ದಲಿತರ ಪರ ದ್ವನಿ ಎತ್ತಿದರೆ ನನ್ನ ವಿರುದ್ಧವೇ ಮೊಕದ್ದಮೆ ದಾಖಲು ಮಾಡ್ತೀರ?; ಕೇರಳ ಸರ್ಕಾರದ ವಿರುದ್ಧ ಶೋಭಾ ಕಿಡಿ

ಸಂಸದರಾದವರು ಜವಾಬ್ದಾರಿಯಿಂದ ನಡೆದುಕೊಳ್ಳುವುದನ್ನು ಬಿಟ್ಟು ಸುಳ್ಳು ಮಾಹಿತಿಯನ್ನು ತಮ್ಮ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಕೇರಳ ಸರ್ಕಾರ ಆರೋಪಿಸಿde. ಅಲ್ಲದೆ, ಪ್ರಕರಣದ ಸಂಬಂಧ ಕೇರಳ ಪೊಲೀಸರು ಸಂಸದೆ ಶೊಭಾ ಕರಂದ್ಲಾಜೆ ವಿರುದ್ಧ ಕಲಂ 153 (ಎ), 120, ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

MAshok Kumar | news18-kannada
Updated:January 24, 2020, 3:09 PM IST
ದಲಿತರ ಪರ ದ್ವನಿ ಎತ್ತಿದರೆ ನನ್ನ ವಿರುದ್ಧವೇ ಮೊಕದ್ದಮೆ ದಾಖಲು ಮಾಡ್ತೀರ?; ಕೇರಳ ಸರ್ಕಾರದ ವಿರುದ್ಧ ಶೋಭಾ ಕಿಡಿ
ಶೋಭಾ ಕರಂದ್ಲಾಜೆ.
  • Share this:
ಬೆಂಗಳೂರು (ಜನವರಿ 24); ಕೇರಳದಲ್ಲಿ ಜನ ಕೇಂದ್ರ ಸರ್ಕಾರದ ಪರ ದ್ವನಿ ಎತ್ತಿದರೆ ಅಂತವರ ವಿರುದ್ಧ ದೇವರ ಸ್ವಂತ ನಾಡಿನಲ್ಲಿ ಶೋಷಣೆ ಮಾಡಲಾಗುತ್ತಿದೆ. ಆದರೆ, ಈ ಕುರಿತು ನಾವು ದ್ವನಿ ಎತ್ತಿದರೆ ನಮ್ಮ ಮೇಲೆಯೇ ಮೊಕದ್ದಮೆ ದಾಖಲು ಮಾಡಲಾಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವಿಟರ್​ನಲ್ಲಿ ಕಿಡಿಕಾರಿದ್ದಾರೆ.

ಕಳೆದ ಜನವರಿ 22 ರಂದು ತಮ್ಮ ಖಾಸಗಿ ಟ್ವಿಟರ್ ಖಾತೆಯಲ್ಲಿ ಕೇರಳ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಶೋಭಾ ಕರಂದ್ಲಾಜೆ “ಹಿಂದೂಗಳು ಅಧಿಕ ಸಂಖ್ಯೆಯಲ್ಲಿರುವ ಕೇರಳದ ಮಲಪ್ಪುರಂ ಜಿಲ್ಲೆಯ ಕಟ್ಟಿಪುರಂ ಎಂಬ ಗ್ರಾಮದ ಜನ ಕೇಂದ್ರ ಸರ್ಕಾರದ ಸಿಎಎ ಕಾಯ್ದೆಯ ಪರ ಚಳುವಳಿಯಲ್ಲಿ ತೊಡಗಿದ್ದರು. ಆದರೆ, ಇವರು ಈ ಚಳುವಳಿಯಲ್ಲಿ ಕೇಂದ್ರ ಸರ್ಕಾರದ ಪರ ಘೋಷಣೆ ಕೂಗಿದ ಮಾತ್ರಕ್ಕೆ ಈ ಗ್ರಾಮಕ್ಕೆ ಪಂಚಾಯಿತಿ ಅಧಿಕಾರಿಗಳು ಕುಡಿಯುವ ನೀರನ್ನು ಸ್ಥಗಿತಗೊಳಿಸಿದ್ದಾರೆ. ಈ ಗ್ರಾಮದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ನಿರಾಕರಿಸಲಾಗಿದೆ” ಎಂದು ಕಿಡಿಕಾರಿದ್ದರು.
ಆದರೆ, ಇದು ಸುಳ್ಳು ಸುದ್ದಿ. ಸಂಸದರಾದವರು ಜವಾಬ್ದಾರಿಯಿಂದ ನಡೆದುಕೊಳ್ಳುವುದನ್ನು ಬಿಟ್ಟು ಸುಳ್ಳು ಮಾಹಿತಿಯನ್ನು ತಮ್ಮ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಕೇರಳ ಸರ್ಕಾರ ಆರೋಪಿಸಿದೆ. ಅಲ್ಲದೆ, ಪ್ರಕರಣದ ಸಂಬಂಧ ಕೇರಳ ಪೊಲೀಸರು ಸಂಸದೆ ಶೊಭಾ ಕರಂದ್ಲಾಜೆ ವಿರುದ್ಧ ಕಲಂ 153 (ಎ), 120, ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ತನ್ನ ವಿರುದ್ಧ ಪ್ರಕರಣ ದಾಖಲಾದ ಬೆನ್ನಿಗೆ ಈ ಕುರಿತು ಮತ್ತೊಂದು ಟ್ವಿಟ್ ಮೂಲಕ ಖಾರವಾಗಿ ಉತ್ತರಿಸಿರುವ ಶೋಭಾ, “ನಿಮ್ಮ ರಾಜ್ಯದಲ್ಲಿ ದಲಿತ ಜನರ ವಿರುದ್ಧ ನಡೆಯುತ್ತಿರುವ ತಾರತಮ್ಯವನ್ನು ಸರಿಪಡಿಸುವ ಬದಲು, ಆ ಕುರಿತು ಪ್ರಶ್ನೆ ಮಾಡಿದ ನನ್ನ ವಿರುದ್ಧವೇ ಪ್ರಕರಣ ದಾಖಲಿಸುತ್ತೀರ! ಸರಿಯಾಗಿ ಕಾರ್ಯನಿರ್ವಹಿಸದ ಪಕ್ಷಪಾತಿ ಎಡ ಸರ್ಕಾರದ ಈ ಒತ್ತಡ ತಂತ್ರಗಳ ವಿರುದ್ಧ ಇಡೀ ಸಮಾಜ ಒಂದಾಗಲು ಹೆಚ್ಚಿನ ಸಮಯ ಬೇಕಾಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶೋಭಾ ಕರಂದ್ಲಾಜೆ ಅವರ ಟ್ವಿಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಪರ ವಿರೋಧ ಚರ್ಚೆಗಳು ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಶೋಭ ಪರ ವಹಿಸಿದರೆ, ಮತ್ತೆ ಕೆಲವರು ಶೋಭಾ ಕರಂದ್ಲಾಜೆ ವಿರುದ್ಧ ಕಿಡಿ ಕಾರುತ್ತಿದ್ದಾರೆ.

ಇದನ್ನೂ ಓದಿ : ಸಾಮೂಹಿಕ ನಕಲಿನಿಂದ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಹಾಸನಕ್ಕೆ ಮೊದಲ ಸ್ಥಾನ; ರಹಸ್ಯ ಬಿಚ್ಚಿಟ್ಟ ನೊಂದ ಶಿಕ್ಷಕ
First published: January 24, 2020, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading