ಸಿದ್ದರಾಮಯ್ಯ ಬಣಕ್ಕೆ ಜಮೀರ್, ಡಿಕೆಶಿ ಬಣಕ್ಕೆ ನಲಪಾಡ್ ವೈಸ್ ಕ್ಯಾಪ್ಟನ್: Pratap Simha ವ್ಯಂಗ್ಯ

ಸಿದ್ದರಾಮಯ್ಯನವರ ಬಣಕ್ಕೆ ಜಮೀರ್ ವೈಸ್ ಕ್ಯಾಪ್ಟನ್..  ಡಿಕೆ ಶಿವಕುಮಾರ್ ಬಣಕ್ಕೆ ಪರ್ಶಿಯನ್ ಗಫೂರ್ ಪುಂಡ ಯೂತ್ ಕಾಂಗ್ರೆಸ್ ಪ್ರೆಸಿಡೆಂಟ್ ವೈಸ್ ಕ್ಯಾಪ್ಟನ್ ಎಂದು ನಲಪಾಡ್ ಹೆಸರು ಹೇಳದೆ ವ್ಯಂಗ್ಯವಾಡಿದರು. 

ಸಂಸದ ಪ್ರತಾಪ್​​ ಸಿಂಹ

ಸಂಸದ ಪ್ರತಾಪ್​​ ಸಿಂಹ

  • Share this:
ಕೊಡಗು : ಹಿಂದೆ ಸಿದ್ಧರಾಮಯ್ಯನವರ (Siddaramaiah) ನೇತೃತ್ವದಲ್ಲಿದ್ದ ಸರ್ಕಾರ ನಮ್ಮ ಹಿಂದೂ ಕಾರ್ಯಕರ್ತರ (Hindu Activist) ಕಗ್ಗೊಲೆ ಮಾಡುತ್ತಿದ್ದವರನ್ನು ಪೋಷಿಸುತಿತ್ತು. ಹಾಗೆ ಪೋಷಣೆಗೊಂಡವರಿಂದ ಅನಾಚಾರ ಈಗಲೂ ಮುಂದುವರೆದಿದೆ ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ (MP Pratap Simha) ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದರು. ಮಡಿಕೇರಿಯ ಕ್ರಿಸ್ಟಲ್ ಕೋರ್ಟ್ ಹಾಲ್ ನಲ್ಲಿ ನಡೆದ BJP ಕೊಡಗು ಜಿಲ್ಲಾ ಪ್ರಶಿಕ್ಷಣಾ ವರ್ಗದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ರಾಜ್ಯ ಕಾಂಗ್ರೆಸ್​​ನಲ್ಲಿ ಎರಡು ಬಣಗಳಿವೆ. ಸಿದ್ದರಾಮಯ್ಯನವರದ್ದು ಒಂದು ಬಣ, ಡಿ.ಕೆ ಶಿವಕುಮಾರ್  ಅವರದ್ದು ಒಂದು ಬಣ. ಸಿದ್ದರಾಮಯ್ಯನವರ ಬಣಕ್ಕೆ ಜಮೀರ್ ವೈಸ್ ಕ್ಯಾಪ್ಟನ್..  ಡಿಕೆ ಶಿವಕುಮಾರ್ ಬಣಕ್ಕೆ ಪರ್ಶಿಯನ್ ಗಫೂರ್ ಪುಂಡ ಯೂತ್ ಕಾಂಗ್ರೆಸ್ ಪ್ರೆಸಿಡೆಂಟ್ ವೈಸ್ ಕ್ಯಾಪ್ಟನ್ ಎಂದು ನಲಪಾಡ್ ಹೆಸರು ಹೇಳದೆ ವ್ಯಂಗ್ಯವಾಡಿದರು. 

ಇದನ್ನೂ ಓದಿ: Mandya: ‘ಅಂದು ವಿದ್ಯಾರ್ಥಿನಿ ಅಲ್ಲಾಹು ಅಕ್ಬರ್ ಬದಲು, ಭಾರತ್ ಮಾತಾ ಕೀ ಜೈ ಎಂದು ಕೂಗಲಿಲ್ಲ ಏಕೆ?’

ಅವರಿಬ್ಬರು ಹೊರಗಿನವರು ಎಂದ ಸಿಂಹ 

ಈ ಇಬ್ಬರು ಅಲೆಮಾರಿ ಪರಿಸ್ಥಿತಿಯವರು. ಈ ಅಲೆಮಾರಿಗಳನ್ನು ಇಟ್ಟುಕೊಂಡಿರುವ ಕಾಂಗ್ರೆಸಿನವರಿಗೆ ಅಧಿಕಾರ ಕೊಟ್ಟರೆ ರಾಜ್ಯದ ಪರಿಸ್ಥಿತಿ ಏನಾಗಬಹುದು. ಆ ಮೂಲಕ ಜಮೀರ್ ಅಹಮ್ಮದ್ ಮತ್ತು ನಲಪಾಡ್ ಇಬ್ಬರು ಹೊರಗಿನಿಂದ ಬಂದವರು ಎಂಬುವ ರೀತಿಯಲ್ಲಿ ವಾಗ್ದಾಳಿ ನಡೆಸಿದರು. ಕಾಂಗ್ರೆಸಿನವರು ಅಧಿಕಾರಕ್ಕೆ ಬಂದರೆ ಮುಂದೆಯೂ ಇದೇ ರೀತಿ ಹಿಂದೂ ಕಾರ್ಯಕರ್ತರ ಕಗ್ಗೊಲೆಗಳು ನಡೆಯುತ್ತವೆ ಎಂದು ಆಪಾದಿಸಿದರು. ಇದನ್ನು ಯೋಚಿಸಿ ಎಂದು ಪ್ರಶಿಕ್ಷಣಾ ವರ್ಗದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರಿಗೆ ಪ್ರತಾಪ್ ಸಿಂಹ ಹೇಳಿದರು.

ಮುಸ್ಲಿಂ ರಾಷ್ಟ್ರವಾಗಬೇಕೆಂಬ ದುರುದ್ದೇಶ ಇದೆ

ಇನ್ನು ಕಾರ್ಯಕ್ರಮಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಎಂಎಲ್​​ಸಿ ಗಣೇಶ್ ಕಾರ್ಣಿಕ್,  ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನನ್ನು ಹತ್ಯೆ ಮಾಡುವ ಮೂಲಕ ದೇಶದಲ್ಲಿ ದೇಶದಲ್ಲಿ ಭಯೋತ್ಪಾದನೆ ಸೃಷ್ಟಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಭಾರತೀಯ ಪುನರುತ್ಥಾನವನ್ನು ಸಹಿಸದ ಮತ್ತು ಭಾರತೀಯ ಸಂವಿಧಾನವನ್ನು ಒಪ್ಪದ ಮನಸ್ಸುಗಳಿಂದ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ. ನಾವು ಪ್ರತ್ಯೇಕ, ಇದೊಂದು ಮುಸ್ಲಿಂ ರಾಷ್ಟ್ರವಾಗಬೇಕೆಂಬ ದುರುದ್ದೇಶದಿಂದ ದೇಶದ ಶಾಂತಿ ಸುವ್ಯವಸ್ಥೆ ಹಾಳು ಮಾಡಲಾಗುತ್ತಿದೆ. ಹರ್ಷನ ಹತ್ಯೆ ಮಾಡಿರುವವರಿಗೂ, ಹರ್ಷನಿಗೂ ಯಾವುದೇ ವೈಯಕ್ತಿಕ ದ್ವೇಷಗಳಿರಲಿಲ್ಲ. ಆದರೂ ಉದ್ದೇಶ ಪೂರ್ವವಾಗಿಯೇ ಹತ್ಯೆ ಮಾಡಲಾಗಿದೆ.

ಇದನ್ನೂ ಓದಿ: ನಿಜಕ್ಕೂ Hijabಗಾಗಿ ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯರ ಸಂಖ್ಯೆ ಇಷ್ಟೇನಾ? ಶಿಕ್ಷಣ ಇಲಾಖೆಯಿಂದ ಅಂಕಿಅಂಶ

ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಹರ್ಷ ಎಲ್ಲಿಗೆ ಹೋಗುತ್ತಿದ್ದ, ಎಷ್ಟೊತ್ತಿಗೆ ಹೋಗಿ ಬರುತ್ತಿದ್ದ ಎಂಬುದನ್ನು ಚನ್ನಾಗಿ ಗಮನಿಸಿ ಪ್ಲಾನ್ ಮಾಡಿ ಹತ್ಯೆ ಮಾಡಲಾಗಿದೆ. ಹತ್ಯೆಯ ಹಿಂದೆಗೆ ಹಿಜಬ್ ವಿಚಾರ ಕೂಡ ತಳಕು ಹಾಕಿಕೊಂಡಿದೆ. ಇದರ ಹಿಂದೆ ಎಸ್ ಡಿಪಿಐ, ಸಿಎಫ್ಐಗಳ ಕೈವಾಡವಿದೆ ಎನ್ನೋದು ಪ್ರಾಥಮಿಕವಾಗಿ ಗೊತ್ತಾಗುತ್ತಿದೆ. ಅದೆಲ್ಲವನ್ನೂ ಸರ್ಕಾರ ಪತ್ತೆ ಹಚ್ಚಬೇಕಾಗಿದೆ. ಈಗ ಸರ್ಕಾರ ಅರೆಸ್ಟ್ ಮಾಡಿರುವ 7 ಜನರು ಮುಖವಾಡಗಳಷ್ಟೇ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದ್ದು ಸರ್ಕಾರ ಅದನ್ನು ಬಯಲು ಮಾಡಬೇಕಾಗಿದೆ. ಶಿವಮೊಗ್ಗದಲ್ಲಿ ನಡೆದಿರುವ ಇದೊಂದೆ ಘಟನೆಯಲ್ಲ, ದೇಶದಾದ್ಯಂತ ಭಯವನ್ನುಟ್ಟಿಸಿ ಭಯೋತ್ಪಾದನೆ ಮಾಡಲಾಗುತ್ತಿದೆ ಎಂದು ಗಂಭೀರ ತೀವ್ರ ವ್ಯಕ್ತಪಡಿಸಿದ್ದಾರೆ.

ಮುತಾಲಿಕ್​​ ಆಕ್ಷೇಪ..

ಕೆಲ ದಿನಗಳ ಹಿಂದೆ ಹಿಜಾಬ್​​ ವರ್ಸಸ್​​ ಕೇಸರಿ ಶಾಲು  ಸಂಘರ್ಷದ ಸಮಯದಲ್ಲಿ ಜಿಲ್ಲೆಯ ವಿದ್ಯಾರ್ಥಿನಿ ಶ್ರೀರಾಮ್​​ ಘೋಷಣೆ ಕೂಗುತ್ತಿದ್ದ ಯುವಕರ ಗುಂಪಿನ ಎದುರು ಅಲ್ಲಾಹು ಅಕ್ಬರ್​   ಎಂದು ಘೋಷಣೆ ಕೂಗಿದ್ದರು. ಆ ವಿಡಿಯೋ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ವಿದ್ಯಾರ್ಥಿನಿಗೆ ಮುಸ್ಲಿಂ ಸಂಘಟನೆಯೊಂದು 5 ಲಕ್ಷ ಬಹುಮಾನವನ್ನು ಘೋಷಿತ್ತು. ಯುವತಿಯ ಅಲ್ಲಾಹು ಅಕ್ಬರ್​ ಘೋಷಣೆಗೆ ಹಿಂದೂ ಸಂಘಟನೆ ಮುಖಂಡ ಪ್ರಮೋದ್​ ಮುತಾಲಿಕ್​  ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಹುಡುಗಿ ಅಂದು ಭಾರತ್ ಮಾತಾ ಕೀ ಜೈ  ಎನ್ನಬಹುದಿತ್ತು, ಆದ್ರೆ ಆ ಹೆಣ್ಣುಮಗಳು ಅಲ್ಲಾಹು ಅಕ್ಬರ್ ಎಂದಳು. ಅದಕ್ಕೆ ಮಹಾರಾಷ್ಟ್ರ ಶಾಸಕ ಉಡುಗೊರೆ ನೀಡಿದ್ದಾನೆ, ಮತ್ತಷ್ಟು ಮುಸ್ಲಿಂ ಮುಖಂಡರು ಹಾಡಿ ಹೊಗಳಿದ್ದಾರೆ. 5-10 ಲಕ್ಷ ಅಲ್ಲ, ನಮ್ಮ ಹರ್ಷನ ಕುಟುಂಬಕ್ಕೆ 60-70 ಲಕ್ಷ ನೆರವು ಸಿಕ್ಕಿದೆ. ಆಕೆಗೆ ಸಿಕ್ಕಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚಿಗೆ ಸಿಕ್ಕಿದೆ ಎಂದು ಶ್ರೀರಂಗಪಟ್ಟಣದಲ್ಲಿ ಮುತಾಲಿಕ್ ಹೇಳಿಕೆ ನೀಡಿದರು.
Published by:Kavya V
First published: