Shivamogga Murder: ತಮ್ಮದೇ ಸರ್ಕಾರ, ಸಿಎಂ ಬೊಮ್ಮಾಯಿ ವಿರುದ್ಧ MP Pratap Simha ಕೆಂಡಾಮಂಡಲ!

ಸಿಎಂ ಬೊಮ್ಮಾಯಿ ಮಾತು ನಿಲ್ಲಿಸಿ, ಕಠಿಣತೆಯನ್ನು ತೋರಿಸಲಿ ಎಂದು ಭಾವೋದ್ವೇಗದಿಂದ ಪ್ರತಾಪ್ ಸಿಂಹ ಮಾತನಾಡಿದರು. ಸಿಎಂ ಬಸವರಾಜ ಬೊಮ್ಮಾಯಿ ಮಾತು ನಿಲ್ಲಿಸಿ, ಕೃತಿಯಲ್ಲಿ ಕಠಿಣತೆ ತೋರಲಿ ಎಂದು ಆಗ್ರಹಿಸಿದರು.  

ಸಂಸದ ಪ್ರತಾಪ್ ಸಿಂಹ

ಸಂಸದ ಪ್ರತಾಪ್ ಸಿಂಹ

  • Share this:
ಶಿವಮೊಗ್ಗ: ಭಜರಂಗದಳದ ಕಾರ್ಯಕರ್ತ ಹರ್ಷ (Bajrangdal Activist Harsha) ಕೊಲೆ (Murder) ಸಂಬಂಧ ತಮ್ಮದೇ ಬಿಜೆಪಿ ಸರ್ಕಾರದ (BJP Govt) ವಿರುದ್ಧ ಬಿಜೆಪಿ ಸಂಸದ ಪ್ರತಾಪ್ ಸಿಂಹ (MP Pratap Simha) ಆಕ್ರೋಶ ವ್ಯಕ್ತಪಡಿಸಿದರು. ಹರ್ಷ ಕೊಲೆ ಪ್ರಕರಣ ನನಗೆ ಅತೀವ ನೋವು ತಂದಿದೆ. ನಮ್ಮ ಸರ್ಕಾರ ಬಂದ ಮೇಲೂ ಕೊಲೆ ಆಗಿರೋದು ನನಗೆ ನಾಚಿಕೆ ತರ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ಪ್ರತಿ ಹತ್ಯೆ ಆದಾಗಲೂ ಸಿದ್ದರಾಮಯ್ಯರನ್ನು ಬೈಯುತ್ತಿದ್ದೆವು. ಇವತ್ತು ನಮ್ಮದೇ ಸರ್ಕಾರ ಇದೆ, ನಮ್ಮ ಕಾರ್ಯಕರ್ತ ಒಬ್ಬ ಹತ್ಯೆ ಆಗಿದ್ದಾನೆ ಎಂದು ಅಸಮಾಧಾನ ಹೊರ ಹಾಕಿದರು. ಹಿಜಾಬ್ ವಿಚಾರ ಬಂದಾಗ ರಾಜ್ಯಾದ್ಯಂತ ಅಶಾಂತಿ ವಾತಾವರಣ ಸೃಷ್ಟಿಯಾಗಿದೆ, ಹೈಕೋರ್ಟ್​​ನ ಮಧ್ಯಂತರ ಆದೇಶದ ಪಾಲನೆ ಆಗ್ತಿಲ್ಲ. ಶಾಂತಿಗೆ ಭಂಗ ತರೋರ ಮೇಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ. 144 ಸೆಕ್ಷನ್ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಪಾದಿಸಿದರು.

ಇದನ್ನೂ ಓದಿ: Shivamogga Murder: ಹರ್ಷ ಕೊಲೆ ಆರೋಪಿಗಳು ಬೆಂಗ್ಳೂರಿಗೆ ಎಸ್ಕೇಪ್? ತೀವ್ರ ತಪಾಸಣೆ

ಸಿಎಂ ಬೊಮ್ಮಾಯಿ ಕೃತಿಯಲ್ಲಿ ಕಠಿಣತೆ ತೋರಲಿ

ಈಗ ನಮ್ಮ ಕಾರ್ಯಕರ್ತ ಹತ್ಯೆ ಆಗಿದ್ದಾನೆ, ಇನ್ಯಾವಾಗ ಕ್ರಮ ಕೈಗೊಳ್ಳೋದು ಸರ್ಕಾರ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆ ಆದಾಗಲೇ ಎಸ್​ಡಿಪಿಐ, ಪಿಎಫ್ಐ‌ ಮೇಲೆ ಕ್ರಮ ಆಗಬೇಕಿತ್ತು. ಆ ಸಂಘಟನೆಗಳನ್ನು ಬ್ಯಾನ್ ಮಾಡಬೇಕಿತ್ತು. ಆಗಲೇ ಕ್ರಮ ತೆಗೆದುಕೊಂಡಿದ್ದರೆ, ಈಗ ಹರ್ಷ ಸಾಯ್ತಿರಲಿಲ್ಲ. ಕಠಿಣ ಕ್ರಮ, ನಿರ್ದಾಕ್ಷಿಣ್ಯ ಕ್ರಮ ತಗೋತೀವಿ ಅಂತ ಪೇಪರ್ ಸ್ಟೇಟ್ಮೆಂಟ್ ಕೊಟ್ರೆ ಪ್ರಯೋಜನ ಇಲ್ಲ. ಸಿಎಂ ಬೊಮ್ಮಾಯಿ ಮಾತು ನಿಲ್ಲಿಸಿ, ಕಠಿಣತೆಯನ್ನು ತೋರಿಸಲಿ ಎಂದು ಭಾವೋದ್ವೇಗದಿಂದ ಪ್ರತಾಪ್ ಸಿಂಹ ಮಾತನಾಡಿದರು. ಸಿಎಂ ಬಸವರಾಜ ಬೊಮ್ಮಾಯಿ ಮಾತು ನಿಲ್ಲಿಸಿ, ಕೃತಿಯಲ್ಲಿ ಕಠಿಣತೆ ತೋರಲಿ ಎಂದು ಆಗ್ರಹಿಸಿದರು.  ಹೈದರಾಬಾದ್ ನಲ್ಲಿ ಪಶು ವೈದ್ಯೆಯ ಮೇಲೆ ಅತ್ಯಾಚಾರ ಆದಾಗ ಅಪರಾಧಿಗಳನ್ನು ಗುಂಡಿಕ್ಕಿ ಕೊಂದರು. ಅದೇ ರೀತಿ‌ ಇಲ್ಲೂ ಕ್ರಮ ಕೈಗೊಂಡ್ರೆ ಪಾಠ ಕಲೀತಾರೆ ಎಂದು ಪ್ರತಾಪ್ ಸಿಂಹ ಗುಡುಗಿದರು.

ಶಿವಮೊಗ್ಗಕ್ಕೆ ಬೆಂಗಳೂರಿಂದ ಖಾಕಿ ಪಡೆ ರವಾನೆ

ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನಲೆಯಲ್ಲಿ ಹೆಚ್ಚವರಿ ಭದ್ರತೆಗೆ ಬೆಂಗಳೂರು ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ಸ್​​ಪೆಕ್ಟರ್​​ , ಸಬ್ ಇನ್ಸ್​​​​​ಪೆಕ್ಟರ್ ಸೇರಿ 212 ಜನ ಪೊಲೀಸರನ್ನ ಭದ್ರತೆಗೆ ಕಳುಹಿಸಲಾಗಿದೆ. ತಕ್ಷಣವೇ ಶಿವಮೊಗ್ಗಕ್ಕೆ ಹೊರಡುವಂತೆ ಪೊಲೀಸ್​ ಇಲಾಖೆ ಆದೇಶ ಹೊರಡಿಸಿದೆ. ಈ ಹಿಂದೆ ಶಿವಮೊಗ್ಗ ಭಾಗದಲ್ಲಿ ಕೆಲಸ ಮಾಡಿದ್ದ ಪೊಲೀಸರನ್ನೇ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಸಂಜೆ ವೇಳೆ ಪರಿಸ್ಥಿತಿ ನೋಡಿಕೊಂಡು ಮತ್ತಷ್ಟು ಪೊಲೀಸರನ್ನು ನಿಯೋಜನೆ ಮಾಡುವ ಸಾಧ್ಯತೆ ಇದೆ. ಬಂದೋಬಸ್ತ್ ಗೆ ಹೋಗುವಂತಹ ಅಧಿಕಾರಿಗಳು ಪಿಸ್ತೂಲ್ ಕಡ್ಡಾಯವಾಗಿ ಕೊಂಡೊಯ್ಯಬೇಕು. ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ಗೆ ಪಿಸ್ತೂಲ್ / ರಿವಾಲ್ವರ್ ಕಡ್ಡಾಯ. ಪೊಲೀಸ್​​ ಸಿಬ್ಬಂದಿ ಬಳಿ ಲಾಠಿ ಮತ್ತು ಹೆಲ್ಮೆಟ್  ಕಡ್ಡಾಯವಾಗಿ ಇರಬೇಕು ಎಂದು ಪೊಲೀಸ್ ಆಯುಕ್ತರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: Explained: ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಟಾರ್ಗೆಟ್ ಆಗಿದ್ದೇಕೆ? ನಿನ್ನೆ ರಾತ್ರಿ ನಡೆದಿದ್ದು ಏನು?

ಏನಿದು ಘಟನೆ..?

ನಿನ್ನೆ ರಾತ್ರಿ ಶಿವಮೊಗ್ಗದ ಭಾರತಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಬಜರಂಗದಳದ ಕಾರ್ಯಕರ್ತ ಹರ್ಷ ಎಂಬ ಯುವಕನನ್ನು ಕಳೆದ ರಾತ್ರಿ ಭೀಕರವಾಗಿ ಕೊಲೆ ಮಾಡಲಾಗಿದೆ. ಮೃತ ಹರ್ಷ ಕಳೆದ ರಾತ್ರಿ 9 ಗಂಟೆಯ ಸುಮಾರಿಗೆ ಕಾಮತ್ ಪೆಟ್ರೋಲ್ ಬಂಕ್ ಬಳಿಯಲ್ಲಿ ಹರ್ಷ ಎಂಬಾತನನ್ನು ಅಟ್ಟಾಡಿಸಿಕೊಂಡು ಬಂದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಇರಿದು ಪರಾರಿಯಾಗಿದ್ದರು. ದುಷ್ಕರ್ಮಿಗಳಿಂದ ಮಾರಾಣಾಂತಿಕವಾಗಿ ಗಾಯಗೊಂಡು ಹರ್ಷ ನರಳುತ್ತಾ ಬಿದ್ದಿರುವ ವಿಚಾರ ಸ್ನೇಹಿಕರು ಹಾಗೂ ಮನೆಯವರಿಗೆ ಗೊತ್ತಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಅವರೆಲ್ಲ, ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಅದನ್ನು ವೈದ್ಯರು ದೃಢಪಡಿಸಿದ್ದಾರೆ.
Published by:Kavya V
First published: