ಸೋಲಿನ ಭೀತಿ?; ಸಂಸದ ಬಚ್ಚೇಗೌಡ ವಿರುದ್ಧ ಸಿಎಂಗೆ ದೂರು ಸಲ್ಲಿಸಿದ ಎಂಟಿಬಿ

ಪಕ್ಷ ತಮಗೆ ಟಿಕೆಟ್​ ನೀಡಿದರು. ಪಕ್ಷದ ಸ್ಥಳೀಯ ನಾಯಕರ ಪಿತೂರಿಯಿಂದ ನನ್ನ ಗೆಲುವು ಅಸಾಧ್ಯವಾಗುವ ಸಾಧ್ಯತೆ ಇದೆ. ಅಲ್ಲದೇ ಪಕ್ಷದ ನಾಯಕರ ಮನವಿ, ಎಚ್ಚರಿಕೆಗೂ ಜಗ್ಗದೇ ಶರತ್​ ಸ್ಪರ್ಧಿಸಿದ್ದಾರೆ. ಇದಕ್ಕೆ ಬಚ್ಚೇಗೌಡ ಕೂಡ ಬೆಂಬಲ ನೀಡಿದ್ದಾರೆ. ಈ ಕುರಿತು ನನ್ನ ಬಳಿ ಸಾಕ್ಷಿ ಇದೆ ಎಂದು ದೂರು ನೀಡಿದ್ದಾರೆ. 

Seema.R | news18-kannada
Updated:December 7, 2019, 11:15 AM IST
ಸೋಲಿನ ಭೀತಿ?; ಸಂಸದ ಬಚ್ಚೇಗೌಡ ವಿರುದ್ಧ ಸಿಎಂಗೆ ದೂರು ಸಲ್ಲಿಸಿದ ಎಂಟಿಬಿ
ಶರತ್​ ಬಚ್ಚೇಗೌಡ ಮತ್ತು ಎಂಟಿಬಿ ನಾಗರಾಜ್.
  • Share this:
ಬೆಂಗಳೂರು (ಡಿ.07): ಸ್ಥಳೀಯ ನಾಯಕರ ವಿರೋಧದ ನಡುವೆಯೂ ಪಕ್ಷದ ಟಿಕೆಟ್​ ಗಿಟ್ಟಿಸಿ ಉಪಚುನಾವಣೆಗೆ ಸ್ಪರ್ಧಿಸಿದ್ದ ಅನರ್ಹ ಶಾಸಕ ಎಂಟಿಬಿ ನಾಗರಾಜ್​ಗೆ ಈಗ ಸೋಲಿನ ಭೀತಿ ಎದುರಾಗಿದೆ. ಇದಕ್ಕೆ ಕಾರಣ ಸಂಸದ ಬಚ್ಚೇಗೌಡ ಎಂದು ಆಪಾದಿಸಿದ್ದಾರೆ. 

ಅನರ್ಹ ಶಾಸಕ ಎಂಟಿಬಿ ನಾಗರಾಜ್​ಗೆ ಟಿಕೆಟ್​ ನೀಡಿದ ಹಿನ್ನೆಲೆ ಪಕ್ಷದ ವಿರುದ್ಧ ಬಂಡಾಯ ಸಾರಿ ಚುನಾವಣೆಗೆ ನಿಂತಿದ್ದ ಶರತ್​ ಬಚ್ಚೇಗೌಡಗೆ ಬಿಜೆಪಿ ಸಂಸದ ಬಚ್ಚೇಗೌಡ ಬೆಂಬಲ ನೀಡಿದ್ದಾರೆ. ಪಕ್ಷದ ನಿಯಮವನ್ನು ಮೀರಿ ಮಗನ ಪರ ಕಾರ್ಯನಿರ್ವಹಿಸುವಂತೆ ಅವರು ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ನಮ್ಮ ಎದುರು ಮಾತ್ರ ಮಗನಿಗೆ ಬೆಂಬಲಿಸುವುದಿಲ್ಲ ಎಂದು ನಾಟಕವಾಡಿದ್ದಾರೆ ಎಂದರು

ಬಚ್ಚೇಗೌಡ, ಮಗ ಶರತ್​ ಬೆಂಬಲಿಸುವಂತೆ ಸೂಚಿಸಿರುವ ಹಿನ್ನೆಲೆ ವ್ಯತಿರಿಕ್ತ ಫಲಿತಾಂಶ ಬರಬಹುದು ಈ ಹಿನ್ನೆಲೆ ಮುಂದೇನು ಎಂಬ ಯೋಚನೆ ಕೂಡ ಎಂಟಿಬಿ ಮನದಲ್ಲಿ ಮೂಡಿದೆ. ಇದೇ ಹಿನ್ನೆಲೆ ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನು ಭೇಟಿಯಾಗಿ ದೂರು ನೀಡಿದ್ದಾರೆ.

ಪಕ್ಷ ತಮಗೆ ಟಿಕೆಟ್​ ನೀಡಿದರು. ಪಕ್ಷದ ಸ್ಥಳೀಯ ನಾಯಕರ ಪಿತೂರಿಯಿಂದ ನನ್ನ ಗೆಲುವು ಅಸಾಧ್ಯವಾಗುವ ಸಾಧ್ಯತೆ ಇದೆ. ಅಲ್ಲದೇ ಪಕ್ಷದ ನಾಯಕರ ಮನವಿ, ಎಚ್ಚರಿಕೆಗೂ ಜಗ್ಗದೇ ಶರತ್​ ಸ್ಪರ್ಧಿಸಿದ್ದಾರೆ. ಇದಕ್ಕೆ ಬಚ್ಚೇಗೌಡ ಕೂಡ ಬೆಂಬಲ ನೀಡಿದ್ದಾರೆ. ಈ ಕುರಿತು ನನ್ನ ಬಳಿ ಸಾಕ್ಷಿ ಇದೆ ಎಂದು ದೂರು ನೀಡಿದ್ದಾರೆ.

ಇದನ್ನು ಓದಿ: ವಯಸ್ಸಿಗೆ ಬಂದವರಿಗೆಲ್ಲಾ ಐಶ್ವರ್ಯ ರೈ ಬೇಕಂದ್ರೆ ಹೇಗೆ? ಆಕೆ ಇರುವುದು ಒಬ್ಬಳೇ ತಾನೇ; ಕೆ.ಎಸ್​ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ಈಗಾಗಲೇ ಕಾಂಗ್ರೆಸ್​ನಿಂದ ಅನರ್ಹಗೊಂಡು ಬಿಜೆಪಿ ಸೇರಿರುವ ಎಂಟಿಬಿ ನಾಗರಾಜ್​ ರಾಜಕೀಯ ಭವಿಷ್ಯ ಈ ಚುನಾವಣೆ ಮೇಲೆ ನಿಂತಿದೆ. ಒಂದು ವೇಳೆ ಫಲಿತಾಂಶ ವ್ಯತಿರಿಕ್ತವಾದರೆ, ಬಿಜೆಪಿ ನಾಯಕರು ಕೂಡ ಅವರನ್ನು ಕೈ ಬಿಡುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆ, ಯಾವುದೆ ಕಾರಣಕ್ಕೂ ತಮ್ಮ ಕೈ ಬಿಡದಂತೆ ಸಿಎಂಗೆ ಮನವಿ ಮಾಡಿದ್ದಾರೆ.

ಇನ್ನು ಅನರ್ಹ ಶಾಸಕರ ಬೆಂಬಲದಿಂದ ಸಿಎಂ ಆಗಿರುವ ಯಡಿಯೂರಪ್ಪ ಕೂಡ ಏನು ಆಗಲ್ಲ. ನೀವು ಗೆಲ್ಲುತ್ತೀರಾ. ನಿಮ್ಮ ಪರವಾಗಿ ಭರ್ಜರಿ ಪ್ರಚಾರ ಮಾಡಿದ್ದೇವೆ. ಭಯಬೇಡ ಎಂದು ಧೈರ್ಯ ಹೇಳಿದ್ದಾರೆ.
First published: December 7, 2019, 11:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading