KSRTC ಆಸ್ಪತ್ರೆ ಮೇಲೆ MP ಕಣ್ಣು? ತೇಜಸ್ವಿ ಸೂರ್ಯ 'ಖಾಸಗಿ' ಲಾಬಿ!?

ಬೆಂಗಳೂರು ಸೌತ್ ಸಂಸದ ತೇಜಸ್ವಿ ಸೂರ್ಯ ವಾಸವಿ ಅನ್ನೋ ಖಾಸಗಿ ಸಂಸ್ಥೆಗೆ ಇದನ್ನು 30 ವರ್ಷಗಳ ಕಾಲ ಗುತ್ತಿಗೆ ನೀಡುವಂತೆ ಸಿಎಂ ಸಾರಿಗೆ ಸಚಿವರು KSRTC ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

KSRTC ಆಸ್ಪತ್ರೆ ಮೇಲೆ MP ಕಣ್ಣು

KSRTC ಆಸ್ಪತ್ರೆ ಮೇಲೆ MP ಕಣ್ಣು

  • Share this:
ಬೆಂಗಳೂರು (ಜು.25): ಬೆಂಗಳೂರು ದಕ್ಷಿಣ ಸಂಸದರು, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾದ ತೇಜಸ್ವಿ ಸೂರ್ಯ (Tejaswi Surya) ಅವರು ಜಯನಗರದಲ್ಲಿರುವ ಕೆಎಸ್ ಆರ್ ಟಿಸಿ ಆಸ್ಪತ್ರೆಯನ್ನು (KSRTC Hospital) ಖಾಸಗೀಕರಣಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಕೆಎಸ್ ಆರ್ ಟಿಸಿ ಸಿಬ್ಬಂದಿ ಹಾಗೂ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಹೆಚ್ ವಿ ಅನಂತ ಸುಬ್ಬಾರಾವ್ (Ananth Subbarao) ಆರೋಪಿಸಿದ್ದಾರೆ. 

ಜಯನಗರದ ನಾಲ್ಕನೇ ಬ್ಲಾಕ್ ನಲ್ಲಿ ಕಳೆದ 25 ವರ್ಷಗಳ ಹಿಂದೆ KSRTC ಆಸ್ಪತ್ರೆ ನಿರ್ಮಾಣ ಮಾಡಿತ್ತು. ಇಲ್ಲಿ ಸಾವಿರಾರು ನೌಕರರು ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಗಳಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ರು. ಅದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲ ಆದ್ರು ಇದನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಬೇಕು ಎಂದು ಸಾವಿರಾರು ನೌಕರರು ಸರ್ಕಾರಕ್ಕೆ ಮನವಿ ಮಾಡ್ತಾನೆ ಇದ್ದಾರೆ.

30 ವರ್ಷಗಳ ಕಾಲ ಗುತ್ತಿಗೆ ನೀಡುವಂತೆ ಒತ್ತಡ

ಆಸ್ಪತ್ರೆಯ ಹಿಂದೆ ಮತ್ತು ಮುಂದೆ ವಿಸ್ತಾರವಾದ ಜಾಗವಿದೆ. ಮದ್ಯಪಾನ ವ್ಯಸನದ ಡ್ರೈವರ್ ಗಳಿಗೆ ಇಲ್ಲಿ ಡಿ ಅಡಿಕ್ಷನ್ ಕ್ಯಾಂಪ್ ಕೂಡ ಮಾಡ್ತಿದ್ರಂತೆ ಆದರೆ ಬೆಂಗಳೂರು ಸೌತ್ ಸಂಸದ ತೇಜಸ್ವಿ ಸೂರ್ಯ ವಾಸವಿ ಅನ್ನೋ ಖಾಸಗಿ ಸಂಸ್ಥೆಗೆ ಇದನ್ನು 30 ವರ್ಷಗಳ ಕಾಲ ಗುತ್ತಿಗೆ ನೀಡುವಂತೆ ಸಿಎಂ ಸಾರಿಗೆ ಸಚಿವರು KSRTC ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಅನ್ನೋ ಆರೋಪವನ್ನು KSRTC ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಅನಂತ ಸುಬ್ಬರಾವ್ ಆರೋಪ ಮಾಡ್ತಿದ್ದಾರೆ.

 KSRTC ನೌಕರರಿಗಾಗಿ ಮೀಸಲಾಗಿರುವ ಆಸ್ಪತ್ರೆ

ಇನ್ನೂ ಈ  KSRTC ಆಸ್ಪತ್ರೆಯಲ್ಲಿ ಖಾಸಗಿ ಅವರು ಡಯಾಲಿಸಿಸ್ ಸೆಂಟರ್ ಓಪನ್ ಮಾಡಿದ್ರೆ ನೌಕರರು ಹಣ ಕೊಟ್ಟು ಚಿಕಿತ್ಸೆ ಪಡೆದುಕೊಳ್ಳಬೇಕು ಸೋ ಹಾಗಾಗಿ ಇದನ್ನು ನಾವು ತೀವ್ರ ವಿರೋಧ ಮಾಡ್ತಿವಿ. ಹಲವಾರು ದಶಕಗಳಿಂದ ನೌಕರರಿಗೆ ಚಿಕಿತ್ಸೆ ನೀಡ್ತಿದೆ‌. ಆದರೆ ದಿಢೀರ್ ಅಂತ ಸಂಸದ ತೇಜಸ್ವಿ ಸೂರ್ಯ ತಮ್ಮ ‌ಕ್ಷೇತ್ರದ ಮತದಾರರ ಮತ್ತು ಒಂದು ಸಮುದಾಯವನ್ನು ಓಲೈಕೆ ಮಾಡಲು  KSRTC ನೌಕರರಿಗಾಗಿ ಮೀಸಲಾಗಿರೋ ಆಸ್ಪತ್ರೆಯನ್ನು ಖಾಸಗಿ ಅವರಿಗೆ ನೀಡುವುದು ಎಷ್ಟು ಸರಿ. ಸಂಸದರು ನಮಗೆ ತಮ್ಮ ನಿಧಿಯನ್ನು ನೀಡಲಿ ನಾವೇ ಅಲ್ಲಿ ಡಯಾಲಿಸಿಸ್ ಸೆಂಟರ್ ಓಪನ್ ಮಾಡ್ತಿವಿ ನೌಕರರಿಗೆ ಸಹಾಯ ಆಗುತ್ತದೆ .

ಇದನ್ನೂ ಓದಿ: Suspected Terrorist: ಉಗ್ರರ ಅಡಗು ತಾಣವಾಗಿದ್ಯಾ ಬೆಂಗಳೂರು? ಮತ್ತೊಬ್ಬ ಶಂಕಿತ ಉಗ್ರನ ಬಂಧನ

 KSRTC  ಆಸ್ಪತ್ರೆ ಮೇಲೆ ಯಾಕೆ ನಿಮ್ಮ ಕಣ್ಣು,

ನಿಮ್ಮ ಕ್ಷೇತ್ರದಲ್ಲಿ ಸಾಕಷ್ಟು ಸರ್ಕಾರದ ಜಾಗವಿದೆ ಅಲ್ಲಿ ಡಯಾಲಿಸಿಸ್ ಸೆಂಟರ್ ಮಾಡಿಕೊಳ್ಳಿ ನಮ್ಮ ನೌಕರರಿಗೆ ಮೀಸಲಿಟ್ಟ ಆಸ್ಪತ್ರೆ ಮೇಲೆ ಯಾಕೆ ನಿಮ್ಮ ಕಣ್ಣು, ಕೂಡಲೇ ಸಂಸದ ತೇಜಸ್ವಿ ಸೂರ್ಯ ಈ ನಿರ್ಧಾರವನ್ನು ಕೈ ಬಿಡಲಿಲ್ಲ ಅಂದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಸಾರಿಗೆ ಮುಖಂಡರು ಎಚ್ಚರಿಕೆ ನೀಡಿದ್ರು.

ಅರೋಪ ಅಲ್ಲಗೆಳೆದ ತೇಜಸ್ವಿ ಸೂರ್ಯ

ಇನ್ನೂ ಈ ಬಗ್ಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ರನ್ನು ಕೇಳಿದ್ರೆ ಆಸ್ಪತ್ರೆಯನ್ನು ಗುತ್ತಿಗೆ ಗೆ ನೀಡಲು ನಾನ್ಯಾರು ಈ ಹಿಂದೆ ಈ ಕಟ್ಟಡ ಪಾಳು ಬಿದ್ದಿತ್ತು ಕೊರೊನಾ ಸಂದರ್ಭದಲ್ಲಿ ಜನರಿಗೆ ಸಹಾಯ ಆಗಲಿ ಎಂದು ನಾನು ನನ್ನ ಸಂಸದರ ನಿಧಿ ಖಾಸಗಿ ಮತ್ತು ಬಿಬಿಎಂಪಿಯಿಂದ ಹಣ ಬಿಡುಗಡೆ ಮಾಡಿಸಿ ಆಸ್ಪತ್ರೆಯನ್ನು ಪುನರ್ ನಿರ್ಮಾಣ ಮಾಡಿದ್ವಿ ನಾನು ಯಾವುದೇ ಸಂಸ್ಥೆಗೆ ಗುತ್ತಿಗೆ ನೀಡಲು ಪ್ಲಾನ್ ಮಾಡಿಲ್ಲ ನನ್ನ ಮೇಲೆ ಸುಮ್ಮನೆ ಆರೋಪ ಮಾಡ್ತಿದ್ದಾರೆ ಎನ್ನುತ್ತಾರೆ.

ಇದನ್ನೂ ಓದಿ: MonkeyPox: ದೇಶದಲ್ಲಿ ಮಂಕಿಪಾಕ್ಸ್ ಕೇಸ್​ಗಳು ಪತ್ತೆ; ರೋಗ ತಡೆಗೆ ಕರ್ನಾಟಕದಲ್ಲಿ ಕಟ್ಟೆಚ್ಚರ- ಸುಧಾಕರ್

ಒಟ್ನಲ್ಲಿ ಸಾರಿಗೆ ಮುಖಂಡರು ‌ನೋಡಿದ್ರೆ ಈಗಾಗಲೇ ಆಸ್ಪತ್ರೆಯನ್ನು ಗುತ್ತಿಗೆ ನೀಡುವಂತೆ ಸಂಸದರು ಸಾಕಷ್ಟು ಒತ್ತಡ ಹೇರಿ ಎಲ್ಲಾ ಸಿದ್ದತೆಗಳು ಆಗೋಗಿದೆ ಅಂತಿದ್ರೆ ಇತ್ತ ಸಂಸದರು ಮಾತ್ರ ಗುತ್ತಿಗೆ ನೀಡಲು ನ್ಯಾನ್ಯಾರು ಕೆಎಸ್ಆರ್ಟಿಸಿ ಆಸ್ಪತ್ರೆಯನ್ನು ಗುತ್ತಿಗೆ ನೀಡೋ ಪ್ಲಾನ್ ನಲ್ಲಿಲ್ಲ ಅಂತಿದ್ದಾರೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಇದು KSRTC  ಆಸ್ಪತ್ರೆಯಾಗಿಯೇ ಉಳಿಯುತ್ತೋ ಅಥವಾ ಖಾಸಗಿಯವರ ಪಾಲಾಗಲಿದ್ಯ ಎಂದು ಕಾದು ನೋಡಬೇಕಿದೆ.
Published by:Pavana HS
First published: