ಮೈಸೂರು: ಹಿರಿಯ ರಾಜಕಾರಣಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ನರೇಂದ್ರ ಮೋದಿ (Narendra Modi) ಅವರಿಗೆ ವಿಷದ ಹಾವು ಎಂದು ಟೀಕಿಸಿದ್ದನ್ನು ವಿರೋಧಿಸಿ ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಅವರು ಕಿಡಿಕಾರಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಪ್ರತಾಪ್ ಸಿಂಹ ಅವರು, ಮಲ್ಲಿಕಾರ್ಜುನ ಖರ್ಗೆ ಅವರೇ, ಸಿದ್ದರಾಮಯ್ಯನವರ ಛಾಳಿ ನಿಮಗೆ ಅಂಟೋದು ಬೇಡ. ನೀವು ಮತ್ತೊಬ್ಬ ಸಿದ್ದರಾಮಯ್ಯ ಆಗಬೇಡಿ ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಮತ್ತು ದೇಶದ ರಾಜಕೀಯ ದೊಡ್ಡ ವ್ಯಕ್ತಿ. ಆದರೆ ಹಲವು ಬಾರಿ ನಾಲಿಗೆ ಜಾರಿ ಮಾತನಾಡುತ್ತಾರೆ ಎಂದಿರುವ ಸಂಸದ ಪ್ರತಾಪ್ ಸಿಂಹ, ಈ ಹಿಂದೆ ಲೋಕಸಭೆಯಲ್ಲೂ ಸ್ವಾತಂತ್ರ್ಯಕ್ಕೆ ಬಿಜೆಪಿಯ ಒಂದು ನಾಯಿಕೂಡ ಸತ್ತಿಲ್ಲ ಅಂತ ಹೇಳಿದ್ರು. ಈಗ ಮೋದಿ ಜೀ ಬಗ್ಗೆ. ಕಾಂಗ್ರೆಸ್‌ನ ಅಧ್ಯಕ್ಷ ಪದವಿ ಇರುವಂತಹ ವ್ಯಕ್ತಿಯಿಂದ ಇಂತಹ ಕುಬ್ಜ ಮಾತುಗಳನ್ನ ನಾವು ಸಹಿಸೋದಿಲ್ಲ. ಈ ರೀತಿ ಹತಾಶೆಯಿಂದ ಅಪ್ರಬುದ್ದವಾಗಿ ಮಾತನಾಡೋದು ಸರಿಯಿಲ್ಲ. ಇದು ಕಾಂಗ್ರೆಸ್‌ನ ಸಂಸ್ಕೃತಿಯನ್ನ ತೋರಿಸುತ್ತದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: Pralhad Joshi: ಕರ್ನಾಟಕಕ್ಕೆ ನರೇಂದ್ರ ಮೋದಿ ಆದೇಶ ಪಾಲಿಸುವ ಸಿಎಂ ಮತ್ತು ಮಂತ್ರಿ ಬೇಕಾಗಿದೆ: ಪ್ರಹ್ಲಾದ್ ಜೋಶಿ
ಮುತ್ಸದ್ದಿ ರಾಜಕಾರಣಿಯಾಗಿ ಹೀಗೆ ಮಾತಾಡಬಾರದು
ಮುಂದುವರಿದು ಮಾತನಾಡಿರುವ ಪ್ರತಾಪ್ ಸಿಂಹ, ಮಲ್ಲಿಕಾರ್ಜುನ ಖರ್ಗೆಯವರು ಹಿರಿಯ ರಾಜಕೀಯ ಮುತ್ಸದ್ಧಿಯಾಗಿದ್ಧಾರೆ. ಅಂತಹ ಹಿರಿಯ ನಾಯಕರ ಬಾಯಲ್ಲಿ ಇಂತಹ ಮಾತುಗಳು ಬರಬಾರದು. ಸಿದ್ಧರಾಮಯ್ಯ ಎಲ್ಲರನ್ನೂ ಏಕ ವಚನದಲ್ಲೇ ಟೀಕಿಸುತ್ತಾರೆ. ಸಿದ್ಧರಾಮಯ್ಯನವರ ಸಹವಾಸ ಮಾಡಿರುವ ಮಲ್ಲಿಕಾರ್ಜುನ ಖರ್ಗೆಯವರಿಗೂ ಅದೇ ಬುದ್ದಿ ಬಂದಿದೆ. ಸಿದ್ಧರಾಮಯ್ಯನವರ ಚಾಳಿ ಮಲ್ಲಿಕಾರ್ಜುನ ಖರ್ಗೆಯವರಿಗೂ ಅಂಟಿಕೊಂಡಿದೆ. ಮಲ್ಲಿಕಾರ್ಜುನ ಖರ್ಗೆಯವರು ಹಿರಿಯ ನಾಯಕರಾಗಿದ್ಧು, ಅವರನ್ನು ನಾನು ಗೌರವಿಸುತ್ತೇನೆ, ಅವರ ವಿರುದ್ಧ ಅತ್ಯುಗ್ರವಾಗಿ ಟೀಕೆ ಮಾಡುವುದಿಲ್ಲ. ಇನ್ನು ಮುಂದೆ ಈ ರೀತಿ ಮಾತನಾಡದಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ನಿಮ್ಮ ಹಿನ್ನೆಲೆ ಮತ್ತು ಅನುಭವಕ್ಕೆ ಇದು ಶೋಭೆಯಲ್ಲ.
ಖರ್ಗೆಯವರೇ ರಾಜ್ಯದಲ್ಲಿ 7-8 ಎಸ್ಸಿ ಎಸ್ಟಿ ರಿಸರ್ವ್ ಸೀಟುಗಳಿವೆ. ಅಷ್ಟುನ್ನೂ ಬಿಜೆಪಿಗೆ ಕೊಟ್ಟಿದ್ದೀರಾ ಎಂದಿರುವ ಪ್ರತಾಪ್ ಸಿಂಹ, ಇಡೀ ದೇಶದಾದ್ಯಂತ 87 ಜನ ಎಸ್ಸಿ ಎಸ್ಟಿ ಸಂಸದರು ನಮ್ಮಲ್ಲಿದ್ದಾರೆ. ಇಡೀ ಹಿಂದುಳಿದ ಜಾತಿ ಜನಾಂಗ ನಮ್ಮ ಪರವಾಗಿದೆ. ಆದ್ರೆ ನೀವು ಆ ಜಾತಿ ಜನಾಂಗಕ್ಕೆ ಸೇರಿ ಆ ಜನರ ವಿಶ್ವಾಸವನ್ನೇ ಗಳಿಸಿಲ್ಲ. 2018ರಲ್ಲಿ ಸೋಲು ಅನುಭವಿಸಿದ್ದೀರಿ. ನಿಮ್ಮ ಸಮಾಜವೇ ನಿಮ್ಮನ್ನ ಒಪ್ಪುತ್ತಿಲ್ಲ. ಈ ರೀತಿ ಹತಾಶೆಯಿಂದ ಅಪ್ರಬುದ್ದವಾಗಿ ಮಾತನಾಡೋದು ಸರಿಯಿಲ್ಲ. ನಿಮ್ಮ ಹಿನ್ನೆಲೆ ಮತ್ತು ಅನುಭವಕ್ಕೆ ಇದು ಶೋಭೆಯಲ್ಲ. ಇದನ್ನ ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Siddaramaiah: ಶೋಭಾ ಕರಂದ್ಲಾಜೆಯನ್ನು ವಿಚಾರಣೆಗೊಳಪಡಿಸಿ ಚುನಾವಣಾ ಪ್ರಚಾರದಿಂದ ನಿಷೇಧಿಸಿ: ಸಿದ್ದರಾಮಯ್ಯ ಆಕ್ರೋಶ
ಇನ್ನು, ನಿಮ್ಮ ಬಗ್ಗೆ ಗೌರವ ಇದೆ, ಆದರೆ ನಿಮ್ಮ ಮಟ್ಟಕ್ಕೆ ಇಳಿದು ಮಾತನಾಡುತ್ತಿಲ್ಲ. ಕರ್ನಾಟಕ ನಾಚಿಕೆ ಪಡುವಂತಹ ಹೇಳಿಕೆ ಕೊಡಬೇಡಿ ಎಂದ ಪ್ರತಾಪ್ ಸಿಂಹ, ನೀವು ಇನ್ನೊಂದು ಸಿದ್ದರಾಮಯ್ಯ ಆಗಬೇಡಿ. ಸಿದ್ದರಾಮಯ್ಯ ಛಾಳಿ ನಿಮಗೆ ಅಂಟೋದು ಬೇಡ. ಅವರು ಮಾತ್ರ ಇನ್ನೊಬ್ಬರ ಬಗ್ಗೆ ಹೀಗೆ ತುಚ್ಚವಾಗಿ ಮಾತನಾಡೋದು. ದಯಮಾಡಿ ನೀವು ಮತ್ತೊಬ್ಬ ಸಿದ್ದರಾಮಯ್ಯ ಆಗಬೇಡಿ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ