Pratap Simha: ಮೋದಿ ಸಂಪುಟದಲ್ಲಿ ಸಚಿವ ಸ್ಥಾನಪಡೆಯಲಿದ್ದಾರಾ ಸಂಸದ ಪ್ರತಾಪ್​ ಸಿಂಹ?

ನಾನು ಸಂಸದನಾಗಿ ಆಯ್ಕೆ ಆಗಿರುವುದೇ ಮೈಸೂರು ಮತ್ತು ಕೊಡಗು ಜನರ ಸೇವೆ ಮಾಡೋದಕ್ಕೆ ಇದಕ್ಕಿಂತ ಒಳ್ಳೆಯ ಅವಕಾಶ ಮತ್ತೊಂದಿಲ್ಲ

ಸಂಸದ ಪ್ರತಾಪ್​​ ಸಿಂಹ.

ಸಂಸದ ಪ್ರತಾಪ್​​ ಸಿಂಹ.

  • Share this:
ಕೊಡಗು (ಜು. 2):  ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಆದಲ್ಲಿ ಕರ್ನಾಟಕದಿಂದ ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಹೊಸದಾಗಿ ಸೇರ್ಪಡೆಯಾಗುವ 27 ಸಂಸದರ ಪಟ್ಟಿಯಲ್ಲಿ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಹೆಸರು ಇದೆ ಎನ್ನಲಾಗಿದೆ. ಈ ಕುರಿತು ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿರುವ  ಸಂಸದ ಪ್ರತಾಪ್ ಸಿಂಹ ನನಗಿಂತ ನಾಲ್ಕೈದು ಬಾರಿ ಬಿಜೆಪಿಯಿಂದ ಆಯ್ಕೆಯಾಗಿರುವ ಸಂಸದರಿಗೆ ಸಚಿವಸ್ಥಾನ ಕೊಡಲಿ. ತುಂಬಾ ಹಿರಿಯ ಸಂಸದರಿದ್ದು, ಹತ್ತಾರು ವರ್ಷಗಳ ಪಕ್ಷಕ್ಕಾಗಿ ದುಡಿದ ಹಿರಿಯರಿಗೆ ಸಚಿವ ಸ್ಥಾನ ಸಿಗಲಿ ಎಂದು ತಿಳಿಸಿದ್ದಾರೆ.

ನಾನು ಸಂಸದನಾಗಿ ಆಯ್ಕೆ ಆಗಿರುವುದೇ ಮೈಸೂರು ಮತ್ತು ಕೊಡಗು ಜನರ ಸೇವೆ ಮಾಡೋದಕ್ಕೆ ಇದಕ್ಕಿಂತ ಒಳ್ಳೆಯ ಅವಕಾಶ ಮತ್ತೊಂದಿಲ್ಲ. ಈ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡೋದಕ್ಕೂ ಯಾವುದೇ ಸಮಸ್ಯೆ ಆಗಿಲ್ಲ. ಮಡಿಕೇರಿಗೆ ಚತುಷ್ಪಥ ರಸ್ತೆ ನಿರ್ಮಾಣದಂತ ಯೋಜನೆಗಳನ್ನು ತರಲು ಮೋದಿಜೀ ಅವರು ಉತ್ತಮ ಸಹಕಾರ ನೀಡಿದ್ದಾರೆ. ಹೀಗಾಗಿ ಪಕ್ಷಕ್ಕಾಗಿ ದುಡಿದ ಹಿರಿಯರಿಗೆ ಮತ್ತು ನಾಲ್ಕೈದು ಬಾರಿ ಸಂಸದರಾಗಿ ಆಯ್ಕೆಯಾಗಿರುವವರಿಗೆ ಸಚಿವಸ್ಥಾನ ನೀಡಲಿ ಎಂದು ನಾನು ಒಳ್ಳೆಯ ಮನಸ್ಸಿನಿಂದ ದೇವರಲ್ಲಿ ಬೇಡುವುದಾಗಿ ಹೇಳಿದ್ದಾರೆ.

ಇದಕ್ಕೂ ಮುಂಚೆ ಮಡಿಕೇರಿಯಿಂದ ಜೋಡುಪಾಲದವರೆಗೆ ರಾಷ್ಟೀಯ ಹೆದ್ದಾರಿ 275 ನ್ನು ಪರಿಶೀಲಿಸಿದ ಸಂಸದ ಪ್ರತಾಪ್ ಸಿಂಹ 2018 ರಲ್ಲಿ ಭಾರಿ ಮಳೆಯಿಂದ ಭೂಕುಸಿತವಾಗಿದ್ದ ಸ್ಥಳಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದರು. ಕೊಡಗು ಜಿಲ್ಲೆಯಲ್ಲಿ 2018 ರಲ್ಲಿ ಸಂಭವಿದ್ದ ಭೂಕುಸಿತದ ವೇಳೆ ಹಲವೆಡೆ ಹೆದ್ದಾಾರಿ ಕುಸಿದು ಮಡಿಕೇರಿ ಮಂಗಳೂರು ನಡುವಿನ ರಸ್ತೆ ಸಂಪರ್ಕವೇ ಕಡಿತವಾಗಿತ್ತು.

ಇದನ್ನು ಓದಿ: ಒಡಿಶಾದಲ್ಲಿ ದಾಖಲೆ ಬರೆದ ಪೆಟ್ರೋಲ್​ ಬೆಲೆ: ಲೀಟರ್​ಗೆ​ 105 ರೂ, ಬೆಂಗಳೂರಿನಲ್ಲಿ ಎಷ್ಟಿದೆ ದರ?

ಈ ಬಾರಿಯೂ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ 22 ಕಡೆಗಳಲ್ಲೂ ಇನ್ನೂ ಕುಸಿತವಾಗುವ ಸಾಧ್ಯತೆ ಇದೆ ಎಂದು ಸಂಸದ ಪ್ರತಾಪ್ ಸಿಂಹ ಆತಂಕ ವ್ಯಕ್ತಪಡಿಸಿದ್ದಾರೆ. 2018 ರಲ್ಲಿ ಕುಸಿದಿದ್ದ ಸ್ಥಳಗಳಲ್ಲಿ 59 ಕೋಟಿ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ ನಡೆಯುತ್ತಿದೆ. ಆದರೆ ಇನ್ನೂ 22 ಕಡೆಗಳಲ್ಲಿ ಹೆದ್ದಾರಿ ಕುಸಿಯುವ ಸಾಧ್ಯತೆ ಇರುವುದರಿಂದ ಅಂತಹ ಸ್ಥಳಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಈ ಕುರಿತು ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ವರದಿ ಕಳುಹಿಸಲಾಗುವುದು. ಅದಕ್ಕಾಗಿ ನೂರು ಅಥವಾ ನೂರಕ್ಕಿಂತಲೂ ಹೆಚ್ಚು ಕೋಟಿ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: 100 ಕಾಫಿ ಮಾರುತ್ತಿದ್ದ ಹಟ್ಟಿ ಕಾಪಿ ಲಾಭಾ ಇಂದು 15 ಕೋಟಿ; ಬೆಂಗಳೂರಿನ ಫಿಲ್ಟರ್​ ಕಾಫಿಯ ಯಶಸ್ಸಿನ ಕಥೆ ಇದು

ಜೂನ್ ತಿಂಗಳು ಸುರಿದ ಮಳೆಗೆ ಹಲವೆಡೆ ಹೆದ್ದಾರಿ ಈಗಾಗಲೇ ಕುಸಿದಿದೆ ಎಂದಿದ್ದಾರೆ. ಕೊಡಗಿನ ಬಹುತೇಕ ಜನರು ಉನ್ನತ ಶಿಕ್ಷಣ ಮತ್ತು ಆರೋಗ್ಯದ ವಿಷಯಗಳಿಗಾಗಿ ಮಂಗಳೂರನ್ನೇ ಅವಲಂಬಿಸಿದ್ದಾರೆ. ಜೊತೆಗೆ ಅತೀ ಹೆಚ್ಚು ಪ್ರವಾಸಿಗರು ಬರುವುದರಿಂದ ಹೆದ್ದಾರಿ ಹಾಳಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by:Seema R
First published: