Siddaramaiah ಅವರೇ ಡಿಕೆಶಿ ಇಂದ ದೂರ ಇರಿ; ಮಾಜಿ ಸಿಎಂಗೆ MP Renukacharya ಬುದ್ದಿಮಾತು

ಡಿಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ನಡುವೆ ಜಟಾಪಟಿ ನಡೆಯುತ್ತಿದೆ. ನಾನು ಸಿಎಂ‌ ಆಗಬೇಕು, ನಾನು ಸಿಎಂ ಆಗಬೇಕು ಅಂತ ಪೈಪೋಟಿ ನಡೆದಿದೆ.

ಎಂಪಿ ರೇಣುಕಾಚಾರ್ಯ

ಎಂಪಿ ರೇಣುಕಾಚಾರ್ಯ

 • Share this:
  ಪಿಎಸ್​ಐ ಹಗರಣದಲ್ಲಿ ಸಚಿವ ಅಶ್ವತ್ಥ್​ ನಾರಾಯಣ (Ashwath Narayan) ಅವರ ಮೇಲೆ ಕಾಂಗ್ರೆಸ್ (Congress)​ ಗಂಭೀರ ಆರೋಪ ಹೊರಿಸಿದ್ದು, ಸಚಿವರ ರಾಜೀನಾಮೆಗೆ ಒತ್ತಾಯಿಸಿದೆ. ಈ ನಡುವೆ ಕಾಂಗ್ರೆಸ್​ ಸಿದ್ದರಾಮಯ್ಯ (Siddaramaiah) ಸಚಿವ ಅಶ್ವತ್ಥ್​ ನಾರಾಯಣ ಅವರ ವಿರುದ್ಧ ಸರಣಿ ವಾಗ್ದಾಳಿ ನಡೆಸಿದೆ. ಈ ಬೆನ್ನಲ್ಲೆ ಸಚಿವರ ಬೆಂಬಲಕ್ಕೆ ಇದೀಗ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಈ ಸಂಬಂಧ ಇಂದು ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ (MP Renukacharya), ಕಾಂಗ್ರೆಸ್ ಅಂದ್ರೆ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹೆಸರು. ಆರೋಪ ಮಾಡುತ್ತಿರುವ ಡಿಕೆ ಶಿವಕುಮಾರ್​ ಹಗರಣದಲ್ಲಿ ಸ್ವತಃ ಜೈಲಿಗೆ ಹೋದವರು. ಇವರಿಗೆ ನಮ್ಮ ಪಕ್ಷದವರ ಯಾರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.

  ಗುಂಡಾಗಿರಿ ನೀವು ಮಾಡಿಲ್ವಾ?
  ಸಿಎಂ ಸಮ್ಮುಖದಲ್ಲೇ ವೇದಿಕೆ ಮೇಲೆ ಗೂಂಡಾ ರೀತಿಯಲ್ಲಿ ಡಿಕೆ ಸುರೇಶ್​. ಎಡಿಜಿಪಿ ಮದುಕರ್ ರಜೆತೆಗೆದುಕೊಂಡು ಹೋದರು. ಕೆಪಿಎಸ್ ಸಿ  ಪರೀಕ್ಷೆಯಲ್ಲಿ ಪಾಸ್ ಮಾಡೋದಾಗಿ 25  ಲಕ್ಷ ಪಡೆದಿಲ್ವಾ ನೀವು ? ಹಣ ಪಡೆದು ವಾಪಾಸ್ಸ್ ಕೊಡದೇ ಅವರ ಮೇಲೆ ನೀವು ಗೂಂಡಾಗಿರಿ ಮಾಡಿಲ್ವಾ ನೀವು? ಆ ಕುಟುಂಬದ ಮೇಲೆ ಗೂಂಡಾಗಿರಿ, ದೌರ್ಜನ್ಯ ಮಾಡಿದ್ದಾರೆ. ನೈತಿಕ ಹೊಣೆ ಹೊತ್ತು‌ ಸಂಸದ ಸ್ಥಾನಕ್ಕೆ ರಾಜೀನಾಮೆ ‌ಕೊಡಬೇಕು. ನಾನು ಈ ಪ್ರಕರಣವನ್ನು ತನಿಖೆ ಆಗ್ರಹಿಸುತ್ತೆನೆ. ನಿಮ್ಮ ಜಟಾಪಟಿಗೆ ವಿಷಯಾಂತರ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್​ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು

  ಇದನ್ನು ಓದಿ: PSI Recruitment Scam: ಸಿಐಡಿ ವಿಚಾರಣೆಗೆ ಹಾಜರಾಗ್ತಾರಾ ಪ್ರಿಯಾಂಕ್ ಖರ್ಗೆ?

  ದಿವ್ಯ ಹಾಗರಗಿ ಆಗಿರಬಹುದು ಅಥವಾ ಬೇರೆಯವರನ್ನೇ ಆಗಿರಬಹುದು ಬಂಧನ ಮಾಡಿ ತನಿಖೆ ಮಾಡಲಾಗ್ತಿದೆ. ಪ್ರಕರಣದಲ್ಲಿ ಅಶ್ವಥ್ ನಾರಾಯಣ್ ಯಾಕೆ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದರು.

  ಸಿದ್ದರಾಮಯ್ಯ ಅವರೇ ಡಿಕೆಶಿಯಿಂದ ದೂರ ಇರಿ

  ಡಿಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ನಡುವೆ ಜಟಾಪಟಿ ನಡೆಯುತ್ತಿದೆ. ನಾನು ಸಿಎಂ‌ ಆಗಬೇಕು, ನಾನು ಸಿಎಂ ಆಗಬೇಕು ಅಂತ ಪೈಪೋಟಿ ನಡೆದಿದೆ. ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್​​ಗೆ ಬೆಂಬಲ ನೀಡಿದ್ರೆ ಒಳ್ಳೆಯದಾಗಲ್ಲ. ಸಿದ್ದರಾಮಯ್ಯ ಅವರೇ ಡಿಕೆ ಶಿವಕುಮಾರ್​ ಅವರಿಂದ ದೂರ ಇರಿ ಎಂದು ಇದೇ ವೇಳೆ ಮಾಜಿ ಸಿಎಂಗೆ ಬುದ್ಧಿವಾದ ತಿಳಿಸಿದರು.

  ಇದನ್ನು ಓದಿ: Ashwath Narayan ಪರೀಕ್ಷೆ ಬರೆಯದವರಿಗೂ ಸರ್ಟಿಫಿಕೇಟ್ ಕೊಡಿಸಿದ್ರು: HD Kumaraswamy ಆರೋಪ

  ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಚಿವ ಸಂಪುಟ ಯಾವಾಗ ರಚನೆ ಮಾಡಬೇಕು ಅನ್ನೋದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಆದರೆ, ಈ ವಿಚಾರದಲ್ಲಿ ಬಸನಗೌಡ ಯತ್ನಾಳ್ ಯಾವ ರೀತಿ ಹೇಳಿದ್ದಾರೆ ಗೊತ್ತಿಲ್ಲ. ಆದಷ್ಟು ಬೇಗ ಸಚಿವ ಸಂಪುಟ ರಚನೆ ಮಾಡಬೇಕು ಅನ್ನೋ ಒತ್ತಾಯ ಇದೆ ಎಂದರು

  ರಾಮನಗರ ನಾಯಕತ್ವಕ್ಕೆ ನಡೆಯುತ್ತಿರುವ ಫೈಟ್

  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ ಟಿ ಸೋಮಶೇಖರ್​, ರಾಮನಗರ ಜಿಲ್ಲೆಯ ನಾಯಕತ್ವಕ್ಕಾಗಿ ನಡೆಯುತ್ತಿರುವ ಫೈಟ್ ಇದು. ರಾಮನಗರದಲ್ಲಿ ಅಶ್ವಥ್ ನಾರಾಯಣ್ ತೊಡೆ ತಟ್ಟಿದ್ದಕ್ಕೆ ಡಿಕೆ ಶಿವಕುಮಾರ್​ ಹೀಗೆ ಮಾಡುತ್ತಿದ್ದರೆ, ಜಿಲ್ಲೆಯಲ್ಲಿ ಅಶ್ವಥ್ ನಾರಾಯಣ್ ಅವರು ಆಕ್ರಮಣಕಾರಿಯಾಗಿ ಕಾರ್ಯಕ್ರಮ ಜಾರಿ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಅವರ ಮೇಲೆ ಡಿಕೆ ಶಿವಕುಮಾರ್ ಜಿದ್ದು ಬಿದ್ದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ, ಡಿಕೆಶಿ ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ. ಇಬ್ಬರು ತಮ್ಮ ಅಸ್ತಿತ್ವಕ್ಕಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ. ಒಕ್ಕಲಿಗ ಲೀಡರ್ ಶಿಪ್ ಗೆ ತೊಂದರೆ ಆಗುತ್ತದೆ ಅಂತಾ ಅಶ್ವಥ್ ನಾರಾಯಣ್ ಮೇಲೆ ಮುಗಿ ಬಿದ್ದಿದ್ದಾರೆ ಎಂದು ಆರೋಪಿಸಿದ್ದಾರೆ.
  Published by:Seema R
  First published: