• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Politics: ಆ ಭೇದಿ ಗಬ್ಬು ವಾಸನೆಗೆಲ್ಲಾ ನಾನು ರಿಯಾಕ್ಷನ್ ಮಾಡಲ್ಲ; ಪ್ರತಾಪ್ ಸಿಂಹ

Karnataka Politics: ಆ ಭೇದಿ ಗಬ್ಬು ವಾಸನೆಗೆಲ್ಲಾ ನಾನು ರಿಯಾಕ್ಷನ್ ಮಾಡಲ್ಲ; ಪ್ರತಾಪ್ ಸಿಂಹ

ಸಿದ್ದರಾಮಯ್ಯ ಮತ್ತು ಪ್ರತಾಪ್ ಸಿಂಹ

ಸಿದ್ದರಾಮಯ್ಯ ಮತ್ತು ಪ್ರತಾಪ್ ಸಿಂಹ

ಸಿದ್ದರಾಮಯ್ಯ ಅವರು ಯಾವಾಗಲೂ ಆಧಾರ ರಹಿತವಾಗಿ ಟ್ವೀಟ್ ಮಾಡುವುದು ಸರಿಯಲ್ಲ. ಅವರು ಮಾಡುವುದು ಟ್ವೀಟ್ ಬೇದಿ ಎಂದರು.

  • Share this:

ಕೊಡಗು ಜಿಲ್ಲೆಯ ಸೋಮವಾರಪೇಟೆ (Somavarapete, Kodagu) ಒಕ್ಕಲಿಗರ ಸಂಘದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸಂಸದ ಪ್ರತಾಪ್ ಸಿಂಹ (MP Pratap Simha) ಭಾಗಿಯಾಗಿದ್ದರು. ಈ ವೇಳೆ ಕಾಂಗ್ರೆಸ್ ಪ್ರತಿಭಟನೆ (Congress Protest) ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಅವರ  ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ನವರಿಗೆ ಸರ್ಕಾರದ ಬಗ್ಗೆ ಮಾತನಾಡುವುದಕ್ಕೆ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನೆ ಮಾಡಿದರು. ಗುಜರಾತ್ ಹಿಂಸಾಚಾರ (Gujarat Violence) ವಿಷಯದಲ್ಲಿ ಎಸ್ಐಟಿ (SIT) ನಾಲ್ಕಾರು ಬಾರಿ ಕರೆದು ವಿಚಾರಣೆ ಮಾಡಿದರು. ಅಮಿತ್ ಶಾ ಜಿಯನ್ನು (Amit Shah) ಅನ್ಯಾಯವಾಗಿ ಒಂದು ಕೊಲೆ ಪ್ರಕರಣದಲ್ಲಿ ಸೇರಿಸಿ ಅವರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡಿದ್ದರು. ಹಾಗಂತ ಕಾಂಗ್ರೆಸ್ ಎಸ್ಐಟಿಯನ್ನು ದುರ್ಬಳಕೆ ಮಾಡಿಕೊಂಡಿತು  ಎಂದು ನಾವು ಹೇಳಿದ್ದೆವಾ ಎಂದು ಕೇಳಿದರು.


ಇಷ್ಟೆಲ್ಲಾ ಮಾಡಿದ ಕಾಂಗ್ರೆಸ್ ಇಡಿ ವಿಚಾರಣೆಗೆ ಕರೆಯುತ್ತಿದ್ದಂತೆ ಬೊಬ್ಬೆ ಹೊಡೆಯುತ್ತಿದ್ದಾರೆ. ಅವರಿಗೆ ಮಾತನಾಡುವುದಕ್ಕೆ ಯಾವ ನೈತಿಕ ಹಕ್ಕಿದೆ. ಭ್ರಷ್ಟಾಚಾರವನ್ನು ತನಿಖೆ ಮಾಡುವುದೇ ತಪ್ಪಾ ಎಂದು ಪ್ರಶ್ನಿಸಿದರು.


ಭ್ರಷ್ಟಾಚಾರ ಪ್ರಜಾಪ್ರಭುತ್ವದ ಭಾಗ ಎನ್ನುವುದಾದರೆ ಪ್ರಜಾಪ್ರಭುತ್ವದ ಹರಣ ಅಲ್ಲವೇ? ಇಲ್ಲದಿದ್ದರೆ ಪ್ರಜಾಪ್ರಭುತ್ವದ ಹರಣ ಹೇಗೆ ಆಗುತ್ತದೆ? ಕಾಂಗ್ರೆಸ್ ನವರಿಗೆ ಉಳಿದಿರುವುದು ಒಂದೇ ರಾಜ್ಯ. ರಾಜಸ್ಥಾನದಿಂದಲೂ ಅವರನ್ನು ಮುಂದಿನ ಚುನಾವಣೆಯಲ್ಲಿ ಜನರು ಕಿತ್ತೆಸೆಯಲಿದ್ದಾರೆ ಎಂದು ಪ್ರತಾಪ್ ಸಿಂಹ ಭವಿಷ್ಯ ನುಡಿದರು.


ಇದನ್ನೂ ಓದಿ:  KIMSನಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಬೆಳ್ಳಂಬೆಳಗ್ಗೆ ಆಸ್ಪತ್ರೆ ಆವರಣದಲ್ಲಿ ಪತ್ತೆಯಾದ ಕಂದಮ್ಮ


ನಾನು ರಿಯಾಕ್ಟ್ ಮಾಡಲ್ಲ


ಕ್ವಿಟ್ ಇಂಡಿಯಾ ಚಳವಳಿ ಸಂದರ್ಭ RSS ಬ್ರಿಟಿಷರಿಗೆ ಸಹಾಯ ಮಾಡಿತ್ತೆಂದು ಎಂಬ ಸಿದ್ದರಾಮಯ್ಯ ಅವರ ಟ್ವೀಟ್ ಗೆ ಪ್ರತಿಕ್ರಿಸಿದರು. ಸಿದ್ದರಾಮಯ್ಯ ಯಾವಾಗಲೂ ಟ್ವೀಟ್ ನಲ್ಲಿ ಭೇದಿ ಮಾಡಿಕೊಳ್ಳುವುದೇ ಆಯಿತು. ಆ ಭೇದಿ ಗಬ್ಬು ವಾಸನೆಗೆಲ್ಲಾ ನಾನು ರಿಯಾಕ್ಷನ್ ಮಾಡಲ್ಲ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದರು.


ಸಿದ್ದರಾಮಯ್ಯ ಅವರು ಯಾವಾಗಲೂ ಆಧಾರ ರಹಿತವಾಗಿ ಟ್ವೀಟ್ ಮಾಡುವುದು ಸರಿಯಲ್ಲ. ಅವರು ಮಾಡುವುದು ಟ್ವೀಟ್ ಬೇದಿ ಎಂದರು.


ಕಾಂಗ್ರೆಸ್ ವಿರುದ್ಧ  ತೇಜಸ್ವಿ ಸೂರ್ಯ ವಾಗ್ದಾಳಿ


ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ತನಿಖೆ ಆಗಬಾರದು ಮತ್ತು ಇಡಿ ಅಧಿಕಾರಿಗಳ ಮೇಲೆ ಬ್ಲಾಕ್ ಮೇಲ್ ಮಾಡೋದಕ್ಕೆ ಕಾಂಗ್ರೆಸ್‌ ಹೋರಾಟಕ್ಕೆ ಇಳಿದಿರೋದು ದೌರ್ಭಾಗ್ಯ ಎಂದು ಅಸಮಾಧಾನ ಹೊರ ಹಾಕಿದರು.


ನ್ಯಾಯಾಂಗ ವ್ಯವಸ್ಥೆ ಮೇಲೆ ಭರವಸೆ ಇದ್ದಿದ್ದರೆ ಕಾಂಗ್ರೆಸ್‌ ತನಿಖೆ ಎದುರಿಸಬೇಕಿತ್ತು. ರಾಜಕೀಯ ಪ್ರೇರಿತ ಪ್ರಕರಣಗಳನ್ನ ಹಿಂದೆ ಕಾಂಗ್ರೆಸ್‌ ಬಿಜೆಪಿ ಮೇಲೆ ದಾಖಲಿಸುತ್ತಿತ್ತು. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಒಬ್ಬರೇ ಹೋಗಿ ಸತತ 10 ಗಂಟೆ ಕಾಲ ವಿಚಾರಣೆ ಎದುರಿಸಿದ್ದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಭ್ರಷ್ಟಾಚಾರ ಆಗಿರೋದು ಪ್ರಾಥಮಿಕ ಹಂತದಲ್ಲೇ ಕಂಡು ಬರುತ್ತಿದೆ,. ಭ್ರಷ್ಟಾಚಾರ ಮಾಡಿಲ್ಲ ಅಂದ್ರೆ ತನಿಖೆಗೆ ಒಳಗಾಗಿ, ಆರೋಪದಿಂದ ಹೊರ ಬರಲಿ ಎಂದು ಸವಾಲು ಹಾಕಿದರು.


ತನಿಖೆ ದಿಕ್ಕು ತಪ್ಪಿಸಲು ಪ್ರತಿಭಟನೆ


ಭ್ರಷ್ಟಾಚಾರ ಮಾಡಿದ್ರೆ ಸಾಮಾನ್ಯರಂತೆ ಶಿಕ್ಷೆ ಅನುಭವಿಸಲಿ. ಈ ದೇಶ ಗಾಂಧಿ ಕುಟುಂಬ ದಿಕ್ಕಿನಲ್ಲಿ ನಡೆಯಲ್ಲ. ಸಂವಿಧಾನದ ಪ್ರಕಾರ ನಡೆಯುತ್ತಿದ್ದು, ಸಂವಿಧಾನದ ಮುಂದೆ ಎಲ್ಲರೂ ಸಮಾನರು. ಈ ತನಿಖೆ ದಿಕ್ಕು ತಪ್ಪಿಸಲು ಸಾವಿರಾರು ಜನರನ್ನ ಬೀದಿಗೆ ಇಳಿಸಿ ಪ್ರತಿಭಟನೆ ಮಾಡಿಸುತ್ತಿದೆ ಎಂದು ಆರೋಪಿಸಿದರು.


ಇದನ್ನೂ ಓದಿ:  Congress Protest: ನಿಮ್ಮ ಅಸ್ತಿತ್ವವೇ ಶೂನ್ಯ, ಕಾಂಗ್ರೆಸ್ ಪೋಣಿಸಿದ ಸುಳ್ಳಿನ ಮಣಿ ಭಗ್ನ; ಕೈ ಪ್ರತಿಭಟನೆಗೆ ಬಿಜೆಪಿ ತಿರುಗೇಟು


ಒಂದು ಕಾಲದಲ್ಲಿ ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ಕ್ಕಾಗಿ ಹೋರಾಡುತ್ತಿತ್ತು. ಇದೀಗ ಕಾಂಗ್ರೆಸ್‌ ಯುವರಾಜನ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಕಾಂಗ್ರೆಸ್‌ ದೌರ್ಭಾಗ್ಯ ಎಂದು ಹೇಳಿದರು.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು