CM ಬೊಮ್ಮಾಯಿನ ಓವರ್​​ಟೇಕ್​​ ಮಾಡಿ ಸಚಿವರಾದ ಎಂಟಿಬಿ? : ಒಂದೇ ಒಂದು ಪತ್ರದಿಂದ ಎಲ್ಲವೂ ಬದಲಾಯಿತು!

karnataka cabinet ministers portfolios: ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರನ್ನು ಬಿಟ್ಟು ನೇರವಾಗಿ ಜೆ.ಪಿ. ನಡ್ಡಾ ಅವರನ್ನು ಸಂಪರ್ಕಿಸಿದರು. ಅರುಣ್ ಸಿಂಗ್ ಮೂಲಕ ಜೆ.ಪಿ. ನಡ್ಡಾಗೆ ಪತ್ರ ಬರೆದ ಎಂಟಿಬಿ ನಾಗರಾಜ್ 'ಮಂತ್ರಿ ಸ್ಥಾನ ಕೊಡದಿದ್ದರೆ ಪಕ್ಷ ತ್ಯಜಿಸಬೇಕಾಗುತ್ತೆ' ಎಂದು ಧಮಕಿ ಹಾಕಿದ್ದಾರೆ ಎನ್ನುತ್ತವೆ ಬಿಜೆಪಿ ಮೂಲಗಳು.

ಎಂಟಿಬಿ ನಾಗರಾಜ್.

ಎಂಟಿಬಿ ನಾಗರಾಜ್.

  • Share this:
ಮುಖ್ಯಮಂತ್ರಿಯಾದವರು ಮೊದಲ ಬಾರಿ ರಚಿಸಿಕೊಳ್ಳುವ ಮಂತ್ರಿ ಮಂಡ ಅವರ ಸರ್ಕಾರ ಯಾವ ಹಾದಿಯಲ್ಲಿ ಸಾಗಲಿದೆ ಎಂಬ ಸುಳಿವು ನೀಡಲಿದೆ. ಆದರೀಗ ಸದ್ಯ ಬಸವರಾಜ ಬೊಮ್ಮಾಯಿ ರಚಿಸಿಕೊಂಡಿರುವ ಮಂತ್ರಿ ಮಂಡಲದಲ್ಲಿ ಆರು ಜನ ಮಾತ್ರ ಹೊಸಬರಿದ್ದಾರೆ. ಹಾಗಂತ ಬಸವರಾಜ ಬೊಮ್ಮಾಯಿ ಹೊಸ ರೀತಿಯ ಸಂಪುಟ ರಚಿಸಿಕೊಳ್ಳಲು ಪ್ರಯತ್ನವನ್ನೇ ಮಾಡಿರಲಿಲ್ಲ ಎಂದಲ್ಲ. ಪ್ರಮುಖ ಬದಲಾವಣೆ ಮಾಡಿಕೊಳ್ಳ ಬಯಸಿದ್ದರು‌. ಘಟಾನುಘಟಿ ನಾಯಕರನ್ನೂ ಕೈಬಿಡಬೇಕು ಎಂದುಕೊಂಡಿದ್ದರು. ಆದರೆ ಸಾಧ್ಯವಾಗಲಿಲ್ಲ.‌ ಅವುಗಳ ಪೈಕಿ ಇದು‌ ಭಾರೀ ಕುತೂಹಲಕಾರಿ ಸಂಗತಿ.

ಪತ್ರದ ಪಟ್ಟ ಹಿಡಿದ ಎಂಟಿಬಿ ನಾಗರಾಜ್!

ರಾಜಕಾರಣ ಲೆಕ್ಕಾಚಾರ ಬದಲಾಗುತ್ತಲೇ ಇರುತ್ತೆ. ಆದ್ದರಿಂದಲೇ ಹಿಂದಿನ ಸರ್ಕಾರದಲ್ಲಿ ಮಂತ್ರಿ ಸ್ಥಾನ ಬಿಟ್ಟು ಬಿಜೆಪಿ ಸರ್ಕಾರ ರಚನೆ ಆಗಲು ಕಾರಣರಾಗಿದ್ದರೂ 'ಪರಿಸ್ಥಿತಿ'ಯ ನೆಪ ಹೇಳಿ ವರ್ಷದ ಮಟ್ಟಿಗೆ ಮಂತ್ರಿ ಸ್ಥಾನ ನೀಡಿರಲಿಲ್ಲ. ಈಗ ಮತ್ತೆ ತಪ್ಪಿಸುವ ಕೆಲಸ ನಡೆಯುತ್ತಿತ್ತು. ಆದರೆ ಈ ಸುಳಿವು ಅರಿತ ಎಂಟಿಬಿ ನಾಗರಾಜ್ ದಿಢೀರನೆ ದೆಹಲಿಯತ್ತ ನೋಡಿದರು. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರನ್ನು ಬಿಟ್ಟು ನೇರವಾಗಿ ಜೆ.ಪಿ. ನಡ್ಡಾ ಅವರನ್ನು ಸಂಪರ್ಕಿಸಿದರು. ಅರುಣ್ ಸಿಂಗ್ ಮೂಲಕ ಜೆ.ಪಿ. ನಡ್ಡಾಗೆ ಪತ್ರ ಬರೆದ ಎಂಟಿಬಿ ನಾಗರಾಜ್ 'ಮಂತ್ರಿ ಸ್ಥಾನ ಕೊಡದಿದ್ದರೆ ಪಕ್ಷ ತ್ಯಜಿಸಬೇಕಾಗುತ್ತೆ' ಎಂದು ಧಮಕಿ ಹಾಕಿದ್ದಾರೆ ಎನ್ನುತ್ತವೆ ಬಿಜೆಪಿ ಮೂಲಗಳು.

ಇಷ್ಟೇಯಲ್ಲ, ತಮ್ಮನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನೀವು ಎಷ್ಟು ದಿನದಿಂದ ಪ್ರಯತ್ನ ಮಾಡಿದ್ದೀರಿ? ಯಾವ ರೀತಿಯ ಪ್ರಯತ್ನಗಳನ್ನು ಮಾಡಿದ್ದೀರಿ? ಏನೆಲ್ಲಾ ಭರವಸೆ ನೀಡಿದ್ದೀರಿ? ಎಂಬುದೆಲ್ಲವನ್ನೂ ಜೆಪಿ ನಡ್ಡಾಗೆ ಬರೆದ ಪತ್ರದಲ್ಲಿ ನೆನಪಿಸಿದ್ದಾರೆ. ನಂತರ ಅಸಲಿ ವಿಷಯಕ್ಕೆ ಬಂದಿದ್ದಾರೆ. ನೇರವಾಗಿ 'ನನ್ನನ್ನು ಮಂತ್ರಿ ಮಾಡದಿದ್ದರೆ 16 ಜನ ಶಾಸಕರೊಂದಿಗೆ ಬಿಜೆಪಿ ತೊರೆಯಬೇಕಾಗುತ್ತೆ' ಎಂದು ಎಚ್ಚರಿಸಿದ್ದರೆ. ಪತ್ರ ಓದಿ ಗಡಿಬಿಡಿಯಾದ ನಡ್ಡಾ ಸಿಎಂ ಬೊಮ್ಮಾಯಿಗೆ ಎಂಟಿಬಿ ನಾಗರಾಜ್ ಅವರನ್ನು ಕೈಬಿಡದಂತೆ ಸೂಚಿಸಿದ್ದಾರೆ. ನಡ್ಡಾ ಬಾಯಿಂದ ಸಚಿವಾಕಾಂಕ್ಷಿಗಳ ಪಟ್ಟಿಯಲ್ಲಿ ಇಲ್ಲದ ಎಂಟಿಬಿ ನಾಗರಾಜ್ ಹೆಸರು ಬರುತ್ತಿದ್ದಂತೆ ಬೊಮ್ಮಾಯಿಗೂ ಅಚ್ಚರಿಯಾಗಿದೆ. ಮರು ಮಾತನಾಡದೆ ಎಂಟಿಬಿ ನಾಗರಾಜ್ ಹೆಸರು ಬರೆದುಕೊಂಡಿದ್ದಾರೆ. ಈ ಮೂಲಕ ಪತ್ರ ಬರೆದು ಪಟ್ಟ ಗಿಟ್ಟಿಸಿಕೊಳ್ಳಬಹುದು ಎಂಬುದನ್ನು ಎಂಟಿಬಿ ನಾಗರಾಜ್ ನಿರೂಪಿಸಿದ್ದಾರೆ.

ಇದನ್ನೂ ಓದಿ: ಬೊಮ್ಮಾಯಿ ಸರ್ಕಾರಕ್ಕೆ ಬಿಎಸ್​ವೈ ಹತ್ತಿರನೂ ಅಲ್ಲ, ದೂರನೂ ಅಲ್ಲ..ಹೈಕಮಾಂಡ್ ಅರ್ಧಚಂದ್ರ ಲೆಕ್ಕಾಚಾರವೇನು?

ಶ್ಯಾಡೋ ಸಿಎಂ ಬೊಮ್ಮಾಯಿ!

ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಯಡಿಯೂರಪ್ಪ ಅವರ ಶ್ಯಾಡೋ ಆಗಿರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಪ್ರಹ್ಲಾದ್ ಜೋಶಿ ಶ್ಯಾಡೋ ರೀತಿ ಕಾಣಿಸಿಕೊಂಡರು. ಜೆಪಿ ನಡ್ಡಾ ಭೇಟಿ ಮಾಡಲು ಜೋಶಿ ಬೇಕು, ಅಮಿತ್ ಶಾ ಭೇಟಿ ಮಾಡಲೂ ಜೋಶಿ ಬೇಕು. ಕಡೆಗೆ ಊಟ-ತಿಂಡಿ ಮಾಡಲು ಜೋಶಿ ಮನೆಯೇ ಬೇಕು. ಮಾಧ್ಯಮದವರಿಂದ ತಪ್ಪಿಸಿಕೊಳ್ಳುವುದಕ್ಕೂ  ಜೋಶಿ ಮನೆ ಬೇಕು. ಸಿಎಂ ಟಿಪಿಯಲ್ಲಿ ಮಾತ್ರ ವಾಸ್ತವ್ಯ ಕರ್ನಾಟಕ ಭವನ ಅಂತಾ ಹೇಳಲಾಗಿತ್ತು.
Published by:Kavya V
First published: