‘ಮುಸ್ಲಿಮರನ್ನು ಪಕ್ಕಕ್ಕಿಟ್ಟು ಹಿಂದೂರಾಷ್ಟ್ರ ನಿರ್ಮಾಣದ ಮಾತೇ ಇಲ್ಲ’: ತರೂರ್​ ಹೇಳಿಕೆ ವಿರುದ್ಧ ಪ್ರತಾಪ್​ ಸಿಂಹ ಕಿಡಿ


Updated:July 12, 2018, 11:11 PM IST
‘ಮುಸ್ಲಿಮರನ್ನು ಪಕ್ಕಕ್ಕಿಟ್ಟು ಹಿಂದೂರಾಷ್ಟ್ರ ನಿರ್ಮಾಣದ ಮಾತೇ ಇಲ್ಲ’: ತರೂರ್​ ಹೇಳಿಕೆ ವಿರುದ್ಧ ಪ್ರತಾಪ್​ ಸಿಂಹ ಕಿಡಿ

Updated: July 12, 2018, 11:11 PM IST
ನ್ಯೂಸ್​-18 ಕನ್ನಡ

ಬೆಂಗಳೂರು(ಜುಲೈ.12): 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಭಾರತವು 'ಹಿಂದೂ ಪಾಕಿಸ್ತಾನ' ಆಗುವುದರಲ್ಲಿ ಅನುಮಾನವಿಲ್ಲ ಎಂಬ ಹೇಳಿಕೆಗೆ ಬಿಜೆಪಿ ಸಂಸದ ಪ್ರತಾಪ್​ ಸಿಂಹ ಅವರು ಪ್ರತಿಕ್ರಿಯಿಸಿದ್ದು, ಶತಮಾನಗಳಿಂದ ಜಾತಿ ಧರ್ಮದ ಹೆಸರಿನಲ್ಲಿ ಯಾರು ವಿಭಜನೆ ಮಾಡಿದ್ದರು ಎಂದು ಜನತೆಗೆ ಗೊತ್ತಿದೆ ಎನ್ನುವ ಮೂಲಕ ತರೂರ್​ಗೆ ತಿರುಗೇಟು ನೀಡಿದರು.

ಈ ಸಂಬಂಧ ನ್ಯೂಸ್​-18 ಜತೆಗೆ ಮಾತಾಡಿದ ಮೈಸೂರು ಸಂಸದ ಪ್ರತಾಪ್​ ಸಿಂಹ ಅವರು ಕಾಂಗ್ರೆಸ್​ ನಾಯಕರು ಎಲ್ಲ ಸಂದರ್ಭದಲ್ಲೂ ದೇಶವನ್ನು ಹೊಡೆಯುವಂತಹ ಹೇಳಿಕೆ ನೀಡುತ್ತಾರೆ. ಪ್ರಧಾನಿ ಮೋದಿ ಆಗಲಿ, ಅಮಿತ್​ ಶಾ ಆಗಲಿ ಕೋಮುಗಲಭೆ ಸೃಷ್ಟಿಸುವಂತಹ ಹೇಳಿಕೆ ಬಹಿರಂಗವಾಗಿ ನೀಡಿಲ್ಲ ಎಂದು ಕಾಂಗ್ರೆಸ್ ಆರೋಪಕ್ಕೆ​ ಕಿಡಿಕಾರಿದರು.

‘ಬಿಜೆಪಿ ಗುರಿ ಹಿಂದೂ ರಾಷ್ಟ್ರವನ್ನು ಕಟ್ಟುವುದೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರತಾಪ್​ ಸಿಂಹ ಅವರು, ಆರ್​ಎಸ್​ಎಸ್​ ಅಂಖಡ ಭಾರತದ ಕಲ್ಪನೆ ಹೊಂದಿದೆ. ನಿಮ್ಮ ಪೂರ್ವಜರು ಈ ದೇಶದ ಭಾಗವಾಗಿದ್ದರು. ನೀವು ನಿಮ್ಮ ಆರಾಧನೆಗಳನ್ನು ಬದಲಾಯಿಸಿಕೊಂಡಿದ್ದೀರಿ ಎಂದು ನೆನಪು ಮಾಡಿದೆಯೇ ಹೊರತು, ಎಲ್ಲಿಯೂ ಕೂಡ ಮುಸ್ಲಿಮರನ್ನು ಭಾರತದಿಂದ ಹೊರಗಿಟ್ಟು ಹಿಂದೂ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೆ ವೇಳೆ ನಿಮ್ಮ ಹಿನ್ನಲೆ ಅರಬ್​ ದೇಶದಲ್ಲ, ಬದಲಿಗೆ ನಿಮ್ಮ ಪೂರ್ವಜರು ಭಾರತ ಸಂಸ್ಕೃತಿಯ ಭಾಗವಾಗಿದ್ದರು. ಹೀಗಾಗಿ ನೀವೂ ಇಲ್ಲಿ ಸಂಸ್ಕೃತಿಯನ್ನ ಆರಾಧಿಸಿ ಎಂದು ಆರ್​ಎಸ್​ಎಸ್​ ನೆನಪಿಸುತ್ತಿದೆ. ಎಲ್ಲಿಯೂ ಮುಸ್ಲಿಮರನ್ನು ಹೊರಗೆ ಹಾಕುತ್ತೇವೆ ಎಂದು ಹೇಳಿಲ್ಲ ಎಂದು ತಿಳಿಸಿದರು.

 

 
Loading...

 
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...