ಎದೆ ಬಗೆದರೆ ನಾನೇ ಇರುತ್ತೇನೆ ಎಂದವನಿಗೆ ರಾಜೀನಾಮೆ ನೀಡುವಾಗ ರಾಮ ಸ್ವರೂಪದ ಸಿದ್ದರಾಮಯ್ಯ ನೆನಪಾಗಲಿಲ್ಲವೇ?; ಎಂಟಿಬಿ​ಗೆ ಸಿದ್ದು ಪ್ರಶ್ನೆ

ಆಗ ಸಿದ್ದರಾಮಯ್ಯ ಅವರು ಈ ಅವಧಿ ಮುಗಿಯುವವರೆಗೂ ಇರು. ಮುಂದೆ ನೋಡೋಣ. ಎಲ್ಲವನ್ನೂ ಕೈ ಹೈಕಮಾಂಡ್ ಗಮನಿಸುತ್ತಿದೆ. ನಂತರ ನೋಡೋಣ, ಮೊದಲು ನನಗೆ ಗೌರವ ಕೊಡುವುದು ನಿಜವಿದ್ದರೆ ರಾಜೀನಾಮೆ ವಾಪಸ್ ಪಡಿ, ಎಂದು ಸೂಚನೆ ನೀಡಿದರು.

HR Ramesh | news18
Updated:July 13, 2019, 3:19 PM IST
ಎದೆ ಬಗೆದರೆ ನಾನೇ ಇರುತ್ತೇನೆ ಎಂದವನಿಗೆ ರಾಜೀನಾಮೆ ನೀಡುವಾಗ ರಾಮ ಸ್ವರೂಪದ ಸಿದ್ದರಾಮಯ್ಯ ನೆನಪಾಗಲಿಲ್ಲವೇ?; ಎಂಟಿಬಿ​ಗೆ ಸಿದ್ದು ಪ್ರಶ್ನೆ
ಎಂಟಿಬಿ ನಾಗರಾಜ್ ಜೊತೆ ಚರ್ಚೆ ನಡೆಸುತ್ತಿರುವ ಸಿದ್ದರಾಮಯ್ಯ. ಸಚಿವ ಜಮೀರ್ ಅಹ್ಮದ್​ ಖಾನ್​ ಇದ್ದಾರೆ,
  • News18
  • Last Updated: July 13, 2019, 3:19 PM IST
  • Share this:
ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್​ ಅವರನ್ನು ಕೈ ಮುಖಂಡರು ಮನವೊಲಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ನೆನ್ನೆ ಮಧ್ಯರಾತ್ರಿಯೇ ಡಿ.ಕೆ.ಶಿವಕುಮಾರ್ ನಾಗರಾಜ್ ಮನೆಗೆ ತೆರಳಿ, ಬೆಳಗ್ಗೆವರೆಗೂ ಸಂಧಾನ ನಡೆಸಿದ್ದರು. ಆನಂತರ ಪರಮೇಶ್ವರ್ ಅವರು ತೆರಳಿ ಮನವೊಲಿಸಿದ್ದರು. ಆನಂತರ ಮೂವರು ಒಟ್ಟಿಗೆ ಸಿದ್ದರಾಮಯ್ಯ ಮನೆಗೆ ಬಂದರು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಿದ್ದರಾಮಯ್ಯ, ಎಂಟಿಬಿ ನಾಗರಾಜ್,  ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಖಾನ್, ಜಿ. ಪರಮೇಶ್ವರ್ ಚರ್ಚೆ ನಡೆಸಿದರು. ಈ ವೇಳೆ ಸಿದ್ದರಾಮಯ್ಯ ಅವರು, "ಏನಪ್ಪ ,ಎದೆ ಬಗೆದರೆ ಸಿದ್ದರಾಮಯ್ಯ ಇರ್ತಾರೆ ಎಂದವನು ನೀನೇನಾ? ನೀನು ಶಾಸಕನಾಗಲು ನಿನಗೆ ಟಿಕೆಟ್, ನಂತರ ಮೈತ್ರಿ ಸರ್ಕಾರದ ಸಂಕಟದ ಸಮಯದಲ್ಲಿ ಸಮಾಜದ ಹಿರಿಯ ಮುಖಂಡ ಹೆಚ್.ಎಂ. ರೇವಣ್ಣ ಬಿಟ್ಟು ನಿನಗೆ ಸಚಿವ ಸ್ಥಾನ ಕೊಡಿಸಲು ಶ್ರಮಪಟ್ಟೆ. ಆದರೆ, ನೀನು ಏಕಾಏಕಿ ರಾಜೀನಾಮೆ ನೀಡಿದ್ದೇಕೆ? ಆಗ ನಿನಗೆ ಈ ಶ್ರೀರಾಮನ ರೂಪದ ಸಿದ್ದರಾಮಯ್ಯ ನೆನಪಾಗಲಿಲ್ಲವೆ? ನಿಮ್ಮ ಈ ನಡೆಯಿಂದ ಹೈಕಮಾಂಡ್ ನನ್ನನ್ನು ಗುಮಾನಿಯಿಂದ ನೋಡುವಂತಾಗಿದೆ," ಎಂದು ಸಿದ್ದರಾಮಯ್ಯ ಅವರು ಎಂಟಿಬಿ ನಾಗರಾಜ್​ ಅವರನ್ನು ತರಾಟೆಗೆ ತೆಗೆದುಕೊಂಡರು.

ಸಿದ್ದರಾಮಯ್ಯ ಕ್ಲಾಸ್​ಗೆ ಗಲಿಬಿಲಿಗೊಂಡ ಎಂಟಿಬಿ ನಾಗರಾಜ್​, "ಹೋಗಿ ಸಾರ್.... ಯಾರಿಗೆ ಬೇಕು ಈ ರಾಜಕೀಯ? ಸಾಕಾಗಿದೆ. ರಾಜಕೀಯವಾಗಿ ನಿವೃತ್ತನಾಗುವೆ," ಎಂದು ನಾಗರಾಜ್ ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ: ಎಂಟಿಬಿ ಸಂಧಾನ ಸಕ್ಸಸ್​: ಪಕ್ಷದಲ್ಲಿ ಮುನಿಸು ಸಹಜ, ಅತೃಪ್ತರು ಮರಳುವ ವಿಶ್ವಾಸವಿದೆ; ಡಿಸಿಎಂ ಜಿ ಪರಮೇಶ್ವರ್​​

ಆಗ ಸಿದ್ದರಾಮಯ್ಯ ಅವರು "ಈ ಅವಧಿ ಮುಗಿಯುವವರೆಗೂ ಇರು. ಮುಂದೆ ನೋಡೋಣ. ಎಲ್ಲವನ್ನೂ ಕೈ ಹೈಕಮಾಂಡ್ ಗಮನಿಸುತ್ತಿದೆ. ನಂತರ ನೋಡೋಣ, ಮೊದಲು ನನಗೆ ಗೌರವ ಕೊಡುವುದು ನಿಜವಿದ್ದರೆ ರಾಜೀನಾಮೆ ವಾಪಸ್ ಪಡಿ," ಎಂದು ಸೂಚನೆ ನೀಡಿದರು.

ಸುಧಾಕರ್ ಬರಲಿ. ಇಬ್ಬರೂ ಚರ್ಚೆ ಮಾಡಿ ಒಮ್ಮತದ ನಿರ್ಧಾರಕ್ಕೆ ಬರುವುದಾಗಿ  ನಾಗರಾಜ್​ ಹೇಳಿದಾಗ ಜೊತೆಯಲ್ಲಿದ್ದ ಇತರೆ ನಾಯಕರು, ಆದದ್ದಾಯಿತು ರಾಜೀನಾಮೆ ವಾಪಸ್ ಪಡೆಯಿರಿ ನಾಗರಾಜಣ್ಣ ಎಂದು ಮನವೊಲಿಸಿದರು.

First published:July 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...