ಸೋಲಿನಿಂದ ಕಂಗೆಟ್ಟ ಎಂಟಿಬಿ ನಾಗರಾಜ್​ ; ಸಿಎಂ ಬಿಎಸ್​ವೈರಿಂದ ಧೈರ್ಯ

ಕಡೆಯ ಸುತ್ತಿನವರೆಗೂ ತಮ್ಮ ಗೆಲುವಿಗಾಗಿ ಹವಣಿಸುತ್ತಿದ್ದ ನಾಗರಾಜ್​ಗೆ ಸೋಲು ಆಘಾತ ನೀಡಿದೆ. ಈ ಕುರಿತು ತಕ್ಷಣಕ್ಕೆ ಅವರು ಸಿಎಂ ಬಿಎಸ್​ವೈಗೆ ಕರೆ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮ್ಮ ಸೋಲಿಗೆ ಬಚ್ಚೇಗೌಡ ಅವರೇ ಕಾರಣ ಎಂದು ಮತ್ತೊಮ್ಮೆ ದೂರಿನ ಸುರಿಮಳೆ ಸುರಿಸಿದ್ದಾರೆ

Seema.R | news18-kannada
Updated:December 9, 2019, 5:33 PM IST
ಸೋಲಿನಿಂದ ಕಂಗೆಟ್ಟ ಎಂಟಿಬಿ ನಾಗರಾಜ್​ ; ಸಿಎಂ ಬಿಎಸ್​ವೈರಿಂದ ಧೈರ್ಯ
ಎಂಟಿಬಿ ನಾಗರಾಜ್​​
  • Share this:
ಬೆಂಗಳೂರು (ಡಿ.9): ಸ್ಥಳೀಯ ನಾಯಕರ ವಿರೋಧದ ನಡುವೆ ಸಿಎಂ ಬೆಂಬಲದೊಂದಿಗೆ ಉಪಚುನಾವಣೆಗೆ ಸ್ಪರ್ಧಿಸಿದ್ದ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ಶರತ್​ ಬಚ್ಚೇಗೌಡ ವಿರುದ್ಧ ಸೋಲನ್ನಪ್ಪಿದ್ದಾರೆ. ಗೆಲುವ ಭರವಸೆಯಲ್ಲಿದ್ದ ಎಂಟಿಬಿಗೆ ಈ ಸೋಲು ಕಂಗೆಡಿಸಿದ್ದು, ಮುಂದೇನು ಎಂಬ ಪ್ರಶ್ನೆಯನ್ನು ಮೂಡಿಸಿದೆ. 

ಸಿ ಓಟರ್ಸ್​ ಸಮೀಕ್ಷೆಯಲ್ಲಿ ಎಂಟಿಬಿ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದ ಮತಗಟ್ಟೆ ಸಮೀಕ್ಷೆಗಳು ಈ ಸುಳ್ಳಾಗಿದ್ದು, ಈಗ ತಮ್ಮ ರಾಜಕೀಯ ಭವಿಷ್ಯ ಏನಾಗಲಿದೆ ಎಂಬ ಆತಂಕ ಎಂಟಿಬಿ ಆಂತಕ ವ್ಯಕ್ತಪಡಿಸಿದ್ದಾರೆ.

ಕಡೆಯ ಸುತ್ತಿನವರೆಗೂ ತಮ್ಮ ಗೆಲುವಿಗಾಗಿ ಹವಣಿಸುತ್ತಿದ್ದ ನಾಗರಾಜ್​ಗೆ ಸೋಲು ಆಘಾತ ನೀಡಿದೆ. ಈ ಕುರಿತು ತಕ್ಷಣಕ್ಕೆ ಅವರು ಸಿಎಂ ಬಿಎಸ್​ವೈಗೆ ಕರೆ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮ್ಮ ಸೋಲಿಗೆ ಬಚ್ಚೇಗೌಡ ಅವರೇ ಕಾರಣ ಎಂದು ಮತ್ತೊಮ್ಮೆ ದೂರಿನ ಸುರಿಮಳೆ ಸುರಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದಷ್ಟೆ ತಮ್ಮ ಗೆಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ  ಎಂಟಿಬಿ, ಸಂಸದ ಬಚ್ಚೇಗೌಡ ವಿರುದ್ಧ ದೂರು ದಾಖಲಿಸಿದ್ದರು. ಈ ವೇಳೆ ಅವರಿಗೆ ಧೈರ್ಯ ನೀಡಿದ ಯಡಿಯೂರಪ್ಪ ಏನಾಗುವುದಿಲ್ಲ. ನೀವು ಗೆಲ್ಲುತ್ತೀರಾ. ನಿಮ್ಮ ಕೈ ಬಿಡುವುದಿಲ್ಲ ಎಂಬ ಭರವಸೆ ನೀಡಿದ್ದರು.

ಆದರೆ, ಈಗ ಅವರ ಅನುಮಾನಿಸಿದಂತೆ ಸೋಲು ಅವರಿಗೆ ನಿರಾಸೆಯನ್ನು ಉಂಟುಮಾಡಿದ್ದು, ಅವರನ್ನು ಕಂಗೆಡಿಸಿದೆ. ಕೇವಲ ಎಂಟಿಬಿಗೆ ಮಾತ್ರವಲ್ಲದೇ ಸಿಎಂ ಯಡಿಯೂರಪ್ಪಗೂ ಇದು ಬೇಸರ ಮೂಡಿಸಿದೆ. ಇದೇ ಹಿನ್ನೆಲೆ ಸಿಎಂ ಎಂಟಿಬಿಗೆ ದೂರವಾಣಿ ಕರೆ ಮಾಡಿ ಸಂತೈಸುವ ಯತ್ನ ನಡೆಸಿದ್ದರು. ಅಲ್ಲದೇ, ಪಕ್ಷ ಸಂಘಟನೆಗೆ ತಮ್ಮನ್ನು ತೊಡಗಿಸಿಕೊಳ್ಳುವಂತೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಸಚಿವ ಆರ್​ ಅಶೋಕ್​ ಹಾಗೂ ಎಸ್​ ಆರ್​ ವಿಶ್ವನಾಥ್​ ಕೂಡ ಕರೆ ಮಾಡಿ ಅವರಿಗೆ ಧೈರ್ಯ ತುಂಬಿದ್ದಾರೆ.

ಇದನ್ನು ಓದಿ: ಉಪ ಚುನಾವಣೆಯಲ್ಲಿ ಸೋತವರಿಗೆ ಬಿಜೆಪಿಯಿಂದ ಬೇರೆ ದಾರಿ; ಎಂಟಿಬಿಗೆ ಪಕ್ಷ ಸಂಘಟನೆ ಜವಾಬ್ದಾರಿ?

ಇನ್ನು ಈ ಅನಿರೀಕ್ಷಿತ ಸೋಲಿನಿಂದ ಮನೆಯಲ್ಲಿ ಕುಳಿತಿರುವ ನಾಗರಾಜ್​ ಮತ ಎಣಿಕೆ ಕೇಂದ್ರಕ್ಕೂ ಕೂಡ ಹೋಗಿಲ್ಲ. ಅಲ್ಲದೇ ತಮ್ಮ ಸೋಲಿಗೆ ಕಾರಣರಾದ ಶರತ್​ ಬಚ್ಚೇಗೌಡ ಬಗ್ಗೆ ಬಿಜೆಪಿ ನಾಯಕರಿಗೆ ಫೋನ್​ ಮೂಲಕವೇ ತರಾಟೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
First published:December 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading