆದ ಮೂರು ವರ್ಷಗಳಿಂದ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕವಾಗಬೇಕು. ಜಿಲ್ಲಾಡಳಿತ ದತ್ತ ಮೂರ್ತಿಯನ್ನ ಶೋಭಾಯಾತ್ರೆಯಲ್ಲಿ ಮೆರವಣಿಗೆ ಅವಕಾಶ ನೀಡಬೇಕೆಂದು ಹರಕೆ ಹೊತ್ತು ಮೂರು ವರ್ಷದಿಂದ ಕಟ್ಟಿಂಗ್-ಶೇವಿಂಗ್ ಮಾಡಿಸಿರಲಿಲ್ಲ.
ಕಳೆದ 20 ದಿನಗಳ ಹಿಂದಷ್ಟೆ ದತ್ತಪೀಠಕ್ಕೆ ಇಬ್ಬರು ಹಿಂದೂ ಅರ್ಚಕರ ನೇಮಕವಾಗಿದೆ. ತಮ್ಮ ಹೋರಾಟ ಹಾಗೂ ಹರಕೆಗೆ ಫಲ ಸಿಕ್ಕ ಹಿನ್ನೆಲೆ ಬುಧವಾರ ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ದತ್ತಪೀಠದ ಹೋಮದ ಆವರಣದಲ್ಲಿ ಕೇಶಮುಂಡನ ಮಾಡಿಸಿ ಹರಕೆ ತೀರಿಸಿದ್ದಾರೆ.
ನಮ್ಮ ಹೋರಾಟ ಇಲ್ಲಿಗೆ ನಿಲ್ಲಲ್ಲ. ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠವಾಗೋವರೆಗೂ ನಮ್ಮ ಹೋರಾಟ ನಿರಂತರ ಎಂದು ಶಪಥಗೈದಿದ್ದಾರೆ.
ಮುತಾಲಿಕ್ ನೇತೃತ್ವದಲ್ಲಿ ಮುಡಿ ಕಾರ್ಯಕ್ರಮ
ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Srirama sena Chief Pramod Mutalik) ನೇತೃತ್ವದಲ್ಲಿ ಈ ಮುಡಿ ಕಾರ್ಯಕ್ರಮ ನಡೆದಿದ್ದು, ಪ್ರಮೋದ್ ಮುತಾಲಿಕ್ ಕೂಡ ಮುಸ್ಲಿಮರ ವಿರುದ್ಧ ಕಿಡಿಕಾರಿದ್ದಾರೆ.
ಗಂಗಾಧರ್ ಹಿಂದೂಗಳಿಗೆ ಹಿತವಾಗಬೇಕು, ದತ್ತಪೀಠ ಹಿಂದೂಗಳ ಪೀಠವಾಗಬೇಕೆಂದು ಈ ಸಂಕಲ್ಪ ಮಾಡಿದ್ದಾರೆ. ಇಂದು ಶಾಸ್ತ್ರೋಕ್ರವಾಗಿ ಮುಡಿ ಕಾರ್ಯಕ್ರಮ ನಡೆದಿದೆ. ಮುಂದಿನ ದಿನಗಳಲ್ಲೂ ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠವಾಗಲಿದೆ ಎಂದರು.
ಸರ್ಕಾರದ ವಿರುದ್ಧ ಮುತಾಲಿಕ್ ಕಿಡಿ
ಧಾರ್ಮಿಕ ದತ್ತಿ ಇಲಾಖೆ ಕಾನೂನಿನ ಪ್ರಕಾರ, ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳ ಸುತ್ತಮುತ್ತ ಮುಸ್ಲಿಂ-ಕ್ರಿಶ್ಚಿಯನ್ ಗಳಿಗೆ ಪ್ರವೇಶವೇ ಇಲ್ಲ. ಟೆಂಡರ್ ಕೊಡುವಂತಿಲ್ಲ. ಮಾರಾಟಕ್ಕೆ ಅವಕಾಶ ನೀಡುವಂತಿಲ್ಲ. ಆದರೆ, ದತ್ತಪೀಠ ಸುತ್ತಮುತ್ತ ಇರೋರೆಲ್ಲಾ ಅವರೇ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: Crime News: ಶಿಕ್ಷಕನಿಂದ ಹಲ್ಲೆಗೊಳಗಾಗಿದ್ದ ಟೀಚರ್ ಸಾವು; ಟ್ರಯಾಂಗಲ್ ಲವ್ ಸ್ಟೋರಿಗೆ ತಾಯಿ-ಮಗ ಬಲಿ
ಮುಡಿ ನೀಡಲು ಬರುವಂತೆ ಹಿಂದೂಗಳಿಗೆ ಮುತಾಲಿಕ್ ಕರೆ
ನಿಮಗೆ ಒಳ್ಳೆಯದಾಗಬೇಕೆಂದರೆ ಮಕ್ಕಳಾಗದವರು, ಯಾವುದೇ ರೀತಿಯ ರೋಗ-ರುಜನೆ ಇದ್ದವರು, ಹಣದ ತೊಂದರೆ ಇದ್ದವರು ದತ್ತಪೀಠಕ್ಕೆ ಬಂದು ಮುಡಿ ಕೊಟ್ಟರೆ ನಿಮ್ಮ ಸಮಸ್ಯೆ ಪವಾಡದ ರೀತಿ ಪರಿಹಾರವಾಗುತ್ತೆ ಎಂದು ಹಿಂದೂಗಳು ಹೆಚ್ವಿನ ಸಂಖ್ಯೆಯಲ್ಲಿ ದತ್ತಪೀಠಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.
ಒಟ್ಟಾರೆ, 30 ವರ್ಷಗಳ ಹೋರಾಟದ ಫಲವಾಗಿ ದತ್ತಪೀಠಕ್ಕೆ ಅಲ್ಪ ನ್ಯಾಯ ಸಿಕ್ಕಿದೆ. ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠವಾಗೋವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ ಅನ್ನೋದು ಹಿಂದೂ ಸಂಘಟನೆಗಳ ಮಾತು.
ಬುಧವಾರದಿಂದ ಹೊಸ ಸಂಪ್ರದಾಯ ಆರಂಭ
ಆದ್ರೆ, ದತ್ತಪೀಠದಲ್ಲಿ ಬುಧವಾರ (ಡಿಸೆಂಬರ್ 28, 2022) ಹೊಸ ಸಂಪ್ರದಾಯ ಆರಂಭವಾಗಿದ್ದಂತು ಸತ್ಯ. ಮೊದಲ ದಿನದಂದು ಸಾಂಕೇತಿಕವಾಗಿ ಒಬ್ಬರು ಮುಡಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಒಂದು ಎರಡಾಗಿ, ಎರಡು ಹತ್ತಾಗಿ, ಹತ್ತು ಸಾವಿರ ಆಗಲಿದೆ ಎಂದು ಹಿಂದೂ ಕಾರ್ಯಕರ್ತರು ಭವಿಷ್ಯ ನುಡಿದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ