Kolar: ಮೈಕ್ ಎಕೋ ಎಫೆಕ್ಟ್, ಆದರ್ಶ ಗ್ರಾಮ ಪ್ರಗತಿ ಪರಿಶೀಲನೆ ಸಭೆಯನ್ನೆ ಮುಂದೂಡಿದ ಸಂಸದರು

ಇದೇ ತಿಂಗಳ 23 ರಂದು ಮತ್ತೊಮ್ಮೆ ಪ್ರಗತಿ ಪರಿಶೀಲನೆ ಸಭೆಯನ್ನ ನಡೆಸೋದಾಗಿ ಹೇಳಿ, ತಡವಾಗಿ ಆಗಮಿಸಿದ್ದಕ್ಕೆ ಎಲ್ಲಾ ಅಧಿಕಾರಿಗಳ ಕ್ಷಮೆ ಯಾಚಿಸಿದರು.

ಎಸ್ ಮುನಿಸ್ವಾಮಿ

ಎಸ್ ಮುನಿಸ್ವಾಮಿ

  • Share this:
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸಂಸದರ ಆದರ್ಶ ಗ್ರಾಮ (Aadarsha Gram) ಯೋಜನೆಯಡಿ ಕೋಲಾರ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ (MP S Muniswamy), ಜಿಲ್ಲೆಯ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ (Kyasamballi, KGF) ಗ್ರಾಮ ಪಂಚಾಯ್ತಿಯನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಸಮಸ್ಯೆಗಳ ಕುರಿತು ತ್ವರಿತವಾಗಿ ಸ್ಪಂದಿಸುವ ಸಂಸದ ಮುನಿಸ್ವಾಮಿ, ಅದ್ಯಾಕೋ ಆದರ್ಶ ಗ್ರಾಮದಲ್ಲಿ ಆಯ್ಕೆ ಮಾಡಿಕೊಂಡಿರುವ ಕ್ಯಾಸಂಬಳ್ಳಿ ಗ್ರಾಮವನ್ನ ನಿರ್ಲಕ್ಷ್ಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಯಾಕೆಂದರೆ ರಾಜ್ಯಕ್ಕೆ ಪ್ರಥಮ ಮುಖ್ಯಮಂತ್ರಿಯಾಗಿದ್ದ ದಿವಂಗತ ಕೆಸಿ ರೆಡ್ಡಿ (KC Reddy) ಅವರ ಹುಟ್ಟೂರಾಗಿರುವ ಕ್ಯಾಸಂಬಳ್ಳಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳದ್ದೇ ಜ್ವಲಂತ ಸಮಸ್ಯೆಯಾಗಿದೆ.

ಗ್ರಾಮದಲ್ಲಿನ ಏಕೈಕ ಪ್ರೌಢ ಶಾಲೆಯಲ್ಲಿ 850ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಸಮರ್ಪಕವಾದ ಶಾಲಾ ಕೊಠಡಿ ವ್ಯವಸ್ತೆಯಿಲ್ಲದೆ, ಮಕ್ಕಳ ಒಕ್ಕಟ್ಟಿನಲ್ಲೆ ಪಾಠ ಕೇಳುವಂತಾಗಿದೆ. ಮೊದಲ ಮುಖ್ಯಮಂತ್ರಿಯವರ ಹೋಬಳಿ ಕೇಂದ್ರದಲ್ಲೇ ಪಿಯುಸಿ ಕಾಲೇಜು ಇಲ್ಲದೆ, ಕೀಲೋ ಮೀಟರ್ ಗಟ್ಟಲೇ ದೂರ ತೆರಳುವ ಪರಿಸ್ಥಿತಿಯಿದೆ.

ಅಭಿವೃದ್ಧಿ ಕನಸು ಕಂಡಿದ್ದ ಗ್ರಾಮಸ್ಥರು

ಇನ್ನು ಕ್ಯಾಸಂಬಳ್ಳಿ ಗ್ರಾಮಕ್ಕೆ ಇದುವರೆಗೂ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ತರುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಹೀಗಾಗಿ ಸಂಸದ ಮುನಿಸ್ವಾಮಿ ಅವರು ಕ್ಯಾಸಂಬಳ್ಳಿ ಗ್ರಾಮವನ್ನ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆ ಮಾಡಿಕೊಂಡಾಗ, ಸಹಜವಾಗಿಯೇ ಬೆಟ್ಟದಷ್ಟು ಅಭಿವೃದ್ಧಿ ಕನಸನ್ನ ಗ್ರಾಮಸ್ಥರು ಹೊಂದಿದ್ದರು.

ಸಭೆ ಮುಂದೂಡಿಕೆ

ಗ್ರಾಮದಲ್ಲಿ ಇಲ್ಲಿಯವರೆಗೂ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿದುಕೊಳ್ಳಲು, ಕ್ಯಾಸಂಬಳ್ಳಿ ಗ್ರಾಮದಲ್ಲಿ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೈಕ್ ಎಕೋ ಸೌಂಡ್ ನಿಂದ ಗೊಂದಲ ಉಂಟಾಗಿ, ಕಡೆಗೆ ಸಭೆಯನ್ನೆ ಸಂಸದರು ಮುಂದೂಡಿರುವ ಘಟನೆ ನಡೆದಿದೆ.

ಇದನ್ನೂ ಓದಿ:  Chandrashekhar Guruji ಹತ್ಯೆಗೆ ಕಾರಣವಾಯ್ತಾ ಆ ಮೂರು ಆಸ್ತಿ? ಆರೋಪಿಗಳು ಬಾಯ್ಬಿಟ್ಟ ಸ್ಫೋಟಕ ಮಾಹಿತಿ ಏನು?

11.30ರ ಸಭೆಗೆ 3 ಗಂಟೆಗೆ ಆಗಮಿಸಿದ ಸಂಸದರು

ಕ್ಯಾಸಂಬಳ್ಳಿ ಗ್ರಾಮದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಭೆ ಬೆಳಗ್ಗೆ 11.30 ಕ್ಕೆ ಆರಂಭವಾಗಬೇಕಿತ್ತು. ಆದರೆ ಸಂಸದ ಮುನಿಸ್ವಾಮಿ, ಇತರ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮಧ್ಯಾಹ್ನ 3 ಗಂಟೆಗೆ ಕ್ಯಾಸಂಬಳ್ಳಿ ಗ್ರಾಮದ ಸಭೆಯಲ್ಲಿ ಭಾಗಿಯಾದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿ.ಇ.ಒ ಯುಕೇಶ್ ಕುಮಾರ್, ತಹಶೀಲ್ದಾರ್ ಸುಜಾತ, ಪಿಡಿಒ ಮಹೇಶ್ ಸೇರಿದಂತೆ ಸ್ತಳೀಯ ಜನಪ್ರತಿನಿಧಿಗಳು ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ನೂರಾರು ಜನರು ಭಾಗಿಯಾಗಿದ್ದರು.

ಮೈಕ್ ಸಿಸ್ಟಮ್ ನ ಸ್ಪೀಕರ್ ಎಕೋ ಸೌಂಡ್

ಇನ್ನು ಪ್ರಗತಿ ಪರಿಶೀಲನಾ ಸಭೆಯನ್ನ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರಣ, ಮೈಕ್ ಸಿಸ್ಟಮ್ ನ ಸ್ಪೀಕರ್ ಎಕೋ ಸೌಂಡ್ ಹೆಚ್ಚಿತ್ತು, ಅಧಿಕಾರಿಗಳು ಮಾತನಾಡುತ್ತಿದ್ದಾಗ ಯಾರೊಬ್ಬರಿಗು ಅರ್ಥವಾಗದ ಕಾರಣ ಸ್ಥಳದಲ್ಲಿ ನೆರೆದಿದ್ದ ಜನರಿಗೂ ಕಾರ್ಯಕ್ರಮದಲ್ಲಿ ಕೂರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದರಿಂದ ಬೇಸರಕ್ಕೆ ಒಳಗಾದ ಸಂಸದ ಮುನಿಸ್ವಾಮಿ, ಖುದ್ದು ಸಭೆಯ ವೇದಿಕೆಯಿಂದ ಇಳಿದು ಸ್ಪೀಕರ್ ಗಳನ್ನ ಹೊರಗಿಟ್ಟು ಸಭೆ ನಡೆಸಲು ಮುಂದಾದರು. ಅಷ್ಟಾದರು ಎಕೋ ಸೌಂಡ್ ಸಮಸ್ಯೆ ಬಗೆಹರಿಯಲೇ ಇಲ್ಲ. ಇದರಿಂದ ಅಧಿಕಾರಿಗಳು ಮಾತನಾಡುವಾಗ ಮಧ್ಯ ಪ್ರವೇಶಿಸಿದ ಸಂಸದ ಮುನಿಸ್ವಾಮಿ, ವೇದಿಕೆಯಲ್ಲಿ ಮಾತನಾಡುತ್ತಾ ಆಯೋಜಕರ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಕಡೆಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಮುನಿಸ್ವಾಮಿ, ಇದೇ ತಿಂಗಳ 23 ರಂದು ಮತ್ತೊಮ್ಮೆ ಪ್ರಗತಿ ಪರಿಶೀಲನೆ ಸಭೆಯನ್ನ ನಡೆಸೋದಾಗಿ ಹೇಳಿ, ತಡವಾಗಿ ಆಗಮಿಸಿದ್ದಕ್ಕೆ ಎಲ್ಲಾ ಅಧಿಕಾರಿಗಳ ಕ್ಷಮೆ ಯಾಚಿಸಿದರು.

ಸಂಸದರಿಗಾಗಿ ಕಾದು ಸುಸ್ತಾದ ಅಧಿಕಾರಿಗಳು, ಗ್ರಾಮಸ್ಥರು

ಪ್ರಗತಿ ಪರಶೀಲನೆ ಸಭೆಯಲ್ಲಿ ಸಂಸದರಿಗೆ ಅಹವಾಲು ನೀಡಲು ಬಂದಿದ್ದ ಜನರು, ಸಂಸದರಿಗಾಗಿ ಕಾದು ಕಾದು ಸುಸ್ತಾದರು. ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಕೆಲಸ ಕಾರ್ಯಗಳನ್ನ ಬದಿಗೊತ್ತಿ, ಬೆಳಗ್ಗೆ 11 ಗಂಟೆಗೆ ಸಭೆಗೆ ಹಾಜರಾಗಿದ್ದು, ಕಡೆ ಮಧ್ಯಾಹ್ನ 3 ಗಂಟೆಗೆ ಆಗಮಿಸಿದ ಸಂಸದರು, ಮೈಕ್ ಗೊಂದಲಕ್ಕೆ ಸಿಲುಕಿ, ಕಡೆಗೆ ಸಭೆಯನ್ನೆ ಇದೇ ತಿಂಗಳ 23 ಕ್ಕೆ ನಿಗದಿ ಮಾಡಿದ್ದಾರೆ.

ಇದನ್ನೂ ಓದಿ:  Bengaluru: ಕಡಿಮೆ ಮಕ್ಕಳಿದ್ದರೆ ಕುಟುಂಬದ ಆರ್ಥಿಕ ಪ್ರಗತಿ! ಕುಟುಂಬ ಯೋಜನೆ ಬಗ್ಗೆ ಅರಿವು ಹೆಚ್ಚಲಿ

ಮುಂದಿನ ಸಭೆಯಲ್ಲಿ ಹಿಂದೆ ನಡೆದಿದ್ದ ಅಭಿವೃದ್ದಿ, ಸಂಸದರ ಆದರ್ಶ ಗ್ರಾಮ ಆಯ್ಕೆಯಾದ ನಂತರ ನಡೆದಿರುವ ಅಭಿವೃದ್ದಿ ಕಾರ್ಯಗಳ ಕುರಿತು ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗುವಂತೆ ಸಂಸದ ಮುನಿಸ್ವಾಮಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು,
Published by:Mahmadrafik K
First published: