ಕಾಂಗ್ರೆಸ್ ಮುಖಂಡರು ವಿಕೃತ ಮನಸ್ಸಿನವರು; 'The Kashmir Files' ಚಿತ್ರ ವೀಕ್ಷಣೆ ಬಳಿಕ ರೇಣುಕಾಚಾರ್ಯ ಕಿಡಿ

ಕಾಂಗ್ರೆಸ್​ ನಾಯಕರು ಸಭಾಧ್ಯಕ್ಷರ ಆಹ್ವಾನಕ್ಕೆ ಸೌಜನ್ಯಕ್ಕಾದರು ಚಿತ್ರವೀಕ್ಷಣೆಗೆ ಬರಬೇಕಿತ್ತು. ಚಿತ್ರ ವೀಕ್ಷಣೆಯಲ್ಲಿ ರಾಜಕಾರಣ, ಸ್ವಾರ್ಥ ಮುಖ್ಯ ಅಲ್ಲ

ಎಂ.ಪಿ.ರೇಣುಕಾಚಾರ್ಯ

ಎಂ.ಪಿ.ರೇಣುಕಾಚಾರ್ಯ

 • Share this:
  ತಮ್ಮ ವಿವಾದಿತ ಹೇಳಿಕೆ ಮೂಲಕ ಸುದ್ದಿಯಾಗುವ ಬಿಜೆಪಿ ನಾಯಕ ರೇಣುಕಾಚಾರ್ಯ (MP Renukacharya) ಮತ್ತೊಮ್ಮೆ ಈಗ  ಸುದ್ದಿಯಾಗಿದ್ದಾರೆ. ಇಂದು ವಿಧಾನಸಭಾ ಸದಸ್ಯರಿಗೆ ವಿಶೇಷವಾಗಿ ಏರ್ಪಡಿಸಿದ್ದ 'ದಿ ಕಾಶ್ಮೀರ್ ಫೈಲ್ಸ್' (The Kashmir Files) ಚಿತ್ರದ ವೀಕ್ಷಣೆಗೆ ಕಾಂಗ್ರೆಸ್​ ನಾಯಕರು (Congress leaders) ಗೈರು ಆಗಿದ್ದಕ್ಕೆ ಅವರನ್ನು ವಿಕೃತ ಮನಸ್ಸಿನವರು ಎಂದು ಹೀಗಳೆದಿದ್ದಾರೆ. ಅಲ್ಲದೇ, ದಿ ಕಾಶ್ಮೀರ್ ಫೈಲ್ಸ್ ಚಿತ್ರ ವೀಕ್ಷಣೆ ಮಾಡದವರು ದೇಶ ವಿರೋಧಿಗಳು ಎಂದಿದ್ದಾರೆ.

  ಮಂತ್ರಿಮಾಲ್​ನಲ್ಲಿ ಬಾಲಿವುಡ್​ ನಿರ್ದೇಶಕ ವಿವೇಕ್​ ಅಗ್ನಿ ಹೋತ್ರಿ ನಿರ್ದೇಶಿಸಿದ್ದ ಸಿನಿಮಾ ವೀಕ್ಷಣೆಗೆ ಇಂದು ವಿಧಾನಸಭಾ ಸದಸ್ಯರಿಗೆ ವಿಶೇಷ ವ್ಯವಸ್ಥೆ ನಡೆಸಲಾಗಿತ್ತು. ಚಿತ್ರಕ್ಕೆ ಪಕ್ಷಾತೀತವಾಗಿ ಎಲ್ಲಾ ನಾಯಕರು ಬರುವಂತೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ತಿಳಿಸಿದ್ದರು. ಅಲ್ಲದೇ, ಇಂದು ವಿಧಾನಸಭಾ ಸದಸ್ಯರನ್ನು ಸಿನಿಮಾ ವೀಕ್ಷಣೆಗೆ ಕರೆದೊಯ್ಯಲು ಎರಡು ವೋಲ್ವಾ ಕೆಎಸ್​ಆರ್ಟಿಸಿ ಬಸ್​​ ಕೂಡ ಆಗಮಿಸಿತು. ಆದರೆ, ಈ ವೇಳೆ ಕಾಂಗ್ರೆಸ್​ ನಾಯಕರು ಸಿನಿಮಾ ನೋಡಲು ಮುಂದಾಗಲಿಲ್ಲ.

  ಚಿತ್ರ ವೀಕ್ಷಣೆಗೆ ರಾಜಕಾರಣ, ಸ್ವಾರ್ಥ ಮುಖ್ಯ ಅಲ್ಲ

  ಈ ಸಂಬಂಧ ಚಿತ್ರ ಮುಗಿದ ಬಳಿಕ ಪ್ರತಿಕ್ರಿಯಿಸಿರುವ ರೇಣುಕಾಚಾರ್ಯ, ಕಾಂಗ್ರೆಸ್​ ನಾಯಕರು ಸಭಾಧ್ಯಕ್ಷರ ಆಹ್ವಾನಕ್ಕೆ ಸೌಜನ್ಯಕ್ಕಾದರು ಚಿತ್ರವೀಕ್ಷಣೆಗೆ ಬರಬೇಕಿತ್ತು. ಚಿತ್ರ ವೀಕ್ಷಣೆಯಲ್ಲಿ ರಾಜಕಾರಣ, ಸ್ವಾರ್ಥ ಮುಖ್ಯ ಅಲ್ಲ. ಇಲ್ಲಿರುವವರು ವೋಟ್ ಬ್ಯಾಂಕ್ ಗಾಗಿ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಾ ಇದ್ದಾರೆ. ಆದರೆ, ಜನ ಇದನ್ನು ಒಪ್ಪುವುದಿಲ್ಲ ಎಂದು ಕಿಡಿಕಾರಿದರು

  ದೇಶ ಪ್ರೀತಿ ಮಾಡುವವರು ಚಿತ್ರ ನೋಡಬಹುದು

  ಹಿಂದುತ್ವ, ರಾಷ್ಟ್ರೀಯ ಮನೋಭಾವ, ದೇಶ ಪ್ರೀತಿ ಮಾಡುವವರು ಈ ಚಿತ್ರ ನೋಡಬಹುದು. ಕಾಶ್ಮೀರ ದಲ್ಲಿ ಉಗ್ರವಾದಿಗಳ ಅಟ್ಟಹಾಸದ ವೀಕ್ಷಣೆ ಮಾಡುತ್ತಾ ಇದ್ದರೆ ಮೈ ರೋಮಾಂಚನ ಆಗುತ್ತದೆ. ಕಾಶ್ಮೀರ ಪಂಡಿತರ ಚಿತ್ರಹಿಂಸೆ ಕಾಶ್ಮೀರದಲ್ಲಿನ ಪಂಡಿತರ ಮಾರಹೋಮಕ್ಕೆ ಹಿಂದಿನ ಸರ್ಕಾರವೇ ಕಾರಣ. ಹಿಂದಿನ ಸರ್ಕಾರ ವೋಟಿಗೋಸ್ಕರ ಭಯೋತ್ಪಾದಕರಿಗೆ ಉಗ್ರಗಾಮಿಗಳಿಗೆ ಬೆಂಬಲಕೊಟ್ಟು ಮಾರಣಹೋಮ ಆಗಿದೆ. ನಮ್ಮ ಕೇಂದ್ರ ಸರ್ಕಾರ ಬಂದ ಬಳಿಕ ಮೋದಿಯವರ ಭರವಸೆಯಂತೆ ಕಾಶ್ಮೀರ ದಲ್ಲಿ ಉಸಿರಾಡಲು ಅವಕಾಶ ಆಗಿದೆ ಎಂದರು

  ಇದನ್ನು ಓದಿ: The Kashmir Files' ಚಿತ್ರದಲ್ಲಿ ಹಲವಾರು ವರ್ಷಗಳಿಂದ ಹೂತಿಟ್ಟ ಸತ್ಯ ತೋರಿಸಲಾಗಿದೆ; ಪ್ರಧಾನಿ ಮೋದಿ

  ಅಲ್ಲದೇ, ಪ್ರತಿಯೊಬ್ಬರೂ ಈ ಚಿತ್ರ ವೀಕ್ಷಣೆ ಮಾಡಬೇಕು ಎಂದ ಅವರು, ಚಿತ್ರ ವೀಕ್ಷಣಗೆ ಸ್ಪೀಕರ್ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಿದರು.

  ಒಟ್ಟಿಗೆ ಕುಳಿತು ಸಿನಿಮಾ ವೀಕ್ಷಿಸಿದ ಸ್ಪೀಕರ್​, ಯಡಿಯೂರಪ್ಪ
  ಇಂದು ಮಂತ್ರಿಮಾಲ್​ನಲ್ಲಿ ಆಯೋಜಿಸಿದ್ದ ಸಿನಿಮಾ ಪ್ರದರ್ಶನಕ್ಕೆ ಬಿಜೆಪಿ ನಾಯಕರಾದ ಬಸವರಾಜ ಯತ್ನಾಳ್​, ಗೋವಿಂದ ಕಾರಜೋಳ, ನಾರಾಯಣಗೌಡ ಸೇರಿದಂತೆ ಹಲವು ನಾಯಕರ ಆಗಮಿಸಿದರು. ಈ ವೇಳೆ ಬಿಎಸ್​ ಯಡಿಯೂರಪ್ಪ ಮತ್ತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪಕ್ಕ ಪಕ್ಕ ಕುಳಿತು ಸಿನಿಮಾ ವೀಕ್ಷಿಸಿದರು.

  ಇದನ್ನು ಓದಿ: ನಾನು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಲ್ಲ ಎಂದ್ರು ಸಿದ್ದರಾಮಯ್ಯ, ಕಾರಣ ಕೇಳಿದ್ರೆ ನೀವು ಕೂಡ ನಗ್ತೀರಾ?

  ಇನ್ನು ಈ ಸಿನಿಮಾ ಪ್ರದರ್ಶನಕ್ಕೆ ಜೆಡಿಎಸ್​​ ಪುಟ್ಟರಾಜು ಆಗಮಿಸಿದ್ದರು. ಈ ವೇಳೆ ಸ್ಪೀಕರ್ ಅವರ ನೋಡಿ ಮೆಚ್ಚುಗೆ ಸೂಚಿಸಿದರು

  ಸಿನಿಮಾ ಬದಲಾಗಿ ಸಭೆ ನಡೆಸಿದ ಕಾಂಗ್ರೆಸ್
  ಕಲಾಪ ಮುಗಿದ ಬಳಿಕ ಇಂದು ಕಾಂಗ್ರೆಸ್​ ನಾಯಕರು ಸಭೆ ನಡೆಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಕಚೇರಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೆಸಿ ಸದನದಲ್ಲಿ ಕೈಗೆತ್ತಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

  ಪಂಚರಾಜ್ಯ ಚುನಾವಣಾ ಫಲಿತಾಂಶದ ಬಳಿಕ‌ ನಡೆದ ಸಭೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆ ಮತ್ತು ಹೋರಾಟದ ಬಗ್ಗೆ ಚರ್ಚೆ ನಡೆಸಲಾಯಿತು. ಜೊತೆಗೆ ಬಿಜೆಪಿಯ ಧರ್ಮಾಧರಿತ ರಾಜಕೀಯ ದಾಳ ಎದುರಿಸುವ ಬಗ್ಗೆ, ಜನರ ಪ್ರಸ್ತುತ ಸಮಸ್ಯೆಗಳ ವಿಚಾರ ಹಾಗೂ ಜನರ ಮುಂದೆ ಸಾಗಬೇಕಿರುವ ದಾರಿಯ ಬಗ್ಗೆ ಚರ್ಚೆ ನಡೆಸಲಾಯಿತು. ಇದೇ ವೇಳೇ ಇಂದು ರಾಜ್ಯ ಹೈ ಕೋರ್ಟ್​ ತೀರ್ಪು ನೀಡಿರುವ ಹಿಜಾಬ್ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಕಾಂಗ್ರೆಸ್ ನ ನಿಲುವಿನ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
  Published by:Seema R
  First published: