ಕರ್ನಾಟಕ ಯುವ ಸಂಸದ ತೇಜಸ್ವಿ ಸೂರ್ಯಗೆ ಬಿಜೆಪಿಯಲ್ಲಿ ರಾಷ್ಟ್ರೀಯ ಹುದ್ದೆ?

ಅಖಿಲ ಭಾರತ ವಿದ್ಯಾರ್ಥಿ ಪರಿಷತ್​​(ಎಬಿವಿಪಿ) ಸಂಘದಲ್ಲಿ ಕಾರ್ಯಕರ್ತರಾಗಿದ್ದ ಉತ್ತಮ ಅನುಭವ ಹೊಂದಿದ್ದಾರೆ. ಹೀಗಾಗಿ ಇವರಿಗೆ ರಾಷ್ಟ್ರೀಯ ಹುದ್ದೆ ನೀಡಬಹುದು ಎಂದು ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್​​ ತಿಳಿಸಿದ್ದಾರೆ.

news18
Updated:September 14, 2019, 8:28 AM IST
ಕರ್ನಾಟಕ ಯುವ ಸಂಸದ ತೇಜಸ್ವಿ ಸೂರ್ಯಗೆ ಬಿಜೆಪಿಯಲ್ಲಿ ರಾಷ್ಟ್ರೀಯ ಹುದ್ದೆ?
ತೇಜಸ್ವಿ ಸೂರ್ಯ
news18
Updated: September 14, 2019, 8:28 AM IST
ಬೆಂಗಳೂರು(ಸೆ.14): ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಯುವ ಸಂಸದ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿಯಲ್ಲಿ ರಾಷ್ಟ್ರೀಯ ಹುದ್ದೆ ನೀಡುವ ಸಾಧ್ಯತೆಯಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರನ್ನಾಗಿ ನೇಮಿಸಲು ಪಕ್ಷ ಉತ್ಸುಕವಾಗಿದೆ. ಜೊತೆಗೆ ಕರ್ನಾಟಕ ಬಿಜೆಪಿ ಯುವ ಘಟಕದ ಅಧ್ಯಕ್ಷರ ಜವಾಬ್ದಾರಿಯೂ ನೀಡಲು ಪಕ್ಷ ಚಿಂತಿಸಿದೆ ಎನ್ನುತ್ತಿವೆ ಮೂಲಗಳು.

ರಾಜ್ಯದ ಯುವಕರನ್ನು ಸಂಘಟನೆ ಮಾಡಬೇಕಿದೆ. ಪಕ್ಷ ಕಟ್ಟಲು ಜನಪ್ರಿಯ ಯುವ ನಾಯಕನ ಅವಶ್ಯಕತೆ ಇದೆ. ಈ ಎಲ್ಲಾ ಲಕ್ಷಣಗಳು ಸಂಸದ ತೇಜಸ್ವಿ ಸೂರ್ಯರಲ್ಲಿ ಕಾಣಬಹುದು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್​​(ಎಬಿವಿಪಿ) ಸಂಘದಲ್ಲಿ ಕಾರ್ಯಕರ್ತರಾಗಿದ್ದ ಉತ್ತಮ ಅನುಭವ ಹೊಂದಿದ್ದಾರೆ. ಹೀಗಾಗಿ ಇವರಿಗೆ ರಾಷ್ಟ್ರೀಯ ಹುದ್ದೆ ನೀಡಬಹುದು ಎಂದು ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್​​ ತಿಳಿಸಿದ್ದಾರೆ.

ಮುಂದಿನ ಅಕ್ಟೋಬರ್​​ ವೇಳೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆಯಾಗಲಿದೆ. ನಂತರ ರಾಜ್ಯ ಪದಾಧಿಕಾರಿಗಳ ನೇಮಕ ಮಾಡಲಾಗುವುದು. ರಾಷ್ಟ್ರೀಯ ಅಧ್ಯಕ್ಷರ ನೇಮಕಾತಿ ಬೆನ್ನಲ್ಲೇ ಯಾವ ರಾಜ್ಯಕ್ಕೆ ಯಾರು ಪದಾಧಿಕಾರಿ ಎಂದು ಪ್ರಕಟಿಸಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ: ಸಂಸದ ತೇಜಸ್ವಿಯನ್ನು ಫೇಕ್ ಕನ್ನಡಿಗ ಎಂದು ಹೀಗಳೆದ ಟ್ವೀಟಿಗರು; ಮತ್ತೊಮ್ಮೆ ಭಾಷೆಗೆ ಸಂಬಂಧಿಸಿದ ಸುದ್ದಿಯಲ್ಲಿ ಸೂರ್ಯ!

ಯುವಕರನ್ನು ಸಂಘಟಿಸಲು ತೇಜಸ್ವಿ ಸೂರ್ಯ ಸೂಕ್ತ. ಆದರೂ, ಯಾರಿಗೆ ಯಾವ ಹುದ್ದೆ ನೀಡಬೇಕೆನ್ನುವುದು ಹೈಕಮಾಂಡ್​​ಗೆ ಬಿಟ್ಟ ವಿಚಾರ. ಹೀಗಾಗಿ ಬಿಜೆಪಿ ಹೈಕಮಾಂಡ್​​ ಯಾವ ಯುವ ನಾಯಕನಿಗೆ ಮಣೆ ಹಾಕಲಿದೆ ಎಂದು ಕಾದು ನೋಡಬೇಕಿದೆ.

ತೇಜಸ್ವಿ ಸೂರ್ಯ ಎಬಿವಿಪಿ ಸಕ್ರಿಯ ಕಾರ್ಯಕರ್ತರಾಗಿದ್ದರು. ಭಾರತೀಯ ಜನತಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. 2018ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ‘ಕರ್ನಾಟಕ ಬಿಜೆಪಿ ಡಿಜಿಟಲ್ ಕಮ್ಯುನಿಕೇಷನ್ಸ್" ತಂಡವನ್ನು ಮುನ್ನಡೆಸಿದ್ದರು. ಬಳಿಕ 2019 ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಿದ್ದ ತೇಜಸ್ವಿ ಸೂರ್ಯ, ಕಾಂಗ್ರೆಸ್​​ನ ಬಿ. ಕೆ. ಹರಿಪ್ರಸಾದ್ ವಿರುದ್ಧ ಗೆದ್ದು ಸಂಸದರಾಗಿ ಆಯ್ಕೆಯಾಗಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
Loading...

-----------
First published:September 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...