ಡ್ರಗ್ಸ್​ ಕೇಸ್​​: ಮಾಜಿ ಸಚಿವ ಜಮೀರ್​ ಬಂಧನ ಯಾಕಿಲ್ಲ? - ಸಂಸದ ಪ್ರತಾಪ್​ ಸಿಂಹ ಪ್ರಶ್ನೆ

ತನಿಖಾಧಿಕಾರಿಗಳಿಗೆ ಪ್ರಶಾಂತ್ ಸಂಬರಗಿ ಆರೋಪಗಳ ಮೇಲೆ ಅನುಮಾನಗಳಿರಬಹುದು. ಬೇಕಾದರೆ ಪ್ರಶಾಂತ್​ ಸಂಬರಗಿಯವರನ್ನು ತನಿಖೆಗೆ ಒಳಪಡಿಸಿ. ಸಂಬರಗಿ ಆರೋಪಗಳಿಗೆ ಪೂರಕವಾದ ದಾಖಲೆಗಳಿದ್ದರೆ ಸಂಗ್ರಹಿಸಿಕೊಂಡು ತನಿಖೆ ಮುಂದುವರಿಸಿ ಎಂದು ಪ್ರತಾಪ್​ ಸಿಂಹ ಮನವಿ ಮಾಡಿದ್ದಾರೆ.

ಸಂಸದ ಪ್ರತಾಪ್​​ ಸಿಂಹ

ಸಂಸದ ಪ್ರತಾಪ್​​ ಸಿಂಹ

  • Share this:
ಮೈಸೂರು(ಸೆ.10): ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣ ಸಂಬಂಧ ಪೊಲೀಸರು ಇನ್ನೂ ಯಾಕೇ ಮಾಜಿ ಸಚಿವ ಜಮೀರ್​​ ಅಹಮ್ಮದ್​ರನ್ನು ಬಂಧಿಸಿಲ್ಲ ಎಂದು ಬಿಜೆಪಿ ಸಂಸದ ಪ್ರತಾಪ್​ ಸಿಂಹ ಪ್ರಶ್ನಿಸಿದ್ದಾರೆ. ಈ ಸಂಬಂಧ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಪ್ರತಾಪ್​ ಸಿಂಹ, ಡ್ರಗ್ಸ್​ ಪ್ರಕರಣ ಕುರಿತಂತೆ ಸಾಮಾಜಿಕ ಕಾರ್ಯಕರ್ಯ ಪ್ರಶಾಂತ್ ಸಂಬರಗಿ ಹಲವರ ಹೆಸರು ಹೇಳಿದ್ದಾರೆ. ಈ ಪಟ್ಟಿಯಲ್ಲಿ ಜಮೀರ್ ಅಹಮ್ಮದ್ ಹೆಸರು ಸಹ ಇದೆ. ಹೀಗಿದ್ದರೂ ಇದುವರೆಗೂ ಪೊಲೀಸರು ಜಮೀರ್ ಅಹಮ್ಮದ್​​ರನ್ನ ಯಾಕೆ ಬಂಧಿಸಿಲ್ಲ. ಇದರ ಹಿಂದಿನ ಉದ್ದೇಶವೇನು? ಎಂದು ಪೊಲೀಸರಿಗೆ ಪ್ರಶ್ನಿಸಿದ್ಧಾರೆ. ತನಿಖಾಧಿಕಾರಿಗಳಿಗೆ ಪ್ರಶಾಂತ್ ಸಂಬರಗಿ ಆರೋಪಗಳ ಮೇಲೆ ಅನುಮಾನಗಳಿರಬಹುದು. ಬೇಕಾದರೆ ಪ್ರಶಾಂತ್​ ಸಂಬರಗಿಯವರನ್ನು ತನಿಖೆಗೆ ಒಳಪಡಿಸಿ. ಸಂಬರಗಿ ಆರೋಪಗಳಿಗೆ ಪೂರಕವಾದ ದಾಖಲೆಗಳಿದ್ದರೆ ಸಂಗ್ರಹಿಸಿಕೊಂಡು ತನಿಖೆ ಮುಂದುವರಿಸಿ ಎಂದು ಪ್ರತಾಪ್​ ಸಿಂಹ ಮನವಿ ಮಾಡಿದ್ದಾರೆ.

ಡ್ರಗ್ಸ್ ವಿಚಾರದಲ್ಲಿ ರಾಜಕೀಯ ಪ್ರಭಾವ ಇರೋದು ಸತ್ಯ. ಇಂತಹ ಪ್ರಕರಣಗಳಲ್ಲಿ ರಾಜಕೀಯ ಬೆರಸಿಕೊಳ್ಳುವುದು ಸಹಜ. ಆದರೆ ಗೃಹ ಮಂತ್ರಿಗಳು ಯಾವುದೇ ಪ್ರಭಾವಕ್ಕೆ ಮಣಿಯಲ್ಲ ಅಂತ ಹೇಳಿದ್ದಾರೆ. ಅವರ ಮಾತಿನ ಮೇಲೆ ನನಗೆ ನಂಬಿಕೆ ಇದೆ ಎಂದರು.

ಪ್ರಶಾಂತ್ ಸಂಬರಗಿ ಯಾರ್ಯಾರ ಹೆಸರು ಹೇಳಿದ್ದಾರೆ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿ. ಯಾರೋ ಇಬ್ಬರು ಸಿನಿಮಾ ನಟಿಯರನ್ನು ಬಂಧಿಸಿ ವಿಚಾರಣೆ ನಡೆಸಿದರೆ ಸಾಲದು. ಈ ಪ್ರಕರಣ ಹೊರ ಬಂದಿದ್ದೇ ಇಂದ್ರಜಿತ್ ಲಂಕೇಶರು ಮಾಡಿದ ಧೈರ್ಯದಿಂದ. ಹೀಗಾಗಿ ಇವರು ಹೇಳಿದ ಎಲ್ಲವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಎಂದು ಪ್ರತಾಪ್​​ ಸಿಂಹ ಒತ್ತಾಯಿಸಿದ್ಧಾರೆ.

ಇದನ್ನೂ ಓದಿ: Kangana VS Sena: ಶಿವಸೇನೆ ಈಗ ಸೋನಿಯಾ ಸೇನೆ - ನಟಿ ಕಂಗನಾ ರಣಾವತ್​​ ಟೀಕೆ
Published by:Ganesh Nachikethu
First published: