ತಾತ್ಕಾಲಿಕವಾಗಿ ಶಮನವಾದ ಎಂಟಿಬಿ ಸಿಟ್ಟು; ಸಿಎಂ ಭರವಸೆಗೆ ಮಣಿದ ನಾಗರಾಜ್​​

ಯಡಿಯೂರಪ್ಪ ನಮ್ಮ ನಾಯಕರು. ನಾವು ಅವರನ್ನು ನಂಬಿ ರಾಜೀನಾಮೆ ನೀಡಿ ಬಂದಿದ್ದೆವೆ. ಸಿಎಂ ಮಾತು ನೀಡಿದ್ದಾರೆ ಅದರಂತೆ ನಡೆದುಕೊಳ್ಳಲಿದ್ದಾರೆ. ನಮಗೆ ಸಿಎಂ ಮೇಲೆ ಯಾವುದೇ ಅನುಮಾನ ಇಲ್ಲ.ಇದುವರೆಗೂ ನಮ್ಮ ಕೆಲಸಗಳನ್ನು ಮಾಡಿ ಕೊಟ್ಟಿದ್ದಾರೆ. ಇದೊಂದು ಕೆಲಸ ಬಾಕಿ ಇದೆ, ಅದು ಕೂಡ ಶೀಘ್ರದಲ್ಲಿ ಆಗಲಿದೆ

ಎಂಟಿಬಿ ನಾಗರಾಜ್​​

ಎಂಟಿಬಿ ನಾಗರಾಜ್​​

  • Share this:
ಬೆಂಗಳೂರು (ಫೆ.3): ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬ ಸಿಎಂ ಬಿಎಸ್​ ಯಡಿಯೂರಪ್ಪ ಮಾತಿನ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿದ್ದ ಎಂಟಿಬಿ ನಾಗರಾಜ್​ ಸಿಟ್ಟು ತಣ್ಣಾಗಾಗಿದೆ. ಸಚಿವ ಸ್ಥಾನ ಕೈ ತಪ್ಪುವ ಹಿನ್ನೆಲೆ ಕಿಡಿಕಾರುತ್ತಿದ್ದ ಎಂಟಿಬಿ ನಾಗರಾಜ್​ ಮನವೊಲಿಸುವಲ್ಲಿ ಮುಖ್ಯಮಂತ್ರಿಗಳು ಯಶಸ್ವಿಯಾಗಿದ್ದು, ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ ನೀಡುವ ಭರವಸೆ ನೀಡಿದ್ದಾರೆ. 

ಸೋತವರಿಗೆ ಸ್ಥಾನ ನೀಡಿದರೆ ಮೂಲ ಬಿಜೆಪಿ ನಾಯಕರಿಂದ ವಿರೋಧ ವ್ಯಕ್ತವಾಗಲಿದೆ ಎಂದ ಅರಿತ ಸಿಎಂ ಗೆದ್ದವರಿಗೆ ಮಾತ್ರ ಸಚಿವ ಸ್ಥಾನದ ಭರವಸೆ ನೀಡಿದರು. ಇದು ಎಂಟಿಬಿ ನಾಗರಾಜ್​ ಹಾಗೂ ಎಚ್​ ವಿಶ್ವನಾಥ್​ ಗೆ ಅಸಮಾಧಾನ ತಂದಿತು. ಈ ಹಿನ್ನೆಲೆಯಲ್ಲಿ ಎಂಟಿಬಿ ಮನವೊಲಿಸಿದ ಸಿಎಂ ಸಚಿವ ಸ್ಥಾನ ಬದಲು ಪಕ್ಷದಲ್ಲಿ ಗೌರವಯುತ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಇದರಿಂದಾಗಿ ಎಂಟಿಬಿ ಸಿಟ್ಟು ಶಮನವಾಗಿದೆ ಎನ್ನಲಾಗಿದೆ.

ಸದ್ಯ ಸಚಿವ ಸಂಪುಟ ವಿಸ್ತರಣೆ ಕಾರ್ಯ ಮುಗಿಯಲಿ, ಇದಾದ ಬಳಿಕ ಉನ್ನತ ಸ್ಥಾನಮಾನ ನೀಡಲಾಗುವುದು. ಅಲ್ಲಿಯವರೆಗೂ ಕೆಲಕಾಲ ಕಾಯಿರಿ ಎಂದು ಸಿಎಂ ಭರವಸೆ ನೀಡಿದ್ದಾರೆ. ಇದರ ಜೊತೆಗೆ ಆರ್​ ಶಂಕರ್​ ಅವರಿಗೂ ವಿಧಾನ ಪರಿಷತ್​ ಸದಸ್ಯರನ್ನಾಗಿ ಮಾಡಿ, ಸಚಿವ ಸ್ಥಾನ ನೀಡಲಾಗುವುದು ಎಂದು ಕೂಡ ತಿಳಿಸಿದ್ದಾರೆ.

ಮುಖ್ಯಮಂತ್ರಿ ಭರವಸೆ ಬಳಿಕ ಮಾತನಾಡಿರುವ ಎಂಟಿಬಿ ನಾಗರಾಜ್​, ಯಡಿಯೂರಪ್ಪ ನಮ್ಮ ನಾಯಕರು ನಾವು ಅವರನ್ನು ನಂಬಿ ರಾಜೀನಾಮೆ ನೀಡಿ ಬಂದಿದ್ದೆವೆ. ಸಿಎಂ ಮಾತು ನೀಡಿದ್ದಾರೆ ಅದರಂತೆ ನಡೆದುಕೊಳ್ಳಲಿದ್ದಾರೆ. ನಮಗೆ ಸಿಎಂ ಮೇಲೆ ಯಾವುದೇ ಅನುಮಾನ ಇಲ್ಲ.ಇದುವರೆಗೂ ನಮ್ಮ ಕೆಲಸಗಳನ್ನು ಮಾಡಿ ಕೊಟ್ಟಿದ್ದಾರೆ. ಇದೊಂದು ಕೆಲಸ ಬಾಕಿ ಇದೆ, ಅದು ಕೂಡ ಶೀಘ್ರದಲ್ಲಿ ಆಗಲಿದೆ ಎಂದರು.

ಇನ್ನು ತಮ್ಮ ಚುನಾವಣೆ ಸೋಲಿಗೆ ಕಾರಣರಾದ ಸಂಸದ ಬಚ್ಚೇಗೌಡ ಮೇಲೆ ಪಕ್ಷಕ್ಕೆ ದೂರು ಸಲ್ಲಿಸಲಾಗಿದ್ದು, ಅವರ ವಿರುದ್ಧ ಕ್ರಮ ಆಗದಿರುವುದು ಬೇಸರ ತರಿಸಿದೆ ಎಂದು ಇದೇ ವೇಳೆ ನೋವು ಹೊರಹಾಕಿದರು.

ಇದನ್ನು ಓದಿ: ಫೆಬ್ರವರಿ 6ಕ್ಕೆ ಸಚಿವ ಸಂಪುಟ ವಿಸ್ತರಣೆ; ಸೋತವರಿಗಿಲ್ಲ ಮಂತ್ರಿಗಿರಿ; ಸಿಎಂ ಯಡಿಯೂರಪ್ಪ ಸ್ಪಷ್ಟನೆ

ಸಚಿವ ಸ್ಥಾನ ಸಿಗದ ಹಿನ್ನೆಲೆ ವಿಶ್ವನಾಥ್ ಬೇಸರದಲ್ಲಿ ಇರುವುದು ನಿಜ. ಅವರಿಗೂ ಸೂಕ್ತ ಸ್ಥಾನಮಾನ ಸಿಗಲಿದೆ. ಆದರೆ, ತಾಳ್ಮೆಯಿಂದ ಇರಬೇಕು ಅಷ್ಟೆ. ಕೋಪ ಮಾಡಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಸೂಕ್ತ ಸಮಯಕ್ಕಾಗಿ ತಾಳ್ಮೆಯಿಂದ ಕಾಯಬೇಕು ಎಂದು ಕಿವಿಮಾತು ಹೇಳಿದರು.
First published: