Tejasvi Surya Dosa Issue: ಕಾಂಗ್ರೆಸ್ ಕಳಿಸಿದ 10 ದೋಸೆ ತಿಂದಿದ್ಯಾರು? ದೋಸೆಯಲ್ಲೂ ಕಾಂಗ್ರೆಸ್ ಹಗರಣ ಎಂದ ತೇಜಸ್ವಿ ಸೂರ್ಯ

ನನಗೆ ದೋಸೆ ಕಳಿಸುವಲ್ಲೂ ಸಹ ಕಾಂಗ್ರೆಸ್ ಹಗರಣ ನಡೆಸಿದೆ.  ಒಂದು ದೋಸೆಯನ್ನೂ ಕಳಿಸಲು ಆಗದ ಕಾಂಗ್ರೆಸ್ ಉತ್ತಮ ಆಡಳಿತದ ಕನಸು ಕಾಣುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ವ್ಯಂಗ್ಯ ಮಾಡಿದ್ದಾರೆ.

ಮಳೆ, ತೇಜಸ್ವಿ ಸೂರ್ಯ

ಮಳೆ, ತೇಜಸ್ವಿ ಸೂರ್ಯ

  • Share this:
ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ದೋಸೆ ತಿಂದದ್ದು ಇದೀಗ ಭಾರೀ ದೊಡ್ಡ ಸುದ್ದಿ. ಬೆಂಗಳೂರಲ್ಲಿ ಮಳೆ ಬಂದು ಸಮಸ್ಯೆ (Bengaluru Rains) ಉಂಟಾದಾಗಲೇ ಸಂಸದ ತೇಜಸ್ವೀ ಸೂರ್ಯ (MP Tejasvi Surya) ಹೊಟೇಲ್ ಒಂದರಲ್ಲಿ ದೋಸೆ ತಿಂದದ್ದು ಭಾರೀ ಸುದ್ದಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್ ಸಹ ಆಗಿತ್ತು. ನಂತರ ಕಾಂಗ್ರೆಸ್ ಕಾರ್ಯಕರ್ತರು (Congress Workers)  ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರತಿಭಟನೆ ಮಾಡಿ 10 ವಿವಿಧ ದೋಸೆಗಳನ್ನು ಪಾರ್ಸೆಲ್ ಮಾಡಿದ್ದಾಗಿ ಕಾಂಗ್ರೆಸ್ ಬೆಂಬಲಿಗರು ತಿಳಿಸಿದ್ದರು. ಆದರೆ ಈ 10 ದೋಸೆಗಳು ನನಗೆ ಇನ್ನೂ ತಲುಪಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದು ಕಾಂಗ್ರೆಸ್​ನ್ನು ಇದರಲ್ಲೂ ಸುಳ್ಳು ಹೇಳಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

ದೋಸೆಯನ್ನು ಕಳಿಸಿದ್ದಾಗಿ ಹೇಳಿದ 24 ಗಂಟೆಗಳ ನಂತರವು ಒಂದು ದೋಸೆಯೂ ನನ್ನನ್ನು ತಲುಪಿಲ್ಲ. ನನಗೆ ದೋಸೆ ಕಳಿಸುವಲ್ಲೂ ಸಹ ಕಾಂಗ್ರೆಸ್ ಹಗರಣ ನಡೆಸಿದೆ.  ಒಂದು ದೋಸೆಯನ್ನೂ ಕಳಿಸಲು ಆಗದ ಕಾಂಗ್ರೆಸ್ ಉತ್ತಮ ಆಡಳಿತದ ಕನಸು ಕಾಣುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ವ್ಯಂಗ್ಯ ಮಾಡಿದ್ದಾರೆ.

MP Tejasvi Surya Detained On Way To Visit Rajasthans Riot Hit Karauli
ಸಾಂದರ್ಭಿಕ ಚಿತ್ರ


ಕಾಂಗ್ರೆಸ್​ನಿಂದ ಅನಾವಶ್ಯಕ ಟೀಕೆ ಎಂದಿದ್ದ ಸಂಸದ
ಈ ಮುನ್ನ ಬೆಂಗಳೂರಲ್ಲಿ ಮಳೆ ಬಂದು ಸಮಸ್ಯೆ ಉಂಟಾದಾಗ ಹೊಟೇಲ್ ಒಂದರಲ್ಲಿ ದೋಸೆ ತಿಂದು ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಗುರಿಯಾಗಿದ್ದರು. ಆದರೆ ದೋಸೆಯ ವಿಷಯವಾಗಿ ಸ್ಪಷ್ಟನೆ ನೀಡಿದ್ದ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್​ ನವರಿಗೆ ಬೇರೆ ಮಾಡೋಕೆ ಕೆಲಸ ಇಲ್ಲ. ಅನಾವಶ್ಯಕ ವಿಷಯಗಳು ತಗೊಂಡು ಟೀಕೆ ಮಾಡ್ತಾರೆ. ನಾನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ. ನನ್ನ ಕ್ಷೇತ್ರದ ಬೊಮ್ಮನಹಳ್ಳಿಯಲ್ಲಿ ಎರಡು ಕಡೆ ಮಳೆಯಿಂದ ಸಮಸ್ಯೆ ಆಗಿದ್ದು ಬಿಟ್ಟರೆ ಉಳಿದ ಕಡೆ ಎಲ್ಲಿಯೂ ಕಡೆಯೂ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: Ram Mandir Ayodhya: 1800 ಕೋಟಿಯಲ್ಲಿಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣ; ಹೇಗಿರಲಿದೆ ಭವ್ಯ ದೇಗುಲ? 

ಟ್ರೋಲ್ ಮಾಡೋದು ಸರಿಯಲ್ಲ
ಅಲ್ಲದೇ ಮುಂದುವರೆದು, ಮಳೆ ಪ್ರವಾಹ ನಿರ್ವಹಣೆಗೆ ಬೊಮ್ಮಾಯಿ ನೇತೃತ್ವದ ಸರ್ಕಾರ‌ ಬದ್ದ ಇದೆ. ನಾನು ಕೂಡ ಮಳೆ ಸಂತ್ರಸ್ತರ ನೆರವಿಗೆ ಧಾವಿಸಿದ್ದೇನೆ. ನಾನು ಯಾವುದೋ ಹೋಟೆಲ್ ಗೆ ಉದ್ಘಾಟನೆಗೆ ಹೋಗಿದ್ದನ್ನು ಟ್ರೋಲ್ ಮಾಡಿದ್ದು ಸರಿಯಲ್ಲ ಎಂದು  ದೋಸೆ ತಿಂದಿದ್ದರ ಬಗ್ಗೆ ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: Gyanvapi Masjid Case: ಜ್ಞಾನವಾಪಿ ಮಸೀದಿಯಲ್ಲಿ ಪೂಜೆಯ ಹಕ್ಕು ಎತ್ತಿ ಹಿಡಿದ ವಾರಾಣಸಿ ಕೋರ್ಟ್​
Published by:ಗುರುಗಣೇಶ ಡಬ್ಗುಳಿ
First published: