ಡ್ರಗ್ಸ್ ಪ್ರಕರಣದಲ್ಲಿ ಕೇವಲ ಸಿನಿಮಾ ರಂಗವನ್ನ ಮಾತ್ರ ಟಾರ್ಗೆಟ್ ಮಾಡಬೇಡಿ -  ಸಂಸದೆ ಸುಮಲತಾ ಮನವಿ

ಇಂಥದನ್ನು ಯಾರೂ ಹೇಳಿ ಮಾಡಲ್ಲ‌. ಇದು ಬೇರೆಯದೇ ವಾತಾವರಣದಲ್ಲಿ ನಡೆಯುತ್ತದೆ. ಈ ಅಭ್ಯಾಸ ಆದವರಿಗೆ ಇದನ್ನು ಬಿಡುವುದು ಕಷ್ಟ. ಸಿನಿಮಾ ಇಂಡಸ್ಟ್ರಿ ಅಂಥಾ ಟಾರ್ಗೆಟ್ ‌ಮಾಡಬೇಡಿ ಎಂದರು ಸುಮಲತಾ.

ಸುಮಲತಾ ಅಂಬರೀಶ್​

ಸುಮಲತಾ ಅಂಬರೀಶ್​

  • Share this:
ಬೆಂಗಳೂರು(ಸೆ.08): ಸಿನಿಮಾ ರಂಗದಲ್ಲಿ ಡ್ರಗ್ಸ್ ಮಾಫಿಯಾ ಇದೆಯಾ? ಅದು ಎಲ್ಲ ಕಡೆ ಇದೆ. ಆದ್ರೆ, ಸಿನೆಮಾ ರಂಗವನ್ನ ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ ಎಂದು  ಮಂಡ್ಯ ಸಂಸದೆ ಸುಮಲತಾ ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಇದರಲ್ಲಿ ಎಲ್ಲರ ತಪ್ಪು ಇದೆ. ಸ್ಯಾಂಡಲ್‌ವುಡ್‌ನಲ್ಲಿ ಈಗ ಕೇಳಿ ಬರುತ್ತಿರುವ ಹೆಸರೆಷ್ಟು ? ಅದನ್ನು ಇಡೀ ಸ್ಯಾಂಡಲ್‌ವುಡ್ ಗೆ ಅನ್ವಯಿಸಿ ಕೆಟ್ಟದಾಗಿ ತೋರಿಸುವುದು ಕನ್ನಡ ಚಿತ್ರರಂಗದ ಬಗ್ಗೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ.. ಕೇವಲ ಸಿನಿಮಾ ಕ್ಷೇತ್ರವನ್ನು ಮಾತ್ರ ಟಾರ್ಗೆಟ್ ಮಾಡಬೇಡಿ ಎಂದು ಸುಮಲತಾ ಮನವಿ ಮಾಡಿದ್ದಾರೆ. ಯುವ ಸಮೂಹ ಈ ಚಟ ಹಿಂದೆ ಬಿದ್ದಿರುವುದು ಕಹಿ ಸತ್ಯ. ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುವುದು ಸರಿಯಲ್ಲ. ತನಿಖೆ ನಡೆಯುತ್ತಿದೆ. ಸತ್ಯಾಂಶ ಹೊರ ಬರಲೇಬೇಕು. ಅಲ್ಲಿವೆರೆಗೆ ಕಾಯಬೇಕು ಎಂದರು.

ಕನ್ನಡ ಚಿತ್ರರಂಗ ಅಷ್ಟೇ ಅಲ್ಲ, ಎಲ್ಲ ಚಿತ್ರರಂಗದಲ್ಲಿಯೂ ಜನರೇಶನ್ ಚೇಂಜ್ ಆಗಿದೆ. ಹಿರಿಯರ ಜನರೇಶನ್ ಇದ್ದಾಗ ಪರಿಸ್ಥಿತಿ ಬೇರೆ ಇತ್ತು. ಈಗ ಆ ಗೌರವ, ಭಯ ಯುವಕರಲ್ಲಿ ಕಾಣುತ್ತಿಲ್ಲ. ಅದು ಜನರೇಷನ್ ನಲ್ಲಿ ಕಂಡು ಬರುವ ವ್ಯತ್ಯಾಸ ಆಗಿದೆ. ಈಗಿನ ಜನರೇಷನ್ ಕೊಡುವ ಗೌರವ ಕಡಿಮೆಯಾಗಿದೆ. ಪ್ರತಿ ರಂಗದಲ್ಲಿ ಒಳ್ಳೇದು ಕೆಟ್ಟದು ಇರುತ್ತದೆ. ಸಿನಿಮಾ ಕ್ಷೇತ್ರವನ್ನೇ ಟಾರ್ಗೆಟ್ ಮಾಡುವುದು ಸರಿಯಲ್ಲ. ಈ ಚಟ ಎಲ್ಲಾ ಕ್ಷೇತ್ರದಲ್ಲಿ ಇದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

ಇಂಥದನ್ನು ಯಾರೂ ಹೇಳಿ ಮಾಡಲ್ಲ‌. ಇದು ಬೇರೆಯದೇ ವಾತಾವರಣದಲ್ಲಿ ನಡೆಯುತ್ತದೆ. ಈ ಅಭ್ಯಾಸ ಆದವರಿಗೆ ಇದನ್ನು ಬಿಡುವುದು ಕಷ್ಟ. ಸಿನಿಮಾ ಇಂಡಸ್ಟ್ರಿ ಅಂಥಾ ಟಾರ್ಗೆಟ್ ‌ಮಾಡಬೇಡಿ ಎಂದರು.

ಇದನ್ನೂ ಓದಿ: ‘ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ಕಠಿಣ ಕ್ರಮ’ - ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್

ಆರೋಪ ಸಾಬೀತಾಗುವ ಮೊದಲೇ ಜಡ್ಜ್ ಮೆಂಟ್ ಕೊಡಬಾರದು‌ ಚಲನಚಿತ್ರರಂಗ ಅಷ್ಟೇ ಅಲ್ಲ, ಎಲ್ಲ ಕಡೆಯಲ್ಲೂ ಇದೆ. ಇಡೀ ಕನ್ನಡ ಚಿತ್ರರಂಗವನ್ನೇ‌ ಬೊಟ್ಟು ಮಾಡಬಾರದು. ಎಷ್ಟು ಪರ್ಸೆಂಟ್ ಇದೆ ಅನ್ನೋದನ್ನ ನೋಡಬೇಕು. ಡ್ರಗ್ಸ್ ದಂಧೆಯಲ್ಲಿ ಇತರೆ ನಟರು ಇದ್ದಾರಾ ಅನ್ನೋದರ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕೊಡಬೇಕು ಎಂದು ಇದೇ ವೇಳೆ ತಿಳಿಸಿದರು.
Published by:Ganesh Nachikethu
First published: