ಮಂಡ್ಯ: ಬಿಜೆಪಿಗೆ ಬೆಂಬಲಿಸುವುದಾಗಿ ಮಂಡ್ಯ ಸಂಸದೆ ಸುಮಲತಾ (Sumalatha) ಘೋಷಣೆ ಮಾಡಿದ್ದಾರೆ. ಇಂದು ಮಂಡ್ಯದಲ್ಲಿ (Mandya) ಮಾತಾಡಿದ ಸುಮಲತಾ, ತಮ್ಮ ಆಪ್ತರ ಸಮ್ಮುಖದಲ್ಲೇ ಬಿಜೆಪಿ (BJP) ಬೆಂಬಲಿಸೋದಾಗಿ ಘೋಷಿಸಿದ್ದಾರೆ. ಇದು ನನ್ನ ಭವಿಷ್ಯ ಅಲ್ಲ, ಮಂಡ್ಯ ಜಿಲ್ಲೆಯ ಭವಿಷ್ಯ. ಮೋದಿ ನಾಯಕತ್ವದಲ್ಲಿ ಅಭಿವೃದ್ಧಿ ಆಗುತ್ತೆ. ಮೋದಿ ಸರ್ಕಾರದಿಂದಾಗಿ (PM Modi) ದೇಶ ಪ್ರಗತಿಯ ಪಥದಲ್ಲಿ ಸಾಗ್ತಿದೆ. ಅವರ ಅಭಿವೃದ್ಧಿ ಕೆಲಸಗಳಿಗಾಗಿ ನನ್ನ ಬೆಂಬಲ ಇದೆ. ಮಂಡ್ಯ ಸ್ವಚ್ಛಗೊಳಿಸುವ ಸಮಯ ಈಗ ಬಂದಿದೆ ಎಂದು ಹೇಳಿದ್ದರು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಬೆನ್ನಲ್ಲೇ ಸಖತ್ ಆಕ್ಟೀವ್ ಆಗಿರುವ ಸುಮಲತಾ ಅವರು, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ಮಾರ್ಚ್ 12ರಂದು ನಡೆಯಲಿರುವ ಬೃಹತ್ ಸಮಾವೇಶದ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದ್ದಾರೆ.
ಸಮಾವೇಶದ ಸ್ಥಳಕ್ಕೆ ಆಗಮಿಸಿ ಪೂರ್ವ ಭಾವಿ ತಯಾರಿ ವೀಕ್ಷಿಸಿದ ಸಂಸದೆ ಸುಮಲತಾ ಅವರಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ, ಸಚಿವ ಗೋಪಾಲಯ್ಯ ಕೂಡ ಸಾಥ್ ನೀಡಿದ್ದರು. ಸಮಾವೇಶದ ಸ್ಥಳ ವೀಕ್ಷಣೆ ಬಳಿಕ ಪ್ರತಿಕ್ರಿಯೆ ನೀಡಿದ ಸಂಸದೆ ಸುಮಲತಾ ಅವರು, ಮಂಡ್ಯದ ಗೆಜ್ಜಲಗೆರೆಗೆ ಪ್ರಧಾನಿಯವರ ಆಗಮನ ಸಂತಸ ತಂದಿದೆ. ಪ್ರಧಾನಿ ಮೋದಿ ಅಂದರೆ ಅಭಿವೃದ್ದಿಗೆ ಮತ್ತೊಂದು ಹೆಸರು. 41 ವರ್ಷಗಳ ಬಳಿಕ ಓರ್ವ ಪ್ರಧಾನಿ ಮಂಡ್ಯಕ್ಕೆ ಆಗಮಿಸುತ್ತಿರುವುದು ಸಂತಸ ತಂದಿದೆ.
ಇದಕ್ಕೂ ಮುನ್ನ ಬಿಜೆಪಿಗೆ ಬೆಂಬಲ ನೀಡಿರುವ ಕುರಿತಂತೆ ಮಾತನಾಡಿದ್ದ ಸುಮಲತಾ ಅವರು, ನನ್ನ ಟಾರ್ಗೆಟ್ ಮಾಡಿ ಕಷ್ಟ ಕೊಟ್ಟಿದ್ದರು ಎಂದು ಆರೋಪಿಸಿದ್ದರು. ಕೊರೊನಾ ಬಂದಾಗ ಸಂಸದರ ನಿಧಿ ಕೊಡದೆ ನಿಲ್ಲಿಸಿದ್ದರು. 2 ವರ್ಷ ನನಗೆ ಸಂಸದರ ನಿಧಿ ಕೊಟ್ಟಿರಲಿಲ್ಲ.
ನನ್ನ ದುಡ್ಡಲ್ಲೇ ನಾನು ಕೊರೊನಾ ಕಟ್ಟಿಹಾಕುವ ಕೆಲಸ ಮಾಡಿದೆ. ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾತಾಡಿದರು. ಹೆಣ್ಣು ಎನ್ನುವ ಕನಿಷ್ಠ ಗೌರವವನ್ನೂ ನನಗೆ ಕೊಡಲಿಲ್ಲ. ಅಕ್ರಮ ಗಣಿಗಾರಿಕೆ ನಿಲ್ಲಿಸುವ ಗಟ್ಟಿ ನಿರ್ಧಾರ ಮಾಡಿದೆ. ಯಾರೇ ಕೇಳಿದರೂ ನಾನು ಉತ್ತರ ಕೊಡುತ್ತೇನೆ ಎಂದು ಮಂಡ್ಯದ ನಾಯಕರ ಬಗ್ಗೆ ಸುಮಲತಾ ಬೇಸರ ವ್ಯಕ್ತಪಡಿಸಿದ್ದರು.
ಚುನಾವಣೆ ಹೊಸ್ತಿಲಲ್ಲಿ ಹೊಸ ಬಾಂಬ್ ಸಿಡಿಸಿದ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ
ಇನ್ನು, ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ ನೀಡಿದ ಕುರಿತಂತೆ ಮಾತನಾಡಿರುವ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಸಿಪಿ ಉಮೇಶ್ ಅವರು, ಇದು ಕೇವಲ ಸ್ಯಾಂಪಲ್, ಮುಂಬರುವ ದಿನಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಹಲವು ನಾಯಕರು ಬಿಜೆಪಿಗೆ ಬರಲಿದ್ದಾರೆ.
ಇದನ್ನೂ ಓದಿ: Sumalatha Ambareesh: ಮೋದಿ ನೇತೃತ್ವದ ಬಿಜೆಪಿಗೆ ನನ್ನ ಸಂಪೂರ್ಣ ಬೆಂಬಲ, ಅಧಿಕೃತವಾಗಿ ಘೋಷಿಸಿದ ಅಂಬಿ ಪತ್ನಿ!
ಚುನಾವಣಾ ದಿನಾಂಕ ಘೋಷಣೆ ಬಳಿಕ ಹಾಲಿ ಹಾಗೂ ಮಾಜಿ ಶಾಸಕರು ಕೂಡ ಬಿಜೆಪಿ ಸೇರ್ಪಡೆಯಾಗುತ್ತಾರೆ. ಈಗಾಗಲೇ ಬಿಜೆಪಿ ನಾಯಕರ ಜೊತೆ ಸಂಪರ್ಕಲ್ಲಿದ್ದಾರೆ. ಈ ಬಾರಿ ಬಿಜೆಪಿಯಿಂದಲೇ ಸಚಿವ ನಾರಾಯಣಗೌಡರು ಸ್ಪರ್ಧೆ ನಡೆಸಲಿದ್ದಾರೆ. ಸುಮಲತಾರ ಆಗಮನ ಪಕ್ಷಕ್ಕೆ ಬಲಬಂದಿದೆ, ಮುಂದಿನ ಚುನಾವಣೆಯಲ್ಲಿ ಏಳು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ