ಮಂಡ್ಯ (ಜು.2): ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಕನಸು ಇವತ್ತು ಸೂಪರ್ ಸ್ಟಾರ್ ಸೋಮಣ್ಣ (V. Somanna) ನೆರೆವೇರಿಸಿದ್ದಾರೆ ಎಂದು ಸಚಿವ ಸೋಮಣ್ಣರನ್ನು ಸಂಸದೆ ಸುಮಲತಾ (MP Sumalatha) ಹಾಡಿ ಹೊಗಳಿದ್ದಾರೆ. ಮಂಡ್ಯದಲ್ಲಿ ವಸತಿ ಹಂಚಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಸೋಮಣ್ಣ ಅವರನ್ನು ಸುಮಲತಾ ಅಂಬರೀಶ್ ಅವರು, ಸಚಿವ ಸೋಮಣ್ಣ ಅವರೇ ನಮ್ಮ ಸೂಪರ್ ಸ್ಟಾರ್ ಎಂದಿದ್ದಾರೆ. ಇದು ಐತಿಹಾಸಿಕ ದಿನವಾಗಿದೆ ಸ್ಲಂ ನಿವಾಸಿಗಳಿಗೆ ವಸತಿ ಸಿಕ್ಕಿದೆ, 2015ರಲ್ಲಿ ಅಂಬರೀಶ್ ವಸತಿ ಸಚಿವರಾಗಿದ್ರು, ಅಂಬರೀಶ್ ಕನಸಿನ ಯೋಜನೆ (Dream Project) ಇದಾಗಿತ್ತು. ಅಂಬರೀಶ್ ಏನು ಹೇಳ್ತಿದ್ರು ಅದನ್ನೆ ಮಾಡ್ತಿದ್ರು. 7 ವರ್ಷವಾದ ಮೇಲೆ ಅಂಬರೀಶ್ ಅವರ ಕನಸು ನೆನಸಾಗಿದೆ. ಅವರ ಕೆಲಸ ಇವತ್ತು ಮಾತನಾಡುತ್ತಿದೆ. ಮಂಡ್ಯ ಜನರ ಸಮಸ್ಯೆಗಳ (Problem) ಬಗ್ಗೆ ಸಚಿವರ ಜೊತೆ ಚರ್ಚಿಸಿದ್ದೆ.
ಸೂಪರ್ ಸ್ಟಾರ್ ತರ ಅವರು ಕೆಲಸ ಮಾಡಿದ್ದಾರೆ
ಹಿರಿಯ ಅಣ್ಣನ ಸ್ಥಾನದಲ್ಲಿ ವಿ ಸೋಮಣ್ಣ ಇದ್ದಾರೆ. ಸೂಪರ್ ಸ್ಟಾರ್ ತರ ಅವರು ಕೆಲಸ ಮಾಡಿದ್ದಾರೆ. 'ರೆಬೆಲ್ ಸ್ಟಾರ್ ಅಂಬರೀಶ್ ಕನಸು ಇವತ್ತು ಸೂಪರ್ ಸ್ಟಾರ್ ಸೋಮಣ್ಣ ನೆರೆವೇರಿಸಿದ್ದಾರೆ.' ಸದ್ಯ ನಿಮ್ಮ ಸಮಸ್ಯೆ ಈಡೇರಿದೆ. ಕೆರೆಯಾಂಗಳದಲ್ಲೂ ಅದಷ್ಟು ಬೇಗಾ ನಿವೇಶನ ರೆಡಿಯಾಗಿ ಹಂಚಿಕೆಯಾಗುತ್ತೆ ಎಂದು ಸೋಮಣ್ಣ ಹೇಳಿದ್ದಾರೆ.
ನಾನು ಮಂಡ್ಯದ ಗಂಡು ಅಂಬರೀಶ್ ಅಭಿಮಾನಿ
ಹಾಲಹಳ್ಳಿ ಬಡಾವಣೆಗೆ ಅಂಬರೀಶ್ ಹೆಸರು ನಾಮಕರಣ ಮಾಡೋದಾಗಿ ಹೇಳಿದ ಸಚಿವ ವಿ.ಸೋಮಣ್ಣ, ಅಂಬರೀಶ್ ರನ್ನು ಹಾಡಿ ಹೊಗಳಿದ್ದಾರೆ. ಈ ದೇಶದಲ್ಲಿ ಅಜಾತಶತ್ರು ಅಂತ ಇದ್ರೆ ಅಂದ್ರೆ ಅದು ಅಂಬರೀಶ್, ನಾನು ಕೂಡ ಮಂಡ್ಯದ ಗಂಡು ಅಂಬರೀಶ್ ಅಭಿಮಾನಿ, ಅವರು ನಮ್ಮ ಜೊತೆ ಇಲ್ಲದಿದ್ದರೂ ನಮಗೆ ಅವರೇ ಆದರ್ಶ, ಅವರ ಮಾತನ್ನು ನಾವು ಎಲ್ಲರು ಇನ್ನು ನೆನಪು ಮಾಡ್ಕೊಳ್ತೇವೆ.. ಇವತ್ತು ಅವರ ಕನಸು ನನಸಾಗಿದೆ.
ಇದನ್ನೂ ಓದಿ: Kumaraswamy: ದೇವೇಗೌಡರು ಭೀಷ್ಮಾಚಾರ್ಯರಿದ್ದಂತೆ; ಯಾರೋ ಹೇಳಿದ ಮಾತ್ರಕ್ಕೆ ಸಾವು ಬರೋದಿಲ್ಲ
ಅವರ ಕನಸಿನ ಕೂಸನ್ನು ನನಸಾಗಿ ಮಾಡಿದ್ದೇವೆ. ನರೇಂದ್ರ ಮೋದಿ ಅವರು ಸೂರು ಇಲ್ಲದವರಿಗೆ ಸೂರು ನೀಡುವ ಕಾರ್ಯಕ್ರಮ ಶುರು ಮಾಡಿದ್ರು. 635 ಮನೆ ಕಟ್ಟಿದ್ದೇವೆ, ಚಿಕ್ಕ ಮಂಡ್ಯದಲ್ಲೂ ಕಾಮಗಾರಿ ಆದಷ್ಟು ಬೇಗಾ ಮುಗಿಯುತ್ತದೆ, ಮನೆ ಕಟ್ಟಿ ಸವಲತ್ತು ಕೊಡ್ತೇವೆ, ನಗರಸಭೆಯಲ್ಲಿ ಖಾತೆ ಮಾಡಿ ಅವರಿಗೆ ಬದುಕಲು ಅವಕಾಶ ಮಾಡಿಕೊಡಲಾಗಿದೆ.
ಬಡವರನ್ನು ಸಮಾನರಾಗಿ ಕಾಣಬೇಕು
ರಾಜ್ಯದಲ್ಲಿ 2300 ಕೊಳಚೆ ಪ್ರದೇಶ ಇದೆ. ಅಂಬರೀಶ್ ಅವರ ದೂರ ದೃಷ್ಟಿ ಕಾರ್ಯವನ್ನು ಸುಮಲತಾ ಅವರು ಮಾಡ್ತಿದ್ದಾರೆ. ಕರ್ನಾಟಕ ರಾಜೀವ್ ಗಾಂಧಿ ನಿರ್ಮಾಣ ದಲ್ಲಿ ಕೆಲಸ ಮಾಡ್ತಿದ್ದೇವೆ. 40 ಸಾವಿರ ಮನೆಗಳನ್ನ ರಾಜ್ಯದಲ್ಲಿ ಹಂಚಿಕೆ ಮಾಡಿದ್ದೇವೆ. ಇನ್ನೂ 40 ಸಾವಿರ ಮನೆಗಳನ್ನ ಮುಂದಿನ ದಿನಗಳಲ್ಲಿ ಹಂಚಿಕೆ ಮಾಡ್ತೆವೆ. ಬಡವರನ್ನು ಸಮಾನರಾಗಿ ಕಾಣಬೇಕು, ಬಡತನ ಅನ್ನುವುದು, ಶಾಶ್ವತ ಅಲ್ಲ, ಅವರನ್ನು ಸಹ ಮುಂದೆ ತರವ ಕೆಲಸ ಮಾಡಬೇಕು. ಸುಮಲತಾ ಸಮಸ್ಯೆ ಬಗೆ ಹರಿಸಿದ್ದಾರೆ.
ಇದನ್ನೂ ಓದಿ: Siddaramaiah: ನನ್ನನ್ನು ಕಂಡ್ರೆ ಬಿಜೆಪಿ ಅವ್ರಿಗೆ ಹೊಟ್ಟೆ ಕಿಚ್ಚು, ನನ್ನ ಬರ್ತ್ ಡೇ ಕಾರ್ಯಕ್ರಮಕ್ಕೆ ಅವ್ರನ್ನ ಕರೆಯೋದಿಲ್ಲ
ಬಡವರಿಗೆ ಕೊಡುವ ಸೌಲಭ್ಯದಲ್ಲಿ ಯಾವುದೇ ತೊಂದರೆ ನೀಡದೆ ಆದ್ಯತೆ ಕೊಡ್ತೇನೆ. ಈ ದೇಶದಲ್ಲಿ ಅಜಾತಶತ್ರು ಅಂದ್ರೆ ಅದು ಅಂಬರೀಶ್, ಈ ನಗರಕ್ಕೆ ಅಂಬರೀಶ್ ಹೆಸರನ್ನ ಇಡಲು ಸೂಚನೆ ಕಳಿಸಿಕೊಡ್ತೇವೆ. ನಾವು ಯಾರು ಇಲ್ಲಿ ಇರಲ್ಲ, ನಾವು ಹೋಗುವ ಸಂದರ್ಭದಲ್ಲಿ ನಮ್ಮ ಸೇವೆ ಬಿಟ್ಟು ಹೋಗ್ತೇವೆ. ನಮ್ಮ ಕೆಲಸದಿಂದ ನಮ್ಮ ಹೆಸರು ಉಳಿಯೋದು. ಮನೆಗಳನ್ನ ಹಸ್ತಾಂತರ ಮಾಡಲಾಗಿದೆ. 100ಕ್ಕೆ 100 ಮನೆಗಳನ್ನ ಹೆಣ್ಣು ಮಕ್ಕಳ ಹೆಸರಿಗೆ ಖಾತೆ ಆಗುತ್ತೆ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ