‘ಚುನಾವಣೆಯಲ್ಲಿ ಸೋತ ಎಚ್​ಡಿಡಿ, ಖರ್ಗೆರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ ಕಾಂಗ್ರೆಸ್​, ಜೆಡಿಎಸ್‘​ - ಎಂ.ಪಿ ರೇಣುಕಾಚಾರ್ಯ

ಹೀಗೆ ಮುಂದುವರಿದ ಅವರು, ಹೊನ್ನಾಳಿ ರಾಜ್ಯ ಕೃಷಿ ಮೇಳಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕರೆದುಕೊಂಡು ಬಂದಿದ್ದೇ ನಾನು. ನನಗೆ ಎಲ್ಲಾ ಮುಂಖಡರ ಬಗ್ಗೆಯೂ ಗೌರವ ಇದೆ ಎಂದು ಸಿದ್ದರಾಮಯ್ಯಗೆ ಕುಟುಕಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ

ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ

 • Share this:
  ದಾವಣಗೆರೆ(ಜೂ.11): ‘ಕೊಟ್ಟ ಕುದುರೆಯನೇರದವನು ಶೂರನೂ ಅಲ್ಲ, ಧೀರನೂ ಅಲ್ಲ‘ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ. ಈ ಸಂಬಂಧ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಹೊನ್ನಾಳಿ ಶಾಸಕ, ಡಿ.ಕೆ ಶಿವಕುಮಾರ್​​ ಪದಗ್ರಹಣ ಕಾರ್ಯಕ್ರಮಕ್ಕೆ ಸರ್ಕಾರ ಅಡ್ಡಿ ಮಾಡುತ್ತಿದೆ ಎಂಬುದು ಸುಳ್ಳು. ಕೊಟ್ಟ ಕುದುರೆ ಏರದವನು ಶೂರನೂ ಅಲ್ಲ, ಧೀರನೂ ಅಲ್ಲ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೊರತಲ್ಲ ಎಂದು ತಿರುಗೇಟು ನೀಡಿದ್ದಾರೆ.

  ಕಾಂಗ್ರೆಸ್​ನವರು ಹತಾಶ ಮನೋಭಾವದಿಂದ ಬಿಜೆಪಿ ವಿರುದ್ಧ ಮಾತಾಡುತ್ತಿದ್ದಾರೆ. ನಾವು ಕೊರೋನಾ ವಾರಿಯರ್ಸ್​​ ರೀತಿ ಕೆಲಸ ಮಾಡುತ್ತಿದ್ದೇವೆ. ಲಾಕ್​ಡೌನ್​​ ಸಂದರ್ಭದಲ್ಲಿ ಕೆಲಸ ಮಾಡದೇ ಕೇವಲ ರಾಜಕೀಯ ಮಾಡುವುದು ಕಾಂಗ್ರೆಸ್​ ಕಾಯಕ. ಬಿಜೆಪಿ ಕೊರೋನಾ ಲಾಕ್​ಡೌನ್​​ ಸಂದರ್ಭವನ್ನು ಸಮರ್ಥವಾಗಿ ಎದುರಿಸುತ್ತಿದೆ, ನಾವು ರಾಜಕೀಯ ಟೀಕೆ ಟಿಪ್ಪಣಿಗೆ ಕಿವಿಗೊಡುವುದಿಲ್ಲ ಎಂದರು ಎಂ.ಪಿ ರೇಣುಕಾಚಾರ್ಯ.

  ಲಾಕ್​ಡೌನ್​​ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಕಾಂಗ್ರೆಸ್​ ಕೊಡಗು ಏನಿದೆ? ನೀವು ಜನರಿಗೆ ಸಹಾಯ ಮಾಡಬಹುದಿತ್ತು. ಬದಲಿಗೆ ಕೇವಲ ರಾಜಕೀಯ ಮಾಡುತ್ತಾ ಕೂತಿದ್ದೀರಿ. ಇದು ಜನರಿಗೆ ಗೊತ್ತಾಗುತ್ತಿದೆ ಎಂದರು.

  ಹೀಗೆ ಮುಂದುವರಿದ ಅವರು, ಹೊನ್ನಾಳಿ ರಾಜ್ಯ ಕೃಷಿ ಮೇಳಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕರೆದುಕೊಂಡು ಬಂದಿದ್ದೇ ನಾನು.  ನನಗೆ ಎಲ್ಲಾ ಮುಂಖಡರ ಬಗ್ಗೆಯೂ ಗೌರವ ಇದೆ ಎಂದು ಸಿದ್ದರಾಮಯ್ಯಗೆ ಕುಟುಕಿದರು.

  ಇದನ್ನೂ ಓದಿ: ಮೀಸಲಾತಿ ಒಂದು ಮೂಲಭೂತ ಹಕ್ಕಲ್ಲ: ತಮಿಳುನಾಡಿನ ವಿಪಕ್ಷಗಳಿಗೆ ಸುಪ್ರೀಂ ಕೋರ್ಟ್ ಮನವರಿಕೆ

  ಇನ್ನು, ಬಿಜೆಪಿ ಭಿನ್ನಮತದ ಬಗ್ಗೆ ಪ್ರತಿಕ್ರಿಯಿಸಿದ ಎಂ.ಪಿ ರೇಣುಕಾಚಾರ್ಯ, ಜಿಲ್ಲೆಯ ಆರೂ ಶಾಸಕರು ಒಗ್ಗಟ್ಟಾಗಿದ್ದೇವೆ. 6 ಶಾಸಕರು ಒಟ್ಟಾಗಿ ಸಿಎಂ ಅವರನ್ನು ಭೇಟಿ ಮಾಡುತ್ತೇವೆ. ಆರು ಜನರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಲು ಮನವಿ ಮಾಡುತ್ತೇವೆ. ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ನಡೆಸಲ್ಲ ಎಂದು ಸ್ಪಷ್ಟಪಡಿಸಿದರು.

  ಇನ್ನು, ಕಾಂಗ್ರೆಸ್ ಮತ್ತು ಜೆಡಿಎಸ್​ ಲೋಕಸಭೆಯಲ್ಲಿ ಸೋತವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿವೆ. ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ. ಸಾಮಾನ್ಯ ಕಾರ್ಯಕರ್ತರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದೆ. ನಮ್ಮ ಪಕ್ಷ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಿದೆ. ಸಂಘಟನೆ ಸರ್ಕಾರ ಎರಡೂ ಒಂದೇ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲರ ಸಹಮತದಿಂದ ಇಬ್ಬರು ಕಾರ್ಯಕರ್ತರು ರಾಜ್ಯಸಭೆ ಪ್ರವೇಶಿಸಲಿದ್ದಾರೆ ಎಂದು ಹೇಳಿದರು.
  First published: