ಮೃತ ರೈತರ ಮನೆಗೆ ಭೇಟಿ ಕಾರ್ಯಕ್ರಮ ಕೊನೇ ಕ್ಷಣದಲ್ಲಿ ರದ್ದು ಮಾಡಿದ ಸಂಸದೆ ಸುಮಲತಾ; ಪರಿಸ್ಥಿತಿ ಲಾಭ ಪಡೆದ ಶಾಸಕ ನಾರಾಯಣಗೌಡ

ಸಂಸದೆ ಸುಮಲತಾ ಇಂದು ನಾಗಮಂಗಲದ ಹೇತೋಗನಹಳ್ಳಿ ಹಾಗೂ ಕೆ.ಆರ್.ಪೇಟೆಯ ಆಘಲಯ ಹಾಗೂ ದೊಡ್ಡತರಹಳ್ಳಿ ಗ್ರಾಮಕ್ಕೆ ಬರ್ತಾರೆ ಮೃತ ರೈತರ ಕುಟುಂಬಕ್ಕೆ ಸಾಂತ್ವನ‌ ಮತ್ತು ಆರ್ಥಿಕ ನೆರವು ಸಿಗುವ ಭರವಸೆ ಇಟ್ಟುಕೊಂಡಿದ್ದರು. ಜೊತೆಗೆ ಸುಮಲತಾ ಗ್ರಾಮಕ್ಕೆ ಬರುತ್ತಾರೆಂದು ಸಮಸ್ಯೆ ಹೇಳಿಕೊಳ್ಳಲು ಕಾದು ಕುಳಿತ್ತಿದ್ರು. ಕಡೆಗೆ ಸುಮಲತಾ ಬರುವುದಿಲ್ಲವೆಂದು ತಿಳಿದು ನಿರಾಶೆಗೊಂಡರು.

HR Ramesh | news18
Updated:June 24, 2019, 12:08 PM IST
ಮೃತ ರೈತರ ಮನೆಗೆ ಭೇಟಿ ಕಾರ್ಯಕ್ರಮ ಕೊನೇ ಕ್ಷಣದಲ್ಲಿ ರದ್ದು ಮಾಡಿದ ಸಂಸದೆ ಸುಮಲತಾ; ಪರಿಸ್ಥಿತಿ ಲಾಭ ಪಡೆದ ಶಾಸಕ ನಾರಾಯಣಗೌಡ
ಸಂಸದೆ ಸುಮಲತಾ ಅಂಬರೀಶ್
  • News18
  • Last Updated: June 24, 2019, 12:08 PM IST
  • Share this:
ಮಂಡ್ಯ: ಜಿಲ್ಲೆಯಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಮನೆಗಳಿಗೆ ಇಂದು ಸಂಸದೆ ಸುಮಲತಾ ಅಂಬರೀಷ್​ ಅವರು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವ ಕಾರ್ಯಕ್ರಮ ಆಯೋಜಿಸಿದ್ದರು. ಆದರೆ, ಕಡೇ ಕ್ಷಣದಲ್ಲಿ ಈ ಕಾರ್ಯಕ್ರಮ ರದ್ದಾಯಿತು. ಸುಮಲತಾ ಅವರ ಅನಾರೋಗ್ಯದ ಕಾರಣದಿಂದ ಪ್ರವಾಸ ರದ್ದುಪಡಿಸಿದರು. ಸಾಂತ್ವನದ ನಿರೀಕ್ಷೆಯಲ್ಲಿದ್ದ ಮೃತ ರೈತ ಕುಟುಂಬಗಳು ನಿರಾಶೆಗೊಂಡರೆ, ಸುಮಲತಾ ಗೈರಿಗೆ ಜಿಲ್ಲೆಯ ದಳಪತಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದೇ ವೇಳೆ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಮೃತ ರೈತರ ಮನೆಗೆ ಭೇಟಿ ನೀಡಿ, ವೈಯಕ್ತಿಕ ಪರಿಹಾರ ವಿತರಣೆ ಮಾಡಿದರು.

ಕಳೆದ ಒಂದು ವಾರದಲ್ಲಿ‌ ಮಂಡ್ಯ ಜಿಲ್ಲೆಯ ವಿವಿಧೆಡೆ ನಾಲ್ವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಿಲ್ಲೆಯ ಆಘಲಯದ ರೈತ ಸುರೇಶ್ ಸಾಯುವ ಮುನ್ನಾ ಸಿ.ಎಂ. ತನ್ನ ಸಾವಿಗೆ ಬರುವಂತೆ ಹಾಗೂ ತನ್ನ ಹೋಬಳಿಯ ಕೆರೆಗಳನ್ನು ತುಂಬಿಸುವಂತೆ ಮನವಿ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವ ಮುನ್ನ ರೈತ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಆನಂತರ ಸ್ವತಃ ಸಿಎಂ ಎಚ್​ಡಿಕೆ ಅವರು ಆಘಲಯಕ್ಕೆ ಬಂದು ಮೃತ ರೈತ ಕುಟುಂಬಕ್ಕೆ ಸಾಂತ್ವನ‌ ಹೇಳಿ, 5 ಲಕ್ಷ ಪರಿಹಾರ ವಿತರಿಸಿದ್ರು.

ಇದಾದ ಬಳಿಕ ಮದ್ದೂರಿನ ಬಿದರಳ್ಳಿ, ನಾಗಮಂಗಲದ ಹೇತೋಗನಹಳ್ಳಿ ಹಾಗೂ ಕೆ.ಆರ್.ಪೇಟೆಯ ದೊಡ್ಡತರಹಳ್ಳಿ ಗ್ರಾಮಗಳಲ್ಲಿ ರೈತರು ಒಂದೇ ವಾರದಲ್ಲಿ ಅಂತರದಲ್ಲಿ ಸರಣಿ ಆತ್ಮಹತ್ಯೆ ಮಾಡಿಕೊಂಡರು. ರೈತರಿಗೆ ಭರವಸೆ ತುಂಬಲು ಜನ ಪ್ರತಿನಿಧಿಗಳು ಒಬ್ಬರ ಮೇಲೊಬ್ಬರು ಮೃತ ರೈತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲು‌ ಮುಂದಾಗಿದರು. ಈ ನಡುವೆ ನೂತನ ಸಂಸದೆ ಸುಮಲತಾ ಕೂಡ ಇಂದು ಮಂಡ್ಯ ಕ್ಷೇತ್ರದಲ್ಲಿನ ಮೃತ ರೈತರ ಮನೆಗೆ ಭೇಟಿ‌ ನೀಡುವ ಕಾರ್ಯಕ್ರಮ ನಿಗದಿಪಡಿಸಿದ್ದರು. ಆದರೆ ಬೆಳಿಗ್ಗೆ ಇದ್ದಕ್ಕಿದ್ದಂತೆ ಅನಾರೋಗ್ಯದ ಕಾರಣದಿಂದ ಕಾರ್ಯಕ್ರಮ ರದ್ದುಪಡಿಸಿದರು.

ಇದನ್ನು ಓದಿ: ಕಾವೇರಿ ವಿಚಾರದಲ್ಲಿ ಉಲ್ಟಾ ಹೊಡೆದರಾ ಸಂಸದೆ ಸುಮಲತಾ?; ಅನುಮಾನಕ್ಕೆ ಕಾರಣವಾಗಿದೆ ಅವರ ಈ ಹೇಳಿಕೆ

ಸಂಸದೆ ಸುಮಲತಾ ಇಂದು ನಾಗಮಂಗಲದ ಹೇತೋಗನಹಳ್ಳಿ ಹಾಗೂ ಕೆ.ಆರ್.ಪೇಟೆಯ ಆಘಲಯ ಹಾಗೂ ದೊಡ್ಡತರಹಳ್ಳಿ ಗ್ರಾಮಕ್ಕೆ ಬರ್ತಾರೆ ಮೃತ ರೈತರ ಕುಟುಂಬಕ್ಕೆ ಸಾಂತ್ವನ‌ ಮತ್ತು ಆರ್ಥಿಕ ನೆರವು ಸಿಗುವ ಭರವಸೆ ಇಟ್ಟುಕೊಂಡಿದ್ದರು. ಜೊತೆಗೆ ಸುಮಲತಾ ಗ್ರಾಮಕ್ಕೆ ಬರುತ್ತಾರೆಂದು ಸಮಸ್ಯೆ ಹೇಳಿಕೊಳ್ಳಲು ಕಾದು ಕುಳಿತ್ತಿದ್ರು. ಕಡೆಗೆ ಸುಮಲತಾ ಬರುವುದಿಲ್ಲವೆಂದು ತಿಳಿದು ನಿರಾಶೆಗೊಂಡರು.

ಜಿಲ್ಲೆಯ ಕೊನೆ ಭಾಗದಲ್ಲಿರುವ ಕೆ.ಆರ್.ಪೇಟೆಯ ದೊಡ್ಡತರಹಳ್ಳಿ ಗ್ರಾಮಕ್ಕೆ ಸುಮಲತಾ ಬರುವುದಿಲ್ಲ ಎಂಬ ಸುದ್ದಿ ತಿಳಿದ ತಕ್ಷಣ ತನ್ನ ಕ್ಷೇತ್ರ ವ್ಯಾಪ್ತಿಯ ದೊಡ್ಡತರಹಳ್ಳಿಯ ಮೃತ ರೈತ ಮಂಜು ಶೆಟ್ಟಿ ಮನೆಗೆ ಕೆ.ಆರ್.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ಭೇಟಿ ನೀಡಿ ಮೃತ ರೈತನ‌ ಕುಟುಂಬಕ್ಕೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ 50 ಸಾವಿರ ಪರಿಹಾರ ನೀಡಿದ್ರು. ಸರ್ಕಾರದಿಂದಲೂ ಕೂಡ ನೆರವು ಕೊಡಿಸುವ ಭರವಸೆ ನೀಡಿದರು. ಇನ್ನು ಸುಮಲತಾ ತಮ್ಮ‌ ಕ್ಷೇತ್ರಕ್ಕೆ‌ ಬಾರದ ಬಗ್ಗೆ ಅಸಮಾಧಾನ ಹೊರಹಾಕಿದರು.
  • ರಾಘವೇಂದ್ರ ಗಂಜಾಮ್


First published:June 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ