Siddaramaiah: ಸಂಸದ ಪ್ರತಾಪ್ ಸಿಂಹ ಒಬ್ಬ ಅಪ್ರಬುದ್ಧ ವ್ಯಕ್ತಿ: ಸಿದ್ದರಾಮಯ್ಯ‌ ಟಾಂಗ್

ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಆದರೆ, ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಸಿದ್ದರಾಮಯ್ಯ , ಪ್ರತಾಪ್​ ಸಿಂಹ

ಸಿದ್ದರಾಮಯ್ಯ , ಪ್ರತಾಪ್​ ಸಿಂಹ

  • Share this:
ಬೆಂಗಳೂರು (ಜೂನ್ 10): ಮೈಸೂರಿನ ಮಹಿಳಾ ಐಎಎಸ್ ಅಧಿಕಾರಿಗಳ ಕಿತ್ತಾಟಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದ್ದರೂ, ರಾಜಕೀಯ ಮೇಲಾಟಗಳು ನಿಂತಿಲ್ಲ. ಮಳೆ ನಿಂತರೂ ಮಳೆ ಹನಿ ನಿಲ್ಲದು ಎಂಬ ಹಾಗೆ, ರಾಜಕಾರಣಿಗಳು ಕೆಸರೆರಚಾಟ ಮುಂದುವರಿಸಿದ್ದಾರೆ. ಈ ಸಂಬಂಧ ರೋಹಿಣಿ ಸಿಂಧೂರಿಗೆ ಸಿದ್ದರಾಮಯ್ಯ ಅವರು ಬೆಂಬಲಿಸಿದ್ದಾರೆ ಎಂಬರ್ಥ ದಲ್ಲಿ ಸಂಸದ ಪ್ರತಾಪ್ ಸಿಂಹ 'ಸಿದ್ದರಾಮಯ್ಯಗಾರು' ಎಂದು ಸಂಬೋಧಿಸಿದ್ದರು. ಇದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದೀಗ ಟಾಂಗ್ ನೀಡಿದ್ದಾರೆ. ತಮ್ಮ ನಿವಾಸದಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಪ್ರತಾಪ್ ಸಿಂಹ ಇಮ್ಮೆಚ್ಯೂರ್ಡ್ ವ್ಯಕ್ತಿ, ಅಪ್ರಬುದ್ಧತೆ ಯಿಂದ ಅವನು ಇನ್ನೂ ಹೊರಬಂ ದಿಲ್ಲ. ಅಪ್ರಬುದ್ಧ ರಾಜಕಾರಣದಿಂದ ಆತ ಹೊರಬರಬೇಕು. ಸಿದ್ದರಾಮಯ್ಯಗಾರು ಎಂದಿದ್ದಾನೆ ಪ್ರತಾಪ್ ಸಿಂಹ. ತನಗೆ ತೆಲುಗು ಬರುತ್ತೆ ಎಂದು ತೋರಿಸುತ್ತಿದ್ದಾನೆ. ಬಹುವಚನದಲ್ಲಿ ಮಾತಾಡಿದ್ದಾನೆ ಪರ್ವಾಗಿಲ್ಲ. ಅವನ ಮಾತುಗಳನ್ನು ನಾನು ಸ್ಪೋರ್ಟಿವ್ ಆಗಿ ತೆಗೆದುಕೊಳ್ಳುವೆ ಎಂದರು.

ಹಾಲು ಒಕ್ಕೂಟ ಸೂಪರ್‍ಸಿಡ್ ಆಗಲಿ :ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ಹಗರಣದ ಬಗ್ಗೆ ಸಹಕಾರ ಸಚಿವರು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಮಾತನಾಡಿ ತನಿಖೆಗೆ ಒತ್ತಾಯ ಮಾಡಿದ್ದೇನೆ. ತನಿಖೆಗೂ ಮೊದಲು ಇಡೀ ಒಕ್ಕೂಟವನ್ನು ಸೂಪರ್ ಸಿಡ್ ಮಾಡಬೇಕಾಗುತ್ತದೆ.

ಲಸಿಕೆ ಪಕ್ಷದ ಕಾರ್ಯಕ್ರಮವಲ್ಲ:

ಶಾಸಕರ ಅನುದಾನದಲ್ಲಿ ಕೊರೊನಾ ಲಸಿಕೆ ಖರೀದಿ ಮಾಡಿ ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡಿದರೆ ಅದು ಪಕ್ಷದ ಕಾರ್ಯಕ್ರಮ ಹೇಗಾಗುತ್ತದೆ. ಅದು ನನಗೆ ಪತ್ರ ಬರೆದಿರುವ ಸಚಿವ ನಾರಾಯಣಗೌಡರ ಕಲ್ಪನೆ. ಲಸಿಕೆ ನೀಡುವಲ್ಲಿ ಸರ್ಕಾರ ವಿಫಲವಾಗಿರುವುದರಿಂದ ನಾವು ಆ ಕೆಲಸ ಮಾಡಲು ಮುಂದಾಗಿದ್ದೆವು. ಬಿಜೆಪಿ ಶಾಸಕರೂ ತಮ್ಮ ಕ್ಷೇತ್ರದ ಅನುದಾದನದಲ್ಲಿ ಲಸಿಕೆ ಖರೀದಿ ಮಾಡಿ ಜನರಿಗೆ ಕೊಡಲಿ. ಬೇಡ ಎಂದವರು ಯಾರು ? ಶಾಸಕರ ಕ್ಷೇತ್ರಗಳಿಗೆ ಬಿಡುಗಡೆ ಮಾಡುವ ಅನುದಾನದಲ್ಲಿ ಶೇ. 50ರಷ್ಟನ್ನು ಕೊರೊನಾ ನಿಯಂತ್ರಣಕ್ಕೆ ಬಳಕೆ ಮಾಡುವಂತೆ ಸರ್ಕಾರವೇ ಹೇಳಿದೆ.

ಶಾಸಕರು ತಮ್ಮ ಸ್ವಂತ ಹಣವನ್ನು ಲಸಿಕೆ ಖರೀದಿ ಮಾಡಲಿ ಎಂದು ನಾರಾಯಣಗೌಡರು ಹೇಳಿದ್ದಾರೆ. ಶಾಸಕರು ಸ್ವಂತ ಖರ್ಚಿನಿಂದ ಆಂಬ್ಯುಲೆನ್ಸ್, ಮೆಡಿಸನ್ ಕಿಟ್ ಮತ್ತಿತರ ಸಾಮಗ್ರಿಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ನಮಗೆ ಸಚಿವರಿಂದ ಪಾಠ ಅನಗತ್ಯ.
ಭೂ ಹಗರಣ ಸತ್ಯಾಂಶ ಹೊರಬರಲಿ:

ಮೈಸೂರಿನ ಭೂ ಹಗರಣಗಳ ಬಗ್ಗೆ ತನಿಖೆ ನಡೆದು ಸತ್ಯಾಂಶ ಹೊರಬರಬೇಕು. ಈ ವಿಷಯದಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತು ರೋಹಿಣಿ ಸಿಂಧೂರಿ ಹೇಳಿಕೆಗಳನ್ನು ನೀಡಿದ್ದಾರೆ. ಆ ಬಗ್ಗೆ ತನಿಖೆಯಾಗಬೇಕು. ರಾಜ ಕಾಲುವೆ ಮೇಲೆ ಮಾಜಿ ಸಚಿವ ಸಾ.ರಾ. ಮಹೇಶ್ ಕಲ್ಯಾಣ ಮಂಟಪ್ಪ ಕಟ್ಟಿದ್ದಾರೋ ಇಲ್ಲವೋ ಎಂಬುದು ಸಹ ತನಿಖೆ ನಡೆದಾಗ ಮಾತ್ರ ಗೊತ್ತಾಗುತ್ತದೆ. ಕೊರೊನಾ ಸೋಂಕಿತರ ಮರಣ ಪ್ರಮಾಣದ ಬಗ್ಗೆ ಸರ್ಕಾರ ನಿಖರವಾದ ಅಂಕಿ-ಅಂಶ ನೀಡುತ್ತಿಲ್ಲ. ಸತ್ಯಾಂಶ ಮುಚ್ಚಿಡುತ್ತಿದೆ.

ಇದನ್ನೂ ಓದಿ: Sushant Singh Rajput: ನಟ ಸುಶಾಂತ್ ಸಿಂಗ್ ಸಾವಿನ ಕುರಿತ ಚಿತ್ರಕ್ಕೆ ತಡೆ ನೀಡಲು ಸಾಧ್ಯವಿಲ್ಲ: ದೆಹಲಿ ಹೈಕೋರ್ಟ್​

ಬೆಂಕಿ ಇಲ್ಲದೆ ಹೊಗೆಯಾಡದು, ಬಿಎಸ್‍ವೈ, ಹೈಕಮಾಂಡ್ ಎರಡೂ ದುರ್ಬಲ:

ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಆದರೆ, ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಇದನ್ನೂ ಓದಿ: Corona Death| ಒಂದೇ ದಿನದಲ್ಲಿ ದಾಖಲೆ ಬರೆದ ಕೊರೋನಾ ಸಾವಿನ ಸಂಖ್ಯೆ: ಇಷ್ಟು ದಿನ ಸುಳ್ಳು ವರದಿ ನೀಡಿತೇ ಬಿಹಾರ?

ಯಡಿಯೂರಪ್ಪ ಅವರನ್ನು ಬದಲಿಸಿ ಎಂದು ನಾವ್ಯಾರೂ ಒತ್ತಾಯ ಮಾಡಿಲ್ಲ. ಆ ಬಗ್ಗೆ ಚರ್ಚೆ ನಡೆಯುತ್ತಿದೆ ದೆಹಲಿಯಲ್ಲಿ ಎಂದು ಹೇಳಿದ್ದೆ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದಾದರೆ ಶಾಸಕರಾದ ಬಸನಗೌಡ ಯತ್ನಾಳ್, ಅರವಿಂದ ಬೆಲ್ಲದ್, ವಿಶ್ವನಾಥ್, ರೇಣುಕಾಚಾರ್ಯ ಹಾಗೂ ಸಚಿವ ಯೋಗೀಶ್ವರ್ ವಿರುದ್ಧ ಏಕೆ ಬಿಜೆಪಿ ಹೈ ಕಮಾಂಡ್ ಕ್ರಮ ಕೈಗೊಂಡಿಲ್ಲ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಎರಡೂ ದುರ್ಬಲ. ಅರುಣಸಿಂಗ್ ಬದಲಾವಣೆ ಬಗ್ಗೆ ಮಾತನಾಡಬೇಡಿ ಎಂದಿದ್ದಾರೆ.

ಹಾಗಾದರೆ ಬದಲಾವಣೆ ಆಗಬೇಕು ಎಂದವರ ವಿರುದ್ಧ ಏಕೆ ಕ್ರಮವಿಲ್ಲ. ಇದರಿಂದ ರವಾನೆಯಾಗುವ ಸಂದೇಶ ಏನು ? ಯಡಿಯೂರಪ್ಪ ಅವರೇ ಕಳಪೆ ಮುಖ್ಯಮಂತ್ರಿ. ಇನ್ನು ಬೇರೆಯವರು ಹೇಗಿರಬೇಕು ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

(ವರದಿ: ದಶರಥ್ ಸಾವೂರು)
Published by:MAshok Kumar
First published: