ಯಾರಾದ್ರೂ ಊಟ ಹಾಕ್ತಾರೆ ಅಂದ್ರೆ ಬೇಡ ಅನ್ನೋಕೆ ಆಗುತ್ತಾ? ಮೈತ್ರಿಯ ಸುಳಿವು ನೀಡಿದ್ರಾ MP Renukacharya?

ಜೆಡಿಎಸ್  ಅವರು ಸ್ಪರ್ಧೆ ಮಾಡದೆ ಇರುವ  ಕಡೆ ನಮ್ಮ ಅಭ್ಯರ್ಥಿಗಳಿಗೆ ಬೆಂಬಲ ಕೊಡಲಿ, ಯಾರಾದರೂ ಊಟ ಹಾಕ್ತಾರೆ ಎಂದರೇ ಬೇಡ ಎನ್ನಲು ಆಗುವುದಿಲ್ಲ ಎಂದು ಹೇಳುವ ಮೂಲಕ ಮೈತ್ರಿ (BJP-JDS Alliance) ಕುರಿತು ನಡೆದಿರುವ ಮಾತುಕತೆಯ ಸುಳಿವು ಬಿಟ್ಟುಕೊಟ್ಟರು.

ಎಂಪಿ ರೇಣುಕಾಚಾರ್ಯ

ಎಂಪಿ ರೇಣುಕಾಚಾರ್ಯ

  • Share this:
Aಬೆಂಗಳೂರು: ರಾಜಕಾರಣದದಲ್ಲಿ (Politics) ಯಾರು ಶತ್ರುನೂ, ಮಿತ್ರರೂ ಅಲ್ಲ. ರಾಜಕಾರಣ ನಿಂತ ನೀರಲ್ಲ, ಹರಿಯುವ ನೀರು. ಕೇವಲ ಸಂದರ್ಭದಲ್ಲಿ ಹೊಂದಾಣಿಕೆ ಆಗಬಹುದು. ರಾಜ್ಯದಲ್ಲಿ ಬಿಜೆಪಿ (Karnataka BJP) 130 ಸ್ಥಾನಗಳನ್ನು ಗೆಲ್ಲಲಿವೆ.  ಕೇಂದ್ರದಲ್ಲಿ ಸ್ಪಷ್ಟ ಬಹುಮತವಿದೆ. ಜೆಡಿಎಸ್ (JDS) ನವರಿಗೆ ಕೆಲವು ಕಡೆ ಶಕ್ತಿಯಿದೆ ಹಾಗಾಗಿ ಬಿಜೆಪಿಗೆ (BJP) ಬೆಂಬಲ ಕೊಡ್ತಾರೆ ಎಂದು ನಮ್ಮ ನಾಯಕರ ಕೇಳಿರಬಹುದು.  ಅದನ್ನು ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ (MP Renukacharya) ಹೇಳಿದ್ದಾರೆ. ಜೆಡಿಎಸ್  ಅವರು ಸ್ಪರ್ಧೆ ಮಾಡದೆ ಇರುವ  ಕಡೆ ನಮ್ಮ ಅಭ್ಯರ್ಥಿಗಳಿಗೆ ಬೆಂಬಲ ಕೊಡಲಿ, ಯಾರಾದರೂ ಊಟ ಹಾಕ್ತಾರೆ ಎಂದರೇ ಬೇಡ ಎನ್ನಲು ಆಗುವುದಿಲ್ಲ ಎಂದು ಹೇಳುವ ಮೂಲಕ ಮೈತ್ರಿ (BJP-JDS Alliance) ಕುರಿತು ನಡೆದಿರುವ ಮಾತುಕತೆಯ ಸುಳಿವು ಬಿಟ್ಟುಕೊಟ್ಟರು.

ಜೆಡಿಎಸ್ ಬೆಂಬಲ ಸಿಕ್ಕರೆ ನಮ್ಮ ಅಭ್ಯರ್ಥಿಗಳಿಗೆ ಲಾಭ ಅಲ್ಲವಾ ಎಂದು ಪ್ರಶ್ನಿಸಿದ ರೇಣುಕಾಚಾರ್ಯ ಚುನಾವಣೆಯಲ್ಲಿ ಗೆಲವು ಮುಖ್ಯ ಅಂದರು. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿಗಳಾದ ದೇವೇಗೌಡರ ಬಗ್ಗೆ ಕೆಲವು ಬಾರಿ ರಾಜಕೀಯವಾಗಿ ಟೀಕೆ ಮಾಡುತ್ತೇವೆ. ಆದರೆ ಅವರಿಗೂ ಸಾಮರ್ಥ್ಯವಿದೆ. ಆದ್ದರಿಂದ ಅವರು ಬಿಜೆಪಿಗೆ ಬೆಂಬಲ ಕೊಡುವುದರಲ್ಲಿ ತಪ್ಪಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮೈತ್ರಿಗೆ ಆಹ್ವಾನ ನೀಡಿದರು.

ಇದನ್ನೂ ಓದಿ:  Parishath fight- ಪರಿಷತ್ ಚುನಾವಣೆ: ಬಿಜೆಪಿಯನ್ನ ಬೆಂಬಲಿಸಲು ಕುಮಾರಸ್ವಾಮಿಗೆ ಬಿಎಸ್​ವೈ ಮನವಿ

ಕಾಂಗ್ರೆಸ್ ವಿರುದ್ಧ ಜೆಡಿಎಸ್ ನ ಹೋರಾಟವಿದೆ. ಕಾಂಗ್ರೆಸ್ ಗೆ ಹೇಗೆ ಅವರ ಕಾರ್ಯಕರ್ತರು ಮತ ಹಾಕ್ತಾರೆ. ಆದ್ದರಿಂದ ಬೆಂಬಲ ಕೊಡುವುದರಲ್ಲಿ ತಪ್ಪಿಲ್ಲ ಎಂದರು.

ಸರ್ಕಾರ ಬರುವಲ್ಲಿ ರಮೇಶ್ ಜಾರಕಿಹೊಳಿ ಪಾತ್ರವಿದೆ

ಸಹೋದರ ಲಖನ್ ಗೆ ಟಿಕೆಟ್ ಮಿಸ್ ಆಗಿದಕ್ಕೆ ರಮೇಶ್ ಜಾರಕಿಹೊಳಿ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಸರ್ಕಾರ ಬರುವಲ್ಲಿ ರಮೇಶ್ ಜಾರಕಿಹೊಳಿ ಪಾತ್ರವಿದೆ. ಇಲ್ಲ ಎಂದು ಹೇಳಲು ಆಗುವುದಿಲ್ಲ. ಅನಿವಾರ್ಯ ಕಾರಣಗಳಿಂದ ರಾಜೀನಾಮೆ ಕೊಟ್ಟಿದ್ದಾರೆ. ಅವರ ಬಗ್ಗೆ ಅಭಿಮಾನವಿದೆ, ಗೌರವವಿದೆ. ನನ್ನ ಸ್ನೇಹಿತರು, ಮೈತ್ರಿ ಸರ್ಕಾರದದಲ್ಲಿ  ಮಂತ್ರಿ ಆಗಿದ್ದರು.

ಯಡಿಯೂರಪ್ಪ ಸಿಎಂ ಆಗಬೇಕು ಬಿಜೆಪಿಗೆ ಬರುತ್ತೇವೆ ಎಂದು ಹೇಳಿದ್ರು. ನಾನು ಕೂಡು ಬಾರಣ್ಣ ಎಂದು ಹೇಳಿದ್ದೆ. ಅವರ ಘಟನೆ ನಡೆದಾಗ, ಅದು ಷ್ಯಡ್ಯಂತ್ರ ಎಂದು ನೋವು ಆಗಿದೆ. ಅವರ ಬೆಂಬಲದಿಂದ ಸರ್ಕಾರ ರಚನೆ ಆಗಿದೆ‌ ಸೇಮ್ ಟೈಮ್ ಬಿಜೆಪಿದು 105 ಸ್ಥಾನಗಳಿದ್ದವು. ಎರಡು ಸೇರಿಯೇ ಸರ್ಕಾರ ರಚನೆ ಆಗಿದೆ.. ಹಳೆ ಬೇರು ಹೊಸ ಚಿಗುರು ಆಗಿದೆ ಎಂದು ಹೇಳಿದರು.

ಇದನ್ನೂ ಓದಿ: ಸರ್ಕಾರ ಟೂರಿಂಗ್ ಟಾಕೀಸ್ ರೀತಿ ಜನಸ್ವರಾಜ್ ನಾಟಕ ಪ್ರದರ್ಶನ ಮಾಡ್ತಿದೆ: Siddaramaiah

ಜೆಡಿಎಸ್ ಬೆಂಬಲ ಕೇಳಿದ ಯಡಿಯೂರಪ್ಪ

ಬೆಳಗಾವಿ ಜಿಲ್ಲೆಯಲ್ಲಿ 8942 ಮತದಾರರು ಇದ್ದಾರೆ. ಮಹೇಶ್ ಕವಟಗಿಮಠ ಅವರು ಈ ಬಾರಿ ಮೊದಲೇ ಸುತ್ತಿನಲ್ಲಿ ಗೆಲುವು ಸಾಧಿಸಲು ಅನುವಾಗುವಂತೆ ಎಲ್ಲ ಮತದಾರರಿಗೆ ವಿನಂತಿ ಮಾಡುತ್ತೇನೆ. ಹೋದಲ್ಲೆಲ್ಲ ಎಲ್ಲ ಕಡೆಯೂ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಕ್ಕಿದೆ. ಜೆಡಿಎಸ್ ಅಭ್ಯರ್ಥಿ ಹಾಕದ ಸ್ಥಳದಲ್ಲಿ ನಮಗೆ ಬೆಂಬಲ ಕೊಡುತ್ತಾರೆ ಎಂಬ ವಿಶ್ವಾಸ ಇದೆ. ನಮಗೆ ಬೆಂಬಲ ಸೂಚಿಸಬೇಕು ಎಂದು ಎಂದು ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಬಿಎಸ್​ವೈ ಹೇಳಿದ್ದರು.

ಇನ್ನು 20 ಕ್ಷೇತ್ರಗಳ ಪೈಕಿ 17 ಕ್ಷೇತ್ರದಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ. ಕಾರಣಾಂತರಗಳಿಂದ 3 ಕ್ಷೇತ್ರದಲ್ಲಿ ಗೆಲುವು ಕಷ್ಟಕರ ಆಗಲಿದೆ. ಕಾಂಗ್ರೆಸ್ ಸ್ನೇಹಿತರು ಜಾತಿ, ‌ಹಣ, ತೋಳಬಲದಿಂದ ಅಧಿಕಾರ ಬರಲು ಪ್ರಯತ್ನ ಮಾಡುತ್ತಿದೆ ಎಂದು ಬಿ ಎಸ್ ಯಡಿಯೂರಪ್ಪ ಅಭಿಪ್ರಾಯಪಟ್ಟರು.

ನಾವು 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರೂ ಕಾಂಗ್ರೆಸ್ ನವರು ಮಾತ್ರ ಇದುವರೆಗೂ ಪಟ್ಟಿ ಬಿಟ್ಟಿಲ್ಲ. ಕಾಂಗ್ರೇಸ್ ಪಕ್ಷದಲ್ಲಿ ಇದುವರೆಗೂ ಅಭ್ಯರ್ಥಿ ಘೋಷಣೆ ಗೊಂದಲ ಮುಗಿದಿಲ್ಲ ಎಂದು ಯಡಿಯೂರಪ್ಪ ಅವರು ಟೀಕಿಸಿದರು.
Published by:Mahmadrafik K
First published: