ಮಿಸೆಸ್ ಇಂಡಿಯಾ ಐ ಆಮ್ ಪವರ್ಫುಲ್ ಸ್ಪರ್ಧೆ: ರಾಜ್ಯದ ನಾಲ್ವರಿಗೆ ಕಿರೀಟ

‘ರಾಜ್ಯ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರು ಇಲ್ಲಿ ಭಾಗವಹಿಸಿದ್ದಾರೆ. ಇಲ್ಲಿ ಗೆದ್ದವರು ಸಿಂಗಪುರದಲ್ಲಿ ನಡೆಯುವ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ' ಎಂದು ಆಯೋಜಕಿ ನಂದಿನಿ ನಾಗರಾಜ್ ಹೇಳಿದರು.

MRS India i am powerful competition

MRS India i am powerful competition

 • Share this:
  ಗೋವಾದ ಫರ್ನ್ ಕದಂಬ ಹೋಟೆಲ್‍ನಲ್ಲಿ ಆಯೋಜನೆಗೊಂಡಿದ್ದ ಮಿಸೆಸ್ ಇಂಡಿಯಾ ಐ ಆಮ್ ಪವರ್‍ಫುಲ್ ಸ್ಪರ್ಧೆಯಲ್ಲಿ ಕರ್ನಾಟಕದ ನಾಲ್ವರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಐವರು ಸ್ಪರ್ಧಿಗಳು ರಾಷ್ಟ್ರಮಟ್ಟದ ಮಿಸೆಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಗೋವಾದಲ್ಲಿ ನಡೆದ ಸ್ಪರ್ಧೆಯಲ್ಲಿ ಬೇರೆ ಬೇರೆ ರಾಜ್ಯಗಳಿಂದ 25 ಸ್ಪರ್ಧಿಗಳು ಭಾಗವಹಿಸಿದ್ದರು. ಒಟ್ಟು ನಾಲ್ಕು ವಿಭಾಗದ ಸ್ಪರ್ಧೆಗಳಲ್ಲಿ ಕರ್ನಾಟಕದ ಸ್ಪರ್ಧಿಗಳು ಗೆದ್ದುಕೊಂಡಿದ್ದಾರೆ.

  "ಮಿಸೆಸ್ ಇಂಡಿಯಾ ಗ್ಲೋಬಲ್ ಯೂನಿವರ್ಸ್" ಸ್ಪರ್ಧೆಯಲ್ಲಿ ದಿವ್ಯಾ ನವೀನ್, ಮಿಸೆಸ್ ಇಂಡಿಯಾ ವಲ್ರ್ಡ್ ವೈಡ್ ಸ್ಪರ್ಧೆಯಲ್ಲಿ ವಾಣಿ ರೆಡ್ಡಿ, ಮಿಸೆಸ್ ಇಂಡಿಯಾ ಕರ್ವಿ ವಲ್ರ್ಡ್‍ನಲ್ಲಿ ಶ್ರೀದೇವಿ ಅಪ್ಪಾಚ, ಮಿಸೆಸ್ ಇಂಡಿಯಾ ಕರ್ವಿ ಯೂನಿವರ್ಸ್ ಸ್ಪರ್ಧೆಯಲ್ಲಿ ಕಾರ್ತಿಕಾ ಶ್ಯಾಮ್ ಕಿರೀಟ ಗೆದ್ದಿದ್ದಾರೆ.  Lanka Premier league 2020: ಮೊದಲ ಪಂದ್ಯದ ಮೊದಲ ಓವರ್​ನಲ್ಲೇ ಅಬ್ಬರಿಸಿದ ಭಾರತೀಯ ಆಟಗಾರ: ಇಲ್ಲಿದೆ ರೋಚಕ ವಿಡಿಯೋ

  ತೆಳ್ಳಗೆ ಬೆಳ್ಳಗೆ ಇದ್ದರಷ್ಟೇ ಅದು ಸೌಂದರ್ಯ ಎನ್ನುವ ಮಾತು ಇವತ್ತಿಗೆ ಅನ್ವಯಿಸುವುದಿಲ್ಲ. ಮಿಸೆಸ್ ಕರ್ವಿ ಸುತ್ತಿನಲ್ಲಿ ರೂಪದರ್ಶಿಯರು ಈ ಎಲ್ಲಾ ಸಿದ್ಧಮಾದರಿಯನ್ನು ಮೀರಿದಂತೆ ತಮ್ಮ ರ್ಯಾಂಪ್ ವಾಕ್‍ನಲ್ಲಿ ಭಾಗಿಯಾದ್ದರು.

  ‘ರಾಜ್ಯ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರು ಇಲ್ಲಿ ಭಾಗವಹಿಸಿದ್ದಾರೆ. ಇಲ್ಲಿ ಗೆದ್ದವರು ಸಿಂಗಪುರದಲ್ಲಿ ನಡೆಯುವ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ' ಎಂದು ಆಯೋಜಕಿ ನಂದಿನಿ ನಾಗರಾಜ್ ಹೇಳಿದರು.
  Published by:Vinay Bhat
  First published: