HOME » NEWS » State » MP RENUKACHARYA DIG AGAINST SOME BJP MINISTERS IN FRONT OF CM BSY RHHSN

ಸಿಎಂ ಯಡಿಯೂರಪ್ಪ ಸಮ್ಮುಖದಲ್ಲೇ ಕೆಲ ಮಂತ್ರಿಗಳ ವಿರುದ್ಧ ಹರಿಹಾಯ್ದ ರೇಣುಕಾಚಾರ್ಯ!

ನೀವು ನಿಮ್ ಹೆಂಡ್ತಿ ಮಕ್ಕಳ ಜೊತೆ ನೆಮ್ಮದಿಯಾಗಿರಬಹುದು. ಆದರೆ ಯಡಿಯೂರಪ್ಪ ಮನೆಗೆ ಮಾತ್ರ ಮಗ ಬಂದರೆ ತಪ್ಪಾ? ಸಿಎಂ ಜೊತೆ ಅವರ ಮಕ್ಕಳು ಮನೆಯಲ್ಲಿ ಇರೋದು ತಪ್ಪಾ? ಎಂದು ಸಚಿವರ ವಿರುದ್ಧ ರೇಣುಕಾಚಾರ್ಯ ಸಿಎಂ ಬಿಎಸ್ವೈ ಸಮ್ಮುಖದಲ್ಲೇ ಕಿಡಿ ಕಾರಿದರು.

news18-kannada
Updated:January 5, 2021, 3:03 PM IST
ಸಿಎಂ ಯಡಿಯೂರಪ್ಪ ಸಮ್ಮುಖದಲ್ಲೇ ಕೆಲ ಮಂತ್ರಿಗಳ ವಿರುದ್ಧ ಹರಿಹಾಯ್ದ ರೇಣುಕಾಚಾರ್ಯ!
ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ
  • Share this:
ಬೆಂಗಳೂರು; ಸಿಎಂ ಬಿಎಸ್ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಹಾಗೂ ಪಕ್ಷದ ಬಗ್ಗೆ ಆಗಾಗ್ಗೆ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂಪಿ ರೇಣುಕಾಚಾರ್ಯ ಅವರು ಹರಿಹಾಯ್ದಿದ್ದಾರೆ. ಜೊತೆಗೆ ಸಿಎಂ ಜೊತೆಗೆ ಶಾಸಕ ಸಭೆಯಲ್ಲಿ ಯತ್ನಾಳ್ ಮಾತನಾಡುವಾಗ ಮೂಕ ಪ್ರೇಕ್ಷಕರಾಗಿದ್ದ ಸಚಿವರ ವಿರುದ್ಧವೂ ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದ್ದಾರೆ.

ಯತ್ನಾಳ ಮಾತನಾಡುವಾಗ ಯಾಕೆ ಮೂಖ ಪ್ರೇಕ್ಷಕರಾಗಿದ್ರಿ? ಶಾಸಕರು ಬಂದಾಗ ನಿಮ್ ಯಡಿಯೂರಪ್ಪನವರನ್ನು ಕೇಳಿ, ನಮ್ ಹತ್ರ ಏನೂ ಇಲ್ಲ ಅಂತೀರಿ. ಹಾಗಾದರೆ ನಿಮಗೂ ಮುಖ್ಯಮಂತ್ರಿಗಳಿಗೂ ಸಂಬಂಧ ಇಲ್ಲವಾ? ಯಡಿಯೂರಪ್ಪ ತಂದೆ ಸಮಾನ. ಪಕ್ಷ ತಾಯಿ ಸಮಾನ. ಯಡಿಯೂರಪ್ಪನವರ ಜೊತೆ ನಾವೆಲ್ಲಾ ನಿಲ್ಲಬೇಕಿದೆ. ಯಡಿಯೂರಪ್ಪ 150 ಸ್ಥಾನ ಗೆಲ್ಲೋದಾಗಿ ಹೇಳಿದ್ದು ಅವರಿಗಾಗಿ ಅಲ್ಲ, ನಮಗಾಗಿ ಎಂದು ಹೇಳಿದರು.

ಇದನ್ನು ಓದಿ: ಜನ ಸಾಮಾನ್ಯರ ಜೊತೆ ಸಾಲಿನಲ್ಲಿ ನಿಂತು ಸ್ವಸ್ಥ್ಯ ಸಾಥಿ ಕಾರ್ಡ್ ಪಡೆದ ಸಿಎಂ ಮಮತಾ ಬ್ಯಾನರ್ಜಿ

ಯತ್ನಾಳ ಮಾತನಾಡುವಾಗ ಮೂಖ ಪ್ರೇಕ್ಷಕರಾಗಿದ್ದು ಯಾಕೆ? ಒಬ್ಬರೂ ಯಾಕೆ ಮಾತನಾಡಲಿಲ್ಲ? ಯತ್ನಾಳ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ. ಸಿಎಂ ಆರೋಗ್ಯ ಸರಿಯಾಗಿದೆ. ಸಿಎಂ ಆರೋಗ್ಯದ ಬಗ್ಗೆಯೂ ಉಹಾಪೋಹ ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯುತ್ತಿದ್ದಾರೆ. ಯತ್ನಾಳ ವಿರುದ್ದ ಕ್ರಮ ಕೈಗೊಳ್ಳಿ.  ಯಡಿಯೂರಪ್ಪನವರಿಗೆ ಯತ್ನಾಳ ಬಹಳ ನೋವು ಮಾಡಿದ್ದಾರೆ. ಯಡಿಯೂರಪ್ಪನವರೇ ನೀವು ಸಹಿಸಿಕೊಂಡಿರಬಹುದು. ಆದರೆ, ನಾನು ಸಹಿಸಿಕೊಂಡಿರಲು ಸಾಧ್ಯವಿಲ್ಲ.  ಇದಕ್ಕೆಲ್ಲಾ ಮಂತ್ರಿಗಳೇ ಕಾರಣ.

ವಿಧಾನಸೌಧದಲ್ಲಿ ಕುಳಿತುಕೊಂಡೇ ನಾಯಕತ್ವ ಬದಲಾವಣೆ ಸುದ್ದಿ ಹಬ್ಬಿಸುತ್ತಾರೆ. ಪ್ರತಿ ಪಕ್ಷದವರಿಗೂ ಇವರೇ ಹೇಳಿ ಕೊಡ್ತಾರೆ. ಇದಕ್ಕೆಲ್ಲಾ ಕೆಲ ಮಂತ್ರಿಗಳೇ ಕಾರಣ. ನೀವು ನಿಮ್ ಹೆಂಡ್ತಿ ಮಕ್ಕಳ ಜೊತೆ ನೆಮ್ಮದಿಯಾಗಿರಬಹುದು. ಆದರೆ ಯಡಿಯೂರಪ್ಪ ಮನೆಗೆ ಮಾತ್ರ ಮಗ ಬಂದರೆ ತಪ್ಪಾ? ಸಿಎಂ ಜೊತೆ ಅವರ ಮಕ್ಕಳು ಮನೆಯಲ್ಲಿ ಇರೋದು ತಪ್ಪಾ? ಎಂದು ಸಚಿವರ ವಿರುದ್ಧ ರೇಣುಕಾಚಾರ್ಯ ಸಿಎಂ ಬಿಎಸ್ವೈ ಸಮ್ಮುಖದಲ್ಲೇ ಕಿಡಿ ಕಾರಿದರು.
Published by: HR Ramesh
First published: January 5, 2021, 3:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories