ನನಗೂ ಮಂತ್ರಿಯಾಗುವ ಆಸೆಯಿದೆ; ಕೇಳುವುದನ್ನು ಕೇಳಿದ್ದೇವೆ, ಮುಂದಿನ ನಿರ್ಧಾರ ಸಿಎಂಗೆ ಬಿಟ್ಟಿದ್ದು; ಎಂಟಿಬಿ ನಾಗರಾಜ್​

ಎಂಟಿಬಿ ನಾಗರಾಜ್​​

ಎಂಟಿಬಿ ನಾಗರಾಜ್​​

  • Share this:
ಬೆಂಗಳೂರು(ಡಿ.16): ಹೊಸಕೋಟೆ ಬಿಜೆಪಿ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್​ ಇಂದು ಸಿಎಂ ಬಿಎಸ್​ ಯಡಿಯೂರಪ್ಪನವರನ್ನು ಭೇಟಿಯಾಗಿದ್ದಾರೆ. ನನ್ನ ಕ್ಷೇತ್ರದಲ್ಲಿ ಕೆಲವು ಕೆಲಸ ಆಗಬೇಕು ಅದಕ್ಕೆ ಭೇಟಿ ಮಾಡಿದೆ ಎಂದು ಅವರು ಹೇಳಿದ್ದಾರೆ.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ ವಿಚಾರವಾಗಿ ಸಿಎಂ ಭೇಟಿ ಮಾಡಲು ಬಂದಿದ್ದೆ. ಕೆಲವು ಕೆಲಸ ಆಗಬೇಕು ಅದಕ್ಕೆ ಬಂದಿದ್ದೆ. ನನ್ನ‌ ಸೋಲಿಗೆ ಶರತ್ ಬಚ್ಚೇಗೌಡ, ಸಂಸದ ಬಚ್ಚೇಗೌಡ ಕಾರಣ. ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆ ವಾಪಸ್ ತಗೆದುಕೊಳ್ಳಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ‘ಅಸ್ಮಿತೆ’ಗೆ ಆಘಾತ; ಕಸಾಪ ಹೊಸ ಕಟ್ಟಡಕ್ಕೆ ಭೂಮಿ ಭಾಗ್ಯ ಇಲ್ಲ; ಬಿಬಿಎಂಪಿಯಿಂದ ಅನುಮೋದನೆ ರದ್ದು

ಮೊದಲು ಒಪ್ಪಿ ಆಮೇಲೆ ಶರತ್ ನನಗೆ ಮೋಸ ಮಾಡಿದರು. ನನ್ನ ಸೋಲಿಗೆ ಅವರಿಬ್ಬರೇ ನೇರ ಕಾರಣ. ಪಕ್ಷ ವಿರೋಧಿ ಚಟುವಟಿಕೆ ಮಾಡುವವರಿಗೆ ಪಾಠ ಕಲಿಸಬೇಕು. ನನಗೂ ಮಂತ್ರಿ ಆಗಬೇಕು ಅಂತ ಆಸೆ ಇದೆ. ಯಾರಿಗೆ ತಾನೆ ಆಸೆ ಇರೋದಿಲ್ಲ ಹೇಳಿ? ಎಂದು ಪ್ರಶ್ನಿಸಿದರು.

ಸಿಎಂ ಬಿಎಸ್​ ಯಡಿಯೂರಪ್ಪನವರಿಗೆ ನಮ್ಮ ಪರಿಸ್ಥಿತಿ ಎಲ್ಲಾ ಗೊತ್ತಿದೆ. ಸಚಿವ ಸ್ಥಾನದ ಬಗ್ಗೆ ಸಿಎಂ ಯಡಿಯೂರಪ್ಪ ನನಗೆ ಯಾವುದೇ ಭರವಸೆ ನೀಡಿಲ್ಲ. ಅವರು ಏನೇ ನಿರ್ಧಾರ ತೆಗೆದುಕೊಂಡರೂ ನಾನು ಬದ್ದನಾಗಿದ್ದೇನೆ. ಹೈಕಮಾಂಡ್ ಸೇರಿದಂತೆ ಕೇಂದ್ರದ ಯಾವುದೇ ನಾಯಕರನ್ನು ನಾನು ಭೇಟಿ ಮಾಡಲ್ಲ. ರಾಜ್ಯ ನಾಯಕರೇ ಎಲ್ಲಾ ನಿರ್ಧಾರ ಮಾಡಲಿ. ನಾವಂತೂ ಕೇಳುವುದನ್ನು ಕೇಳಿದ್ದೇವೆ. ಮುಂದೆ ಅವರೇ ನಿರ್ಧಾರ ಮಾಡಲಿ ಎಂದರು.

ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಹೌದು ಹುಲಿಯಾ ಖ್ಯಾತಿಯ ಪೀರಪ್ಪ; ಈತನೇ ನಿಜವಾದ ಹುಲಿಯಾ ಎಂದ ಮಾಜಿ ಸಿಎಂ

ಸಂಪುಟ ವಿಸ್ತರಣೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ನಾನೇನು ಶಾಸಕ ಅಲ್ಲ ಎಂದರು.
Published by:Latha CG
First published: