ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ (BJP MLA MP Renukacharya) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ರೇಣುಕಾಚಾರ್ಯ, ಕಾಂಗ್ರೆಸ್ ಹೈಕಮಾಂಡ್ (Congress High command) ಪವರ್ ಲೆಸ್, ನರವಿಲ್ಲದವರು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದ್ರೆ ಭಯೋತ್ಪಾದಕರ ಕೈಗೆ ಸಿಕ್ಕಂತೆ ಆಗುತ್ತದೆ. ಚುನಾವಣೆ (Election) ಬಂತು ಅಂತ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಪ್ರಜ್ಞಾವಂತ ಜನರಿದ್ದಾರೆ. ನಿಮಗೆ ತಕ್ಕ ಪಾಠವನ್ನ ಕಲಿಸುತ್ತಾರೆ ಎಂದು ಕಿಡಿಕಾರಿದರು.
ಇದೇ ವೇಳೆ ವಿಧಾನಸೌಧ ಈಸ್ಟ್ ಗೇಟ್ ಬಳಿ 10 ಲಕ್ಷ ಹಣ ಸಿಕ್ಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ರೇಣುಕಾಚಾರ್ಯ, ಸಿಕ್ಕಿರುವ 10 ಲಕ್ಷ ರೂಪಾಯಿಗೂ ಮತ್ತು ಸರ್ಕಾರಕ್ಕೂ ಯಾವುದೇ ರೀತಿ ಸಂಬಂಧವಿಲ್ಲ. ಬಹುಲಕ್ಷ ಕೋಟಿ ಹಗರಣ ಮಾಡಿದವರು ನೀವು. ಕಲ್ಲಿದ್ದಲು, 2ಜಿ ಸ್ಪೆಕ್ಟ್ರಂ ಹಗರಣ ಮಾಡಿದವರು ನೀವು ಅಂತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷ ಅಂದ್ರೆ ಗುಲಾಮಗಿರಿ ಪಾರ್ಟಿ. ಕಾಂಗ್ರೆಸ್ನವರು ಯಾರು ಭಾರತ್ ಮಾತಾಕಿ ಜೈ ಅನ್ನಲ್ಲ. ಸೋನಿಯಾ ಗಾಂಧಿ ಕೀ ಜೈ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಜೈ ಎಂದು ಹೇಳುತ್ತೀರಿ. ಮುಂದೆ ಹುಟ್ಟುವ ಮಕ್ಕಳಿಗೂ ಜೈ ಅಂತಾರೆ ಎಂದು ಹೇಳಿದರು.
ಎಂಜಿನೀಯರ್ ಜಗದೀಶ್ ಅಂದರ್!
ವಿಧಾನಸೌಧದ ಬಳಿ ಸಿಕ್ಕ 10 ಲಕ್ಷ ಹಣ ಕೇಸ್ ತನಿಖೆ ಚುರುಕುಗೊಂಡಿದೆ. ಹಣ ತಂದಿದ್ದ ಕಿರಿಯ ಎಂಜಿನೀಯರ್ ಜಗದೀಶ್ರನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡ್ತಿದ್ದಾರೆ. ಹಣದ ಮೂಲದ ಬಗ್ಗೆ ಸರಿಯಾಗಿ ಮಾಹಿತಿ ನೀಡದ ಹಿನ್ನೆಲೆ ಹಾಗೂ ಪೊಲೀಸರ ವಿಚಾರಣೆಗೆ ಸಹಕರಿಸಿದ ಹಿನ್ನೆಲೆ ಪೊಲೀಸರು ಜಗದೀಶ್ನನ್ನು ಬಂಧಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಬೊಮ್ಮಾಯಿ, ಹಣ ಯಾರಿಗೆ ಕೊಡಲು ಬರುತ್ತಿದ್ದರು ಅನ್ನೋದರ ತನಿಖೆ ನಡೆಯಲಿದೆ. ಪೊಲೀಸರು ಕ್ರಮ ಕೈಗೊಳ್ತಾರೆ ಎಂದಿದ್ದಾರೆ.
ಇನ್ನು ಕಾಂಗ್ರೆಸ್ ಸರ್ಕಾರ ಇದ್ದಾಗ ಸಚಿವ ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ 25 ಲಕ್ಷ ಹಣ ಸಿಕ್ಕಿತ್ತು. ಅಷ್ಟೊಂದು ಹಣ ಸಿಕ್ಕಿದ್ದ ಕೇಸ್ ಏನಾಯ್ತು? ಲೋಕಾಯುಕ್ತರೇ ಕೇಸ್ ಮುಚ್ಚಿ ಹಾಕಿದ್ರು ಅಂತ ಹೇಳಿದರು.
ಸಿದ್ದರಾಮಯ್ಯ ಯೂಟರ್ನ್
ಆ ಕಡೆ ಬಿಜೆಪಿಯವರು ಮುಗಿಬಿದ್ದಿದ್ರೆ, ಈ ಕಡೆ ಸಿದ್ದರಾಮಯ್ಯ ಯೂಟರ್ನ್ ತೆಗೆದುಕೊಂಡಿದ್ದಅರೆ. ನಾನು ಸಿಎಂಗೆ ನಾಯಿ ಮರಿ ಅಂತಾ ಹೇಳಿಲ್ಲ. ಕೇಂದ್ರದಿಂದ ಅನುದಾನ ತರಲು ಧೈರ್ಯ ಬೇಕು ಎಂದಿದ್ದೇನೆ. ನಾಯಿ ನಂಬಿಕಸ್ಥ ಪ್ರಾಣಿ ಎಂದಿದ್ದೇನೆ. ನಾಯಿ ರೀತಿ ಧೈರ್ಯದಿಂದ ಪಾಲು ತರಬೇಕು ಎಂದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಒಬ್ಬ ಸಿಎಂ ಆಗಿದ್ದವರು ಹಾಲಿ ಸಿಎಂ ಅನ್ನು ಹೀಗೆ ಅನ್ನುತ್ತಾರೆ. ಈಗ ನೋಡಿದ್ರೆ ಹಳ್ಳಿ ಭಾಷೆ ಅಂತ ಹೇಳುತ್ತಾರೆ. ನಾನು ಸಿಎಂಗೆ ಅಪಮಾನ ಮಾಡಿದ್ದೇನೆ. ಮುಂದೆ ಹೀಗೆ ಹೇಳಲ್ಲ ಎಂದು ಕ್ಷಮೆ ಕೇಳಬಹುದಾಗಿತ್ತು ಎಂದು ಈಶ್ವರಪ್ಪ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: YSV Datta: ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್; ದೇವೇಗೌಡರದ್ದು ನನ್ನದು ತಂದೆ ಮಕ್ಕಳ ಸಂಬಂಧ ಅಂದ್ರು!
ಸಿದ್ದು ವಿರುದ್ಧ ವಿರುದ್ಧ ಜಗ್ಗೇಶ್ ಕಿಡಿ
ಇನ್ನು ಸಿದ್ದರಾಮಯ್ಯ ವಿರುದ್ಧ ರಾಜ್ಯಸಭಾ ಸದಸ್ಯ ಜಗ್ಗೇಶ್ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಅವರ ಮಾತು ಲೆಕ್ಕಕ್ಕೇ ಇಲ್ಲ. ಯಾರಿಗೆ ಕೆಲಸ ಮಾಡಲು ಆಗಲ್ಲ, ಯಾರಿಗೆ ಅಸಹಾಯಕತೆ ಇರುತ್ತೋ ಅಂತವರು ಕೆಟ್ಟ ಮಾತುಗಳ ಮೂಲಕ ಕೋಪವನ್ನು ತೋರಿಸುತ್ತಾರೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ