ಟಿವಿಯಲ್ಲಿ ಕಾಣಿಸಿಕೊಂಡು ತೋರಿಕೆಯ ಕೆಲಸ ಮಾಡುತ್ತಿಲ್ಲ; ಸುಮಲತಾ ಎಲ್ಲಿದ್ದೀಯಮ್ಮ ಎಂದವರಿಗೆ ಸಂಸದೆ ತಿರುಗೇಟು

40 ವರ್ಷದಲ್ಲಿ ನಾನು ಸಿನಿಮಾದಲ್ಲಿ ಸಾಕಷ್ಟು ಅಭಿನಯ ಮಾಡಿದ್ದೇನೆ. ರಾಜಕೀಯದಲ್ಲಿ ನಾನು ನಾಟಕವಾಡಲು ಬಂದಿಲ್ಲ ಎಂದು ಸುಮಲತಾ ಕಿಡಿಕಾರಿದರು.

Latha CG | news18-kannada
Updated:November 1, 2019, 6:59 PM IST
ಟಿವಿಯಲ್ಲಿ ಕಾಣಿಸಿಕೊಂಡು ತೋರಿಕೆಯ ಕೆಲಸ ಮಾಡುತ್ತಿಲ್ಲ; ಸುಮಲತಾ ಎಲ್ಲಿದ್ದೀಯಮ್ಮ ಎಂದವರಿಗೆ ಸಂಸದೆ ತಿರುಗೇಟು
ಸುಮಲತಾ ಅಂಬರೀಶ್
  • Share this:
ಮಂಡ್ಯ(ನ.01): ನಾನು ಮಂಡ್ಯದಲ್ಲೇ ಇದ್ದೇನೆ.  ಮಂಡ್ಯ ಜನಪರ ಕೆಲಸ ಮಾಡುತ್ತಿದ್ದೇನೆ ಎಂದು ಎಲ್ಲಿದ್ದೀಯಮ್ಮ ಸುಮಲತಾ ಅಂದವರಿಗೆ ಸಂಸದೆ ತಿರುಗೇಟು ನೀಡಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ  ಅವರು, ನಾನು ಖಂಡಿತಾ ರೈತರ ಪರವಾಗಿ ಇದ್ದೇನೆ.  ಎಲ್ಲಿದ್ದೀಯಪ್ಪ ಎನ್ನುವುದನ್ನು ಕ್ಯಾಚಿಂಗ್ ಮಾಡಲಾಗ್ತಿದೆ. ಎಲೆಕ್ಷನ್ ಟೈಂನಿಂದಲೂ ಕ್ಯಾಚಿಂಗ್ ಮಾಡಲಾಗ್ತಿದೆ. ಅದು ಯಾರಿಗೆ ಅನ್ವಯ ಆಗಬೇಕೋ ಅವರಿಗೆ ಮಾತ್ರ. ನಾನು ರೈತ ಮಹಿಳೆಯರೊಂದಿಗೆ ಇರುತ್ತೇನೆ. ಟಿವಿಯಲ್ಲಿ ಕಾಣಿಸಿ ತೋರಿಕೆಯ ಕೆಲಸ ಮಾಡಲ್ಲ. ಫೋಟೋಗೆ ನಿಂತುಕೊಂಡು ನಾಟಕ ಮಾಡಲ್ಲ ಎಂದು ತಿರುಗೇಟು ನೀಡಿದರು.

ಜಾರ್ಖಂಡ್​ ವಿಧಾನಸಭಾ ಚುನಾವಣೆ; ನ.30ರಿಂದ 5ಹಂತಗಳಲ್ಲಿ ಮತದಾನ, ಡಿ. 23ಕ್ಕೆ ಫಲಿತಾಂಶ

ಜನರ ಮಧ್ಯೆ ಹೋಗೋದು,  ಟಿವಿಯಲ್ಲಿ ಕಾಣಿಸಿಕೊಂಡು ನಿಮ್ಮ ಜೊತೆ ಇದ್ದೇನೆ ಅಂತಾ ಹೇಳಿಕೊಂಡರೆ ಅದು ತೋರಿಸಿಕೊಳ್ಳುವ ಕೆಲಸ ಆಗುತ್ತದೆ. ಹಿಂದೆಯಿಂದ ಕೆಲಸ ಮಾಡುವುದು ಒಂದು ಉತ್ತಮವಾದ ಕೆಲಸ ಆಗುತ್ತದೆ. ಫೋಟೋ ತೆಗೆಸಿಕೊಂಡು ನಾನು ನಿಮ್ಮ ಜೊತೆ ಇದ್ದೇನೆ ಅಂತಾ ಹೇಳಲ್ಲ. ನಾನು ಕೆಲಸ ಮಾಡುವ ಮೂಲಕ ನಿಮ್ಮ ಜೊತೆ ನಾನು ಇದ್ದೇನೆ ಎಂದು ಹೇಳುತ್ತಿದ್ದೇನೆ.

ನಮ್ಮ ರಸ್ತೆ ಏನಿದೆ? ನೀರು ಹೇಗಿದೆ? ಎನ್ನುವುದರ ಬಗ್ಗೆ ಚರ್ಚೆ ಮಾಡಬೇಕು. ಇದನ್ನು ಬಿಟ್ಟು ನಾನು ಫೋಟೋಗೆ ನಿಂತುಕೊಂಡು ನಾಟಕ ಮಾಡಲು ಬಂದಿಲ್ಲ. 40 ವರ್ಷದಲ್ಲಿ ನಾನು ಸಿನಿಮಾದಲ್ಲಿ ಸಾಕಷ್ಟು ಅಭಿನಯ ಮಾಡಿದ್ದೇನೆ. ರಾಜಕೀಯದಲ್ಲಿ ನಾನು ನಾಟಕವಾಡಲು ಬಂದಿಲ್ಲ ಎಂದು ಸುಮಲತಾ ಕಿಡಿಕಾರಿದರು.

ಮುಂದೊಂದು ದಿನ ನಾನು ಕೂಡ ಸಿಎಂ ಆಗುತ್ತೇನೆ; ಮಾಜಿ ಸಚಿವ ಮುರುಗೇಶ್ ನಿರಾಣಿ

 
First published:November 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ