Karnataka Politics: ಅತಿಯಾದ ಬುದ್ಧಿವಂತಿಕೆ ಒಳ್ಳೆಯದಲ್ಲ; ಮಾಧುಸ್ವಾಮಿ ವಿರುದ್ಧ ರೇಣುಕಾಚಾರ್ಯ ಕಿಡಿ

ಗೃಹ ಸಚಿವರದ್ದು ಗೂಂಡಾ ಪ್ರವೃತ್ತಿ. ಸಚಿವರು ಗಲಾಟೆ ಆಗಬೇಕು ಅಂತಲೇ ಮಾತಾಡ್ತಾರೆ. ಈಶ್ವರಪ್ಪ, ಜ್ಞಾನೇಂದ್ರ ಇವರೆಲ್ಲ ಗೆಲ್ಲಬೇಕು ಅಂದ್ರೆ ಇಂಥ ಗಲಾಟೆ ನಡೆಯುತ್ತಿರಬೇಕು ಎಂದು ಕಿಡಿಕಾರಿದರು.

ಎಂಪಿ ರೇಣುಕಾಚಾರ್ಯ

ಎಂಪಿ ರೇಣುಕಾಚಾರ್ಯ

  • Share this:
ರಾಜ್ಯದಲ್ಲೂ ಯುಪಿ ಮಾದರಿ (UP Model) ಪ್ರಯೋಗಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ (MLA Renukacharya) ಒತ್ತಾಯ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರೇಣುಕಾಚಾರ್ಯ, ನಮ್ಮ ಸರ್ಕಾರ (BJP Government) ಸಮರ್ಥವಾಗಿ ಕೆಲಸ ಮಾಡುತ್ತಿದೆ. ಕೇವಲ ಘೋಷಣೆ ಮಾಡಿಲ್ಲ, ಅನುಷ್ಟಾನಕ್ಕೆ ತ‌ಂದಿದ್ದೇವೆ. ಸಿಎಂ ಬೊಮ್ಮಾಯಿ (CM Basavaraj Bommai) ಅವರು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ. ನೋ ಅಡ್ಜಸ್ಟ್‌ಮೆಂಟ್, ನೋ ಕಮಿಟ್‌ಮೆಂಟ್ ಎಂದು ಹೇಳಿದರು. ಇದೇ ವೇಳೆ ಸಚಿವ ಮಾಧುಸ್ವಾಮಿ (Minister Madhuswamy) ವಿರುದ್ಧ ಶಾಸಕರು ವಾಗ್ದಾಳಿ ನಡೆಸಿದರು.

ಮಾಧುಸ್ವಾಮಿ ಸದನದ ಒಳಗೆ ವಿಪಕ್ಷಗಳನ್ನ ಸಮರ್ಥವಾಗಿ ಹಣಿಯುತ್ತಾರೆ. ಆದರೆ ಹೊರಗಡೆ ಯಾಕೆ ಈ ರೀತಿ ಹೇಳಿಕೆ‌ ಕೊಡುತ್ತಾರೋ ಗೊತ್ತಿಲ್ಲ. ಯಾವ ಯಾವ ಕಾರಣಕ್ಕೋ ಸಚಿವರಾಗಿದ್ದಾರೆ. ನಾನೇ ಮೇಧಾವಿ, ನಾನೇ ಬುದ್ಧಿವಂತ ಅಂದುಕೊಂಡಿದ್ದಾರೆ. ಅತಿಯಾದ ಬುದ್ದಿವಂತಿಕೆ ಒಳ್ಳೆಯದಲ್ಲ.

ಸಚಿವರು ಇನ್ನು ಮುಂದಾದರೂ ಚೆನ್ನಾಗಿ ಕೆಲಸ ಮಾಡಲಿ.  ಏನೇನೊ ಹೇಳಿಕೆ ನೀಡಿ ಸರ್ಕಾರಕ್ಕೆ ಮುಜುಗರ ತರಬೇಡಿ. ಈ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡ್ತೀವಿ. ಹಾದಿ ಬೀದಿಯಲ್ಲಿ ಚರ್ಚೆ ಮಾಡಲ್ಲ ಎಂದರು.

MP Renukacharya slams Minister JC Madhuswamy mrq
ಸಿಟಿ ರವಿ


ಇದನ್ನೂ ಓದಿ:  Karnataka Politics: ಸಿದ್ದರಾಮೋತ್ಸವ, ಕಾಲ್ನಡಿಗೆ ಬಳಿಕ ಬಿಜೆಪಿಯಲ್ಲಿ ಟೆನ್ಷನ್, ಟೆನ್ಷನ್; RSS ಮುಖಂಡರ ಜೊತೆ ಸಿಎಂ ಚರ್ಚೆ

ಸಿದ್ದರಾಮಯ್ಯಗೆ ಸಿ.ಟಿ.ರವಿ ಸವಾಲು

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಸವಾಲು ಹಾಕಿದ್ದಾರೆ.

"ಮುಸ್ಲಿಂ ಪ್ರದೇಶ" ಎಂಬುದರ ಅರ್ಥವೇನು? ಜಿಹಾದಿ ಮನಸ್ಥಿತಿಯನ್ನು ಪ್ರದರ್ಶಿಸುವ ಮೂಲಕ ನೀವು ಅಮಾಯಕರನ್ನು ಕೊಲ್ಲುವ ಜಿಹಾದಿಗಳಿಗಿಂತ ಹೆಚ್ಚು ಅಪಾಯಕಾರಿ ಎಂದು ಸಾಬೀತುಪಡಿಸುತ್ತಿದ್ದೀರಿ. ರಾಷ್ಟ್ರೀಯವಾದಿ ವೀರ್ ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್ ಬಗ್ಗೆ ಸಾರ್ವಜನಿಕ ಚರ್ಚೆಗೆ ನಾನು ನಿಮಗೆ ಸವಾಲು ಹಾಕುತ್ತೇನೆ.

ಒಪ್ಪಿಕೊಳ್ಳಲು ಧೈರ್ಯವಿದೆಯೇ? ಕಿತ್ತಾಡುವ ಬದಲು ಸರ್ಕಾರ ವಿಸರ್ಜನೆ ಮಾಡಿ ಎಂಬ ಕಾಂಗ್ರೆಸ್ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಡಿ.ವಿ.ಸದನಾಂದ ಗೌಡ, ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಬಡಿದಾಟ ಲೋಕ ಇಡಿ ಗೊತ್ತಿದೆ. ತಮ್ಮ ತಟ್ಟೆಗೆ ಹೆಗ್ಗಣ ಬಿದ್ದು ಬೇರೆಯವರ ತಟ್ಟೆಯ ನೋಣ ಬಿದ್ದಿದೆ ಅಂತಾರೆ. ಸ್ವತಂತ್ರ ಱಲಿಯಲ್ಲಿ ಒಂದು ಗುಂಪು ಡಿ.ಕೆ ಶಿವಕುಮಾರ್ ಜೊತೆಗೆ ಇತ್ತು, ಇನ್ನೊಂದು ಗುಂಪು ಸಿದ್ದರಾಮಯ್ಯ ಜೊತೆಗೆ ಇತ್ತು ಎಂದು ವಾಗ್ದಾಳಿ ನಡೆಸಿದರು.

MP Renukacharya slams Minister JC Madhuswamy mrq
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ


ಇವರು ಗೆಲ್ಲಬೇಕಾದ್ರೆ ಇಂಥ ಗಲಾಟೆ ನಡೆಯಬೇಕು

ಬೆಂಗಳೂರಿನಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೃಹ ಸಚಿವರದ್ದು ಗೂಂಡಾ ಪ್ರವೃತ್ತಿ. ಸಚಿವರು ಗಲಾಟೆ ಆಗಬೇಕು ಅಂತಲೇ ಮಾತಾಡ್ತಾರೆ. ಈಶ್ವರಪ್ಪ, ಜ್ಞಾನೇಂದ್ರ ಇವರೆಲ್ಲ ಗೆಲ್ಲಬೇಕು ಅಂದ್ರೆ ಇಂಥ ಗಲಾಟೆ ನಡೆಯುತ್ತಿರಬೇಕು ಎಂದು ಕಿಡಿಕಾರಿದರು.

RSSಗೆ ನ್ಯಾಯ ಕೊಡಲು ಸರ್ಕಾರ ಮಾಡ್ತಿದ್ದಾರೆ

ಗೃಹ ಸಚಿವರು ಆರಗ ಜ್ಞಾನೇಂದ್ರ ನೂರಕ್ಕೆ ನೂರು ಗೂಂಡಾ ಪೃವೃತ್ತಿ. ತೀರ್ಥಹಳ್ಳಿಯಲ್ಲಿ ನಡೆದ ಎಲ್ಲ ಕೋಮು ಗಲಭೆಗಳ ಹಿಂದೆ ಜ್ಞಾನೇಂದ್ರ ಇದ್ದಾರೆ. ನಂದಿತಾ ಪ್ರಕರಣದಲ್ಲಿ ಇವರು ಏನು ಮಾಡಿದ್ರು? ಇವರು ಹಿಂದೆ ಒಬ್ಬ ಡಾಕ್ಟರ್​ಗೆ ಹಲ್ಲೆ ಮಾಡಿದ್ದರು. ಆಮೇಲೆ ಅವರು ವಾಪಸ್ ಕೊಟ್ಟರು. ಜ್ಞಾನೇಂದ್ರ ಮೇಲೆ ಐದಾರು ಪ್ರಕರಣಗಳಿದ್ದವು. ಇಂಥವರಿಂದ ಏನು ಆಡಳಿತ ನಿರೀಕ್ಷೆ ಮಾಡಬಹುದು ಎಂದು ಪ್ರಶ್ನೆ ಮಾಡಿದರು.

ಸರ್ಕಾರ ವಿಸರ್ಜನೆ ಮಾಡಲಿ

ಇವರು ಜನರಿಗೆ ನ್ಯಾಯ ಕೊಡುವುದಕ್ಕೆ ಸರ್ಕಾರ ಮಾಡ್ತಿಲ್ಲ. RSSಗೆ ನ್ಯಾಯ ಕೊಡುವುದಕ್ಕೆ ಮಾತ್ರ ಸರ್ಕಾರ ಮಾಡ್ತಿದ್ದಾರೆ. ಮಾಧುಸ್ವಾಮಿ, ಸೋಮಶೇಖರ್ ಇಬ್ಬರೂ ರಾಜೀನಾಮೆ ಕೊಟ್ಟು ಸರ್ಕಾರ ವಿಸರ್ಜನೆ ಮಾಡೋದು ಒಳ್ಳೆಯದು. ಇನ್ನು ಆರು ತಿಂಗಳಿದೆ, ಹೀಗೆ ಒಬ್ಬರಿಗೊಬ್ಬರು ಕಿತ್ತಾಟ ಮಾಡಿಕೊಂಡು ಕೂರುವುದಕ್ಕಿಂತ ರಾಜೀನಾಮೆ ನೀಡಿ ಸರ್ಕಾರ ವಿಸರ್ಜಿಸಿ ಎಂದು ಬಿಜೆಪಿಗೆ ಸಲಹೆ ನೀಡಿದರು.

ಇದನ್ನೂ ಓದಿ:  Shivamogga: ಚಾಕು ಇರಿತ ಕೇಸ್​ಗೆ ಟ್ವಿಸ್ಟ್: ಪ್ರೇಮ್ ​ಸಿಂಗ್​ಗೂ ಮೊದಲೇ ಸದ್ದಾಂ ಎಂಬಾತನ ಮೇಲೆ ಹಲ್ಲೆ

ಗೃಹ ಸಚಿವ ಜ್ಞಾನೇಂದ್ರ ಮಂಗಳೂರಿನಲ್ಲಿ ಮೂರು ಪ್ರಕರಣ ಆದಾಗ ಹೆದರಿಕೊಂಡು ಬಂದು ತೀರ್ಥಹಳ್ಳಿಯಲ್ಲಿ ಕೂತಿದ್ರು. ಪಟಾಕಿ ಹೊಡೆದರೆ ಮಕ್ಕಳು ಅಮ್ಮನ ಸೆರಗಲ್ಲಿ ಅಡಗಿಕೊಳ್ಳುವಂತೆ ಹೆದರಿಕೊಂಡು ಬಂದು ಕೆಡಿಪಿ ಸಭೆ ಮಾಡುತ್ತಿದ್ದರು ಎಂದು ವ್ಯಂಗ್ಯ ಮಾಡಿದರು.
Published by:Mahmadrafik K
First published: