‘ಐಟಿ ಮತ್ತು ಇಡಿ‘ಯಿಂದ ಬಚಾವ್​​ ಆಗಲು ಎಂಟಿಬಿ ಬಿಜೆಪಿ ಸೇರಿದ್ದಾರೆ: ಹೊಸಕೋಟೆ ಬಂಡಾಯ ಅಭ್ಯರ್ಥಿ ಶರತ್​​ ಬಚ್ಚೇಗೌಡ

ಎಂಟಿಬಿ ನಾಗರಾಜ್ ತಮ್ಮ​ ಸ್ವಾರ್ಥಕ್ಕಾಗಿ ಹೊಸಕೋಟೆ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ನೀವು ಸ್ವಾರ್ಥವನ್ನು ಧಿಕ್ಕರಿಸಿ, ಸ್ವಾಭಿಮಾನಕ್ಕೆ ಮತ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

Latha CG | news18-kannada
Updated:November 15, 2019, 3:36 PM IST
‘ಐಟಿ ಮತ್ತು ಇಡಿ‘ಯಿಂದ ಬಚಾವ್​​ ಆಗಲು ಎಂಟಿಬಿ ಬಿಜೆಪಿ ಸೇರಿದ್ದಾರೆ: ಹೊಸಕೋಟೆ ಬಂಡಾಯ ಅಭ್ಯರ್ಥಿ ಶರತ್​​ ಬಚ್ಚೇಗೌಡ
ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​​ ಹಾಗೂ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ
  • Share this:
ಬೆಂಗಳೂರು​(ನ.15): ಎಂಟಿಬಿ ನಾಗರಾಜ್​​ಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ ಎಲ್ಲವನ್ನೂ ಕೊಟ್ಟಿತ್ತು. ಆದರೀಗ ಐಟಿ ಮತ್ತು ಇಡಿಯಿಂದ ಬಚಾವಾಗಲು ಭಾರತೀಯ ಜನತಾ ಪಕ್ಷ ಸೇರಿದ್ದಾರೆ ಎಂದು ಹೊಸಕೋಟೆ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್​ ಬಚ್ಚೇಗೌಡ ಅಭಿಪ್ರಾಯಪಟ್ಟಿದ್ದಾರೆ. 

ಇಂದು ಬೆಂಗಳೂರು ಗ್ರಾಮಾಂತರದ ಆನೇಕಲ್​ನಲ್ಲಿ ಮಾತನಾಡುವ ವೇಳೆ ಶರತ್​​ ಬಚ್ಚೇಗೌಡ, ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. "ಎಂಟಿಬಿ ನಾಗರಾಜ್​ ಒಬ್ಬ ಮೋಸಗಾರ, ಮನೆ ಮುರುಕ" ಎಂದು ಜನ ಹೇಳುತ್ತಿದ್ದರು. ಅದಕ್ಕೆ ತಾಜಾ ಉದಾಹರಣೆ ನನ್ನ ಕುಟುಂಬ. ತಮ್ಮ ಕುತಂತ್ರದಿಂದ ಅಪ್ಪ-ಮಗನನ್ನೇ ದೂರ ಮಾಡಿಬಿಟ್ಟರು ಎಂದು ಕಿಡಿಕಾರಿದರು.

ನಮ್ಮ ಕುಟುಂಬದಲ್ಲೇ ಒಡಕು ಮೂಡಿಸಿದ ಎಂಟಿಬಿ, ಇನ್ನೂ ಜನರನ್ನು ಬಿಡ್ತಾರಾ? ಅಣ್ಣ-ತಮ್ಮಂದಿರ ಕುಟುಂಬಗಳಲ್ಲಿ ಒಡಕು ಮೂಡಿಸುತ್ತಾರೆ. ಎಲ್ಲರನ್ನು ದೂರ ಮಾಡುತ್ತಾರೆ. ಅಣ್ಣ-ತಮ್ಮಂದಿರು ದಾಯಾದಿಗಳಾಗುವಂತೆ ಮಾಡುತ್ತಾರೆ. ಪರಸ್ಪರರಲ್ಲಿ ದ್ವೇಷ ಹುಟ್ಟಿಸುತ್ತಾರೆ ಎಂದರು.

ಹೊಸಕೋಟೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಾಳೆ ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಕೆ

ಎಂಟಿಬಿ ನಾಗರಾಜ್ ತಮ್ಮ​ ಸ್ವಾರ್ಥಕ್ಕಾಗಿ ಹೊಸಕೋಟೆ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ನೀವು ಸ್ವಾರ್ಥವನ್ನು ಧಿಕ್ಕರಿಸಿ, ಸ್ವಾಭಿಮಾನಕ್ಕೆ ಮತ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಸುಪ್ರೀಂಕೋರ್ಟ್​ ತೀರ್ಪು ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಂಟಿಬಿ ನಾಗರಾಜ್​​ ಕಣಕ್ಕಿಳಿಯುತ್ತಿದ್ದಾರೆ. ಎಂಟಿಬಿ ನಾಗರಾಜ್​​ ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಶರತ್​​ ಬಚ್ಚೇಗೌಡ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ತನ್ನ ಬದಲಿಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್​​ ಟಿಕೆಟ್​​ ನೀಡಿದ ಕಾರಣ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಶರತ್​​ ಬಚ್ಚೇಗೌಡ ನಾಮಪತ್ರ ಸಲ್ಲಿಸಿದ್ದಾರೆ. ಈ ಮಧ್ಯೆ ಶರತ್​​ ಬಚ್ಚೇಗೌಡರಿಗೆ ಜೆಡಿಎಸ್​​ ಬೆಂಬಲ ಘೋಷಿಸಿದ್ದು, ನಿಖಿಲ್​​ ಕುಮಾರಸ್ವಾಮಿ ಹೊಸಕೋಟೆ ಚುನಾವಣಾ ಅಖಾಡಕ್ಕಿಳಿದಿದ್ದಾರೆನ್ನಲಾಗಿದೆ.

ಜನರ ನಂಬಿಕೆ, ಹೋರಾಟಕ್ಕೆ ನ್ಯಾಯ ಸಿಕ್ಕಿದೆ; ಸುಪ್ರೀಂ ತೀರ್ಪು ಸ್ವಾಗತಿಸಿದ ಡಿಕೆ ಶಿವಕುಮಾರ್​​ಇತ್ತೀಚೆಗೆ ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂದು ಸುಪ್ರೀಂಕೋರ್ಟ್​ ಇಂದು ತೀರ್ಪು ನೀಡಿತ್ತು. ಹೀಗಾಗಿ ಹೋಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅನರ್ಹ ಶಾಸಕ ಎಂಟಿಬಿ ನಾಗರಾಜ್​​ಗೆ ಟಿಕೆಟ್ ನೀಡಲಿದೆ. ಪಕ್ಷ ಬಿಟ್ಟು ಬಂದವರಿಗೆ ಬಿಜೆಪಿ ಮಣೆ ಹಾಕುತ್ತಿದೆ ಎಂದು ಈ ಹಿಂದೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ಶರತ್ ಬಚ್ಚೇಗೌಡ ಪಕ್ಷ ತೊರೆಯುವ ಸೂಚನೆಯೂ ನೀಡಿದ್ದರು. ಅದರಂತೆ ಈಗ ಬಂಡಾಯ ಅಭ್ಯರ್ಥಿಯಾಗಿ ಶರತ್​​ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಶರತ್​ಗೆ ಈಗಾಗಲೇ ಜೆಡಿಎಸ್ ಕೂಡ​ ಬೆಂಬಲ ಸೂಚಿಸಿದೆ.

First published: November 15, 2019, 3:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading