Mysuru Bus Shelter Row: ಮೈಸೂರಿನ ಬಸ್ ನಿಲ್ದಾಣದ ವಿವಾದ ಅಂತಿಮ ಘಟ್ಟಕ್ಕೆ ಬಂದಿದ್ದು, ಶಾಸಕ ರಾಮದಾಸ್ (MLA SA Ramdas) ನಿಲ್ದಾಣದ ಮೇಲಿದ್ದ ಮೂರು ಗುಂಬಜ್ಗಳ ಪೈಕಿ ಎರಡನ್ನು ತೆರವುಗೊಳಿಸಿದ್ದಾರೆ. ಎರಡು ಗುಂಬಜ್ ತೆರವುಗೊಳಿಸಿದ ಬಳಿಕ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದ ಶಾಸಕರು, ಹಲವು ವಿಷಯಗಳನ್ನು ಹಂಚಿಕೊಂಡಿದ್ದರು. ತಮ್ಮ ಮೂವತ್ತು ವರ್ಷದ ರಾಜಕಾರಣದಲ್ಲಿ (Politics) ಈ ರೀತಿಯ ವಿವಾದ ಎಂದೂ ಸಹ ನಡೆದಿರಲಿಲ್ಲ. ಅನಾವಶ್ಯಕವಾಗಿ ಧರ್ಮದ ಲೇಪನ ಮಾಡುವ ಯತ್ನಗಳು ನಡೆದಿದ್ದವೂ ಎಂಬ ಆರೋಪವನ್ನು ತಮ್ಮ ಪ್ರಕಟಣೆಯಲ್ಲಿ ಮಾಡಿದ್ದರು. ಬಸ್ ನಿಲ್ದಾಣದ ಮೇಲಿನ ಗುಂಬಜ್ ನಿರ್ಮಾಣ (Gumbaz Model Bus Shelter) ವಿಷಯ ರಾಮದಾಸ್ ಮತ್ತು ಸಂಸದ ಪ್ರತಾಪ್ ಸಿಂಹ (MP Pratap Simha) ಅವರ ನಡುವೆ ಶೀತಲ ಸಮರಕ್ಕೆ ಕಾರಣವಾಗಿತ್ತು. ಇದೀಗ ಗುಂಬಜ್ ತೆರವು ಬಳಿಕ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಟ್ವಿಟ್ಟರ್ನಲ್ಲಿ ಮೂರು ಫೋಟೋ ಹಂಚಿಕೊಂಡಿರುವ ಪ್ರತಾಪ್ ಸಿಂಹ ಅವರು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಅವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ಹೇಳಿಕೆಯ ವಿಡಿಯೋ ಕ್ಲಿಪ್ ಟ್ವೀಟ್ ಮಾಡಿದ್ದಾರೆ.
ಪ್ರತಾಪ್ ಸಿಂಹ ಪ್ರತಿಕ್ರಿಯೆ
ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗು ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜಿ ಅವರಿಗೂ ಧನ್ಯವಾದಗಳು ಎಂದು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಮೂರು ಫೋಟೋಗಳು
ಸಂಸದರು ಒಟ್ಟು ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಮಸೀದಿಯ ಮಾದರಿ ನಕ್ಷೆ. ಮತ್ತೊಂದು ಬಸ್ ನಿಲ್ದಾಣದ ಮೇಲೆ ನಿರ್ಮಾಣ ಮಾಡಲಾಗಿದ್ದ ಮೂರು ಗುಂಬಜ್ ಇರೋ ಫೋಟೋ, ಕೊನೆಯದ್ದು ಒಂದೇ ಗುಂಬಲ್ ಇರುವ ಫೋಟೋ.
ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗು ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜಿ ಅವರಿಗೂ ಧನ್ಯವಾದಗಳು. pic.twitter.com/9b1wPLULJ4
— Pratap Simha (@mepratap) November 27, 2022
ವಿಪಕ್ಷ ಉಪನಾಯಕ ಯು.ಟಿ.ಖಾದರ್ (UT Khader), ನಮ್ಮದು ಊರು ಮತ್ತು ಜನರ ಮನಸ್ಸು ಕಟ್ಟುವ ಕೆಲಸ. ಕೆಲವರದ್ದು ಜನರ ಮನಸ್ಸು ಮತ್ತು ಊರು ಒಡೆಯುವ ಕೆಲಸ. ಅವರು ಒಡೆದುಕೊಂಡು ಹೋಗಲಿ, ನಾವು ಕಟ್ಟಿಕೊಂಡು ಹೋಗ್ತೇವೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: Mysuru Bus Shelter: ಬಸ್ ನಿಲ್ದಾಣದ ಮೇಲಿನ ಎರಡು ಗುಂಬಜ್ ತೆರವು; ಅನಾವಶ್ಯಕವಾಗಿ ಧರ್ಮದ ಲೇಪನ ಅಂದ್ರು ರಾಮದಾಸ್!
#BJPvsBJP ಕಿಚ್ಚು ಎಷ್ಟಿದೆ ಎನ್ನಲು ಮೈಸೂರಿನಲ್ಲಿ ನಡೆಯುತ್ತಿರುವ ಪ್ರತಾಪ್ ಸಿಂಹ vs ರಾಮದಾಸ್ ಕಾಳಗವೇ ಸಾಕ್ಷಿ. ಶಾಸಕರು ಕಟ್ಟಿಸಿದ ಬಸ್ ನಿಲ್ದಾಣವನ್ನು ಸಂಸದ ಒಡೆಯಲು ಹೊರಟಿದ್ದಾರೆ. ಬೇರೆಯವರ ಮನೆಯ ದೋಸೆಯ ತೂತನ್ನು ಹುಡುಕುವ ಬದಲು ಬಿಜೆಪಿ ತಮ್ಮ ಮನೆಯ ಕಾವಲಿಯ ತೂತುನ್ನು ನೋಡಿಕೊಂಡರೆ ಒಳಿತು ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವ್ಯಂಗ್ಯ ಮಾಡಿತ್ತು.
ಪಾಲಿಕೆಗೆ ನೋಟಿಸ್
ಇನ್ನು ಬಸ್ ನಿಲ್ದಾಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಧ್ಯ ಪ್ರವೇಶಿಸಿದ್ದು, ಪಾಲಿಕೆ ನೋಟಿಸ್ ನೀಡಿದೆ. ಊಟಿ ಮಾರ್ಗದ ಬಲಭಾಗದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಬಸ್ ನಿಲ್ದಾಣವನ್ನು ಒಂದು ವಾರದೊಳಗೆ ತೆರವುಗೊಳಿಸುವಂತೆ ನೋಟಿಸ್ ನೀಡಿದೆ.
ಇದನ್ನೂ ಓದಿ: Mysuru: ಬಸ್ ಶೆಲ್ಟರ್ ವಿವಾದಕ್ಕೆ ನಾಟಕೀಯ ತಿರುವು; ಸ್ವಾಮೀಜಿ, ಪ್ರಧಾನಿ, ಸಿಎಂ ಫೋಟೋ ಅಳವಡಿಕೆ
ಸಿಎಂ ಭೇಟಿಯಾಗಿ ರಾಮದಾಸ್ ವಿವರಣೆ
ಇನ್ನು ಗುಂಬಜ್ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕ ರಾಮದಾಸ್ ಅವರು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸುಮಾರು 45 ನಿಮಿಷಗಳ ಕಾಲ ಮಾತನಾಡಿದ್ದರು ಈ ವೇಳೆ ಗುಂಬಜ್ ಮಾದರಿಯ ಬಸ್ ನಿಲ್ದಾಣ ನಿರ್ಮಾಣದ ಕುರಿತ ಮಾಹಿತಿ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ