ಡಿಕೆಶಿ ಸಿಎಂ ಆಗಬಾರದು ಎಂದು ಸಿದ್ದರಾಮಯ್ಯ ಉಪಚುನಾವಣಾ ಸೋಲು ಬಯಸಿದ್ದಾರೆ; ಸಂಸದ ಪ್ರತಾಪ್​ ಸಿಂಹ

ಕಾಂಗ್ರೆಸ್ ಹಾಳಾದರೂ ಸರಿ ಡಿ ಕೆ ಶಿವಕುಮಾರ್‌ಗೆ ಯಾವುದೇ ಸ್ಥಾನ ಸಿಗಬಾರದು ಎಂಬುದು  ಸಿದ್ದರಾಮಯ್ಯ ಉದ್ದೇಶ. ಅದೇ ಕಾರಣಕ್ಕೆ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲನ್ನು ಸಿದ್ದರಾಮಯ್ಯ ಬಯಸುತ್ತಿದ್ದಾರೆ. 

ಸಂಸದ ಪ್ರತಾಪ್​​ ಸಿಂಹ.

ಸಂಸದ ಪ್ರತಾಪ್​​ ಸಿಂಹ.

  • Share this:
ಮೈಸೂರು (ನ.10): ಶಿರಾ ಹಾಗೂ ರಾಜಾರಾಜೇಶ್ವರಿ ನಗರ ಎರಡು ಕ್ಷೇತ್ರದಲ್ಲಿ ದೊಡ್ಡ ಅಂತರದಲ್ಲಿ  ಗೆಲ್ಲುತ್ತಿದ್ದೇವೆ. ಶಿರಾ ಕ್ಷೇತ್ರದಲ್ಲಿ 70 ವರ್ಷದಲ್ಲಿ ಇಂತಹ ಅವಕಾಶ ಸಿಕ್ಕಿರಲಿಲ್ಲ. ಈಗ ಸಂಘಟಿತರಾಗಿ ಹೋರಾಟ ಮಾಡಿದಕ್ಕೆ ಗೆಲುವು ಸಿಕ್ಕಿದೆ ಎಂದು ಸಂಸದ ಪ್ರತಾಪ್​ ಸಿಂಹ ಹರ್ಷ ವ್ಯಕ್ತಪಡಿಸಿದರು. ಉಪಚುನಾವಣೆಯಲ್ಲಿ ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡು ಮುನ್ನಡೆ ಸಾಧಿಸಿದೆ ಎಂಬ ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಅವರು,  ಉಪಚುನಾವಣೆ ಆಡಳಿತ ಪಕ್ಷದ ಪರವಾಗಿರುತ್ತವೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಉಪಚುನಾವಣೆಯಲ್ಲಿ ಮಾಡಿದ್ದೇನು? ನಂಜನಗೂಡು ಚಾಮರಾಜನಗರ ಉಪಚುನಾವಣೆ ಹೇಗೆ ಗೆದ್ದರು? ಉಪ ಚುನಾವಣೆ ಹೇಗೆ ಮಾಡಬೇಕು ಅಂತಾ ಮೇಲ್ಪಂಕ್ತಿಯನ್ನು ಹಾಕಿಕೊಟ್ಟವರೇ ಕಾಂಗ್ರೆಸ್‌ನವರು. ಉಪಚುನಾವಣೆಯಲ್ಲಿ ಎಲ್ಲಾ ಬಲಗಳು ಬಳಕೆಯಾಗುವುದು ಸಹಜ. ಕಾಂಗ್ರೆಸ್ ಸೋತಾಗ ಅವರಿಗೆ ಇವಿಎಂ ನೆನಪಾಗುತ್ತದೆ. ಅವರು ಗೆದ್ದ ಕಡೆ ಈ ಬಗ್ಗೆ ಪ್ರಶ್ನೆ ಮಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. 

ಸೋಲಿಗೆ ಇವಿಎಂ ದೋಷಿಸುವುದು ಕಾಂಗ್ರೆಸ್​ ಪರಿಪಾಟಲಾಗಿದೆ. ಇವಿಎಂ ವಿಚಾರದಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗಿದೆ. ಅಮೆರಿಕಾ ಚುನಾವಣೆಯಲ್ಲೂ ಇದು ಸಾಬೀತಾಗಿದೆ ಎಂದರು.

ಡಿಕೆ ಶಿವಕುಮಾರ್​ಗೆ ಅಧಿಕಾರ ಸಿಗಬಾರದು ಎಂಬುದು ಸಿದ್ದರಾಮಯ್ಯ ಉದ್ದೇಶ: 

ಕಾಂಗ್ರೆಸ್ ಹಾಳಾದರೂ ಸರಿ ಡಿ ಕೆ ಶಿವಕುಮಾರ್‌ಗೆ ಯಾವುದೇ ಸ್ಥಾನ ಸಿಗಬಾರದು ಎಂಬುದು  ಸಿದ್ದರಾಮಯ್ಯ ಉದ್ದೇಶ. ಅದೇ ಕಾರಣಕ್ಕೆ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲನ್ನು ಸಿದ್ದರಾಮಯ್ಯ ಬಯಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗುವುದು ಕಾಂಗ್ರೆಸ್ ಪರಂಪರೆ. ಇದು ಸಿದ್ದರಾಮಯ್ಯಗೆ ಗೊತ್ತಿದೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಿ ಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಇದನ್ನು ತಪ್ಪಿಸಲು ಡಿ ಕೆ ಶಿವಕುಮಾರ್‌ರನ್ನು ಚುನಾವಣೆಯಲ್ಲಿ ಸೋಲಿಸಬೇಕು. ಆದರೆ ಪರಮೇಶ್ವರ ಅವರನ್ನು ಸೋಲಿಸಿದಂತೆ ಡಿಕೆಶಿ ಸೋಲಿಸಲು ಸಾಧ್ಯವಿಲ್ಲ. ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಹೀಗಾಗಿ ಪಕ್ಷದ ಹಿನ್ನೆಡೆಗೆ ಅವರೇ ಕಾರಣರಾಗುತ್ತಿದ್ದಾರೆ ಎಂದು ದೂರಿದರು.

ಇದನ್ನು ಓದಿ: ಕೋಲಾರದ ಶ್ರೀನಿವಾಸಪುರ ಪುರಸಭೆ ಆಡಳಿತದ ಚುಕ್ಕಾಣಿ ಹಿಡಿದ ಜೆಡಿಎಸ್; ಕಾಂಗ್ರೆಸ್​​ಗೆ ತೀವ್ರ ಮುಖಭಂಗ

ಬಿಜೆಪಿ ಜೊತೆ ಸಿದ್ದರಾಮಯ್ಯ ಕೈ ಜೋಡಿಸಿದ್ದಾರೆ:

ಸಿದ್ದರಾಮಯ್ಯ ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾಗಿರವ ಬಗ್ಗೆ ಗುಮಾನಿ ಇದೆ.  ನಮ್ಮ ಪಕ್ಷದ ನಮಗಿಂತ ಹೆಚ್ಚಾಗಿ ಸಿದ್ದರಾಮಯ್ಯಗೆ ಗೊತ್ತಾಗುತ್ತಿದೆ. ಸಿದ್ದರಾಮಯ್ಯ ಅವರಿಗೆ ಯಾವ ಮೂಲದಿಂದ ಇದು ಗೊತ್ತಾಗಿದೆ ಗೊತ್ತಿಲ್ಲ. ಬಹುಶಃ ಅವರು ನಮ್ಮ ಕೇಂದ್ರದ ನಾಯಕರ ಸಂಪರ್ಕ ಸಾಧಿಸಿರಬಹುದು. ಕಾಂಗ್ರೆಸ್‌ನಲ್ಲಿ ನನಗೆ ಉಳಿಗಾಲವಿಲ್ಲವೆಂದು ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾಗಿರಬಹುದು. ಇದರಿಂದ ಅವರು ಈ ರೀತಿ ಹೇಳಿಕೆ ನೀಡುತ್ತಿರಬಹುದು. ಮುಂದಿನ ಎರಡುವರೇ  ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Published by:Seema R
First published: