• Home
  • »
  • News
  • »
  • state
  • »
  • ಮೀಸಲಾತಿ ಕೇಳುವವರಿಗೆ ನಾಚಿಗೆ ಆಗಬೇಕು; ಸ್ವ ಪಕ್ಷೀಯರ ವಿರುದ್ಧವೇ ಗುಡುಗಿದ ಸಂಸದ ಶ್ರೀನಿವಾಸ್​ ಪ್ರಸಾದ್​

ಮೀಸಲಾತಿ ಕೇಳುವವರಿಗೆ ನಾಚಿಗೆ ಆಗಬೇಕು; ಸ್ವ ಪಕ್ಷೀಯರ ವಿರುದ್ಧವೇ ಗುಡುಗಿದ ಸಂಸದ ಶ್ರೀನಿವಾಸ್​ ಪ್ರಸಾದ್​

ಶ್ರೀನಿವಾಸ್ ಪ್ರಸಾದ್

ಶ್ರೀನಿವಾಸ್ ಪ್ರಸಾದ್

50% ಗಿಂತ ಜಾಸ್ತಿ ಮೀಸಲಾತಿ ಇರಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಇನ್ನು ಮೀಸಲಾತಿ ಕೇಳಿದರೆ, ಉಳಿದವರಿಗೆ ಏನು ಮಾಡುವುದು.  ಇದನ್ನು ಮುಂದುವರೆಸದಂತೆ ಎಲ್ಲದಕ್ಕೂ ಸ್ಪಷ್ಟನೆ ನೀಡಿ ಇಲ್ಲಿಗೆ ನಿಲ್ಲಿಸಬೇಕು

  • Share this:

ಮೈಸೂರು (ಮಾ. 2): ರಾಜ್ಯದಲ್ಲಿ ಮೀಸಲಾತಿ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಡಳಿತ ಪಕ್ಷ ನಾಯಕರೇ ಈ ಮೀಸಲಾತಿಯ ಹೋರಾಟದಲ್ಲಿ ಭಾಗಿಯಾಗುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಮೀಸಲಾತಿ ವಿರುದ್ಧ ಮಾತನಾಡಿರುವ ಸಂಸದ ಶ್ರೀನಿವಾಸ್​ ಪ್ರಸಾದ್​ ಸ್ವಪಕ್ಷೀಯರ ವಿರುದ್ಧವೇ ಹರಿಹಾಯ್ದು ಗಮನ ಸೆಳೆದಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮೀಸಲಾತಿ ಕೇಳಲು ನಿಮಗೆ ನಾಚಿಕೆಯಾಗೊಲ್ವಾ ಎಂದು ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಕುರುಬರು, ಪಂಚಮಸಾಲಿ ಸಮಯದಾಯದ ಹೋರಾಟಗಾರರಿಗೆ ಟಾಂಗ್ ನೀಡಿದರು. 10 ಕೋಟಿ ಕೊಟ್ಟು ಹೆಲಿಕ್ಯಾಪ್ಟರ್ ತಗೊಳುವವರು ಮೀಸಲಾತಿ ಕೇಳುತ್ತಿದ್ದೀರಾ. ಈ ರಾಜ್ಯಕ್ಕೆ ಸಿಎಂ ಆಗುತ್ತಿರಾ ಕುರುಬರು ಎಂದು ಜನಾಂಗಕ್ಕೆ ಮೀಸಲಾತಿ ಕೊಡಬೇಕಾ. ಮೈಮೇಲೆ ಬಟ್ಟೆ ಇಲ್ಲದವರು ಕೇಳಲಿ, ಆನೆ ಮೇಯಿಸಿಕೊಂಡು ಕಾಡಲ್ಲಿ ಇರೋರು ಕೇಳಿದರೆ ಅದನ್ನ ಒಪ್ಪೋಣ. ಅದು ಬಿಟ್ಟು ದೊಡ್ಡ ದೊಡ್ಡ ಉದ್ಯಮಿಗಳು, ಉಪ ಮುಖ್ಯಮಂತ್ರಿಗಳಾಗಿದ್ದವರು, ರಿಯಲ್ ಎಸ್ಟೇಟ್ ಮಾಡುವವರಿಗೆ ಮೀಸಲಾತಿ ಕೊಡಬೇಕಾ ಎಂದು ಪ್ರಶ್ನಿಸಿದ್ದಾರೆ. 


ಆ ಎಂಟಿಬಿ ನಾಗರಾಜ 10 ಕೋಟಿ ಕೊಟ್ಟು ಹೆಲಿಕ್ಯಾಪ್ಟರ್ ತಗೊಳುವುದಕ್ಕೆ ಆಗುತ್ತೆ, ಇಂತವರೆಲ್ಲಾ ಮೀಸಲಾತಿ ಕೇಳುತ್ತಾರೆ ಎಂದು  ಅಸಮಾಧಾನ ಹೊರಹಾಕಿದರು.


ಅದು ಯಾರೋ 2ಎ ಗೆ ಸೇರಿಸಿ ಎಂದು ಬೇರೆ ಪ್ರತಿಭಟನೆ ಮಾಡುತ್ತಿದ್ದಾರೆ. ಕುಳಿತಿರುವ ಜಾಗದಲ್ಲಿ ಯಾವುದೇ ಜಾತಿಯನ್ನು 2ಎಗೆ ಸೇರಿಸಲು ಆಗುತ್ತಾ? ಇವಎಲ್ಲದರ ಬಗ್ಗೆ ಸರ್ಕಾರ ಸ್ಪಷ್ಟವಾದ ಹೇಳಿಕೆ ಕೊಡಬೇಕು, ಸಿಎಂ ಹಾಗೂ ಕಾನೂನು ಸಚಿವರು ಇದನ್ನು ಸ್ಪಷ್ಟಪಡಿಸಬೇಕು. ಒಂದೇ ಹೇಳಿಕೆಯಲ್ಲಿ ಎಲ್ಲವನ್ನು ಮುಗಿಸಬೇಕು‌ ನಮ್ಮ ಇತಿ ಮಿತಿ ಏನಿದೆ ಅಂತ ಹೇಳಿಕೆ ಕೊಟ್ಟ ಮುಗಿಸಬೇಕು ಎಂದು ಒತ್ತಾಯಿಸಿದರು.


ಯಾರನ್ನ 2ಎ ಸೇರಿಸುತ್ತಿದ್ದೀರಾ, ಹಾಗಾದರೆ 2ಎ ನಲ್ಲಿ ಇರುವವರು ಎಲ್ಲಿಗೆ ಹೋಗಬೇಕು 50% ಗಿಂತ ಜಾಸ್ತಿ ಮೀಸಲಾತಿ ಇರಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಇನ್ನು ಮೀಸಲಾತಿ ಕೇಳಿದರೆ, ಉಳಿದವರಿಗೆ ಏನು ಮಾಡುವುದು.  ಇದನ್ನು ಮುಂದುವರೆಸದಂತೆ ಎಲ್ಲದಕ್ಕೂ ಸ್ಪಷ್ಟನೆ ನೀಡಿ ಇಲ್ಲಿಗೆ ನಿಲ್ಲಿಸಬೇಕು ಎಂದು ಆಕ್ರೋಶ ಹೊರಹಾಕಿದರು.


ಇದನ್ನು ಓದಿ: Congress protest: ಎಲ್​ಪಿಜಿ ಸಿಲಿಂಡರ್​ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ಪ್ರತಿಭಟನೆ; ರಸ್ತೆಯಲ್ಲಿಯೇ ಇಡ್ಲಿ ಸವಿದ ಡಿಕೆಶಿ


ಇದೇ ವೇಳೆ ಈಶ್ವರಪ್ಪ, ವಿಶ್ವನಾಥ್ ವಿರುದ್ಧ ಹರಿಹಾಯ್ದ ಅವರು,  ಯಾವುದೋ ವೇದಿಕೆ ಮೇಲೆ ನಿಂತುಕೊಂಡು ಜನ ಸೇರಿಸಿ ಮೀಸಲಾತಿ ಕೇಳುವುದಕ್ಕೆ  ಆಗುತ್ತಾ?  ಆ ವಿಶ್ವನಾಥ್ ದೇಶಕ್ಕೆಲ್ಲ ಮಾತನಾಡುತ್ತಾನೆ. ಅವನಿಗೆ ಗೊತ್ತಾಗೊಲ್ವಾ. ಬೀದಿಯಲ್ಲಿ ನಿಂತು ಮೀಸಲಾತಿ ಮಾತನಾಡುವುದಲ್ಲ ಎಂದು  ಸ್ವಪಕ್ಷೀಯರ ವಿರುದ್ದವೇ ಗುಡುಗಿದರು.


ಮೀಸಲಾತಿಗೆ ಬಗ್ಗೆ  ಮಾತನಾಡುವಾಗ ಸರಿಯಾಗಿ ಉತ್ತರ ಕೊಡಬೇಕು ಸುದೀರ್ಘವಾಗಿ ರಾಜಕಾರಣ ಮಾಡಿರುವವನು ನಾನು. ಮೀಸಲಾತಿ ಪ್ರಶ್ನೆ ಕೇಂದ್ರದ ಮುಂದೆ ಇರುತ್ತದೆ , ಎಸ್‌ಟಿಗೆ ಕೊಡಬೇಕೋ ಬೇಡ್ವೋ ಎನ್ನುವುದನ್ನು ಕೇಂದ್ರ ತೀರ್ಮಾನ ಮಾಡುತ್ತದೆ. ‌ ರಾಜ್ಯ ಸರ್ಕಾರ ಶಿಫಾರಸ್ಸು ಮಾತ್ರ ಮಾಡಬೇಕು. ತಜ್ಞರ ಸಮಿತಿ ನೇಮಕ ಮಾಡಬೇಕು. ಇದನ್ನು ಮಾಡಿದವರು ಹಾವಲೂರು ಒಬ್ಬರೇ. ನಾಯಕ ಸಮಾಜಕ್ಕೆ ಎಸ್.ಟಿ.ಸೇರಿಸಲು ಕಾನೂನು ರೀತಿಯಲ್ಲಿ ಹೋರಾಟ ಮಾಡಿದರು. ಆದರೆ ಇವರುಗಳು ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿದರು.

Published by:Seema R
First published: