• Home
  • »
  • News
  • »
  • state
  • »
  • MP Sumalatha: ಆಣೆ ಪ್ರಮಾಣ ಮಾಡಲು ನಾನು ರೆಡಿ; ಜೆಡಿಎಸ್‌ ಶಾಸಕರಿಗೆ ಪಂಥಾಹ್ವಾನ ನೀಡಿದ ಸುಮಲತಾ!

MP Sumalatha: ಆಣೆ ಪ್ರಮಾಣ ಮಾಡಲು ನಾನು ರೆಡಿ; ಜೆಡಿಎಸ್‌ ಶಾಸಕರಿಗೆ ಪಂಥಾಹ್ವಾನ ನೀಡಿದ ಸುಮಲತಾ!

ಪುಟ್ಟರಾಜು, ಸುಮಲತಾ

ಪುಟ್ಟರಾಜು, ಸುಮಲತಾ

ಕಾಮಗಾರಿಗಳಲ್ಲಿ ಕಮೀಷನ್ ಪಡೆದಿದ್ದಾರೆಂಬ ಜೆಡಿಎಸ್ ನಾಯಕರ ಆರೋಪಕ್ಕೆ ಸುಮಲತಾ ತಿರುಗೇಟು ನೀಡಿದ್ದಾರೆ. ಜೆಡಿಎಸ್‌ನ 6 ಶಾಸಕರು ಆಣೆ-ಪ್ರಮಾಣಕ್ಕೆ ಬರಲೇಬೇಕು, ಅವರೇ ಡೇಟ್ ಫಿಕ್ಸ್ (Date Fix) ಮಾಡಲಿ, ನಾನು ರೆಡಿ ಇದ್ದೇನೆ ಅಂತ ಸಮಲತಾ ಗುಡುಗಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (MP Sumalatha), ಜೆಡಿಎಸ್‌ ಶಾಸಕರಿಗೆ ಪಂಥಾಹ್ವಾನ ನೀಡಿದ್ದಾರೆ. ಸಂಸದೆ v/s ಜೆಡಿಎಸ್ ಶಾಸಕರ (MP And JDS MLA) ನಡುವೆ ಆಣೆ ಪ್ರಮಾಣ ಜೋರಾಗಿದೆ. ಕಾಮಗಾರಿಗಳಲ್ಲಿ ಕಮೀಷನ್ (Commission) ಪಡೆದಿದ್ದಾರೆಂಬ ಜೆಡಿಎಸ್ (JDS) ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಮದ್ದೂರಿನಲ್ಲಿ ಮಾತಾಡಿದ ಅವರು, ನನ್ನ ಮೇಲೆ ಸುಳ್ಳು ಆರೋಪ ಮಾಡ್ತಿದ್ದಾರೆ. ಜೆಡಿಎಸ್‌ನ 6 ಶಾಸಕರು ಆಣೆ-ಪ್ರಮಾಣಕ್ಕೆ ಬರಲೇಬೇಕು, ಅವರೇ ಡೇಟ್ ಫಿಕ್ಸ್ (Date Fix) ಮಾಡಲಿ, ನಾನು ರೆಡಿ ಇದ್ದೇನೆ ಅಂತ ಸಮಲತಾ ಗುಡುಗಿದ್ದಾರೆ.


ಮೇಲುಕೋಟೆಯಲ್ಲಿ ಆಣೆ ಪ್ರಮಾಣ ಮಾಡಲಿ


ಮದ್ದೂರು ಪಟ್ಟಣದ ಪ್ರವಾಸಿ ಮಂದಿರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಸಂಸದೆ ಸುಮಲತಾ ಮತ್ತು ಬೆಂಬಲಿಗರು ಕಮಿಷನ್ ಪಡೆದಿದ್ದಾರೆ. ಪಡೆದಿಲ್ಲ ಎನ್ನುವುದಾದರೆ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯಲ್ಲಿ ಆಣೆ ಪ್ರಮಾಣ ಮಾಡಲಿ ಎಂದು ಶಾಸಕರಾದ ಸಿ.ಎಸ್. ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಂಸದೆ, ಆಣೆ ಪ್ರಮಾಣಕ್ಕೆ ನಾನು ಸಿದ್ಧಳಿದ್ದೇನೆ ಎಂದು ಆಹ್ವಾನ ನೀಡಿದ್ದಾರೆ.


ಎಂಪಿ ಅಂದ್ರೆ ಅಧಿಕಾರಿಗಳಿಗೆ ಲೆಕ್ಕಾ ಇಲ್ಲ


ಎಂಪಿ ಅಂದ್ರೆ ಅಧಿಕಾರಿಗಳಿಗೆ ಲೆಕ್ಕಾ ಇಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ದ ಸಂಸದೆ ಸುಮಲತಾ ಕಿಡಿಕಾರಿದ್ದಾರೆ. ಜಿಲ್ಲೆಯ ಬೂದನೂರು ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದೆ ಸುಮಲತಾ, ಬಾರಿ ಮಳೆಗೆ ಜಮೀನಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಜನ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಕಳೆದ ಬಾರಿಯೂ ಸಹ ಪರಿಶೀಲನೆ ನಡೆಸಲಾಗಿತ್ತು. ಸಮಸ್ಯೆ ಬಗೆಹರಿಸುವ ಬಗ್ಗೆ ಸೂಚನೆ ಕೊಡಲಾಗಿತ್ತು. ಈವರೆಗೂ ಏನು ಮಾಡಿಲ್ಲ, ಮತ್ತೆ ಯಡವಟ್ಟು ಆಗಿದೆ. ಬೇಜವಾಬ್ದಾರಿ ಅಧಿಕಾರಿಗಳ ಜೊತೆ ಹೋರಾಟ ಮಾಡಿ ಸಾಕಾಗಿದೆ.


ಇದನ್ನೂ ಓದಿ: SayCM Campaign: ಪೇಸಿಎಂ ಆಯ್ತು ಇದೀಗ ಸೇಸಿಎಂ ಅಭಿಯಾನ; ಮೂಕ ಬಸವನ ರೀತಿ ಕೂತರೆ ಆಗುವುದಿಲ್ಲ-ಪ್ರಿಯಾಂಕ್​ ಖರ್ಗೆ


ಮಿನಿಸ್ಟರ್ ಬಂದರೆ ಮಾತ್ರ ಕಾಟಚಾರಕ್ಕೆ ಬರ್ತಾರೆ


ಲೆಟರ್ ಕೂಡ ಬರೆದಿದ್ದೇನೆ, ಯಾವ ಸ್ಪಂದನೆ ಇಲ್ಲ. ಯಾವ ಅಧಿಕಾರಿ ಬಂದಿಲ್ಲ, ಯಾರನ್ನೋ ಕಳುಹಿಸಿದ್ದಾರೆ. ಮಿನಿಸ್ಟರ್ ಬಂದರೆ ಮಾತ್ರ ಕಾಟಚಾರಕ್ಕೆ ಅಧಿಕಾರಿಗಳು ಬರ್ತಾರೆ. ಅಪ್ರುವಲ್ ಗೆ ಕಳುಹಿಸಿದ್ದೇವೆ ಎಂದು ಬರಿ ನೆಪ ಹೇಳ್ತಾರೆ. ನಮ್ಮ ಕರ್ತವ್ಯ ಮಾಡ್ತಿದ್ದೇವೆ. ಮುಂದೆ ಜನ ರೊಚ್ಚಿಗೆಳ್ತಾರೆ. ರೈತರು ಬೆಸತ್ತಿ ಹೋಗಿದ್ದಾರೆ. ಮಳೆ ಬಂದರೆ ಸಂಕಷ್ಟ ಅನುಭವಿಸುತ್ತಿರುವರು ರೈತರು. ಸಾವಿರಾರು ಕೋಟಿ ಕಾಮಗಾರಿ ಈ ಗತಿಯಾಗಿದೆ. ಸಿಎಂ ಜೊತೆ ಚರ್ಚಿಸಿ ಪತ್ರ ಕೊಟ್ಟಿದ್ದೇನೆ. ಸಭೆ ಕರೆದು ಸೂಚನೆ ಕೊಡುವುದಾಗಿ ತಿಳಿಸಿದ್ದಾರೆ ಎಂದರು.


ಅಧಿಕಾರಿಗಳ ವಿರುದ್ಧ ಗುಡುಗಿದ ಸುಮಲತಾ


ಇನ್ನೂ ಮುಂದುವರೆದು ಮಾತನಾಡಿದ ಅವರು, ಎಂಪಿ ಅಂದ್ರೆ ಅಧಿಕಾರಿಗಳಿಗೆ ಲೆಕ್ಕಾ ಇಲ್ಲ. ಅಧಿಕಾರಿಗಳು ಸರಿಯಾಗಿ ಬರ್ತಿಲ್ಲ, ಗೌರವ ಕೊಡ್ತಿಲ್ಲ. 3 ತಿಂಗಳಲ್ಲಿ ಕೂಡ ಆಗಲ್ಲ. ಕಮಿಷನ್ ಯಾರ್ ಯಾರಿಗೆ ತಲುಪಬೇಕೊ ಗೊತ್ತಿಲ್ಲ. ಅವೈಜ್ಞಾನಿಕ ಕೆಲಸ ಇದು. ಮಂಡ್ಯ ಜನಕ್ಕೆ ಅನುಕೂಲವಾಗುತ್ತೆ ಅನ್ಕೊಂಡಿದ್ದೆ.


ಇದನ್ನೂ ಓದಿ: Karnataka Tweet: ರಾಮುಲು ಪೆದ್ದ ಎಂದು ಅವ್ರೇ ಒಪ್ಪಿಕೊಂಡಿದ್ದಾರೆ; ಸಿದ್ದು ಹೇಳಿದ್ದು ಅಪ್ಪಟ ಸತ್ಯ ಎಂದು ಕಾಂಗ್ರೆಸ್​ ಟ್ವೀಟ್​


ನನಗೆ ಹುಚ್ಚು ಅನ್ಕೊಂಡಿದ್ರು, ಅವೈಜ್ಞಾನಿಕದ ಬಗ್ಗೆ ಮಾತನಾಡಿದ್ದೆ. ಮೊದಲೇ ಕ್ರಮ ತೆಗೆದುಕೊಂಡಿದ್ರೆ, ಸಮಸ್ಯೆ ಆಗುತ್ತಿರಲಿಲ್ಲ. ಶಾಲಾ ಮಕ್ಕಳಿಗೆ ತೊಂದರೆಯಾಗ್ತಿದೆ, ಎಂಟ್ರಿ, ಎಕ್ಸಿಟ್, ಪುಟ್ಟಪಾತ್, ಸರ್ವಿಸ್ ರೋಡ್ ಮಾಡಿಲ್ಲ. ಅವೈಜ್ಞಾನಿಕ ವಾಗಿದೆ ಹೆದ್ದಾರಿ ಕಾಮಗಾರಿ. ಹೆದ್ದಾರಿ ಮೈಸೂರು, ಬೆಂಗಳೂರಿನವರಿಗೆ ಮಾತ್ರನಾ, ಉಳಿದವರ ಗತಿ ಏನು? ಎಂದು ಪ್ರಶ್ನಿಸಿ ಗುಡುಗಿದ್ದಾರೆ.

Published by:ಪಾವನ ಎಚ್ ಎಸ್
First published: