HOME » NEWS » State » MP RAMESH JIGAJINAGI WARNS HIS OPPONENTS MVSV SESR

ನಾನಂತೂ ಯಾರ ತಂಟೆಗೆ ಹೋಗೋಲ್ಲ: ನನ್ನ ತಂಟೆಗೆ ಯಾರಾದರೂ ಬಂದರೆ ಸುಮ್ಮನೇ ಬಿಡೋದಿಲ್ಲ: ಸಂಸದ ರಮೇಶ್​ ಜಿಗಜಿಣಗಿ ಎಚ್ಚರಿಕೆ

 ನನ್ನ ವಿರುದ್ಧ ಯಾರು ಏನು ಮಾಡುತ್ತಾರೆ ಎಲ್ಲರಿಗೂ ಗೊತ್ತಿದೆ.  ಅವರಿವರ ಹೆಸರು ಹೇಳುವಷ್ಟು ಸಣ್ಣ ಮನುಷ್ಯ ನಾನಲ್ಲ.  ನಾನು ಎಲ್ಲರಿಗಿಂತ ಹಿರಿಯನಿದ್ದೇನೆ.  ಜಿಲ್ಲೆಯಲ್ಲಿ ಈಗ ರಾಜಕಾರಣ ಮಾಡುತ್ತಿರುವ ಎಲ್ಲರಿಗಿಂತಲೂ ನಾನು ಹಿರಿಯನಿದ್ದೇನೆ.

news18-kannada
Updated:March 2, 2021, 7:33 PM IST
ನಾನಂತೂ ಯಾರ ತಂಟೆಗೆ ಹೋಗೋಲ್ಲ: ನನ್ನ ತಂಟೆಗೆ ಯಾರಾದರೂ ಬಂದರೆ ಸುಮ್ಮನೇ ಬಿಡೋದಿಲ್ಲ: ಸಂಸದ ರಮೇಶ್​ ಜಿಗಜಿಣಗಿ ಎಚ್ಚರಿಕೆ
ರಮೇಶ್​ ಜಿಗಜಿಣಗಿ
  • Share this:
 ವಿಜಯಪುರ (ಮಾ. 02): ಸದಾ ಶಾಂತಚಿತ್ತರಾಗಿಯೇ ಇರುವ  ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಈಗ ಖಡಕ್ಕಾಗಿ ಮಾತನಾಡಿದ್ದಾರೆ.  ಅಲ್ಲದೇ, ತಮ್ಮ ರಾಜಕೀಯ ಎದುರಾಳಿಗಳಿಗೆ ಇದೇ ಮೊದಲ ಬಾರಿಗೆ ಗರಂ ಆಗಿಯೇ ಸಂದೇಶ ರವಾನಿಸಿದ್ದಾರೆ.
ನಾನು ಯಾರ ತಂಟೆಗೂ ಹೋಗೊಲ್ಲ.  ನನ್ನ ತಂಟೆಗೆ ಬಂದರೆ ಬಿಡೋದಿಲ್ಲ.  ನಾನು ಹೆಸರನ್ನೂ ಹೇಳುವುದಿಲ್ಲ.  ನನ್ನನ್ನು ವಿರೋಧಿಸುವವರು ಏನನ್ನಾದರೂ ಮಾಡಿಕೊಂಡು ಹೋಗಲಿ.  ನಾನಂತೂ ಸುಮ್ಮನಿರಲ್ಲ.  45 ವರ್ಷಗಳಿಂದ ಯಾರನ್ನು ನಾನು ಕೆಣಕಿಲ್ಲ.  ಕೆಣಕಲೂ ಬಿಡುವುದಿಲ್ಲ.  ಮೊದಲೇ ಕೈಮುಗಿದು ಹೇಳುತ್ತೇನೆ.  ನನ್ನ ತಂಟೆಗೆ ಯಾರೂ ಬರಲೇಬೇಡಿ.  ಒಂದು ವೇಳೆ ಬಂದರೆ ನಾವು ಹರಿಜನ ಎಂದರೆ ನಮ್ಮ ಕೈಗಳೇನು ಕಿಸೆಯಲ್ಲಿ ಹೋಗಿರುವುದಿಲ್ಲ ಎಂದು  ಎಚ್ಚರಿಕೆ ನೀಡಿದ್ದಾರೆ.

ನನ್ನ ವಿರುದ್ಧ ಯಾರು ಏನು ಮಾಡುತ್ತಾರೆ ಎಲ್ಲರಿಗೂ ಗೊತ್ತಿದೆ.  ಅವರಿವರ ಹೆಸರು ಹೇಳುವಷ್ಟು ಸಣ್ಣ ಮನುಷ್ಯ ನಾನಲ್ಲ.  ನಾನು ಎಲ್ಲರಿಗಿಂತ ಹಿರಿಯನಿದ್ದೇನೆ.  ಜಿಲ್ಲೆಯಲ್ಲಿ ಈಗ ರಾಜಕಾರಣ ಮಾಡುತ್ತಿರುವ ಎಲ್ಲರಿಗಿಂತಲೂ ನಾನು ಹಿರಿಯನಿದ್ದೇನೆ.  45 ವರ್ಷಗಳ ರಾಜಕೀಯ ಅನುಭವವಿದೆ.  ನಾನು ರಾಮಕೃಷ್ಣ ಹೆಗಡೆ, ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಮುಖಂಡ ದಿ. ಬಿ. ಎಂ. ಪಾಟೀಲ ಅವರ ಶಿಷ್ಯನೂ ಹೌದು.  ಎಂದೂ ಕೂಡ ಯಾರ ಬಗ್ಗೆ ಮಾತನಾಡುವುದಿಲ್ಲ, ಮನಸ್ಸನ್ನೂ ನೋಯಿಸುವುದಿಲ್ಲ.  ಯಾರಾದರೂ ಮನಸ್ಸು ನೋಯಿಸಿದರೆ ಅವನನ್ನು ಬಿಡುವುದಿಲ್ಲ ಎಂದರು.

ಹಿಂದೆ ರಾಮಕೃಷ್ಣ ಮತ್ತು ಜೆ. ಎಚ್. ಪಟೇಲ್ ಆವರ ಆಶಯದಂತೆ ನಡೆಯುತ್ತಿತ್ತು.  ಅಂದು ಜನತಾ ದಳ ರಾಜ್ಯಕ್ಕೆ ಮಾತ್ರ ಸೀಮಿತವಾಗಿ ನಂತರ ಬೆಳೆದಿದ್ದು ಬೇರೆ.  ಸಂಪೂರ್ಣ ಜನತಾದಳ ಇದ್ದಾಗ ಈ ಜಿಲ್ಲೆಯಲ್ಲಿ ನಮ್ಮದೇ ನಡೆಯುತ್ತಿತ್ತು.  ಒಳ್ಳೆಯ ಕೆಲಸ ಮಾಡಿದ್ದೇನೆ.  ಬಿಜೆಪಿ ರಾಷ್ಟ್ರೀಯ ಪಕ್ಷ.  ಈಗ ಎಲ್ಲವೂ ನಾನು ಅಂದುಕೊಂಡಂತೆ ನಡೆಯಬೇಕೆಂಬುದು ತಪ್ಪು ಎಂದು ರಮೇಶ ಜಿಗಜಿಣಗಿ ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮುಂಚೆ ಇಬ್ರಾಹಿಂಪೂರ ರೈಲು ನಿಲ್ದಾಣದ ಬಳಿ ವಜ್ರ ಹನುಮಾ ರೇಲ್ವೆ ಕ್ರಾಸಿಂಗ್ 80ರ ಬದಲಿಗೆ ರೂ. 19 ಕೋ. ವೆಚ್ಚದಲ್ಲಿ ನಿರ್ಮಿಸಿರುವ ರೇಲ್ವೆ ಮೇಲ್ಸೇತುವೆ ಉದ್ಘಾಟಿಸಿದರು. ನನಗಂತೂ ತುಂಬಾ ಖುಷಿಯಾಗಿದೆ.  ವಿಮಾನ ನಿಲ್ದಾಣ ಆಗಬೇಕೆಂಬ ಕನಸಿತ್ತು.  ಈಗ ರೇಲ್ವೆ ಮೇಲ್ಸೇತುವೆಯೂ ಆಗಿದೆ. ಅದನ್ನು ನನಸು ಮಾಡಿರುವುದಕ್ಕೆ ಆನಂದಭಾಷ್ಪ ಬರುತ್ತಿದೆ ಎಂದರು.

ಸಂಸದನಾಗಿ ನಾನೇನೂ ಉಪಕಾರ‌ ಮಾಡಿಲ್ಲ.  ಆದರೆ, ತಮ್ಮೆಲ್ಲರ ಸೇವೆ ಮಾಡಿದ್ದೇನೆ.  ತಮ್ಮ ಉಪಕಾರ ನನ್ನ ಮೇಲಿದೆ.  ಇಬ್ರಾಹಿಂಪೂರ ರೇಲ್ವೆ ಮೇಲ್ಸೇತುವೆ ಕಾಮಗಾರಿಯೂ ನಡೆಯುತ್ತಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.  ಈ ಮುಂಚೆ ನಮ್ಮ ಸಂಸದರ ಹಂಗ ಮಾಡಿಲ್ಲ.  ಹಿಂಗ ಮಾಡಿಲ್ಲ ಅಂತಿದ್ದರು.   ಈಗ ನಾನು ಅದನ್ನು‌ ನಾನು ಮಾಡಿ ತೋರಿಸಿದ್ದೇನೆ.  ಕೆಲಸಗಳು ಮಂಜೂರು ಆದ ಮೇಲೆ ಹೇಳುತ್ತೇನೆ. ಕೆಲಸ ಮಾಡಿದ್ದನ್ನು ಯಾವತ್ತೂ ಹೇಳುವುದಿಲ್ಲ.  ಕೆಲಸ‌ ಮಾಡಿಲ್ಲ ಎನ್ನುವ ಜನರೇ ನನಗೆ ಮತ ಹಾಕಿ ಆಯ್ಕೆ ಮಾಡುವುದೇ ಇದಕ್ಕೆ ಸಾಕ್ಷಿ ಎಂದು ಅವರು ತಿಳಿಸಿದರು.

ಇದನ್ನು ಓದಿ: ಮೀಸಲಾತಿ ಕೇಳುವವರಿಗೆ ನಾಚಿಗೆ ಆಗಬೇಕು; ಸ್ವ ಪಕ್ಷೀಯರ ವಿರುದ್ಧವೇ ಗುಡುಗಿದ ಸಂಸದ ಶ್ರೀನಿವಾಸ್​ ಪ್ರಸಾದ್​ಸೊಲ್ಲಾಪುರ ರಸ್ತೆ ಬಿಕಾರಿಯಾಗಿ‌ ಬಿದ್ದಿತ್ತು.  ನಾನು ಚಿಕ್ಕೋಡಿಯಿಂದ‌ ಬಂದ‌ ಮೇಲೆ ಆ ಕೆಲಸವನ್ನು ಮಾಡಿದೆ.  3 ಟೆಂಡರ್ ಆಗಿ 3 ಸಲ ಆ ಕಾಮಗಾರಿ ಮುಂದೂಡಿಕೆಯಾಗಿತ್ತು.  ನಂತರ ಕೇಂದ್ರ ಸಚಿವ ನಿತಿನ ಗಡ್ಕರಿ ಅವರ ಬಳಿಗೆ ಹೋಗಿ ಈ ಕೆಲಸ ಮಾಡಿಸಿದ್ದೇನೆ.  ಈಗ ವಿಜಯಪುರ ಊರ ಭಾಳ ಮುಂದ ಹೋಗಿದೆ.  ರಾಷ್ಟ್ರೀಯ ಹೆದ್ದಾರಿ ಲಿಮ್ಕಾ ದಾಖಲೆ ನಿರ್ಮಿಸಲಿದೆ ಎಂದರು.

ಮುಳವಾಡ, ಲಚ್ಯಾಣ ಬಳಿ ರೇಲ್ವೆ ಮೇಲ್ಸೇತುವೆ, ಸವನಹಳ್ಳಿ ಬಳಿ ರೂ. 57 ಕೋ. ವೆಚ್ಚದಲ್ಲಿ ರೇಲ್ವೆ ಮೇಲ್ಸೇತುವೆ ನಿರ್ಮಾಣವಾಗಲಿದೆ.  ರೈಲ್ಚೆ ಇಲಾಖೆಯನ್ನು ಚಯರುಕಾಗಿಸುವ ಕೆಲಸ ನಡೆಯುತ್ತಿದೆ.  ಸ್ವತಃ ಪ್ರಧಾನಿ ಅವರೇ ಸಭೆ ಮಾಡುತ್ತಿದ್ದಾರೆ.  ಡೀಸೆಲ್ ಆಧರಿತ ರೈಲು ಮಾರ್ಗಗಳಿಗೆ ವಿದ್ಯುತ್ ಸಂಪರ್ಕದ ಮೂಲಕ ಓಡಿಸುವ ಕೆಲಸ ಎಲ್ಲ ಕಡೆ ಭರದಿಂದ ಸಾಗುತ್ತಿದೆ.  ಈಗ ದೇಶ ಮತ್ತು ಜಿಲ್ಲೆಯ್ಲಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ ಎಂದು ಅವರು ತಿಳಿಸಿದರು.
Published by: Seema R
First published: March 2, 2021, 7:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories