Mudhol Dog: ಪ್ರಧಾನಿ ಮೋದಿ ಭದ್ರತೆಗೆ ಮುಧೋಳ ನಾಯಿ, ಏನಿದರ ವಿಶೇಷತೆ ಗೊತ್ತಾ?

ಭದ್ರತೆಯ ವಿಚಾರದಲ್ಲಿ ಶ್ವಾನ ಅಂದಾಕ್ಷಣ ನೆನಪಾಗೋದು ಮುಧೋಳ ನಾಯಿ. ತನ್ನ ವಿಶೇಷ ಕಾರ್ಯ ಶಕ್ತಿ, ಗುಣಗಳ ವ್ಯಕ್ತಿತ್ವದಿಂದಲೇ ಹೆಸರು ಮಾಡಿರೋ ನಾಯಿಯೆಂದರೆ ಮುಧೋಳ ನಾಯಿ. ಇದೀಗ ಮೋದಿ ಅವರ ಗಮನ ಸೆಳೆದು ಅವರ ವಿಶೇಷ ರಕ್ಷಣಾ ಪಡೆಗೆ ಸೇರ್ಪಡೆಯಾಗಿದೆ.

ಮೋದಿ ಭದ್ರತೆಗೆ ಮುಧೋಳ ನಾಯಿ

ಮೋದಿ ಭದ್ರತೆಗೆ ಮುಧೋಳ ನಾಯಿ

  • Share this:
ಭದ್ರತೆಯ ವಿಚಾರದಲ್ಲಿ ಶ್ವಾನ ಅಂದಾಕ್ಷಣ ನೆನಪಾಗೋದು ಮುಧೋಳ ನಾಯಿ (Mudhol Dog). ತನ್ನ ವಿಶೇಷ ಕಾರ್ಯ ಶಕ್ತಿ, ಗುಣಗಳ ವ್ಯಕ್ತಿತ್ವದಿಂದಲೇ ಹೆಸರು (Name) ಮಾಡಿರೋ ನಾಯಿಯೆಂದರೆ ಮುಧೋಳ ನಾಯಿ. ಈಗ ಮುಧೋಳ ನಾಯಿ ದೇಶದ ಪ್ರಧಾನಿ ನರೇಂದ್ರ ಮೋದಿಯವರ (PM Modi) ಭದ್ರತಾ ಪಡೆಗೆ (Security) ಸೇರ್ಪಡೆಯಾಗಿದೆ. ಇದ್ರಿಂದ ಮುಧೋಳದ ಜನತೆ ಮತ್ತಷ್ಟು ಸಂತಸ ಪಡುವಂತಾಗಿದ್ದು, ದೇಶದ ಪ್ರಧಾನಿ ಮನಸೆಳೆದ ಮುಧೋಳ ಶ್ವಾನ ಬಗ್ಗೆ ಇನ್ನಷ್ಟು ಅಭಿಮಾನಪಡುವಂತಾಗಿದೆ. ತೆಳ್ಳನೆಯ ದೇಹ, ಚೂಪಾದ ಮೂಗು, ಚಿಗರೆಯಂತ ಓಟದಿಂದ ಪ್ರಸಿದ್ಧಿ ಪಡೆದಿರುವ ಮುಧೋಳ ನಾಯಿ ದೇಶದ ಪ್ರಧಾನಿಯ ಭದ್ರೆತೆಗೆ ಸೇರ್ಪಡೆಯಾಗಿರೋದು ಕರ್ನಾಟಕವೇ (Karnataka) ಹೆಮ್ಮೆ ಪಡೋ ವಿಚಾರ. ಇದರ ವಿವರ ನೋಡೋಣ

ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಮುಧೋಳ ಶ್ವಾನ ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭದ್ರತೆ ನೀಡುವ ಎಸ್​ಪಿಜಿ ತಂಡಕ್ಕೆ ಸೇರ್ಪಡೆಯಾಗಿದೆ. ಇದರಿಂದ ಮುಧೋಳದ ಶ್ವಾನಗಳಿಗೆ ಮತ್ತಷ್ಟು ಪ್ರಾಮುಖ್ಯತೆ ಹೆಚ್ಚಿದೆ. ಈ ಹಿಂದೆ ಮಿಲಿಟರಿ ಸೇರಿದಂತೆ ವಿವಿಧ ರಕ್ಷಣಾ ವಿಭಾಗಕ್ಕೆ ಮುಧೋಳ ನಾಯಿ ಸೇರ್ಪಡೆಯಾಗಿತ್ತು. ಇದೀಗ ಮೋದಿ ಅವರ ಗಮನ ಸೆಳೆದು ಅವರ ವಿಶೇಷ ರಕ್ಷಣಾ ಪಡೆಗೆ ಸೇರ್ಪಡೆಯಾಗಿದೆ.

2 ನಾಯಿ ಮರಿ ಕೊಂಡೊಯ್ದಿದ್ದ ಎಸ್​ಪಿಜಿ ತಂಡ

ಮುಧೋಳ ನಾಯಿ ಪ್ರಧಾನಿ ಮೋದಿಯ ವಿಶೇಷ ರಕ್ಷಣಾ ತಂಡಕ್ಕೆ ಆಯ್ಕೆಯಾಗಿತ್ತು. ತಕ್ಷಣ ದೆಹಲಿಯಿಂದ ಬಂದ ಎಸ್​ಪಿಜಿ ತಂಡದ ಸದಸ್ಯರು 2 ಮುಧೋಳ ನಾಯಿ ಮರಿಗಳನ್ನ ಕೊಂಡೊಯ್ದು ಇದೀಗ ದೆಹಲಿಯಲ್ಲಿ ತರಬೇತಿ ಕಾರ್ಯಕ್ಕೆ ಮುಂದಾಗಿದ್ದಾರೆ.

Mudhol dog joined the security Force spg team of Prime Minister Narendra Modi
ಮೋದಿ ಭದ್ರತೆಗೆ ಸೇರ್ಪಡೆಗೊಂಡ ಮುಧೋಳ ಶ್ವಾನದ ಜೊತೆ ಸಿಬ್ಬಂದಿ


ಇದನ್ನೂ ಓದಿ: ಮೃಗಾಲಯದ ಆವರಣದಲ್ಲಿ ಬಿದ್ದ ಮಗುವಿನ ಶೂವನ್ನು ಹಿಂತಿರುಗಿಸಿ ಕೊಟ್ಟ ಆನೆ! ಈ ವಿಡಿಯೋ ನೋಡಿ

ದೆಹಲಿಯಿಂದ ಬಂದಿದ್ದ ಎಸ್​​ಪಿಜಿ ತಂಡ

ತನ್ನ ವಿಶೇಷ ಶಕ್ತಿಯಿಂದ ಎಲ್ಲರನ್ನು ಸೆಳೆದಿರೋ ನಾಯಿಯೆಂದರೆ ಮುಧೋಳ ನಾಯಿ. ಈ ಶ್ವಾನದ ಗುಣ, ಕಾರ್ಯವೈಖರಿ ಅರಿತ ಮೋದಿ ಎಸ್​ಪಿಜಿ ತಂಡದ ವೈದ್ಯ ಡಾ.ಬಿ.ಎನ್​.ಪಂಚಬುದ್ದೆ ಮತ್ತು ತರಬೇತಿದಾರರ ತಂಡ ದೆಹಲಿಯಿಂದ ಬಾಗಲಕೋಟೆ ಜಿಲ್ಲಾಡಳಿತ ಮತ್ತು ಎಸ್​ಪಿ ಕಚೇರಿ ಸಂಪರ್ಕಿಸಿತು. ಇದರ ಬೆನ್ನಲ್ಲೆ ಸಮಯವನ್ನ ನಿಗದಿಪಡಿಸಿ ಬಳಿಕ ಬಾಗಲಕೋಟೆ ಜಿಲ್ಲೆಯ  ಮುಧೋಳಕ್ಕೆ ಆಗಮಿಸಿತು.

ಇದನ್ನೂ ಓದಿ: ಅಬ್ಬಬ್ಬಾ! ಪ್ರಾಣಿಪಾಲಕರ ಗಮನ ಸೆಳೆಯಲು ಈ ಗೋರಿಲ್ಲಾಗಳು ಸರ್ಕಸ್

ಇಂದು ಮೋದಿ ಭದ್ರತೆಗೆ ಸೇರ್ಪಡೆ

ಏಪ್ರಿಲ್ 25ರಂದು ಮುಧೋಳದ ತಿಮ್ಮಾಪೂರ ಬಳಿ ಇರುವ ಮುಧೋಳ ಶ್ವಾನ ಸಂಶೋಧನಾ ಮತ್ತು ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿದ ವಿಶೇಷ ಭದ್ರತಾ ಪಡೆಯ ತಂಡ, ಪರಿಶೀಲನೆ ನಡೆಸಿ ಬಳಿಕ ಎರಡು ಗಂಡು ಜಾತಿಯ ಮುಧೋಳ ನಾಯಿಗಳನ್ನ ಪಡೆದುಕೊಂಡು ತೆರಳಿದೆ. ನಂತರ ತರಬೇತಿ ನೀಡಿ ಈಗ ಎಸ್​ಪಿಜಿ ತಂಡಕ್ಕೆ ಸೇರ್ಪಡೆಯಾಗಿದೆ.

Mudhol dog joined the security Force spg team of Prime Minister Narendra Modi
ಮೋದಿ ಭದ್ರತೆಗೆ ಮುಧೋಳ ನಾಯಿ


ಮನ್​​ ಕಿ ಬಾತ್​ನಲ್ಲೂ ಮಾತನಾಡಿದ್ದ ಮೋದಿ

ಈ ಹಿಂದೆ ದೇಶದ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್​ ಕಿ ಬಾತ್​ನಲ್ಲಿ ಮುಧೋಳ ನಾಯಿಗಳ ಬಗ್ಗೆ ಮಾತನಾಡಿದ್ದರು. ಮುಧೋಳ ಶ್ವಾನಗಳನ್ನ ನೆನಪಿಸಿ, ಅವುಗಳ ವ್ಯಕ್ತಿತ್ವವನ್ನ ಬಣ್ಣಿಸಿ, ಆತ್ಮ ನಿರ್ಭರ ಭಾಗವಾಗಿ ಸ್ವಾವಲಂಬಿ ಭಾರತಕ್ಕಾಗಿ ಮನೆಯಲ್ಲಿ ಸಾಕುವುದಾದರೇ ಮುಧೋಳ ತಳಿಯಂತಹ ನಾಯಿಗಳನ್ನ ಸಾಕಿ ಎಂದಿದ್ದರು. ಈ ಮೂಲಕ ದೇಶಾದ್ಯಂತ ಮುಧೋಳ ಶ್ವಾನದ ಬಗ್ಗೆ ಮತ್ತಷ್ಟು ಅಭಿಮಾನವನ್ನು ಹೆಚ್ಚಿಸುವಂತೆ ಮಾಡಿದ್ದರು.

ಕಾರ್ಯವೈಖರಿಯಿಂದಲೇ ಮುಧೋಳ ನಾಯಿ ಫೇಮಸ್

ಮುಧೋಳ ನಾಯಿ ಮರಿಗಳು ತಮ್ಮ ವಿಶೇಷ ಕಾರ್ಯ ಶಕ್ತಿ, ಆಕಾರ, ಬಣ್ಣ, ಗುಣಗಳ ವ್ಯಕ್ತಿತ್ವದಿಂದಲೇ ದೇಶಾದ್ಯಂತ ಹೆಸರು ಮಾಡಿದೆ. ಭಾರತೀಯ ಸೇನೆ, ಸಿಆರ್​ಪಿಎಫ್ ಮತ್ತು ವಾಯುಸೇನೆಗೂ ಈ ಮುಧೋಳ ನಾಯಿ ಸೇರ್ಪಡೆಗೊಂಡು ಗಮನ ಸೆಳೆದಿದ್ದವು. ಇನ್ನೂ ವಿಶೇಷವೆಂದರೆ ಈ ಮುಧೋಳ ನಾಯಿ ಎಲ್ಲಾ ಹವಾಮಾನಕ್ಕೂ ಹೊಂದಿಕೊಳ್ಳಬಹುದಾದ ಪ್ರಾಣಿ.

ಪಾಲಕರ ನಿಯತ್ತಿನ ಪ್ರಾಣಿ!

ಹೆಚ್ಚು ಕ್ರಿಯಾಶೀಲವಾಗಿರುವ ಮುಧೋಳ ನಾಯಿ, ತನ್ನನ್ನ ಸಾಕಿದ ವ್ಯಕ್ತಿಗೆ ಸಾವಿನವರೆಗೆ ವಿಧೇಯವಾಗಿರೋ ನಂಬಿಗಸ್ಥ ಪ್ರಾಣಿಯೂ ಹೌದು. ಇಂತಹ ಮುಧೋಳ ಶ್ವಾನ  ಇದೀಗ ದೇಶದ ಪ್ರಧಾನಿಗಳ ಮನಗೆದ್ದು, ಪ್ರಧಾನಿಗಳ ವಿಶೇಷ ಭದ್ರತಾ ಪಡೆಗೆ ಸೇರ್ಪಡೆಯಾಗಿದೆ. ಇದು ಬಾಗಲಕೋಟೆ ಜಿಲ್ಲೆ ಮಾತ್ರವಲ್ಲದೇ ಕರುನಾಡೇ ಸಂತಸ ಪಡೋ ವಿಚಾರ.
Published by:Thara Kemmara
First published: