ನನ್ನ ಹೃದಯದಲ್ಲಿದ್ದ ಸಿದ್ದರಾಮಯ್ಯರನ್ನು ಕಿತ್ತು ಪಕ್ಕಕ್ಕೆ ಎಸೆದಿದ್ದೇನೆ; ಎಂಟಿಬಿ ನಾಗರಾಜ್​​

ಅಂದು ನನ್ನ ಎದೆಬಗೆದರೆ ಸಿದ್ದರಾಮಯ್ಯ ಇದ್ದಾರೆ ಎಂದಿದ್ದು ನಿಜ. ಆದರೆ, ಈಗ ಅವರನ್ನು ಪಕ್ಕಕ್ಕೆ ಇಟ್ಟಿದ್ದೇನೆ. ಅವರು ನನ್ನನ್ನು ಗಂಭೀರವಾಗಿ ಪರಿಗಣಿಸಲಿಲ್ಲ.  ನನ್ನ ಎದೆಯಲ್ಲಿ ಈಗ ಕೇವಲ ಕ್ಷೇತ್ರದ ಮತದಾರರು ಇದ್ದಾರೆ - ಎಂಟಿಬಿ ನಾಗರಾಜ್​

Seema.R | news18-kannada
Updated:September 13, 2019, 2:08 PM IST
ನನ್ನ ಹೃದಯದಲ್ಲಿದ್ದ ಸಿದ್ದರಾಮಯ್ಯರನ್ನು ಕಿತ್ತು ಪಕ್ಕಕ್ಕೆ ಎಸೆದಿದ್ದೇನೆ; ಎಂಟಿಬಿ ನಾಗರಾಜ್​​
ಅನರ್ಹ ಶಾಸಕ ಎಂಟಿಬಿ ನಾಗಾರಾಜ್​​ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ
  • Share this:
ಬೆಂಗಳೂರು (ಸೆ.13): ಈ ಹಿಂದೆ ನನ್ನ ಎದೆಬಗೆದರೆ ಅಲ್ಲಿರುವುದು ಸಿದ್ದರಾಮಯ್ಯ ಎಂದಿದ್ದ ಹೊಸಕೋಟೆ ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಈಗ ಉಲ್ಟಾ ಹೊಡೆದಿದ್ದು, ಈಗ ನನ್ನ ಎದೆಯಲ್ಲಿ ಸಿದ್ದರಾಮಯ್ಯ ಇಲ್ಲ. ಅವರನ್ನು ಎತ್ತಿ ಸೈಡಿಗೆ ಎಸೆದಿದ್ದೇನೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್​ನಲ್ಲಿಅರ್ಜಿ ವಿಳಂಬವಾಗುತ್ತಿರುವ ಹಿನ್ನೆಲೆ ಮುಂದಿನ ನಡೆ ಏನು ಎಂಬ ಬಗ್ಗೆ ಇಂದು ಅನರ್ಹ ಶಾಸಕರು ಡಾ. ಸುಧಾಕರ್​ ಮನೆಯಲ್ಲಿ ಚರ್ಚೆ ನಡೆಸಿದರು. ಈ ಸಭೆ ಬಳಿಕ ಮಾತನಾಡಿದ ಅವರು, ಅಂದು ನನ್ನ ಎದೆಬಗೆದರೆ ಸಿದ್ದರಾಮಯ್ಯ ಇದ್ದಾರೆ ಎಂದಿದ್ದು ನಿಜ. ಆದರೆ, ಈಗ ಅವರನ್ನು ಪಕ್ಕಕ್ಕೆ ಇಟ್ಟಿದ್ದೇನೆ. ಅವರು ನನ್ನನ್ನು ಗಂಭೀರವಾಗಿ ಪರಿಗಣಿಸಲಿಲ್ಲ.  ನನ್ನ ಎದೆಯಲ್ಲಿ ಈಗ ಕೇವಲ ಕ್ಷೇತ್ರದ ಮತದಾರರು ಇದ್ದಾರೆ ಎಂದರು

ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಎಂಟಿಬಿ,  ಸಚಿವನಾಗಬೇಕು. ಇಲ್ಲ, ರಾಜಕೀಯ ನಿವೃತ್ತಿ ಬಗ್ಗೆ ಚಿಂತಿಸುತ್ತಿದ್ದ ನನ್ನ ಕನಸನ್ನು ಈಡೇರಿಸಿದ್ದವರು ಸಿದ್ದರಾಮಯ್ಯ. ನನ್ನ ಹೃದಯದಲ್ಲಿ ಇರುವುದು ಸಿದ್ದರಾಮಯ್ಯ ಎಂದಿದ್ದರು.

ಬಳಿಕ ಬದಲಾದ ಪರಿಸ್ಥಿತಿಯಲ್ಲಿ  ಸಿದ್ದರಾಮಯ್ಯ ಮಾತಿಗೂ ಕಿಡಿಗೊಡದ ಅವರು ರಾಜೀನಾಮೆ ನೀಡಿ ಮುಂಬೈಗೆ ಹಾರಿ ಮೈತ್ರಿ ಸರ್ಕಾರ ಪತನಕ್ಕೆ ಸಹಾಯಮಾಡಿದ್ದರು. ಈ ಹಿನ್ನೆಲೆ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರನ್ನು ಅನರ್ಹಗೊಳಿಸುವಂತೆ ಮಾಡುವಂತೆ ಸ್ಪೀಕರ್​ ಅವರಿಗೆ ಮನವಿ ಮಾಡಿದ್ದರು. ಅದರಂತೆ ಸ್ಪೀಕರ್​ ಆಗಿದ್ದ ರಮೇಶ್​ ಕುಮಾರ್ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ​ ಅವರನ್ನು  ಅನರ್ಹಗೊಳಿಸಿದ್ದರು.

ಇದನ್ನು ಓದಿ: ಹೇಳಿದ ಕೆಲಸ ಮಾಡಿಕೊಡುತ್ತಿಲ್ಲ; ಕೋರ್ಟ್​ನಲ್ಲೂ ಇತ್ಯರ್ಥವಾಗುತ್ತಿಲ್ಲ: ಸಿಎಂ ಬಗ್ಗೆ ಅಸಮಾಧಾನಗೊಂಡಿರುವ ಅನರ್ಹ ಶಾಸಕರಿಂದ ಸಭೆ

ಇನ್ನು ಇದೇ ವೇಳೆ ತಮ್ಮನ್ನು ಅನರ್ಹಗೊಳಿಸಿದ್ದ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ವಿರುದ್ದ ಕೂಡ ಹರಿಹಾಯ್ದ ಅವರು, ಕೋಲಾರದಲ್ಲಿ ಮುನಿಯಪ್ಪ ಸೋಲಿಗೆ ರಮೇಶ್​ ಕುಮಾರ್​ ಕೂಡ ಕಾರಣ ಎಂದು ಖುದ್ದು ಮುನಿಯಪ್ಪ ಅವರೇ ಹೈ ಕಮಾಂಡ್​​ಗೆ ದೂರು ನೀಡಿದ್ದಾರೆ. ತಮ್ಮ ಪಕ್ಷದ ನಾಯಕನ ಸೋಲಿಗೆ ಕಾರಣವಾಗಿದ್ದ ರಮೇಶ್​ ಕುಮಾರ್​ ಮಾತ್ರ ಕ್ರಮ ಕೈಂಡಿಲ್ಲ. ಆದರೆ ನಮ್ಮ ಕಾರ್ಯವನ್ನು ಪಕ್ಷ ವಿರೋಧಿ ಚಟುವಟಿಕೆ ಎಂದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading