ಸೋತವರಿಗೆ ಸಚಿವ ಸ್ಥಾನ: ಕಾದು ನೋಡುವ ತಂತ್ರಕ್ಕೆ ಮೊರೆ ಹೋದ ಎಂಟಿಬಿ ನಾಗರಾಜ್

11 ಮಂದಿ ಅರ್ಹ ಶಾಸಕರು ಮತ್ತು ಮೂಲ 3 ಬಿಜೆಪಿಗರನ್ನು ಮಂತ್ರಿ ಮಾಡುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಸಿ. ಪಿ ಯೋಗಿಶ್ವರ್ ಮಂತ್ರಿಯಾಗಲಿದ್ಧಾರೆ ಎಂಬ ಮಾತಿದೆ. ಅಷ್ಟು ಬಿಟ್ಟು ಬೇರೆನೂ ನಿಖರ ಮಾಹಿತಿ ಇಲ್ಲ. ದೆಹಲಿಯಿಂದ ಬಂದ ಬಳಿಕ ಸಿಎಂ ಜೊತೆ ಯಾವುದೇ ಭೇಟಿ ಮಾತುಕತೆ ನಡೆಸಿಲ್ಲ ಎಂದು ಹೇಳಿದರು ಎಂಟಿಬಿ ನಾಗರಾಜ್​​.

ಎಂಟಿಬಿ ನಾಗರಾಜ್​​​

ಎಂಟಿಬಿ ನಾಗರಾಜ್​​​

  • Share this:
    ಬೆಂಗಳೂರು(ಫೆ.02): ಸಚಿವ ಸಂಪುಟ ವಿಸ್ತರಣೆ ಕಸರತ್ತು ಅಂತಿಮ ಹಂತ ತಲುಪಿದ್ದು, ಸಿಎಂ ಬಿ.ಎಸ್​​ ಯಡಿಯೂರಪ್ಪಗೆ ಹೈಕಮಾಂಡ್ ಸಹ ಗ್ರೀನ್ ಸಿಗ್ನಲ್ ನೀಡಿದೆ. ಸಂಪುಟ ವಿಸ್ತರಣೆ ಯಡಿಯೂರಪ್ಪ ಹೆಗಲೇರಿದ್ದು, ಇದೀಗ ಸೋತವರಿಗೆ ಮಂತ್ರಿಸ್ಥಾನ ನೀಡಲು ಸದ್ಯಕ್ಕೆ ಸಾಧ್ಯವಿಲ್ಲ ಎಂಬ ವಿಚಾರದಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

    ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಎಂಟಿಬಿ ನಾಗರಾಜ್​​​, ಸೋತವರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂಬ ವಿಚಾರದ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಮಾತ್ರ ನೋಡಿ ತಿಳಿದುಕೊಂಡಿದ್ದೇನೆ. ಕೇಂದ್ರ ನಾಯಕರ ಜೊತೆ ಏನು ಚರ್ಚೆಯಾಗಿದೆ, ಯಾರಿಗೆ ಮಂತ್ರಿ ಸ್ಥಾನ ನೀಡಲಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಸಿಎಂ ಭೇಟಿಗೆ ಇಂದು ಅವಕಾಶ ಕೇಳಿದ್ದೆನೆ. ಸಿಎಂ ಭೇಟಿ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದ್ದು, ಬಳಿಕ ಮುಂದಿನ ನಿರ್ಧಾರ ಮಾಡುತ್ತೆನೆ ಎಂದರು.

    11 ಮಂದಿ ಅರ್ಹ ಶಾಸಕರು ಮತ್ತು ಮೂಲ 3 ಬಿಜೆಪಿಗರನ್ನು ಮಂತ್ರಿ ಮಾಡುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಸಿ. ಪಿ ಯೋಗಿಶ್ವರ್ ಮಂತ್ರಿಯಾಗಲಿದ್ಧಾರೆ ಎಂಬ ಮಾತಿದೆ. ಅಷ್ಟು ಬಿಟ್ಟು ಬೇರೆನೂ ನಿಖರ ಮಾಹಿತಿ ಇಲ್ಲ. ದೆಹಲಿಯಿಂದ ಬಂದ ಬಳಿಕ ಸಿಎಂ ಜೊತೆ ಯಾವುದೇ ಭೇಟಿ ಮಾತುಕತೆ ನಡೆಸಿಲ್ಲ ಎಂದು ಹೇಳಿದರು ಎಂಟಿಬಿ ನಾಗರಾಜ್​​.

    ರಾಜೀನಾಮೆ ಪರ್ವ ಪ್ರಾರಂಭ ಮಾಡಿದ್ದೆ, ರಮೇಶ್ ಜಾರಕಿಹೋಳಿ ಮತ್ತು ನಾವು. ರಾಜೀನಾಮೆ ನೀಡಿದ 17 ಮಂದಿಗೂ ಅಧಿಕಾರ ನೀಡಬೇಕು. 17 ಮಂದಿ ರಾಜೀನಾಮೆಯಿಂದ ಬಿಜೆಪಿ ಸರ್ಕಾರ ರಚನೆ ಮತ್ತು ಯಡಿಯೂರಪ್ಪ ಸಿಎಂ ಆಗಿದ್ದಾರೆ. ಮಂತ್ರಿ ಸ್ಥಾನ ನೀಡಲು ಸೋಲು ಗೆಲುವು ಮಾನದಂಡವಲ್ಲ. ಗೆದ್ದವರಿಗೆ ನೀಡಿದಷ್ಟೆ ಪ್ರಾಮುಖ್ಯತೆ ಸೋತವರಿಗೂ ನೀಡಬೇಕು. ಬಚ್ಚೇಗೌಡ ತನ್ನ ಮಗನನ್ನು ಕಣಕ್ಕಿಳಿಸದಿದ್ದರೆ ನಾನು ಸೋಲುತ್ತಿರಲಿಲ್ಲ ಎಂದರು ಎಂಟಿಬಿ ನಾಗರಾಜ್​​.

    ಇದನ್ನೂ ಓದಿ: 17 ಶಾಸಕರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿರೋದು; ಇಲ್ಲಿ ಸೋಲು-ಗೆಲುವಿನ ಪ್ರಶ್ನೆಯೇ ಇಲ್ಲ; ಎಂಟಿಬಿ ನಾಗರಾಜ್​

    ಹೀಗೆ ಮಾತು ಮುಂದುವರೆಸಿದ ಅವರು, ಬಚ್ಚೇಗೌಡ ನನ್ನ ಜೊತೆ ನಿಂತಿದ್ದರೆ ಕನಿಷ್ಠ 50 ಸಾವಿರ ಮತಗಳಲ್ಲಿ ಗೆಲ್ಲುತ್ತಿದ್ದೆ. ಅದಕ್ಕೆ ಬಚ್ಚೇಗೌಡರ ಮೇಲೆ ಕ್ರಮಕ್ಕೆ ಪದೇ ಪದೇ ಒತ್ತಾಯಿಸುತ್ತಿದ್ದೇನೆ. ಮಂತ್ರಿಮಂಡಲ ವಿಸ್ತರಣೆ ಬಳಿಕ ಕ್ರಮ ಸಾಧ್ಯತೆ ಇದೆ. ಬಚ್ಚೇಗೌಡ ಮಂತ್ರಿಯಾಗಿ ಸಂಸದರಾಗಿ ಪಕ್ಷ ದ್ರೋಹ ಮಾಡಿದ್ದಾರೆ. ನಾನು ಬಿಜೆಪಿ ಸೇರ್ಪಡೆಗೆ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಬಚ್ಚೇಗೌಡ ಉಲ್ಟಾ ಹೊಡೆದಿದ್ದರು ಎಂದು ಕುಟುಕಿದರು.

    ಬಚ್ಚೇಗೌಡ ಮೊಬೈಲ್ ಸ್ವಿಚ್ ಆಫ್ ಮಾಡಿ ಪ್ರಚಾರಕ್ಕು ಬರಲಿಲ್ಲ. ಇದೆಲ್ಲ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೂ ತಿಳಿದಿದೆ. ಸಚಿವ ಸಂಪುಟ ವಿಸ್ತರಣೆ ಆಗುಹೋಗುಗಳ ಬಳಿಕ ಮುಂದಿನ ನಡೆ. ಯಡಿಯೂರಪ್ಪ ನಮ್ಮ ನಾಯಕರು ನಮಗೆ ಸ್ಥಾನಮಾನ ನೀಡುವುದು ಅವರಿಗೆ ಗೊತ್ತಿದೆ. ರಾಜಕಾರಣದಲ್ಲಿ ಏಳುಬೀಳುಗಳು ಸಾಮಾನ್ಯ ಇದೇನು ಹೊಸದೇನಲ್ಲ. ಬಿಜೆಪಿ ಸರ್ಕಾರ ರಚನೆಯಲ್ಲಿ ಯಾರ ಯಾರ ಪಾತ್ರ ಇದೆ ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಸಚಿವ ಸಂಪುಟ ವಿಚಾರವಾಗಿ ಉಳಿದ ಅರ್ಹ ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿಲ್ಲ. ಪೋನಿನ್ನಲ್ಲಿ ಮಾತ್ರ ಮಾತುಕತೆ ನಡೆಸಿದ್ದೇವೆ. ಸಚಿವ ಸಂಪುಟ ವಿಸ್ತರಣೆ ಬಳಿಕ ಮಾತನಾಡುತ್ತೆನೆ ಎನ್ನುವ ಮೂಲಕ ಕಾದು ನೋಡುವ ತಂತ್ರಕ್ಕೆ ಮೊರೆ ಹೋದರು.

    (ವರದಿ : ಆದೂರು ಚಂದ್ರು)
    First published: